ನವದೆಹಲಿ, ಮೇ 15: ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆದ ಕೆಲವು ದೃಶ್ಯಗಳು ನೆಟ್ಟಿಗರ ಮನ ಗೆಲ್ಲುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ವಿದೇಶಿ ಪ್ರವಾಸಿಗೆ ಭಾರತೀಯ ಯುವಕನೊಬ್ಬ ನೆರವಾಗಿದ್ದು ಯುವಕನ ಸಹಾಯ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿದೇಶಿ ಪ್ರವಾಸಿಯೊಬ್ಬರ ದುಪ್ಪಟ್ಟಾವೊಂದು ರೈಲಿನ ಹಳಿ ಮೇಲೆ ಬಿದ್ದಿದ್ದು ತಕ್ಷಣವೇ ಯುವಕನೊಬ್ಬ ನೆರವಾಗಿ ದುಪ್ಪಟ್ಟ ವಾಪಸ್ಸು ನೀಡಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಭಾರತಕ್ಕೆ ಭೇಟಿ ನೀಡಿದ ಇಂಡೋನೇಷ್ಯಾದ ಕಂಟೆಂಟ್ ಕ್ರಿಯೇಟರ್ ಇಂದಾ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ರೈಲು ಹತ್ತಲು ತಯಾರಿ ನಡೆಸುತ್ತಿದ್ದಾಗ ಒಂದು ಅನಿರೀಕ್ಷಿತ ಘಟನೆ ಸಂಭವಿಸಿತು. ನಿಲ್ದಾಣದಲ್ಲಿ ರೈಲು ಹತ್ತಲು ಕಾಯುತ್ತಿದ್ದಾಗ ಅವರ ನೀಲಿ ಬಣ್ಣದ ದುಪ್ಪಟ್ಟಾ ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವೆ ಅಪಾಯಕಾರಿ ಹಳಿಗಳ ಮೇಲೆ ಬಿದ್ದಿದೆ.
ವಿಡಿಯೋ ನೋಡಿ:
ಜನದಟ್ಟಣೆಯ ಮಧ್ಯದಲ್ಲಿ, ಅವರ ದುಪಟ್ಟಾ ಭುಜಗಳಿಂದ ಜಾರಿ ಕೆಳಗಿನ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಅಂತರದಿಂದಾಗಿ ಇದು ಅಪಾಯಕಾರಿಯಾಗಿತ್ತು. ಆದರೆ ಹತ್ತಿರದಲ್ಲಿ ನಿಂತಿದ್ದ ಯುವಕ ನೊಬ್ಬ ಹಿಂಜರಿಕೆಯಿಲ್ಲದೆ, ಹಳಿಗಳ ಮೇಲೆ ಎಚ್ಚರಿಕೆಯಿಂದ ಇಳಿದು, ಹಳಿಗಳ ಮೇಲೆ ಜಿಗಿದಿದ್ದಾನೆ. ಅಪಾಯದ ನಡುವೆಯೂ ದುಪ್ಪಟ್ಟಾವನ್ನು ಕೈಗೆತ್ತಿಕೊಂಡು ಇಂದಾ ಅವರಿಗೆ ನೀಡಿದ್ದಾನೆ.
Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ದುಪ್ಪಟ್ಟಾ ನೀಡಿದ ನಂತರ ಆಕೆ ಧನ್ಯವಾದ ತಿಳಿಸಿದರೂ ಯುವಕ ಯಾವುದೇ ಪ್ರಚಾರಕ್ಕಾಗಿ ಕಾಯದೆ ಅಲ್ಲಿಂದ ಮರೆಯಾಗಿದ್ದಾನೆ. ಇಂದಾ ಅವನಿಗೆ ಮತ್ತೆ ಮೇಲಕ್ಕೆ ಏರಲು ಸಹಾಯ ಮಾಡಲು ತನ್ನ ಕೈಯನ್ನು ನೀಡಿದರು ನಿರಾಕರಿಸಿ ಸ್ವತಃ ಮೇಲೆ ಬಂದಿದ್ದಾನೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಯಾವುದೇ ಸ್ವಾರ್ಥ ಇಲ್ಲದೆ ಸಹಾಯ ಮಾಡುವ ನಿಜವಾದ ಹೀರೊ ಎಂದಿದ್ದಾರೆ. ಮತ್ತೊಬ್ಬರು ದುಪಟ್ಟಾಕ್ಕಾಗಿ ಅವನು ತನ್ನ ಪ್ರಾಣವನ್ನು ಪಣಕ್ಕಿಟ್ಟನು ಎಂದು ಬರೆದಿದ್ದಾರೆ.