ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನಿಮಗೆ ನಾಚಿಕೆಯಾಗಬೇಕುʼʼ: ದೆಹಲಿ ವಿಮಾನದೊಳಗೆ ಸಿಜೆಪಿ ನಾಯಕ ಸೌರವ್ ದಾಸ್ ವಿರುದ್ಧ ಮಹಿಳೆಯ ಆಕ್ರೋಶ

Viral Video: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಸೇರಿ ಅವರ ಇಡೀ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಮಾನದ ಒಳಗೆ ಬಂದ ಪೊಲೀಸರು ಸೌರವ್ ದಾಸ್ ಅವರನ್ನು ಕರೆದೊಯ್ಯುವಾಗ ಮಹಿಳೆಯೊಬ್ಬರು "ಶೇಮ್ ಆನ್ ಯು" ಎಂದು ಹೇಳಿ ಆಕ್ರೋಶ ಹೊರಹಾಕಿರುವ ವಿಡಿಯೊ ವೈರಲ್ ಆಗಿದೆ.

ದೆಹಲಿ ವಿಮಾನದಲ್ಲಿ ಸಿಜೆಪಿ ನಾಯಕ ಸೌರವ್ ದಾಸ್ ಮತ್ತು ಮಹಿಳೆಯ ನಡುವೆ ವಾಗ್ವಾದ

ನವದೆಹಲಿ, ಅ. 10: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (CJP), ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಮತ್ತು ವಿವಿಧ ರಾಜಕೀಯ ಪಕ್ಷಗಳು ದೆಹಲಿಯ ಜಂತರ್​​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿವೆ.‌ ಇದರ ಪರಿಣಾಮ ಜನಸಾಮಾನ್ಯರ ಮೇಲೂ ಬೀರುತ್ತಿದ್ದಂತೆ ಸಿಜೆಪಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಅಭಿಜಿತ್ ದೀಪ್ಕೆ ಮತ್ತು ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಸೇರಿ ಹಲವರನ್ನು ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದರು. ವಿಮಾನದ ಒಳಗೆ ಬಂದು ಪೊಲೀಸರು ಸೌರವ್ ದಾಸ್ ಅವರನ್ನು ಕರೆದೊಯ್ಯುವಾಗ ಮಹಿಳೆಯೊಬ್ಬರು "ಶೇಮ್ ಆನ್ ಯು" ಎಂದು ಹೇಳಿ ಆಕ್ರೋಶ ಹೊರಹಾಕಿರುವ ವಿಡಿಯೊ ವೈರಲ್ (Viral News) ಆಗಿದೆ.

ವಿಮಾನದ ಒಲಗಿನಿಂದ ಪೊಲೀಸರು ಸೌರವ್ ದಾಸ್ ಅವರನ್ನು ಕರೆದೊಯ್ಯುವಾಗ  ಪ್ರಯಾಣಿಕರೊಬ್ಬರು ಅವರಿಗೆ ʼʼನಿಮಗೆ ನಾಚಿಕೆಯಾಗಬೇಕುʼʼ ಬಗ್ಗೆ ಎಂದು ಹೇಳಿ ಅಸಮಾಧಾನ ಬಹಿರಂಗಪಡಿಸಿದರು.

ವಿಡಿಯೊ ನೋಡಿ:



ವೈರಲ್ ವಿಡಿಯೊದಲ್ಲಿ ಪೊಲೀಸರು ಸೌರವ್ ಅವರನ್ನು ಕರೆದೊಯ್ಯುವಾಗ ಮಹಿಳೆ ಅವರಿಗೆ ಏನೋ ಹೇಳುತ್ತಿರುವುದನ್ನು ಕಾಣಬಹುದು. ಸೌರವ್ ದಾಸ್ ಮಹಿಳೆಯನ್ನು ನೋಡಿ ಕೋಪಗೊಂಡ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಅದಕ್ಕೆ ಮಹಿಳೆ ತಕ್ಷಣ "ನಿಮಗೆ ನಾಚಿಕೆ ಯಾಗಬೇಕು" ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ಜಂತರ್ ಮಂತರ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಂತರ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಸಿಜೆಪಿ ನಾಯಕರ ವಿರುದ್ಧ ಮಹಿಳೆಯ ಆಕ್ರೋಶ:



ವಿಮಾನದೊಳಗೆ ಪೊಲೀಸರು ಪ್ರವೇಶಿಸುತ್ತಿದ್ದಂತೆ ನಾಯಕರು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲೇ ಪ್ರಯಾಣಿಕರು ಮತ್ತು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಾಯಕರು 'ಇಂಕ್ವಿಲಾಬ್ ಜಿಂದಾಬಾದ್ʼ ಘೋಷಣೆ ಕೂಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.