ನವದೆಹಲಿ, ಮೇ 6: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಬೇಕು ಎನ್ನುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲೂ ರೀಲ್ಸ್ ಮಾಡುವ ಘಟನೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವೊಬ್ಬರು ರೀಲ್ಸ್ ಚಿತ್ರೀಕರಣ ಮಾಡುವಾಗ ಎದುರಾದ ಅಡಚಣೆಯ ದೃಶ್ಯ ಈಗ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಇನ್‌ಫ್ಲುಯೆನ್ಸರ್ ಮಹೇಕ್ ಚೌಹಾಣ್ ಹಾಗೂ ಅವರ ಗೆಳತಿಯರು ರಸ್ತೆ ಬದಿ ಯೊಂದರಲ್ಲಿ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೆಲವು ಹಿರಿಯ ಮಹಿಳೆಯರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ನೃತ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಪ್ರಭಾವಿ ಮಹೇಕ್ ಚೌಹಾಣ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು ಈ ಕ್ಲಿಪ್‌ನಲ್ಲಿ, ವಸತಿ ಪ್ರದೇಶದಂತೆ ಕಾಣುವ ಸ್ಥಳದಲ್ಲಿ ಅವರು ಸ್ನೇಹಿತನೊಂದಿಗೆ ನೃತ್ಯ ಮಾಡು ತ್ತಿರುವುದನ್ನು ಸೆರೆಹಿಡಿಯಲಾಗಿದೆ. ಮೊದಲಿಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ರೆಕಾರ್ಡಿಂಗ್ ಮಧ್ಯದಲ್ಲಿ, ಇಬ್ಬರು ಮಹಿಳೆಯರು ಅವರ ಬಳಿಗೆ ಬಂದು ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಳದಲ್ಲಿ ರೀಲ್ಸ್ ಮಾಡಬಾರದು ಎಂದು ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ನೈತಿಕ ಪೊಲೀಸ್‌ಗಿರಿ ಬಗ್ಗೆ ಪರ-ವಿರೋಧದ ಚರ್ಚೆ ಮಾಡುವಂತೆ ಆಗಿದೆ.
ವಿಡಿಯೋ ನೋಡಿ:
ಇಲ್ಲಿ ಇಷ್ಟು ಜನ ಪುರುಷರು ಸೇರಿದ್ದಾರೆ. ಪುರುಷರು ಸೇರಿರುವ ಜಾಗದಲ್ಲಿ ಹೀಗೆ ಡ್ಯಾನ್ಸ್ ಮಾಡಬಾರದು ಎಂದು ಹೇಳುವ ಮೂಲಕ ವಾದಿಸಿದ್ದಾರೆ. ಈ ಅಡಚಣೆಯ ಹೊರತಾಗಿಯೂ, ಇಬ್ಬರು ಮಹಿಳೆಯರು ತಮ್ಮ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಅವರು ನೃತ್ಯವನ್ನು ಪೂರ್ತಿಗೊಳಿಸಿದರು. ಈ ಪೋಸ್ಟ್ ಗೆ ಅವರು "ಇದು ಯೋಗ್ಯವಾಗಿದೆಯೇ? ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
Viral Video: ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ಡೇಂಜರಸ್ ವಿಡಿಯೋ ವೈರಲ್
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು,“ಆಂಟಿಯರು ಅಷ್ಟು ಚೆನ್ನಾಗಿ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ಅಸೂಯೆಪಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇಂತಹವರನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಾರ್ವಜನಿಕ ರಸ್ತೆಗಳಲ್ಲಿ ರೀಲ್ಸ್ ಮಾಡುವುದು ತಪ್ಪು ಎಂದು ವಾದಿಸಿದ್ದಾರೆ.