ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆನ್‌ಲೈನ್‌ ಫುಡ್‌ ಡೆಲಿವರಿ ವಿಚಾರಕ್ಕೆ ವಾಗ್ವಾದ; ಸೆಕ್ಯುರಿಟಿ ಗಾರ್ಡ್‌ ಮೇಲೆ ಮಹಿಳೆಯಿಂದ ಹಲ್ಲೆ: ವಿಡಿಯೊ ವೈರಲ್‌

Viral Video: ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್‌ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್‌ನಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ. ಪೊಲೀಸರ ಪ್ರಕಾರ, ಮಹಿಳೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ ನಂತರ ಈ ಘರ್ಷಣೆ ಪ್ರಾರಂಭವಾಗಿದೆ. ಡೆಲಿವರಿ ಸಿಬ್ಬಂದಿಯನ್ನು ಭದ್ರತಾ ಸಿಬ್ಬಂದಿ ಗೇಟ್‌ನಲ್ಲಿ ತಡೆದಿದ್ದಾರೆ ಎನ್ನುವ ಕಾರಣಕ್ಕೆ ಜಗಳ ಭುಗಿಲೆದ್ದಿದೆ.

ಸೆಕ್ಯುರಿಟಿ ಗಾರ್ಡ್‌ ಮೇಲೆ ಮಹಿಳೆಯಿಂದ ದೌರ್ಜನ್ಯ

ಲಖನೌ, ಆ. 28: ಮಹಿಳೆಯೊಬ್ಬಳು ಸೆಕ್ಯೂರಿಟಿ ಗಾರ್ಡ್‌ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ. ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್‌ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಗೆ ನಡೆಸಿದ ವಿಡಿಯೊ ವೈರಲ್ (Viral News) ಆಗಿದ್ದು, ಮಹಿಳೆ ನಡವಳಿಕೆ ವಿರುದ್ಧ ಟೀಕೆ ವ್ಯಕ್ತವಾಗಿದೆ. ಕಾನೂನು ರಕ್ಷಣೆ ಇದೆ ಎಂದು ಈ ರೀತಿ ದುರುಪಯೋಗ ಮಾಡಿಕೊಳ್ಳಬಾರದು ಎಂದು ಮಹಿಳೆ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್‌ನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ ನಂತರ ಈ ಘರ್ಷಣೆ ಪ್ರಾರಂಭವಾಗಿದೆ. ಡೆಲಿವರಿ ಸಿಬ್ಬಂದಿಯನ್ನು ಭದ್ರತಾ ಸಿಬ್ಬಂದಿ ಸೊಸೈಟಿ ಗೇಟ್‌ನಲ್ಲಿ ತಡೆದಿದ್ದಾರೆ ಎನ್ನುವ ಕಾರಣಕ್ಕೆ ಜಗಳ ನಡೆದಿದೆ.

ವಿಡಿಯೊ ನೋಡಿ:



ಮಹಿಳೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದಳು. ಡೆಲಿವರಿ ಬಾಯ್‌ ಒಳಗೆ ಬರುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‌ ಗೇಟ್‌ ಬಳಿ ತಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಮುಖ್ಯ ಗೇಟ್‌ಗೆ ಬಂದು ಸಿಬ್ಬಂದಿ ಜತೆ ಜಗಳವಾಡಿದ್ದಾಳೆ.

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಎಳೆದೊಯ್ದ ಉಬರ್ ಚಾಲಕ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ, ಸೊಸೈಟಿಯ ಪ್ರವೇಶದ್ವಾರದ ಬಳಿ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದನ್ನು ನೋಡಬಹುದು. ಆಕೆ ನಿಂದನೀಯ ಭಾಷೆಯನ್ನು ಬಳಸುತ್ತಿದ್ದು ಪೊಲೀಸರನ್ನು ಸಂಪರ್ಕಿಸುವಂತೆ ಸಿಬ್ಬಂದಿಗೆ ಆವಾಜ್ ಹಾಕಿದ್ದಾಳೆ. ಕುರ್ಚಿಯ ಮೇಲೆ ಕುಳಿತಿದ್ದ ಗಾರ್ಡ್ ಕಡೆಗೆ ಹೋಗಿ ಒದೆಯಲು ಪ್ರಯತ್ನಿಸಿದ್ದಾಳೆ.

ಭದ್ರತಾ ಸಿಬ್ಬಂದಿಗೆ ಬೂಟುಗಳಿಂದ ಹೊಡೆಯುವುದಾಗಿ ಮತ್ತು ತನ್ನ ಬೂಟು ಸ್ವಚ್ಛಗೊಳಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾಳೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆಹಾರ ವಿತರಣಾ ವ್ಯಕ್ತಿಯನ್ನು ಸೊಸೈಟಿ ಗೇಟ್‌ನಲ್ಲಿ ನಿಲ್ಲಿಸಿದ್ದಕ್ಕೆ ನಿಖರವಾದ ಕಾರಣವನ್ನು ಸಹ ಪರಿಶೀಲಿಸಲಾಗುತ್ತಿದೆ.