ನವದೆಹಲಿ: ಕಾರು ಚಲಿಸುತ್ತಿರುವಾಗ ಅದರ ಮೇಲೆ ಹತ್ತಿ ಸ್ಟಂಟ್ ಮಾಡುವುದು, ಬೈಕ್ ನಲ್ಲಿ ಸ್ಟಂಟ್ , ಓವರ್ ಟೇಕ್ ಮಾಡುವುದು ಹೀಗೆ ಏನೆಲ್ಲ ಹುಚ್ಚಾಟ ಮಾಡುತ್ತಿರುತ್ತಾರೆ. ಅಂತೆಯೇ ಕಾರಿನ ಟಾಪ್ ಸೀಟ್ ಮೇಲೆ ಯುವಕನೊಬ್ಬ ಕೂತು ತನ್ನ ಗರ್ಲ್ ಫ್ರೆಂಡ್ ಗೆ ಕಿಸ್ ಮಾಡಿದ್ದ ಘಟನೆ ನಡೆದಿದೆ. ದೆಹಲಿಯ ಸಾಕೇತ್ ಜೆ ಬ್ಲಾಕ್‌ನಲ್ಲಿ ಈ ದೃಶ್ಯ ನಡೆದಿದ್ದು ಸದ್ಯ ಈ ಕುರಿತಾದ ವಿಡಿಯೋ (Viral video) ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮುಖ್ಯ ರಸ್ತೆಯಲ್ಲಿಯೇ ಯುವಕನು ಈ ರೀತಿ ಸ್ಟಂಟ್ ಮಾಡಿದ್ದ ದೃಶ್ಯಗಳು ಮೊಬೈಲ್ ಕೆಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ 21 ವರ್ಷ ವಯಸ್ಸಿನ ಯುವಕನು ಕಾರಿನ ಟಾಪ್ ಮೇಲೆ ಹತ್ತಿ ಕೂತಿದ್ದಾನೆ. ಕಾರು ಚಲಿಸುತ್ತಿದ್ದಾಗಲೇ ಈ ಹುಡುಗ ಕಾರಿನ ಮೇಲೆ ಸಾಹಸ ಮೆರೆದಿದ್ದಾನೆ. ಈ ಆಘಾತಕಾರಿ ದೃಶ್ಯಗಳು ಜನರನ್ನು ಬೆಚ್ಚಿ ಬೀಳಿಸುವಂತಿದೆ. ಕಾರಿನ ಟಾಪ್ ನಲ್ಲಿ ಯಾವುದೇ ಭದ್ರತೆಗಳಿಲ್ಲದೆ ಹುಡುಗ ಕೂತಿದ್ದಾನೆ. ಬಳಿಕ ಟ್ರಾಫಿಕ್ ಸಿಗ್ನಲ್‌ನಲ್ಲಿ, ಹುಡುಗಿಯೊಬ್ಬಳು ಕಾರಿನ ಕಿಟಕಿಯಿಂದ ಹೊರಗೆ ಬಾಗಿದ್ದಾಳೆ. ಇಬ್ಬರು ಮುತ್ತು ಕೊಟ್ಟು ಚುಂಬಿಸುತ್ತಿರುವ ದೃಶ್ಯಗಳು ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಲ್ ಫ್ರೆಂಡ್‌ಗೆ ಕಿಸ್ ಮಾಡಿದ್ದ ಯುವಕನ ವಿಡಿಯೊ ವೈರಲ್
ಈ ಎಲ್ಲ ದೃಶ್ಯಗಳನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದಿದ್ದು ಅದನ್ನು ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ಸೇಫ್ ಆಗಿ ಇರಲು ಪ್ರತಿಯೊಬ್ಬ ತಂದೆ ತಾಯಿ ಬಯಸುತ್ತಾರೆ. ಆದರೆ ಇಂತಹ ಮಕ್ಕಳು ಬೇಜವಾಬ್ದಾರಿ ತನದಿಂದ ಪ್ರಾಣ ಕಳೆದು ಕೊಂಡರೆ ಮರುಕಪಡುವವರು ಹೆತ್ತವರು ಎಂದು ಪೋಸ್ಟ್ ನಲ್ಲಿ ವಿಶೇಷ ಕ್ಯಾಪ್ಶನ್ ಅನ್ನು ಬರೆದಿ ದ್ದಾರೆ. ಈ ಮೂಲಕ ಈ ವಿಡಿಯೋ ಹಾಗೂ ಕ್ಯಾಪ್ಶನ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸರಕಾರಕ್ಕೆ ಮತ್ತು ಪೊಲೀಸ್ ಅಧಿ ಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪೊಲೀಸರು ತತ್ ಕ್ಷಣ ಗಾಡಿ ನಂಬರ್ ಟ್ರೇಸ್ ಮಾಡಿ ಸಂಬಂಧ ಪಟ್ಟವರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ಮೋಟಾರು ವಾಹನ ಕಾಯ್ದೆಯ (MVA) ಸೆಕ್ಷನ್ 179 ಮತ್ತು 184 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಇಬ್ಬರಿಗೂ ದಂಡ ವಿಧಿಸಿ ಇನ್ನು ಮುಂದೆ ಹೀಗೆ ಮಾಡ ದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು.
Viral Video: ಸ್ಕೂಟರ್‌ನಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಕಾರು- ಭೀಕರ ವಿಡಿಯೊ ವೈರಲ್
ದೆಹಲಿ ಪೊಲೀಸರು ಕೂಡ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, "ಜೀವನ ಎನ್ನುವುದು ಬಹಳ ಅಮೂಲ್ಯ. ಹೀಗಾಗಿ ಇಂತಹ ಸಾಹಸಗಳಿಗೆ ಕೈಹಾಕದಿರಿ ಎಂದು ಬರೆದಿದ್ದಾರೆ''. ಅದರ ಜೊತೆಗೆ ಪ್ರಕರಣ ಸಂಬಂಧಿಸಿದ ಆರೋಪಿಗೆ ಸೆಕ್ಷನ್ 179 MVA ಮತ್ತು 184 MVA ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ನಾಗರಿಕರು ತಮ್ಮ ಮತ್ತು ಇತರರ ಜೀವಗಳಿಗೆ ಅಪಾಯವನ್ನುಂಟು ಮಾಡಬಾರದು ಎಂದು ವಿನಂತಿಸಲಾಗಿದೆ.
ಈ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ. ಇತ್ತೀಚೆಗೆ ಯುವಕರು ಹುಚ್ಚಾಟ ಮೆರೆಯುವುದು ಹೆಚ್ಚಾಗಿದೆ. ಯಾರೆ ಆಗಲಿ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಲೇ ಬೇಕು. ವಾಹನ ಮಾಲೀಕರು ಈಗಾಗಲೇ ಹಲವಾರು ಸಲ ಫೈನ್ ಕಟ್ಟಿರಬಹುದು ಎಂದು ಬಳಕೆದಾರ ರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 112/183 ರ ಅಡಿಯಲ್ಲಿ ಅತಿ ವೇಗಕ್ಕೆ ಬಹು ದಂಡಗಳು, ಸೆಕ್ಷನ್ 122/177 ರ ಅಡಿಯಲ್ಲಿ ಅನುಚಿತ ಪಾರ್ಕಿಂಗ್‌ಗೆ ದಂಡ ಮತ್ತು ಸೆಕ್ಷನ್ 179 ರ ಅಡಿಯಲ್ಲಿ ನಿರ್ದೇಶನಗಳನ್ನು ಉದ್ದೇಶ ಪೂರ್ವಕವಾಗಿ ಪಾಲಿಸದಿದ್ದಕ್ಕಾಗಿ ಶುಲ್ಕಗಳನ್ನು ವಿಧಿಸಲಾಗಿದೆ. ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ಅಥವಾ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರನ್ನು ಹೊತ್ತೊಯ್ದಿದ್ದಕ್ಕಾಗಿ ಸೆಕ್ಷನ್ 194B(1) ರ ಅಡಿಯಲ್ಲಿ ಚಲನ್ ನೀಡಲಾಗಿದೆ ಎಂದು ತಿಳಿದು ಬಂದಿದೆ.