ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral News: ಮಹಿಳೆಯರ ಸಮಾಧಿ ಅಗೆದು ಬಿಳಿ ಬಟ್ಟೆ ತೆಗೆದ ಕಳ್ಳರು; ಶಾಕಿಂಗ್‌ ವಿಡಿಯೊ ವೈರಲ್

ರಾಜಸ್ಥಾನದ ಜೈಪುರದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ನಹರಿ ಕಾ ನಾಕಾ ಇಸ್ಲಾಮಿಕ್ ಸ್ಮಶಾನದಲ್ಲಿ ಮಹಿಳೆಯರ ಸಮಾಧಿಯನ್ನು ಧ್ವಂಸಗೊಳಿಸಿದ್ದಲ್ಲದೇ ಶವದ ಮೇಲೆ ಹೊದಿಸಲಾದ ಬಿಳಿ ಬಟ್ಟೆಗಳನ್ನು ಕಳ್ಳತನ ಮಾಡಲಾಗಿದೆ. ಈ ಆಘಾತಕಾರಿ ಘಟನೆಯು ಸ್ಥಳೀಯರಲ್ಲಿ ಆಕ್ರೋಶ ಹಾಗೂ ಭಯವನ್ನು ಹುಟ್ಟುಹಾಕಿದೆ.ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಸ್ಮಶಾನದಲ್ಲಿದ್ದ ಮಹಿಳೆಯರ ಸಮಾಧಿ ಅಗೆದ ಕಳ್ಳರು!

Profile pavithra Jul 4, 2025 9:13 PM

ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಇಸ್ಲಾಮಿಕ್ ಸ್ಮಶಾನದಲ್ಲಿದ್ದ ಮಹಿಳೆಯರ ಸಮಾಧಿಗಳನ್ನು ಧ್ವಂಸ ಮಾಡಿದ್ದಲ್ಲದೇ ಶವದ ಮೇಲೆ ಹೊದಿಸಲಾದ ಬಿಳಿ ಬಣ್ಣದ ಬಟ್ಟೆಗಳನ್ನು ಸಹ ಕಳವು ಮಾಡಿದ ವಿಚಿತ್ರ ಮತ್ತು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಶಾಸ್ತ್ರಿ ನಗರ ಪ್ರದೇಶದಲ್ಲಿರುವ ನಹರಿ ಕಾ ನಾಕಾ ಸ್ಮಶಾನದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸಮಾಧಿಗಳು ಧ್ವಂಸಗೊಳಿಸಿದ್ದಲ್ಲದೇ ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಗಳಲ್ಲಿ ಬಳಸಲಾಗುವ ಬಿಳಿ ಶವಸಂಸ್ಕಾರದ ಹೊದಿಕೆಗಳು ಕಾಣೆಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ, ಮಹಿಳೆಯರ ಸಮಾಧಿಗಳನ್ನು ಮಾತ್ರ ಧ್ವಂಸಗೊಳಿಸಲಾಗಿದೆ ಎಂದು ಸ್ಥಳೀಯರು ಗಮನಿಸಿದ್ದಾರೆ. ಹಾಗಾಗಿ ಈ ಕಳ್ಳತನದ ಆಘಾತಕಾರಿ ಸ್ವರೂಪವು ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶ ಉಂಟುಮಾಡಿದೆ.ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ರಾತ್ರಿಯಲ್ಲಿ ಸಮಾಧಿಗಳ ಸುತ್ತಲೂ ನಾಲ್ಕರಿಂದ ಐದು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಈ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಈಗ ತನಿಖೆ ಮಾಡಲಾಗಿದೆ. ಮಹಿಳೆಯರ ಸಮಾಧಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಕಳ್ಳತನಗಳು ಉದ್ದೇಶಪೂರ್ವಕವಾಗಿ ಮತ್ತು ಧಾರ್ಮಿಕವಾಗಿ ನಡೆದಿರಬಹುದು ಎಂದು ಸ್ಥಳೀಯ ನಿವಾಸಿಗಳು ಭಯಪಟ್ಟಿದ್ದಾರೆ.

ಕಾಂಗ್ರೆಸ್ ಶಾಸಕ ಅಮೀನ್ ಕಾಗ್ಜಿ, ಸ್ಥಳೀಯ ನಾಯಕರು ಮತ್ತು ಸಂಬಂಧಪಟ್ಟ ನಾಗರಿಕರೊಂದಿಗೆ ಸ್ಮಶಾನಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಶಾಸ್ತ್ರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಿಳೆಯರ ಸಮಾಧಿಗಳನ್ನು ಮಾತ್ರ ಗುರಿಯಾಗಿರುವುದು ಸಮುದಾಯದಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಅಧಿಕಾರಿಗಳು ಕಿಡಿಗೇಡಿತನ, ಮೂಢನಂಬಿಕೆ ಅಥವಾ ಅಕ್ರಮ ವ್ಯಾಪಾರ ಸೇರಿದಂತೆ ಮುಂತಾದ ಕೋನಗಳಿಂದ ಈ ಪ್ರಕರಣದ ತನಿಖೆ ನಡೆಸಿದ್ದಾರೆ. ಈ ಗೊಂದಲಕಾರಿ ಸರಣಿ ಘಟನೆಗಳ ಹಿಂದಿನ ಅಪರಾಧಿಗಳನ್ನು ಗುರುತಿಸುವ ಭರವಸೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಸ್ಥಳೀಯರನ್ನು ಪ್ರಶ್ನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಇತ್ತೀಚೆಗಷ್ಟೇ ಹೈದರಾಬಾದ್‌ನ ದಿಲ್‌ಸುಖ್‌ನಗರ-ಕೋಟಿ ಮುಖ್ಯ ರಸ್ತೆಯಲ್ಲಿರುವ ಬಿಗ್ ಸಿ ಮೊಬೈಲ್ ಶೋ ರೂಂನಲ್ಲಿ ಇತ್ತೀಚೆಗೆ ತಡರಾತ್ರಿ ಕಳ್ಳನೊಬ್ಬ ಗೋಡೆಯಲ್ಲಿ ರಂಧ್ರ ಕೊರೆದು ಒಳಗೆ ನುಗ್ಗಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ದೋಚಿದ್ದನು. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: 60 ಸೆಕೆಂಡ್‌... 20 ಲಕ್ಷದ ಕಾರು ಮಂಗಮಾಯ! ಶಾಕಿಂಗ್‌ ವಿಡಿಯೊ ಇಲ್ಲಿದೆ

ಮಲಕ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳತನದ ಬಗ್ಗೆ ತನಿಖೆ ನಡೆಸಿದ್ದರು. ಆದರೆ ಶಂಕಿತನ ಗುರುತು ಪತ್ತೆಯಾಗಿಲ್ಲ. ವಿಶೇಷ ತಂಡಗಳು ಶಂಕಿತನ ಚಲನವಲನಗಳನ್ನು ಪತ್ತೆಹಚ್ಚಲು ಹತ್ತಿರದ ಸಿಸಿಟಿವಿ ವ್ಯವಸ್ಥೆಗಳನ್ನು ಪರಿಶೀಲಿಸಿವೆ. ರಾತ್ರಿ ವೇಳೆ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ವಿಶೇಷವಾಗಿ ಜನನಿಬಿಡ ಮಾರುಕಟ್ಟೆ ವಲಯಗಳಲ್ಲಿ ಭದ್ರತಾ ಕ್ರಮಗಳನ್ನು ಸುಧಾರಿಸಲು ಅನೇಕರು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಕರೆ ನೀಡಿದ್ದರು.