ನವದೆಹಲಿ,ಏ.24: ದಾಂಪತ್ಯದಲ್ಲಿ ಹೊಂದಾಣಿಕೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಆದರೆ ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಕ್ಕೆ ದಂಪತಿಗಳು ಡಿವೊರ್ಸ್ ವರೆಗೂ ತಲುಪುವಂತಹ ಪ್ರಕರಣ ಜಾಸ್ತಿಯಾಗುತ್ತಿದೆ. ಪತಿ -ಪತ್ನಿಯ ಮೇಲೆ ಹಲ್ಲೆ, ಪತ್ನಿಯಿಂದ ಮಾನಸಿಕ ಹಿಂಸೆ ಹೀಗೆ ನಾನಾ ಕಾರಣದಿಂದ ನೊಂದಿರುವ ವಿಚಾರ ಸುದ್ದಿಯಾಗುತ್ತಲೇ ಇದೆ. ಈ ನಡುವೆ ಪತ್ನಿಯೂ ಪತಿ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಈ ವಿಡಿಯೊ ನೋಡಿದ ಆನೇಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು ಪುರುಷರ ಮೇಲಿನ ಕೌಟುಂಬಿಕ ಹಿಂಸಾಚಾರದ ಬಗ್ಗೆ ಚರ್ಚೆ ನಡೆದಿದೆ. ಇತ್ತೀಚೆಗೆ ಪುರುಷರಿಗಿಂತ ಮಹಿಳೆಯರೇ ಇಂತಹ ದೌರ್ಜನ್ಯ ಎಸಗಿರುವ ಪ್ರಕರಣ ಜಾಸ್ತಿಯಾಗುತ್ತಿದೆ. ಯಾಕಂದ್ರೆ ಅವರಿಗೆ ರಕ್ಷಣೆ ಇದೆ. ಪುರುಷರಿಗೆ ಇಲ್ಲ. ಈಗ ಮದುವೆಯಾಗುವ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಹಲವಾರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ:
ತನ್ನ ಪತಿಯ ಮೇಲೆ ಪತ್ನಿಯೂ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾರೆ. ಆ ವ್ಯಕ್ತಿ ಸುಮಾರು ಎರಡು ವರ್ಷಗಳಿಂದ ದೌರ್ಜನ್ಯವನ್ನು ಎದುರಿಸುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾರೆ. .ಮಹಿಳೆಯೂ ಪುರುಷನ ಕೂದಲನ್ನು ಎಳೆಯುವುದು, ಆತನಿಗೆ ಕಪಾಳಮೋಕ್ಷ ಮಾಡಿರುವುದು, ಬ್ಯಾಟ್ ನಿಂದ ಹೊಡೆದಿರುವುದು ಕಂಡು ಬಂದಿದೆ. ಪ್ರತಿದಿನ ಈ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಈ ಕ್ಲಿಪ್‌ಗಳನ್ನು ತನ್ನ ಲ್ಯಾಪ್‌ಟಾಪ್‌ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
VishalMalvi_ ಎಂಬ ಬಳಕೆದಾರ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ. ''ಮದುವೆಯಾಗುವ ಮುನ್ನ ಎರಡು ಬಾರಿ ಯೋಚಿಸಿ''ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಅನೇಕ ಬಳಕೆದಾರರು ಆ ಪುರುಷನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು, ಬಳಕೆದಾರರೊಬ್ಬರು ಇದು ಸ್ತ್ರೀವಾದವಲ್ಲ, ಮಂಗಳಸೂತ್ರದೊಂದಿಗೆ ದೇಶೀಯ ಭಯೋತ್ಪಾದನೆ... ಭಾರತೀಯ ವಿವಾಹಗಳಿಂದ ದೂರವಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇತ್ತೀಚೆಗೆ ಮಹಿಳೆಯರಿಗೆ ಕಾನೂನು ರಕ್ಷಣೆ ಹೆಚ್ಚಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.