ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: "ಅಯ್ಯೋ ರಾತ್ರಿಯಾಗುತ್ತಲೇ ನನ್ನ ಹೆಂಡತಿ ಹಾವಾಗಿ ಬದಲಾಗುತ್ತಾಳೆ"; ಕಾಪಾಡಿ ಎಂದು ಪೊಲೀಸರಿಗೆ ದೂರು ನೀಡಿದ ಪತಿ

ಹಗಲೆಲ್ಲ ಸರಿ ಇರುವ ನನ್ನ ಹೆಂಡತಿ ರಾತ್ರಿಯಾಗುತ್ತಿದ್ದಂತೆ ಹಾವಾಗುತ್ತಾಳೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಅವಳು ರಾತ್ರಿಯಲ್ಲಿ ಸರ್ಪವಾಗಿ ರೂಪಾಂತರಗೊಳ್ಳುತ್ತಾಳೆ ಮತ್ತು ಅವನನ್ನು ನಿದ್ರಿಸದಂತೆ ತಡೆಯುತ್ತಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾನೆ.

ಲಖನೌ: ಹಗಲೆಲ್ಲ ಸರಿ ಇರುವ ನನ್ನ ಹೆಂಡತಿ ರಾತ್ರಿಯಾಗುತ್ತಿದ್ದಂತೆ ಹಾವಾಗುತ್ತಾಳೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಅವಳು ರಾತ್ರಿಯಲ್ಲಿ (Viral News) ಸರ್ಪವಾಗಿ ರೂಪಾಂತರಗೊಳ್ಳುತ್ತಾಳೆ ಮತ್ತು ಅವನನ್ನು ನಿದ್ರಿಸದಂತೆ ತಡೆಯುತ್ತಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ. ನನ್ನ ಹೆಂಡತಿ ರಾತ್ರಿಯ ಸಮಯದಲ್ಲಿ ಹಾವಾಗಿ ರೂಪಾಂತರಗೊಳ್ಳುತ್ತಾಳೆ. ನನ್ನನ್ನು ಹೆದರಿಸುತ್ತಾಳೆ. ನನಗೆ ರಕ್ಷಣೆ ಕೊಡಿ ಎಂದು ಆತ ಪೊಲೀಸರ ಬಳಿ ದೂರು ದಾಖಲಿಸಿದ್ದಾನೆ.

ಸಮಾಧಾನ್ ದಿವಸ್ (ಸಾರ್ವಜನಿಕ ಕುಂದುಕೊರತೆ ದಿನ) ಸಂದರ್ಭದಲ್ಲಿ, ನಿವಾಸಿಗಳು ಸಾಮಾನ್ಯವಾಗಿ ವಿದ್ಯುತ್, ರಸ್ತೆಗಳು ಮತ್ತು ಪಡಿತರ ಚೀಟಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ದೂರುತ್ತಾರೆ. ಆದರೆ ಮಹಮೂದಾಬಾದ್ ಪ್ರದೇಶದ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್ ವಿಚಿತ್ರ ದೂರನ್ನು ನೀಡಿದ್ದಾನೆ. ಪತ್ನಿ ರಾತ್ರಿಯಲ್ಲಿ ಸರ್ಪವಾಗಿ ರೂಪಾಂತರಗೊಳ್ಳುತ್ತಾಳೆ. ಅವನನ್ನು ನಿದ್ರಿಸದಂತೆ ತಡೆಯುತ್ತಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ. ನನ್ನ ಹೆಂಡತಿ ರಾತ್ರಿಯ ಸಮಯದಲ್ಲಿ ಹಾವಾಗಿ ರೂಪಾಂತರಗೊಳ್ಳುತ್ತಾಳೆ. ನನ್ನನ್ನು ಹೆದರಿಸುತ್ತಾಳೆ, ನಿದ್ದೆ ಮಾಡದಂತೆ ತಡೆಯುತ್ತಾಳೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ, ನನ್ನ ಪತ್ನಿಯಿಂದ ನನ್ನನ್ನು ಕಾಪಾಡಿ ಎಂದು ದೂರು ಕೊಟ್ಟಿರೋ ಘಟನೆ ಬೆಳಕಿಗೆ ಬಂದಿದೆ.

ತನ್ನ ಹೆಂಡತಿ ಹಲವಾರು ಬಾರಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದಳು, ಆದರೆ ಪ್ರತಿ ಬಾರಿಯೂ ಸಮಯಕ್ಕೆ ಸರಿಯಾಗಿ ಎಚ್ಚರಗೊಂಡು ದಾಳಿಯಿಂದ ತಪ್ಪಿಸಿಕೊಂಡೆ ಎಂದು ಅವರು ಹೇಳಿದ್ದಾರೆ. "ನನ್ನ ಹೆಂಡತಿ ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಾಳೆ ಮತ್ತು ನಾನು ನಿದ್ದೆ ಮಾಡುವಾಗ ಯಾವುದೇ ರಾತ್ರಿ ನನ್ನನ್ನು ಕೊಲ್ಲಬಹುದು ಎಂದು ಆತ ಹೇಳಿದ್ದಾನೆ. ಸೀತಾಪುರ ಜಿಲ್ಲೆಯ ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದ ವ್ಯಕ್ತಿ ಮೆರಾಜ್ ಎಂಬಾತ ನೀಡಿದ್ದ ಈ ದೂರನ್ನು ಕೇಳಿದ ಪೊಲೀಸರು ಶಾಕ್​ ಆಗಿದ್ದಾರೆ.

ಈ ಸುದ್ದಿಯನ್ನೂ ಓದಿ: Navjot Sidhu: 2027ರ ವಿಶ್ವಕಪ್ ಗೆಲ್ಲಬೇಕಿದ್ದರೆ ಗಂಭೀರ್-ಅಗರ್ಕರ್ ಕಿತ್ತೊಗೆಯಬೇಕು; ವೈರಲ್‌ ಪೋಸ್ಟ್‌ ಬಗ್ಗೆ ನವಜೋತ್ ಸಿಧು ಸ್ಪಷನೆ

ಪೊಲೀಸರು, ಪತ್ನಿಯನ್ನು ವಿಚಾರಿಸಿದಾಗ ಅಕೆ, ತನ್ನ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಕೆಲವು ದಿನಗಳಿಂದ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿದೆ. ಪತ್ನಿಯನ್ನು ಹೆದರಿಸಲು ಮೆರಾಜ್, ತಾನು ಬೇರೆ ಮದುವೆಯಾಗುವುದಾಗಿ ಹೆದರಿಸುತ್ತಿದ್ದ. ದುಡ್ಡಿಗಾಗಿ ಪೀಡಿಸುತ್ತಿದ್ದ. ಅವಳು ಎಲ್ಲಿ ದೂರು ದಾಖಲು ಮಾಡುತ್ತಾಳೆಯೋ ಎಂದು ಮೊದಲೇ ಪತ್ನಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದ. ಆದರೆ ಅದನ್ನು ಪೊಲೀಸರು ಪರಿಗಣಿಸಿರಲಿಲ್ಲ. ಆದ್ದರಿಂದ ಪೊಲೀಸರು ಏನು ಮಾಡಿದರೂ ತನ್ನ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ ಎಂದು ಹಾವಿನ ಕಟ್ಟುಕಥೆ ಹೇಳಿರುವುದು ಬೆಳಕಿಗೆ ಬಂದಿದೆ. ಇದೀಗ ಸಿರಾಜ್​ ವಿರುದ್ಧವೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.