Viral Video: 60 ಸೆಕೆಂಡ್... 20 ಲಕ್ಷದ ಕಾರು ಮಂಗಮಾಯ! ಶಾಕಿಂಗ್ ವಿಡಿಯೊ ಇಲ್ಲಿದೆ
ನವದೆಹಲಿಯಲ್ಲಿ ಕಳ್ಳರ ಗುಂಪೊಂದು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮನೆಯ ಹೊರೆಗ ಪಾರ್ಕ್ ಮಾಡಿದ್ದ ಹುಂಡೈ ಕ್ರೆಟಾವನ್ನು ಇತ್ತೀಚೆಗೆ ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.


ನವದೆಹಲಿ: ಇತ್ತೀಚೆಗೆ ಕಳ್ಳನೊಬ್ಬ ಮೊಬೈಲ್ ಅಂಗಡಿಯ ಗೋಡೆ ಕೊರೆದು 5 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ನವದೆಹಲಿಯಲ್ಲಿ ಕಳ್ಳರ ಗುಂಪೊಂದು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಹುಂಡೈ ಕ್ರೆಟಾ ಕಾರನ್ನು(Car)ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಇತ್ತೀಚೆಗೆ ಒಂದು ಗುಂಪು ಕಾರಿನಲ್ಲಿ ಬಂದು, ಕ್ರೆಟಾದ ಸೆಕ್ಯುರಿಟಿ ಸಿಸ್ಟಂ ಅನ್ನು ಹ್ಯಾಕ್ ಮಾಡಿ,ಕಾರನ್ನು ಕದ್ದು ಪರಾರಿಯಾಗಿದ್ದಾರೆ. ಕಾರಿನ ಮಾಲೀಕ ರಿಷಭ್ ಚೌಹಾಣ್ ಸೋಶಿಯಲ್ ಮೀಡಿಯಾಗಳಲ್ಲಿ ಕಾರು ಕಳ್ಳತನ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಶುರುಮಾಡಿದ್ದಾರೆ ಎಂದು ದೃಢೀಕರಿಸುವ ಸ್ಕ್ರೀನ್‌ಶಾಟ್ ಅನ್ನು ಚೌಹಾಣ್ ಪೋಸ್ಟ್ ಮಾಡಿದ್ದಾನೆ. ಮತ್ತು ಆತ ಈ ಪೋಸ್ಟ್ ಮೂಲಕ ಇತರ ಹುಂಡೈ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾನೆ. ಹಾಗೂ ಹುಂಡೈ ಇಂಡಿಯಾವನ್ನು ಟ್ಯಾಗ್ ಮಾಡಿ, ತಮ್ಮ ಭದ್ರತಾ ಸಾಫ್ಟ್‌ವೇರ್ ಅನ್ನು ಸುಧಾರಿಸಲು ಒತ್ತಾಯಿಸಿದ್ದಾನೆ. ಈ ಪೋಸ್ಟ್ ಕೂಡಲೇ ವೈರಲ್ ಆಗಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಮತ್ತು 2,500 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ:Viral Video: ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಿಂದ ಹಣದ ಸುರಿಮಳೆ; ಏನಿದು ವಿಚಿತ್ರ ಘಟನೆ?
18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಕಳ್ಳತನ
ಆಕ್ಸ್‌ಫರ್ಡ್‌ಶೈರ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿ ಐವರು ಕಳ್ಳರು ಭದ್ರತೆಯ ಕೊರತೆಯನ್ನು ದುರುಪಯೋಗಪಡಿಸಿಕೊಂಡು, ಕೇವಲ ಐದು ನಿಮಿಷಗಳಲ್ಲಿ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಅನ್ನು ಕದ್ದು ಪರಾರಿಯಾಗಿದ್ದರು. ಈ ಸುದ್ದಿ ಈಗ ವೈರಲ್(Viral News) ಆಗಿದೆ. ಆಕ್ಸ್‌ಫರ್ಡ್‌ಶೈರ್‌ನ ಐತಿಹಾಸಿಕ ಬ್ಲೆನ್‌ಹೈಮ್ ಅರಮನೆಯಲ್ಲಿ ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ರಚಿಸಿದ 18 ಕ್ಯಾರೆಟ್ ಚಿನ್ನದ ಶೌಚಾಲಯದ ಕಳ್ಳತನ ಪ್ರಕರಣವೊಂದು ನಡೆದಿತ್ತು. ಇದರ ಬೆಲೆ ಸುಮಾರು 4.8 ಮಿಲಿಯನ್ ಪೌಂಡ್‌ಗಳು, ಅಂದರೆ 55 ಕೋಟಿ ರೂಪಾಯಿ. ಇದನ್ನು ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.ದರೋಡೆ ಪ್ರಕರಣದ ಬಗ್ಗೆ ಅರಮನೆಯ ಭದ್ರತಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಳ್ಳರು ಚಿನ್ನದ ಶೌಚಾಲಯದೊಂದಿಗೆ ಪರಾರಿಯಾಗಿದ್ದರಂತೆ.