ದೆಹಲಿ, ಅ. 1: ಸಮಾಜದಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬಳು ಜಂತರ್ ಮಂತರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ತಬ್ಬಿಕೊಳ್ಳಬೇಕೆಂದು ಪಟ್ಟು ಹಿಡಿದ ಘಟನೆ ನಡೆದಿದೆ. ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ ಅವರನ್ನು ಭೇಟಿಯಾಗುವವರೆಗೂ ರಸ್ತೆಯಿಂದ ಕದಲುವುದಿಲ್ಲ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾಳೆ. ಸದ್ಯ ಈ ಘಟನೆ ದೃಶ್ಯ ಭಾರಿ ವೈರಲ್ (Viral News) ಆಗುತ್ತಿದೆ.
ಜಂತರ್ ಮಂತರ್ ರಸ್ತೆ ಮಧ್ಯೆ ಮಲಗಿ ಮಹಿಳೆಯೊಬ್ಬಳು ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರನ್ನು ತಬ್ಬಿಕೊಳ್ಳುವವರೆಗೂ ಕದಲುವುದಿಲ್ಲ ಎಂದು ಅವಾಂತರ ಸೃಷ್ಟಿ ಮಾಡಿದ್ದಾಳೆ.
ಈ ವಿಡಿಯೊವನ್ನು ಸೈಯದ್ ಕಮರ್ ಅಲಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ದೂರ ಸರಿಯಲು ಹಾಗೂ ಆ ಪ್ರದೇಶವನ್ನು ತೆರವುಗೊಳಿಸಲು ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ಮಹಿಳೆ ರಸ್ತೆಯಲ್ಲಿ ಕುಳಿತಿರುವುದನ್ನು ತೋರಿಸುತ್ತದೆ.
ವಿಡಿಯೊ ನೋಡಿ:
ತಮಿಳುನಾಡಿನ ನಟ ಹಾಗೂ ರಾಜಕಾರಣಿ ವಿಜಯ್ ಅವರನ್ನು ಭೇಟಿಯಾಗಿ ಹಗ್ ಮಾಡಬೇಕು ಅದಾದ ಮೇಲೆಯೇ ಸಾಯಬೇಕು ಎಂದು ಆಕೆ ಪಟ್ಟು ಹಿಡಿದಿದ್ದಳು. ಪೊಲೀಸರು ಆಕೆಯನ್ನು ತೆರವುಗೊಳಿಸಲು ಯತ್ನಿಸಿದರೂ, ʼʼನನ್ನನ್ನು ಮುಟ್ಟಬೇಡಿ. ಇದು ನನ್ನ ಹಕ್ಕುʼʼ ಎಂದು ಆಕೆ ಪೊಲೀಸರ ವಿರುದ್ಧವೇ ಗರಂ ಆಗಿದ್ದಾಳೆ.
ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ವೈರಲ್ ವಿಡಿಯೊದಲ್ಲಿ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ರಸ್ತೆಯಿಂದ ದೂರವಿಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಮಹಿಳೆ ಕೆರಳಿ, ʼʼನನ್ನನ್ನು ಮುಟ್ಟಬೇಡಿʼʼ ಎಂದು ಜೋರಾಗಿ ಕಿರುಚಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ತೊಂದರೆ ನೀಡಿದ ಆಕೆಯ ನಡವಳಿಕೆಗೆ ಜನರು ಕಿಡಿಕಾರಿದ್ದು ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.