ಶಿಮ್ಲಾ, ಜ. 24: ಹಿಮ ಬೀಳುತ್ತಿರುವ ನಡುವೆ ಮಹಿಳೆಯೊಬ್ಬಳು ಬಿಕಿನಿಯಲ್ಲಿ ನೃತ್ಯ ಮಾಡುತ್ತಿರುವ (Woman Dances in Bikini) ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿಡಿಯೊ ವೈರಲ್ (viral video) ಆಗುತ್ತಿದ್ದಂತೆ ಜವಾಬ್ದಾರಿ, ಸಾರ್ವಜನಿಕ ನಡವಳಿಕೆ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯ ಬಗ್ಗೆ ತೀವ್ರ ಪ್ರತಿಕ್ರಿಯೆ ಮತ್ತು ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ಈ ವಿಡಿಯೊ ನೆಟ್ಟಿಗರಿಂದ ಟೀಕೆ ಮತ್ತು ಬೆಂಬಲ ಎರಡನ್ನೂ ಗಳಿಸಿದೆ.
ಮನಾಲಿಯ ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಮಹಿಳೆಯೊಬ್ಬಳು ಬಿಕಿನಿ ಧರಿಸಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ನೃತ್ಯ ಪ್ರದರ್ಶಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆಗಿರುವ ಈ ಮಹಿಳೆಯನ್ನು ಮೇಘಾ ರಾಣಿ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಂತೆ ಭಾರಿ ವೈರಲ್ ಆಗಿದೆ.
ಗುಜರಾತ್‌ನ ʼರೋಡ್ ಟು ಹೆವನ್ʼನಲ್ಲಿ ಅಸಭ್ಯ ವರ್ತನೆ: ಐಷಾರಾಮಿ ಕಾರಿನಿಂದ ರಸ್ತೆಗೆ ಡೈಪರ್ ಎಸೆದ ಮಹಿಳೆ
ಮನಾಲಿ ಎಲ್ಲ ವಯೋವರ್ಗದ ಪ್ರವಾಸಿಗರು ಭೇಟಿ ನೀಡುವ ಹಿಲ್‌ಸ್ಟೇಷನ್ ಎನ್ನುತ್ತ ನೆಟ್ಟಿಗರು ಈ ವಿಡಿಯೊ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮಾಡುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಅಲ್ಲದೆ ಇದು ಸ್ಥಳೀಯ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕೂಡ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಮಹಿಳೆಯ ಹಕ್ಕನ್ನು ಸಮರ್ಥಿಸಿಕೊಂಡರು. ಉಡುಪಿನ ಆಯ್ಕೆಗಳನ್ನು ಸಾರ್ವಜನಿಕ ಅಭಿಪ್ರಾಯದಿಂದ ನಿಯಂತ್ರಿಸಬಾರದು. ಸಾಮಾಜಿಕ ಮಾಧ್ಯಮದ ಪ್ರತಿಕ್ರಿಯೆಗಳು ಹೆಚ್ಚಾಗಿ ನೈತಿಕ ಪೊಲೀಸ್‌ಗಿರಿಯಾಗಿ ಬದಲಾಗುತ್ತವೆ ಎಂದು ಕೆಲವರು ವಾದಿಸಿದರು.
ವಿಡಿಯೊ ವೀಕ್ಷಿಸಿ:
ಇನ್ನು ಈ ಸಂಬಂಧ ಚಿತ್ರೀಕರಣದ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆಯೇ ಅಥವಾ ಯಾವುದೇ ಕಾನೂನುಗಳನ್ನು ಉಲ್ಲಂಘಿಸಲಾಗಿದೆಯೇ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಮನಾಲಿಯು ಪ್ರವಾಸಿಗರಿಗೆ ಔಪಚಾರಿಕ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿಲ್ಲ. ವಿಡಿಯೊಗೆ ಸಂಬಂಧಿಸಿದಂತೆ ಕಾನೂನು ಕ್ರಮಗಳು ಅಥವಾ ನೋಟಿಸ್‌ಗಳನ್ನು ನೀಡಲಾಗಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಯಿಲ್ಲ.
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯಲು ಈ ರೀತಿ ಮಾಡಿರಬಹುದು ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಊಹಿಸಿದ್ದಾರೆ. ಮನಾಲಿಯ ಹಿಮದಲ್ಲಿ ಬಿಕಿನಿ ಧರಿಸಿ ನೃತ್ಯ ಮಾಡಿದ ಘಟನೆಯು, ಸೃಜನಾತ್ಮಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಸೂಕ್ಷ್ಮ ಗಡಿಯನ್ನು ಇನ್‌ಫ್ಲುಯೆನ್ಸರ್‌ಗಳು ಹೇಗೆ ಸಮತೋಲನಗೊಳಿಸಬೇಕು ಎಂಬುದನ್ನು ಮತ್ತೊಮ್ಮೆ ಎತ್ತಿತೋರಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಿಸುವ ವಿಚಾರಗಳಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಕೆಲವು ದಿನಗಳ ಹಿಂದೆ, ಹಿಮಾಚಲ ಪ್ರದೇಶದ ಸಾರ್ವಜನಿಕ ಸ್ಥಳವಂತೆ ಕಂಡ ಪ್ರದೇಶವೊಂದರಲ್ಲಿ ಮದ್ಯದ ಬಾಟಲ್‌ಗಳನ್ನು ಹಿಡಿದು ಹರಿಯಾಣದ ಕೆಲವು ಪುರುಷರು ವಿವಸ್ತ್ರವಾಗಿ ನೃತ್ಯ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು.