ಲಖನೌ: ಯುವತಿಯೊಬ್ಬಳು ಪೊಲೀಸ್ ಠಾಣೆಯಿಂದ ಹೊರಗೆ ಬರುತ್ತಿರುವ ಇನ್ಸ್ಟಾಗ್ರಾಂ ರೀಲ್ ಅನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ (social media) ಹಂಚಿಕೊಂಡಿದ್ದಾಳೆ. ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಈ ವಿಡಿಯೊ ಭಾರಿ ವೈರಲ್ (Viral Video) ಆದ ಬೆನ್ನಲ್ಲೇ, ಪೊಲೀಸರು ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿರುವ ಆ ವಿಡಿಯೊವನ್ನು ಡಿಲೀಟ್ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಆಕೆ ಹೇಳಿದ್ದಾಳೆ.
ಇನ್ಸ್ಟಾಗ್ರಾಂನಲ್ಲಿ zoyakhan.9513 ಎಂದು ಕರೆಯಲ್ಪಡುವ ರುಹಿ ಎಂಬಾಕೆ ಪೊಲೀಸ್ ಠಾಣೆಯಿಂದ ಹೊರಬರುತ್ತಿರುವ ರೀಲ್ಸ್ ಮಾಡಿದಾಕೆ. ಭೋಜ್‌ಪುರಿ ಹಾಡನ್ನು ಹೊಂದಿರುವ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಈ ರೀಲ್ ಇನ್ಸ್ಟಾಗ್ರಾಮ್‍ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ತಲುಪಿದ ನಂತರ, ಅದು ಪೊಲೀಸರ ಗಮನವನ್ನೂ ಸೆಳೆಯಿತು.
ವಿಡಿಯೊ ವೀಕ್ಷಿಸಿ:
ಪೊಲೀಸರು ಕೂಡಲೇ ಈ ರೀಲ್ ಅನ್ನು ಗಮನಿಸಿದರು. ಕೂಡಲೇ ಒಬ್ಬ ಸಬ್-ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ರುಹಿಯ ಮನೆಗೆ ತಲುಪಿದರು. ಅವರು ವಿಡಿಯೊವನ್ನು ಅಳಿಸಿಹಾಕುವಂತೆ ಸೂಚಿಸಿದರು. ಆದರೆ, ಅವಳು ಅದನ್ನು ನಿರಾಕರಿಸಿದಳು. ಆ ವಿಡಿಯೊ ತುಂಬಾ ಜನಪ್ರಿಯವಾಗಿದ್ದು, ಅಳಿಸಿ ಹಾಕಲು ಸಾಧ್ಯವಿಲ್ಲ ಎಂದಿದ್ದಾಳೆ.
ಪೊಲೀಸರಿಗೆ ಚಾಕು ತೋರಿಸಿದ ರುಹಿ ಚಾಕುವನ್ನು ತೋರಿಸಿದ್ದಾಳೆ. ಮತ್ತಷ್ಟು ಒತ್ತಡ ಹೇರಿದರೆ ತನಗೆ ತಾನೇ ಚಾಕು ಚುಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ನಾಟಕ ಅಲ್ಲಿಗೆ ಮುಗಿಯಲಿಲ್ಲ. ಇನ್ನೊಂದು ವಿಡಿಯೊದಲ್ಲಿ, ರುಹಿ ತನ್ನ ಅನುಯಾಯಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಳು. ನಾವು ಪೊಲೀಸ್ ಠಾಣೆಯ ಹೊರಗೆ ವೀಡಿಯೊ ಮಾಡಿದ್ದೇವೆ. ಅದು ಇತ್ತೀಚೆಗೆ ಬಿಡುಗಡೆಯಾದ ಹಾಡನ್ನು ಆಧರಿಸಿದೆ ಎಂದು ಅವಳು ವಿಡಿಯೊದಲ್ಲಿ ಹೇಳಿದಳು.
ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದರು, ಅದನ್ನು ಅಳಿಸುವಂತೆ ಕೇಳಿದ್ದಾರೆ. ನಾನೇಕೆ ಡಿಲೀಟ್ ಮಾಡಬೇಕು? ಎಂದು ಪ್ರಶ್ನಿಸಿದ್ದಾಳೆ. ನಂತರ ಈ ರೀಲ್ ಅನ್ನು ವೈರಲ್ ಮಾಡುವಂತೆ ಬಳಕೆದಾರರ ಬಳಿ ಆಕೆ ಒತ್ತಾಯಿಸಿದ್ದಾಳೆ. ಇದಕ್ಕೆ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಠಾಣೆ ಮುಂದೆ ರೀಲ್ಸ್ ಮಾಡಿದ್ದು ಸರಿಯೇ ಎಂದು ನೆಟ್ಟಿಗರು ಚರ್ಚಿಸಿದ್ದಾರೆ.
ಇದನ್ನೂ ಓದಿ: Viral Video: ಮೂರನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿ; ಇಲ್ಲಿದೆ ನೋಡಿ ವಿಡಿಯೋ