ನವದೆಹಲಿ,ಫೆ.10: ಉದ್ಯೋಗ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಜಾಬ್ ಅಂದಾಗ ಪ್ರತಿಷ್ಟಿತ ಕಂಪನಿ, ನೋಡಲು ಸುಂದರವಾಗಿ ಇರುವ ಆಫೀಸ್ ಹೀಗೆ ಸುಸಜ್ಜಿತ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗ ಗಳನ್ನೇ ಉತ್ತಮ ಎಂದು ಆಯ್ಕೆ ಮಾಡಿ ಕೊಳ್ಳುತ್ತಾರೆ. ಆದರೆ ಕಷ್ಟ ಪಟ್ಟರೆ ಒಂದು ಸಣ್ಣ ಇಸ್ತ್ರಿ ಅಂಗಡಿಯೂ ಸಹ ಕಂಪನಿ ಉದ್ಯೋಗಕ್ಕಿಂತ ಹೆಚ್ಚು ಲಾಭ ನೀಡಬಲ್ಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಇಂದಿನ ಜಗತ್ತಿನಲ್ಲಿ, ಯಶಸ್ಸು ಅನ್ನೋದು ಶಿಕ್ಷಣಕ್ಕೆ ಅನುಗುಣವಾಗಿರುವುದಿಲ್ಲ, ಏಕೆಂದರೆ ಉತ್ತಮ ಕೌಶಲ್ಯಗಳು, ಕಠಿಣ ಪರಿಶ್ರಮ ಇದ್ದರೆ ಉತ್ತಮ ಲಾಭ ಪಡೆಯಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಇತ್ತೀಚೆಗೆ ನಳಿನಿ ಉನಗರ್ ಎಂಬ ಮಹಿಳೆ ಶೇರ್ (Viral News) ಮಾಡಿಕೊಂಡಿರುವ ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ತಮ್ಮ ಮನೆಯ ಹತ್ತಿರದ ಡ್ರೈ ಕ್ಲೀನರ್ ಒಬ್ಬರ ತಿಂಗಳ ಆದಾಯ ಕೇಳಿ ಅವರೇ ಶಾಕ್ ಆಗಿದ್ದಾರೆ.
ಸ್ಥಳೀಯ ಡ್ರೈ ಕ್ಲೀನರ್ ತಿಂಗಳಿಗೆ 2 ಲಕ್ಷ ರೂ.ಗಳಿಗಿಂತ ಹೆಚ್ಚು ಗಳಿಸುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ, ಮಾಲೀಕ ಮತ್ತು ಅವರ ಪತ್ನಿ ಇಬ್ಬರು ಸಹಾಯಕರೊಂದಿಗೆ ವ್ಯವಹಾರ ವನ್ನು ನಡೆಸುತ್ತಾರೆ. ಡ್ರೈ ಕ್ಲೀನರ್‌ನ ಮಾಸಿಕ ಆದಾಯ ಸುಮಾರು 2,83,500 ರೂ.ಗಳಾಗಿದ್ದು, ವಿದ್ಯುತ್‌ಗೆ 6,000 ರೂ.ಗಳು ಮತ್ತು ಸಹಾಯಕರ ಸಂಬಳಕ್ಕೆ 40,000 ರೂ.ಗಳಂತೆ ವೆಚ್ಚವಾಗುತ್ತದೆ, ಇದರಿಂದ 2,37,500 ರೂ.ಗಳ ಲಾಭವಾಗುತ್ತದೆ.
Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ
ಅವರು ಪ್ರತಿದಿನ ಸರಾಸರಿ 350 ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾರೆ ಒಂದಕ್ಕೆ 10 ರೂಪಾಯಿಯಂತೆ ದಿನಕ್ಕೆ 3,500 ರೂ ಆಗುತ್ತದೆ. ಜೊತೆಗೆ ದಿನಕ್ಕೆ ಸುಮಾರು 20 ಬಟ್ಟೆಗಳನ್ನು ಡ್ರೈ ಕ್ಲೀನಿಂಗ್ ಮಾಡು ತ್ತಾರೆ ಒಂದಕ್ಕೆ 350 ರೂಪಾಯಿಯಂತೆ ದಿನಕ್ಕೆ 7,000 ರೂ.ಅಂದರೆ ಅವರ ದಿನದ ಒಟ್ಟು ಗಳಿಕೆ 10,500 ರೂಪಾಯಿ ಗಳು ಆಗುತ್ತದೆ. ತಿಂಗಳಿಗೆ 27 ದಿನ ಕೆಲಸ ಮಾಡುವ ಇವರ ಒಟ್ಟು ಮಾಸಿಕ ವಹಿವಾಟು 2,83,500 ಮೊತ್ತ ಆಗುತ್ತದೆ.
ಈ ಲಾಂಡ್ರಿ ಮಾಲೀಕ ತಿಂಗಳಿಗೆ ಸುಮಾರು 2.37 ಲಕ್ಷ ರೂಪಾಯಿಗೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಇದು ಭಾರತದಲ್ಲಿ ಉತ್ತಮ ಅನುಭವ ಇರುವ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಗಳಿಸುವ ವೇತನವಾಗಿದೆ ಎಂದು ನಳಿನಿ ಬರೆದುಕೊಂಡಿದ್ದಾರೆ. ಅನೇಕ ಬಳಕೆದಾರರು ಸಾಮಾಜಿಕ ಸ್ಥಿತಿ ಮತ್ತು ನಿಜವಾದ ಆರ್ಥಿಕ ಮೌಲ್ಯದ ನಡುವಿನ ಅಂತರ ಬಗ್ಗೆ ಗಮನಸೆಳೆದರು. ಒಬ್ಬ ಬಳಕೆ ದಾರರು"ನಾವು ಸಾಮಾನ್ಯವಾಗಿ ಉತ್ತಮ ಸಂಬಳಕ್ಕಾಗಿ ಉತ್ತಮ ಕಂಪನಿಯ ಉದ್ಯೋಗಗಳನ್ನು ಬೆನ್ನಟ್ಟುತ್ತೇವೆ, ಆದರೆ ಈ ರೀತಿಯ ಸ್ವಂತ ವ್ಯವಹಾರವನ್ನು ಸಣ್ಣ ಅಥವಾ ದೊಡ್ಡದಾಗಿ ನಡೆಸು ವುದು, ನಿಜವಾದ ಆಸಕ್ತಿಯಿಂದ ಮಾಡಿದರೆ, ಕೆಲವೊಮ್ಮೆ ಇನ್ನೂ ಹೆಚ್ಚು ಲಾಭದಾಯಕ ವಾಗಿ ರುತ್ತದೆ ಎಂದಿದ್ದಾರೆ. ಮತ್ತೊಬ್ಬರು ಕಠಿಣ ಪರಿಶ್ರಮವು ಎಷ್ಟು ಫಲ ನೀಡುತ್ತದೆ ಎಂಬುದನ್ನು ಇದು ನಿಜವಾಗಿಯೂ ತೋರಿಸುತ್ತದೆ ಎಂದಿದ್ದಾರೆ.