Viral Video: ಮೂರನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿ; ಇಲ್ಲಿದೆ ನೋಡಿ ವಿಡಿಯೋ
Man Survives Miraculously: ವ್ಯಕ್ತಿಯೊಬ್ಬ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿದ್ದಿರುವ ರಭಸಕ್ಕೆ ಆತನ ಪಾದದ ಮೂಳೆ ಮುರಿದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ ಘಟನೆ ನಡೆದಿದೆ.

-

ಜೈಪುರ: ವ್ಯಕ್ತಿಯೊಬ್ಬ ಮೂರನೇ ಮಹಡಿಯಿಂದ ಬಿದ್ದು ಪವಾಡಸದೃಶವಾಗಿ ಪಾರಾದ ಘಟನೆ ರಾಜಸ್ಥಾನದ (Rajasthan) ಜೋಧ್‌ಪುರದಲ್ಲಿ ನಡೆದಿದೆ. ಬಿದ್ದ ರಭಸಕ್ಕೆ ಆತನ ಪಾದದ ಮೂಳೆ ಮುರಿದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಘಾತಕಾರಿ ಘಟನೆ ಸೆಪ್ಟೆಂಬರ್ 9 ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.
ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿಯನ್ನು 25 ವರ್ಷದ ನಜೀರ್ ಎಂದು ಗುರುತಿಸಲಾಗಿದೆ. ಈತ ಬಟ್ಟೆ ಉದ್ಯಮಿಯಾಗಿದ್ದಾನೆ. ಈ ಘಟನೆ ಸೆಪ್ಟೆಂಬರ್ 9 ರಂದು ಸಂಜೆ 5:50 ರ ಸುಮಾರಿಗೆ ನಡೆದಿತ್ತು. ವೈರಲ್ ಆದ ವಿಡಿಯೊದಲ್ಲಿ ನಜೀರ್ ಬಾಲ್ಕನಿಯಲ್ಲಿ ನಿಂತಿರುವುದನ್ನು ಕಾಣಬಹುದು. ಬಟ್ಟೆಗಳ ಬಂಡಲ್ ಅನ್ನು ಪರಿಶೀಲಿಸುತ್ತಿದ್ದ. ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡ ಆತ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ಕೆಳಗಿನ ರಸ್ತೆಯಲ್ಲಿ ಸ್ಕೂಟಿಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ ನೆಲಕ್ಕೆ ಬೀಳುವ ಬದಲು ಆತ ಸ್ಕೂಟಿಯ ಮೇಲೆ ಬಿದ್ದಿದ್ದಾನೆ. ಹೀಗಾಗಿ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಪಾದದ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಕೂಡಲೇ, ಇಬ್ಬರು ವ್ಯಕ್ತಿಗಳು ಅವನಿಗೆ ಸಹಾಯ ಮಾಡಲು ವೇಗವಾಗಿ ಓಡಿಹೋದರು. ಬಾಲ್ಕನಿಯಲ್ಲಿ ಒಂದು ಸಣ್ಣ ಕೋಣೆ ಇದ್ದು, ಬಹುಶಃ ಅದನ್ನು ಗೋಡೌನ್ ಆಗಿ ಬಳಸಲಾಗುತ್ತಿತ್ತು. ಅದರಲ್ಲಿ ಉಡುಪುಗಳ ಬಂಡಲ್‌ಗಳನ್ನು ಸಂಗ್ರಹಿಸಲಾಗುತ್ತಿತ್ತು.
ವಿಡಿಯೊ ವೀಕ್ಷಿಸಿ:
Jodhpur, Rajasthan ‼️
— Deadly Kalesh (@Deadlykalesh) September 18, 2025
A cloth merchant fell from the 3rd floor.
The entire incident was caught on CCTV. pic.twitter.com/MsXs8UqdlE
ನಜೀರ್ ಕೆಳಕ್ಕೆ ಬೀಳುವ ದೃಶ್ಯವನ್ನು ಸಿಸಿಟಿವಿ ಸೆರೆಹಿಡಿದಿದೆ. 10 ಸೆಕೆಂಡುಗಳ ವಿಡಿಯೊದಲ್ಲಿ, ನಜೀರ್ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಬಾಲ್ಕನಿಯ ಅಂಚಿಗೆ ಹಿಂದಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆದರೆ ಸಮತೋಲನ ಕಳೆದುಕೊಂಡು ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ಬಹಳ ಬೇಗನೆ ಸಂಭವಿಸಿತು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಆತ ಕೆಳಕ್ಕೆ ಬಿದ್ದಿದ್ದಾನೆ. ಅವನು ಕೆಳಕ್ಕೆ ಬಿದ್ದಾಗ ದೊಡ್ಡ ಶಬ್ಧ ಕೇಳಿಬಂದಿದೆ. ಇದನ್ನು ಕೇಳಿ ಇನ್ನೊಬ್ಬ ವ್ಯಕ್ತಿ ಬಾಲ್ಕನಿಯ ಕಡೆಗೆ ಓಡಿದ್ದಾನೆ.
ಈ ಘಟನೆಯು ಹಳೆಯ ಕಟ್ಟಡಗಳಲ್ಲಿನ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಂತಹ ಅಪಘಾತಗಳನ್ನು ತಡೆಗಟ್ಟಲು ಉತ್ತಮ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಸುರಕ್ಷತಾ ಗ್ರಿಲ್ ಇಲ್ಲದ ಕಳಪೆ ಬಾಲ್ಕನಿಯನ್ನು ಯಾರು ವಿನ್ಯಾಸಗೊಳಿಸಿದರು? ಬಿಲ್ಡರ್ ಅನ್ನು ಬಂಧಿಸಬೇಕು ಎಂದು ಬಳಕೆದಾರರೊಬ್ಬರು ಆಗ್ರಹಿಸಿದರು.
ಇದು ಭ್ರಷ್ಟಾಚಾರದ ಪರಿಣಾಮವಾಗಿರಬಹುದು ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಬಹುಶಃ ಬಟ್ಟೆಯ ಬಂಡಲ್‌ಗಳನ್ನು ಲೋಡ್ ಮಾಡಲು ಗೋಡೆಯನ್ನು ಉದ್ದೇಶಪೂರ್ವಕವಾಗಿ ಹಾಗೆ ಬಿಡಲಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಅಪಾಯಕಾರಿಯಾಗಿ ಬಾಲ್ಕನಿ ನಿರ್ಮಿಸಿರುವ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿದ ಭೂಪ! ವಿಡಿಯೊ ವೈರಲ್