Viral Video: ಸತ್ತ ಸೊಳ್ಳೆಯನ್ನು ಸಂಗ್ರಹಿಸುವ ಹುಡುಗಿ; ವೈರಲ್ ಆಯ್ತು ವಿಲಕ್ಷಣ ಹವ್ಯಾಸದ ವಿಡಿಯೊ
ಇಲ್ಲೊಬ್ಬ ಹುಡುಗಿ ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿ ಅವು ಎಲ್ಲಿ, ಹೇಗೆ, ಯಾವ ಸಮಯದಲ್ಲಿ ಸತ್ತವು ಎಂದು ಪಟ್ಟಿ ಮಾಡಿದ್ದಾಳೆ. ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.


ಸೊಳ್ಳೆಗಳನ್ನು ಕಂಡರೆ ಸಾಕು ಜನರು ಅದನ್ನು ಹೊಡೆದು ಸಾಯಿಸಿ ಎಸೆದು ಬಿಡುತ್ತಾರೆ. ಯಾಕೆಂದರೆ ಅವುಗಳು ಕಚ್ಚಿ ರಕ್ತ ಹೀರುವುದು ಮಾತ್ರವಲ್ಲ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಆದರೆ ಇಲ್ಲೊಬ್ಬ ಹುಡುಗಿ ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿ ಅವು ಎಲ್ಲಿ, ಹೇಗೆ, ಯಾವ ಸಮಯದಲ್ಲಿ ಸತ್ತವು ಎಂದು ಪಟ್ಟಿ ಮಾಡಿದ್ದಾಳೆ. ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಈಗ ವೈರಲ್ (Viral Video) ಆಗಿದೆ. ಈ ಹುಡುಗಿ ಸತ್ತ ಸೊಳ್ಳೆಗಳನ್ನು ಸಂಗ್ರಹಿಸುವ ವಿಲಕ್ಷಣ ಹವ್ಯಾಸಕ್ಕಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾಳೆ.
ವೈರಲ್ ಆದ ವಿಡಿಯೊದಲ್ಲಿ ಆಕೆ ಸತ್ತ ಸೊಳ್ಳೆಗಳು ಇದ್ದ ಕಾಗದದ ಹಾಳೆಯನ್ನು ತೋರಿಸಿದ್ದಾಳೆ. ಅದರಲ್ಲಿ ಸತ್ತ ಸೊಳ್ಳೆಗಳಿಗೆ 'ಸಿಗ್ಮಾ ಬೋಯಿ', 'ರಮೇಶ್', ʼಸುರೇಶ್ʼ, 'ಬಬ್ಲಿ' ಮತ್ತು 'ಟಿಂಕು' ಮುಂತಾದ ಹೆಸರುಗಳನ್ನು ಕೂಡ ನೀಡಲಾಗಿದೆ ಮತ್ತು ಅವುಗಳ ಸತ್ತ ಸಮಯ, ಸ್ಥಳವನ್ನು ಬರೆದಿದ್ದಾಳೆ.
ಹುಡುಗಿಯ ವಿಡಿಯೊ ಇಲ್ಲಿದೆ ನೋಡಿ...
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಐದು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಹುಡುಗಿಯ ವಿಚಿತ್ರ ಹವ್ಯಾಸವು ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ. ನೆಟ್ಟಿಗರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ. ಒಬ್ಬರು ಅವಳನ್ನು "ಸೈಕೋ" ಎಂದು ಕರೆದಿದ್ದಾರೆ. “ಇಡೀ ಸೊಳ್ಳೆ ಸಮುದಾಯವು ಭಯದಲ್ಲಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು “ನನಗೆ ನಿನ್ನ ಕೆಲಸ ಇಷ್ಟವಾಗಿದೆ. ರಕ್ತ ಹೀರುವುದು ಸೊಳ್ಳೆ ಹೆಣ್ಣು, ಆದರೆ ಅವುಗಳಿಗೆ ಗಂಡು ಹೆಸರುಗಳನ್ನು ನೀಡಲಾಗಿದೆ. ಪುರುಷರ ಜೀವನವು ಕಷ್ಟಕರವಾಗಿದೆ” ಎಂದು ತಮಾಷೆ ಮಾಡಿದ್ದಾರೆ. "ಅವಳು ಪರೋಕ್ಷವಾಗಿ ಎಲ್ಲ ಪುರುಷರನ್ನು ಹುರಿಯುತ್ತಿದ್ದಾಳೆ" ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು "ದಿ ರಿಯಲ್ ಡೆತ್ ನೋಟ್ಸ್" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: 3 ವರ್ಷಕ್ಕೂ ಅಧಿಕ ಕಾಲ ಮಹಿಳೆಗೆ ಋತುಚಕ್ರ; ವಿಚಿತ್ರ ಸ್ಥಿತಿ ಕಂಡು ವೈದ್ಯರು ದಿಗ್ಭ್ರಮೆ!
ಸತ್ತ ಸೊಳ್ಳೆಗಳನ್ನು ಸಂಗ್ರಹಿಸಿದ 12 ವರ್ಷದ ಬಾಲಕಿ
ಈ ರೀತಿ ಸತ್ತ ಸೊಳ್ಳೆಗಳನ್ನು ಕಲೆಹಾಕುವ ವಿಚಿತ್ರ ಹವ್ಯಾಸ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಯುವ ಕಲಾವಿದೆಯೊಬ್ಬಳು ಸತ್ತ ಸೊಳ್ಳೆಗಳನ್ನು ಸಂಗ್ರಹಿಸುವ ವಿಚಿತ್ರ ಹವ್ಯಾಸಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ. 12 ವರ್ಷದ ಬಾಲಕಿ ತಾನು ಕೊಂದ ಪ್ರತಿಯೊಂದು ಸೊಳ್ಳೆಯನ್ನು ಸಂಗ್ರಹಿಸಿ ಎಣಿಸಿದ್ದಾಳೆ. ಸತ್ತ ಸೊಳ್ಳೆಗಳನ್ನು ನೋಟ್‍ಬುಕ್‍ಗೆ ಅಂಟಿಸಿ ಅದರ ಕೆಳಗೆ ನಂಬರ್ ಅನ್ನು ಎಣಿಸಿ ಬರೆದಿದ್ದಾಳೆ. ಅವಳ ನೋಟ್ ಬುಕ್‍ನಲ್ಲಿ ಸತ್ತ ಸೊಳ್ಳೆಗಳ ಸಂಗ್ರಹವು 80 ಅಥವಾ 90ಕ್ಕಿಂತ ಹೆಚ್ಚು ಇರಬಹುದು ಎನ್ನಲಾಗಿತ್ತು. ನಿರೀಕ್ಷೆಯಂತೆ, ಈ ಟ್ವೀಟ್ 1.15 ಲಕ್ಷಕ್ಕೂ ಹೆಚ್ಚು ಲೈಕ್‍ಗಳು, 26,000 ರಿಟ್ವೀಟ್‍ಗಳು ಮತ್ತು 3,600ಕ್ಕೂ ಹೆಚ್ಚು ಕಾಮೆಂಟ್‍ಗಳೊಂದಿಗೆ ವೈರಲ್ ಆಗಿತ್ತು.