ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಿಮ್‌ನಲ್ಲಿ ನಾಯಿ ಆಹಾರ ಸೇವಿಸಿದ ಯುವಕ; ವಿಡಿಯೋ ನೋಡಿ‌‌ ಬೆಚ್ಚಿಬಿದ್ದ ಜನರು!

Viral Video: ಇತ್ತೀಚೆಗೆ ಫಿಟ್ನೆಸ್ ಆಸಕ್ತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಯುವಕನೊಬ್ಬ ವ್ಯಾಯಾಮವನ್ನು ಮಾಡುವಾಗ ಪ್ರೋಟೀನ್ ಬೂಸ್ಟರ್ ಆಗಿ ನಾಯಿ ಆಹಾರವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಯುವಕರು ತಮ್ಮ ಗುರಿಯನ್ನು ತಲುಪಿಸಲು ಯಾವುದೇ ಸಾಹಸಕ್ಕೂ ಸಿದ್ದರಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಜಿಮ್‌ನಲ್ಲಿ ನಾಯಿ ಆಹಾರ ಸೇವಿಸಿದ ಯುವಕ

ನವದೆಹಲಿ,ಜ.21: ಇತ್ತೀಚೆಗೆ ಫಿಟ್ನೆಸ್ ಕ್ರೇಜ್ ಅನ್ನೋದು ಮಿತಿಮೀರಿ ಹೋಗಿದೆ. ತೂಕ ಇಳಿಸ ಬೇಕು, ಫಿಟ್ ಆಗಿರ ಬೇಕೆಂದು ಹೆಚ್ಚಿನವರು ಜಿಮ್ ಗೆ ಹೋಗುತ್ತಾರೆ. ಆದರೆ ಇತ್ತೀಚೆಗೆ ಫಿಟ್ನೆಸ್ ಆಸಕ್ತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಯುವಕನೊಬ್ಬ ವ್ಯಾಯಾಮವನ್ನು ಮಾಡುವಾಗ ಪ್ರೋಟೀನ್ ಬೂಸ್ಟರ್ ಆಗಿ ನಾಯಿ ಆಹಾರವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಯುವಕರು ತಮ್ಮ ಗುರಿಯನ್ನು ತಲುಪಿಸಲು ಯಾವುದೇ ಸಾಹಸಕ್ಕೂ ಸಿದ್ದರಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ಜಿಮ್ ವರ್ಕೌಟ್ ಮಾಡುವುದರಿಂದ ದೈಹಿಕ ಚಟುವಟಿಕೆಗಳು ಸಿಗಲಿದ್ದು ದೇಹಕ್ಕೆ ಅತ್ಯಂತ ಚೈತನ್ಯವೂ ಸಿಗುತ್ತದೆ. ಆದ್ರೆ ಇತ್ತೀಚೆಗೆ ಯುವಕರು ಪಾಲಿಸುತ್ತಿರುವ ಕ್ರಮಗಳು ಮಾತ್ರ ಅವರ ಪ್ರಾಣಕ್ಕೂ ಹಾನಿಯಾಗುವಂತಿದೆ. ಇತ್ತೀಚೆಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕ ನೊಬ್ಬ ಪ್ರೋಟೀನ್ ಗಾಗಿ ನಾಯಿಗಳ ಆಹಾರವನ್ನು ಸೇವಿಸಿದ್ದಾನೆ.

ವಿಡಿಯೋ ನೋಡಿ:



ಯುವಕ ಜಿಮ್ ನಲ್ಲಿ ಕಾಲಿಗೆ ಸಂಬಂಧಿಸಿದ ವ್ಯಾಯಾಮ ಮಾಡುತ್ತಿರುತ್ತಾನೆ‌. ವ್ಯಾಯಾಮದ ಮಧ್ಯೆ ವಿರಾಮ ತೆಗೆದು ಕೊಂಡಿದ್ದ ಆತ ಪಕ್ಕದಲ್ಲೇ ಇಟ್ಟಿದ್ದ ಪೆಡಿಗ್ರಿ ನಾಯಿ ಆಹಾರದ ಪ್ಯಾಕೆಟ್‌ನಿಂದ ಸ್ವಲ್ಪ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಾನೆ. ಡಾ. ಸಿಜೆಡ್ ಎಂಬುವವರು ಈ ವಿಡಿಯೋ ವನ್ನು ಶೇರ್ ಮಾಡಿಕೊಂಡಿದ್ದು ಜಿಮ್‌ಗಳಲ್ಲಿ ನಿಜವಾಗಿ ಏನಾಗುತ್ತಿದೆ ಜನರು ಬಳಸುತ್ತಿರುವ ಉತ್ಪನ್ನಗಳು ಕಾರ್ಯಕ್ಷಮತೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತಿವೆಯೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Viral Video: 2 ಸೆಕೆಂಡ್‌ ವಿಡಿಯೊ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬಂದನ್ ಗರ್ಲ್: ಯಾರೀಕೆ?

ಈ ವಿಡಿಯೋ ಕಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ಆತನನ್ನು ಟೀಕೆ ಮಾಡಿದ್ದು ಸಾಮಾನ್ಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರದಿಂದ ಪ್ರೋಟೀನ್ ಸಾಕು. ಇಂತಹ ನಾಯಿ ಆಹಾರ ತಿನ್ನುವುದನ್ನು ನಿಲ್ಲಿಸಿ. ಮೊಟ್ಟೆ, ಚಿಕನ್ ನಿಂದ ಪ್ರೋಟೀನ್‌ಗಳು ಇನ್ನೂ ಲಭ್ಯವಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದನ್ನು ನಾಯಿ ಗಳಿಗಾಗಿ ರೂಪಿಸಲಾಗಿದೆ, ಮನುಷ್ಯರಿಗಾಗಿ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಆರೋಗ್ಯ ತಜ್ಞರ ಪ್ರಕಾರ, ನಾಯಿ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರಬಹುದು ಆದರೆ ಅದು ಮನುಷ್ಯರ ದೇಹಕ್ಕೆ ಪೂರಕವಲ್ಲ ಎಂದು ತಿಳಿಸಿದ್ದಾರೆ.