ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಡುಗೆ ಮನೆಯ ಕೆಲಸ ಬಿಟ್ಟು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಮಹಿಳೆ; ಗೃಹಿಣಿಯ ದೇಶಭಕ್ತಿಗೆ ನೆಟ್ಟಿಗರು ಫಿದಾ

Viral Video: ಮಹಿಳೆಯೊಬ್ಬರು ರಾಷ್ಟ್ರ ಗೀತೆಗೆ ಗೌರವ ಸಲ್ಲಿಕೆ ಮಾಡಿರುವ ವಿಡಿಯೊವೊಂದು ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಟಿ20 ವಿಶ್ವಕಪ್ ಪಂದ್ಯದ ಸಮಯದಲ್ಲಿ ʼಜನ ಗಣ ಮನʼ ಗೀತೆ ಮೊಳಗುತ್ತಿದ್ದಂತೆ ಮಹಿಳೆ ಅಡುಗೆ ಮಾಡುವುದನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಇದು ನಿಜವಾದ ದೇಶಭಕ್ತಿ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಮಹಿಳೆ

ದೆಹಲಿ, ಫೆ. 17: ರಾಷ್ಟ್ರಗೀತೆ ಸೇರಿದಂತೆ ರಾಷ್ಟ್ರ ಲಾಂಛನಗಳಿಗೆ ಗೌರವ ಸಲ್ಲಿಸಬೇಕು ಎನ್ನುವ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಇದು ಪ್ರತಿ ಭಾರತೀಯನ ಕರ್ತವ್ಯ ಕೂಡ ಹೌದು. ಇದೀಗ ಮಹಿಳೆಯೊಬ್ಬರು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿರುವ ವಿಡಿಯೊವೊಂದು ವೈರಲ್ (Viral Video) ಆಗಿದ್ದು ಎಲ್ಲರ ಗಮನ ಸೆಳೆದಿದೆ. ಟಿ-20 ವಿಶ್ವಕಪ್ ಪಂದ್ಯದ ಸಮಯದಲ್ಲಿ ʼಜನ ಗಣ ಮನʼ ಗೀತೆ ಪ್ರಸಾರವಾಗುತ್ತಿದ್ದಂತೆ ಟಿವಿ ನೋಡುತ್ತಿದ್ದ ಮಹಿಳೆ ಅಡುಗೆ ಮಾಡುವುದನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಇದು ನಿಜವಾದ ದೇಶಭಕ್ತಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಂದಾಗ ಹೆಚ್ಚಿನ ಪ್ರೇಕ್ಷಕರು ಟಿವಿ ಮುಂದೆ ಬರುತ್ತಾರೆ. ಫೆಬ್ರವರಿ 15ರಂದು ಟಿ20 ವಿಶ್ವಕಪ್ ಮ್ಯಾಚ್ ನಡೆದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಟಿವಿ ನೋಡುತ್ತಿದ್ದ ಮಹಿಳೆಯೂ ಅಡುಗೆ ಮನೆಯ ಕೆಲಸ ಬಿಟ್ಟು, ʼಜನ ಗಣ ಮನʼ ಗೀತೆ ಕೇಳುತ್ತಿದ್ದಂತೆ ಕೆಲಸ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ.

ವಿಡಿಯೊ ನೋಡಿ:



ಶ್ರೀಲಂಕಾದ ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸೂರ್ಯ ಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡುವ ಮೊದಲು ರೂಢಿಯಂತೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ಈ ವೇಳೆ ಮನೆಯಲ್ಲಿ ಟಿವಿ ವೀಕ್ಷಿಸುತ್ತ ಅಡುಗೆ ಮಾಡಿತ್ತಿದ್ದ ಮಹಿಳೆ ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಮನೆಯೊಳಗಿನ ಯಾರೋ ಒಬ್ಬರು ಮೊಬೈಲ್ ಕ್ಯಾಮರಾವನ್ನು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಫ್ಲೈ ಓವರ್‌ನಿಂದ ಹಾರಿದ ಕಾರು- ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಮನೆಯವರು ಮೆಟ್ಟಿಲಿನ ಮೇಲಿಂದ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಮಹಿಳೆಯು ಅತ್ಯಂತ ಭಕ್ತಿಯಿಂದ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬರು ಈ ದೃಶ್ಯ “ತುಂಬಾ ಸುಂದರವಾಗಿದೆ. ಆಕೆಯ ಮಕ್ಕಳು ಈ ರೀತಿಯಲ್ಲಿ ರಾಷ್ಟ್ರಗೀತೆಗೆ ಗೌರವಿಸಲು ಕಲಿಯುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ತಾಯ್ನಾಡಿನ ಮೇಲಿನ ಪ್ರೀತಿಗಿಂತ ದೊಡ್ಡದೇನೂ ಇಲ್ಲ" ಎಂದು ಹೇಳಿದ್ದಾರೆ.