ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಟ್ಟ ಮಂಜಿನಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತು ದಾರಿ ತೋರಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್!

Viral Video: ವಾಹನ ಚಲಾಯಿಸುವಾಗ ಯುವಕರ ಹುಚ್ಚಾಟ ಕೆಲವೊಮ್ಮೆ ಮೀತಿ ಮೀರಿದ್ದು ವ್ಹೀಲಿಂಗ್ ಮಾಡುವುದು, ಅಪಾಯಕಾರಿ ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು ಮುಂತಾದ ಹುಚ್ಚಾಟ ಮೆರೆದಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ ಆಗಿದ್ದು ಚಳಿಗಾಲದ ಮಂಜಿನ ನಡುವೆ ಪ್ರಯಾಣ ಮಾಡಲು ಯುವಕರ ತಂಡವೊಂದು ಅಪಾಯಕಾರಿ ದುಸ್ಸಾಹಸಕ್ಕೆ ಮುಂದಾಗಿದೆ. ಯುವಕನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತು ಅಪಾಯಕಾರಿ ಸಾಹಸ ವನ್ನು ಮಾಡಿದ್ದಾನೆ.

ಕಾರಿನ ಬಾನೆಟ್ ಮೇಲೆ ಕುಳಿತ ಯುವಕ

ನವದೆಹಲಿ,ಜ.1: ಅಜಾಗರೂಕತೆಯ ವಾಹನ ಚಾಲನೆಯಿಂದ ದಿನನಿತ್ಯ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಅದರಲ್ಲೂ ವಾಹನ ಚಲಾಯಿಸುವಾಗ ಯುವಕರ ಹುಚ್ಚಾಟ ಕೆಲವೊಮ್ಮೆ ಮೀತಿ ಮೀರಿದ್ದು ವ್ಹೀಲಿಂಗ್ ಮಾಡುವುದು, ಅಪಾಯಕಾರಿ ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು ಮುಂತಾದ ಹುಚ್ಚಾಟ ಮೆರೆದಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ ಆಗಿದ್ದು ಚಳಿಗಾಲದ ಮಂಜಿನ ನಡುವೆ ಪ್ರಯಾಣ ಮಾಡಲು ಯುವಕರ ತಂಡ ವೊಂದು ಅಪಾಯಕಾರಿ ದುಸ್ಸಾಹಸಕ್ಕೆ ಮುಂದಾಗಿದೆ. ಯುವಕನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತು ಅಪಾಯಕಾರಿ ಸಾಹಸವನ್ನು ಮಾಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ವೈರಲ್ (Viral Video) ಆಗಿದೆ.

ಚಳಿಗಾಲದ ದಟ್ಟ ಮಂಜಿನಿಂದಾಗಿ ಕೆಲವೆಡೆ ರಸ್ತೆಗಳಲ್ಲಿ ಸಂಚಾರ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ ಈ ಮಂಜಿನ ನಡುವೆ ಪ್ರಯಾಣಿಸಲು ಯುವಕರ ತಂಡವೊಂದು ಅಪಾಯಕಾರಿಯಾಗಿ ವರ್ತಿಸಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮಹೀಂದ್ರಾ ಸ್ಕಾರ್ಪಿಯೋ ಕಾರೊಂದರಲ್ಲಿ ಯುವಕರ ಗುಂಪೊಂದು ಪ್ರಯಾಣ ಮಾಡಿದೆ. ಆದರೆ ದಟ್ಟ ಮಂಜು ಇದ್ದ ಕಾರಣ ಚಾಲಕನಿಗೆ ಮುಂದಿನ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆತನ ಗೆಳೆಯನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತು ಕೈ ಸನ್ನೆಯ ಮೂಲಕ ದಾರಿ ತೋರಿಸಲು ಮುಂದಾಗಿದ್ದಾನೆ ವಾಹನದ ಬಾನೆಟ್ ಮೇಲೆ ಕುಳಿತಿದ್ದ ವ್ಯಕ್ತಿ ತನ್ನ ಕೈಗಳಿಂದ ಸಿಗ್ನಲ್ ನೀಡಿದ್ದು ಮತ್ತು ಚಾಲಕ ಅದಕ್ಕೆ ತಕ್ಕಂತೆ ಸ್ಟೀರಿಂಗ್ ಅನ್ನು ತಿರುಗಿಸಿದ್ದಾನೆ.

ವಿಡಿಯೋ ನೋಡಿ:



ಅದರಲ್ಲೂ ಒಬ್ಬ ಯುವಕ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು ತಮಾಷೆಯಾಗಿ ಇದು ''ಇಂಡಿಯಾದ ಅಡಾಸ್ (ADAS) ಲೆವೆಲ್ 4ಜಿ ತಂತ್ರಜ್ಞಾನ" ಎಂದು ಹೇಳಿಕೊಂಡಿದ್ದಾನೆ. ಸದ್ಯ ಈ ವಿಡಿಯೊ‌ ಸುಮಾರು 11 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಆದರೆ, ಈ ಅಪಾಯಕಾರಿ ಸಾಹಸವನ್ನು ಕಂಡು ನೆಟ್ಟಿಗರು ಟೀಕೆ ಮಾ ಡಿದ್ದಾರೆ. ಒಂದು ವೇಳೆ ಚಾಲಕ ಹಠಾತ್ತನೆ ಬ್ರೇಕ್ ಹಾಕಿದರೆ ಅಥವಾ ಎದುರಿನಿಂದ ಯಾವುದಾದರೂ ವಾಹನ ಬಂದರೆ ಬಾನೆಟ್ ಮೇಲಿರುವ ವ್ಯಕ್ತಿ ನೇರವಾಗಿ ಬಿದ್ದು ಅಪಾಯ ಸಂಭವಿಸುತ್ತಿತ್ತು.

Viral Video: ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಕಾರಿನ ಮುಂದೆ ಕುಳಿತಿರುವ ದೃಶ್ಯ ನೋಡಿದ್ರೆ "ಇದು ಟೈಟಾನಿಕ್ ಸಿನಿಮಾದ ಸೀನ್ ನೆನಪಿಸುವಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇಂತಹ ಅಪಾಯಕಾರಿ ಪ್ರದರ್ಶನಕ್ಕೆ ಮುಂದಾ ಗುವುದು ಮಾಡುವುದು ಗಂಭೀರ ಅಪರಾಧವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ಚಲಿಸುವ ಕಾರಿನ ಛಾವಣಿಯ ಮೇಲೆ ಕುಳಿತು ರೀಲ್‌ಗಳನ್ನು ಮಾಡುತ್ತಿರುವ ವ್ಯಕ್ತಿಯೊಬ್ಬನಿಗೆ ನೋಯ್ಡಾ ಪೊಲೀಸರು 28,500 ರೂ. ದಂಡ ವಿಧಿಸಿದರು. ಇಂತವರಿಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ