ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನೊಳಗೆ ಸಿಗರೇಟ್‌ ಸೇದಿ ಸಿಕ್ಕಿಬಿದ್ದ ಮಹಿಳೆ; ವಿಡಿಯೊ ಮಾಡಿದ್ದಕ್ಕೆ ಫುಲ್‌ ರಂಪಾಟ!

Woman Caught Smoking: ಮಹಿಳೆಯೊಬ್ಬಳು ರೈಲಿನಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧೂಮಪಾನ ಮಾಡಬೇಡಿ ಎಂದು ಪ್ರಯಾಣಿಕರು ಕೇಳಿಕೊಂಡಿದ್ದಕ್ಕೆ ಕ್ಯಾತೆ ತೆಗೆದಿದ್ದಾಳೆ. ಟಿಕೆಟ್ ಪರೀಕ್ಷಕರು ಬಂದ ಕೂಡಲೇ ಆಕೆ ಅಳುವುದಕ್ಕೆ ಪ್ರಾರಂಭಿಸಿದಳು.

ರೈಲಿನೊಳಗೆ ಸಿಗರೇಟ್‌ ಸೇದಿ ಸಿಕ್ಕಿಬಿದ್ದ ಮಹಿಳೆ; ಫುಲ್‌ ರಂಪಾಟ!

-

Priyanka P Priyanka P Sep 15, 2025 7:45 PM

ದೆಹಲಿ: ಭಾರತೀಯ ರೈಲ್ವೆಯ ಎಸಿ ಕೋಚ್ ಒಳಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಧೂಮಪಾನ (Smoking) ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಆ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಧೂಮಪಾನ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಆ ವ್ಯಕ್ತಿಯ ವಿರುದ್ಧ ಕಿಡಿಕಾರಿದ್ದಾಳೆ. ಈ ವೇಳೆ ಇದನ್ನು ಗಮನಿಸಿದ ಟಿಕೆಟ್ ಪರೀಕ್ಷಕರು, ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ಗೋಗರೆಯಲು ಪ್ರಾರಂಭಿಸಿದಳು.

ಭಾರತದಲ್ಲಿ ಪ್ಯಾಸೆಂಜರ್ ರೈಲಿನ ಎಸಿ ಕೋಚ್ ಒಳಗೆ ಧೂಮಪಾನ ಮಾಡುತ್ತಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದಾಗ ಈ ನಾಟಕೀಯ ದೃಶ್ಯ ಪ್ರಾರಂಭವಾಯಿತು. ರೈಲಿನೊಳಗೆ ಧೂಮಪಾನ ಮಾಡುವ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಬಹುಶಃ ತಿಳಿದಿರದ ಮಹಿಳೆ, ಧೂಮಪಾನ ಮಾಡಿದ್ದಕ್ಕಾಗಿ ತನ್ನನ್ನು ಖಂಡಿಸಿದ ಪ್ರಯಾಣಿಕನ ಮೇಲೆ ಕೋಪಗೊಂಡು ಗಲಾಟೆ ಮಾಡಿದ್ದಾಳೆ. ಅಲ್ಲದೆ, ಈ ವೇಳೆ ಆಕೆ ತಾನೇನು ನಿನ್ನ ಹಣವನ್ನು ಖರ್ಚು ಮಾಡಿಲ್ಲ ಎಂದು ಕೂಗಾಡಿದ್ದಾಳೆ. ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ, ಚಿತ್ರೀಕರಣ ಮಾಡದಂತೆ ಬೆದರಿಕೆ ಒಡ್ಡಿದ್ದಾಳೆ.

ಗಲಾಟೆ ಉಲ್ಬಣಗೊಂಡಾಗ, ರೈಲಿನ ಟಿಕೆಟ್ ಪರೀಕ್ಷಕರೊಬ್ಬರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಧೂಮಪಾನ ನಿಷೇಧ ವಲಯ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಯಾಗಿ ಅವರು ಮೂರು ಆಯ್ಕೆಗಳನ್ನು ಪಟ್ಟಿ ಮಾಡಿದರು. ಮತ್ತೊಂದೆಡೆ, ಟಿಸಿ ಬಂದಾಗ ಮಹಿಳೆ ಭಯಭೀತರಾಗಿ ಅಳುವುದಕ್ಕೆ ಪ್ರಾರಂಭಿಸಿದ್ದಾಳೆ. ಟಿಸಿ ರೈಲಿನೊಳಗೆ ಧೂಮಪಾನ ಮಾಡಿದ್ದಕ್ಕಾಗಿ ಸಾಮಾನ್ಯ ದಂಡದಂತೆ ಮೂರು ಆಯ್ಕೆಗಳನ್ನು ನೀಡಿದರು. ಯಾವುದೇ ದಂಡವಿಲ್ಲದೆ ಮಹಿಳೆಯನ್ನು ಹೋಗಲು ಬಿಟ್ಟರು.

ವಿಡಿಯೊ ವೀಕ್ಷಿಸಿ:



ಇನ್ನು ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ. ಟಿಸಿ ಯಾಕೆ ಆಕೆಗೆ ಆಯ್ಕೆಗಳನ್ನು ಕೇಳುತ್ತಿದ್ದಾರೆ? ಈ ಆಯ್ಕೆಗಳನ್ನು ಪುರುಷನಿಗೆ ಯಾವತ್ತಾದರೂ ನೀಡಿದ್ದಾರಾ? ಇಂತಹ ಅಪರಾಧಕ್ಕೆ ಯಾವುದೇ ಆಯ್ಕೆಗಳಿಲ್ಲ. ಸಿಗರೇಟ್ ಸೇದುವುದರಿಂದ ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು. ಹೀಗಾಗಿ ಆಕೆಗೆ ಕಠಿಣ ಶಿಕ್ಷೆ ನೀಡುವುದೊಂದೇ ಆಯ್ಕೆ. ದಂಡದಿಂದ ತಪ್ಪಿಸಿಕೊಳ್ಳಲು ಇದೊಂದು ನಾಟಕ ಮಾಡಿದ್ದಾಳೆ ಎಂದು ಬಳಕೆದಾರರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕ ಸಾರಿಗೆಯು ನಿಮ್ಮ ಖಾಸಗಿ ಸ್ಥಳವಲ್ಲ, ಹಂಚಿಕೆಯ ಸ್ಥಳವಾಗಿದೆ. ಇತರ ಪ್ರಯಾಣಿಕರ ಆರೋಗ್ಯ ಮತ್ತು ಸೌಕರ್ಯದ ಬಗ್ಗೆ ತಿಳಿದುಕೊಳ್ಳಬೇಕು. ಆಕೆ ಹೆಣ್ಣು, ಕಣ್ಣೀರಿಟ್ಟಳು ಎಂದು ಸುಮ್ಮನೆ ಬಿಡಬಾರದ. ಪ್ರಯಾಣಿಕರ ಸುರಕ್ಷತೆ ಮತ್ತು ಸಾರ್ವಜನಿಕ ನಿಯಮಗಳ ಗೌರವ ಇರಬೇಕು. ಇಂತಹ ಸಮಯದಲ್ಲಿ ವಿಕ್ಟಿಮ್ ಕಾರ್ಡ್ ಪ್ರದರ್ಶಿಸಬಾರದು. ಅಧಿಕಾರಿಗಳು ಅವಳಿಗೆ ಸ್ವಲ್ಪ ನಾಗರಿಕ ಪ್ರಜ್ಞೆಯನ್ನು ಕಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: Devanahalli toll plaza: ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್‌ ಮ್ಯಾನೇಜರ್‌ ದರ್ಪ!