ಛತ್ತೀಸ್‌ಗಡ: ಕೆಲವರಿಗೆ ಒಂದು ಮರವನ್ನು ಬೆಳೆಸುವುದು ಇದೇನು ದೊಡ್ಡ ಕೆಲಸ ಎಂದಿನಿಸಬಹುದು. ಆದರೆ ಸಸಿ ನೆಟ್ಟು, ನಿತ್ಯ ನೀರುಣಿಸಿ ವರ್ಷಾನುಗಟ್ಟಲೆ ಹೆತ್ತ ಮಗನಂತೆ ಪೋಷಿಸಿದವರಿಗೇ ಗೊತ್ತು ಅದರ ಕಷ್ಟ. ಹೀಗೆ ಹತ್ತಾರು ವರ್ಷಗಳಿಂದ ಸಾಕಿ ಬೆಳಸಿದ ಮರಕ್ಕೆ ಕೊಡಲಿ ಪೆಟ್ಟು ಬಿದ್ದರೆ? ಹೌದು.. ಇಂತಹದ್ದೆ ಒಂದು ಘಟನೆ ಛತ್ತಿಸ್‌ಗಢ(Chhattisgarh)ದ ಖೈರಾಗರ್ (Khairagarh) ಜಿಲ್ಲೆಯ ಸಾರಾಗೊಂಡಿ (Sarragondi) ಗ್ರಾಮದಲ್ಲಿ ನಡೆದಿದೆ. 85 ವರ್ಷದ ವೃದ್ಧೆ ದೇವ್ಲಾ ಬಾಯಿ ಪಟೇಲ್(Devla Bai Patel), 20 ವರ್ಷಗಳ ಹಿಂದೆ ನೆಟ್ಟು ಪ್ರೀತಿಯಿಂದ ಪೋಷಿಸಿ ಬೆಳಸಿದ್ದ ಅಶ್ವತ್ಥ (peepal) ಮರಕ್ಕೆ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಧರಶಾಹಿಯಾದ ಮರವನ್ನು ಕಂಡು ಆ ವೃಕ್ಷಮಾತೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಅದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media) ಗಳಲ್ಲಿ ಭಾರಿ ವೈರಲ್ ಆಗಿದೆ.
ಈ ಸುದ್ದಿಯನ್ನು ಓದಿ:Physical Assault: ಬಾಲಾಪರಾಧಿ ಗೃಹದಲ್ಲಿ ಪೈಶಾಚಿಕ ಕೃತ್ಯ! ಬಾಲಕರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ
ಈ ಮನಕಲಕು ಘಟನೆಯು ಇಡೀ ರಾಷ್ಟ್ರದ ಗಮನವನ್ನೇ ಸೆಳೆದಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸಚಿವ ಕಿರೆನ್ ರಿಜಿಜು (Kiren Rijiju) ಕೂಡ ತಮ್ಮ ಎಕ್ಸ್ ಖಾತೆಯಲ್ಲಿ #EkPedMaaKeNaam ಹ್ಯಾಷ್ ಟ್ಯಾಗ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡು, "20 ವರ್ಷಗಳಿಂದ ಸಾಕಿ ಬೆಳಸಿದ್ದ ಮರವನ್ನು ಕಿಡಿಗೇಡಿಗಳು ಕತ್ತರಿಸಿದ ಬಳಿಕ ಬಿಕ್ಕಿ ಬಿಕ್ಕಿ ಅಳುತ್ತಿರುವ ವೃದ್ಧೆ! ಇದೊಂದು ಹೃದಯ ವಿದ್ರಾವಕ ಘಟನೆ," ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ವಿಡಿಯೋ ವೈರಲ್ ಆದ ಬಳಿಕ ದೇವ್ಲಾ ಬಾಯಿ ಪಟೇಲ್‌ಗೆ ಅವರ ಪರಿಸರ ಪ್ರೇಮ ಕಂಡು ಹಲವಾರು ಬೆರಗಾಗಿದ್ದು, ದುಃಖ ಪಾದಂಡತೇ ಸಹಾನುಭೂತಿಯ ಮಹಾಪೂರವೇ ಹರಿದು ಬಂದಿದೆ. ಅಕ್ಟೋಬರ್ 7ರಂದು ನೂರಾರು ಮಂದಿ ಸೇರಿ ಮರ ಕಡೆದ ಸ್ಥಳದಲ್ಲೇ ದೇವ್ಲಾ ಬಾಯಿಯವರಿಂದ ಹೊಸ ಸಸಿ ನಡೆಸಿ ಪೂಜೆ ಸಲ್ಲಿಸಿದ್ದಾರೆ. ಕೆಲ ದಿನಗಳ ಬಳಿಕ ಸ್ಥಳೀಯ ಶಾಸಕಿ ಯಶೋಧಾ ವರ್ಮಾ (MLA Yashoda Verma) ಅವರು ದೇವ್ಲಾ ಬಾಯಿಯೊಂದಿಗೆ ಸೇರಿ ರುದ್ರಾಕ್ಷಿ ಸಸಿಯನ್ನು ನೆಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು ಎಂದು ವರದಿಗಳ ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಲ್ಯಾಂಡ್ ಡೀಲರ್ (Land Dealer ) ಇಮ್ರಾನ್ ಮೆಮೋನ್ (Imran Memon) ಹಾಗೂ ಆತನ ಸಹಚರ ಪ್ರಕಾಶ್ ಕೋಸ್ರೆ (Prakash Kosre) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಮೆಮೋನ್ ಆ ಮರದ ಹತ್ತಿರದ ಜಮೀನನ್ನು ಖರೀದಿಸಿದ್ದರು. ಅಲ್ಲಿ ರಸ್ತೆ ನಿರ್ಮಿಸುವ ಸಲುವಾಗಿ ಯಾವುದೇ ಅನುಮತಿ ಪಡೆಯದೇ ಆ ಮರವನ್ನು ಕಡಿದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಘಟನೆಯ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ, ಮರ ಕಡಿದ ಯಂತ್ರವನ್ನು ನದಿಗೆ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ. ಸನಾತನ ಧರ್ಮದಲ್ಲಿ ಅರಳಿ ಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ದೇವಾನುದೇವತೆಗಳು ಅದರಲ್ಲಿ ವಾಸವಾಗಿದ್ದಾರೆ ಎನ್ನುವ ನಂಬಿಕೆಯಿದೆ.