ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದಲ್ಲಿನ ಸಾರ್ವಜನಿಕ ರಜೆಯ ಬಗ್ಗೆ ಬೇಸರ ಹೊರ ಹಾಕಿದ ಉದ್ಯೋಗಿ; ವಿಡಿಯೊ ವೈರಲ್‌

Viral News: ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬಹುತೇಕರು ಬಯಸುತ್ತಾರೆ. ಜೀವನ ಶೈಲಿ, ಉತ್ತಮ ಪ್ಯಾಕೇಜ್ ಹೀಗೆ ಇದಕ್ಕೆ ನಾನಾ ಕಾರಣಗಳಿಗಾಗಿ ಇರಬಹುದು. ಇದೀಗ ಆಸ್ಟ್ರೇಲಿಯಾದಲ್ಲಿ ಹತ್ತು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಭಾರತೀಯ ಮೂಲದ ಆದಿತ್ಯ ಖನೇಜಾ ಎನ್ನುವವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಿಗುವ ರಜಾ ದಿನದ ವ್ಯತ್ಯಾಸವನ್ನು ಶೇರ್ ಮಾಡಿದ್ದಾರೆ.

ಭಾರತದಲ್ಲಿ ಸಾರ್ವಜನಿಕ ರಜೆ ಸಿಗುವುದೇ ಅಪರೂಪ- ಬೇಸರ ಹೊರಹಾಕಿದ ಉದ್ಯೋಗಿ

ಕ್ಯಾನ್‌ಬೆರ್ರಾ, ಅ. 2: ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಹೆಚ್ಚಿನ ಜನರು ಬಯಸುತ್ತಾರೆ. ಜೀವನ ಶೈಲಿ, ಉತ್ತಮ ಪ್ಯಾಕೇಜ್ ಹೀಗೆ ಇದಕ್ಕೆ ನಾನಾ ಕಾರಣಗಳಿವೆ. ಇದೀಗ ಆಸ್ಟ್ರೇಲಿಯಾದಲ್ಲಿ ಹತ್ತು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಭಾರತೀಯ ಮೂಲದ ಆದಿತ್ಯ ಖನೇಜಾ ಎನ್ನುವವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಿಗುವ ರಜಾ ದಿನದ ವ್ಯತ್ಯಾಸವನ್ನು ಶೇರ್ (Viral News) ಮಾಡಿದ್ದಾರೆ. ಆಸ್ಟ್ರೇಲಿಯಾವು ಕುದುರೆ ರೇಸ್‌ ಮತ್ತು ಸ್ಥಳೀಯ ಜಾತ್ರೆಗಳಂತಹ ಕಾರ್ಯಕ್ರಮಗಳಿಗೆ ರಜೆ ಹೊಂದಿದೆ. ಆದರೆ ಭಾರತದಲ್ಲಿ ರಜಾದಿನಗಳು ಹೆಚ್ಚಾಗಿ ಧಾರ್ಮಿಕ ಹಬ್ಬಗಳು ಮತ್ತು ರಾಷ್ಟ್ರೀಯ ಹಬ್ಬಕ್ಕೆ ಸೀಮಿತ ಎಂದು ಹೇಳಿದ್ದಾರೆ.

ಭಾರತದಲ್ಲಿ ರಜೆ ಸಿಗುವುದೇ ಅಪರೂಪ. ಹೆಚ್ಚಾಗಿ ಧಾರ್ಮಿಕ ಹಬ್ಬಗಳು ಮತ್ತು ರಾಷ್ಟ್ರೀಯ ದಿನಾಚರಣೆಗಳಿಗೆ ಉದಾಹರಣೆಗೆ ದೀಪಾವಳಿ, ಸ್ವಾತಂತ್ರ್ಯ ದಿನಾಚರಣೆ ರಜೆ ನೀಡಲಾಗುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿ ಕುದುರೆ ರೇಸ್, ಸ್ಥಳೀಯ ಮೇಳಗಳು, ಸ್ಪೋರ್ಟ್ಸ್, ಪಿಕ್‌ನಿಕ್‌ ಡೇಯಂತಹ ಮನರಂಜನಾ ಚಟುವಟಿಕೆಗಳಿಗೂ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ.

ವಿಡಿಯೊ ನೋಡಿ:



ಆಸ್ಟ್ರೇಲಿಯನ್ನರು ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳನ್ನು ಕಂಡುಕೊಳ್ಳುತ್ತಾರೆ ಎಂದು ಅವರು ತಮಾಷೆ ಮಾಡಿದ್ದಾರೆ. ಅವರ ಹೋಲಿಕೆಯು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ​ವಾರಾಂತ್ಯದ ರಜೆಯ ನಿಯಮ ನೋಡುದಾದ್ರೆ ಭಾರತದಲ್ಲಿ ಶನಿವಾರ ಅಥವಾ ಭಾನುವಾರ ಬಂದರೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕ ರಜೆ ಶನಿವಾರ ಬಂದರೆ ಶುಕ್ರವಾರ, ಭಾನುವಾರ ಬಂದರೆ ಸೋಮವಾರ ರಜೆ ನೀಡಿ ವಾರಾಂತ್ಯ ಆನಂದಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಒಂದೇ ಬೈಕ್‌ನಲ್ಲಿ 6 ವಿದ್ಯಾರ್ಥಿಗಳ ಅಪಾಯಕಾರಿ ಸವಾರಿ; ಇದೇನಾ ಶಿಕ್ಷಣ? ಎಂದು ಪ್ರಶ್ನಿಸಿದ ನೆಟ್ಟಿಗರು

ʼʼಆಸ್ಟ್ರೇಲಿಯನ್ನರನ್ನು ಆರಾಮದಾಯಕ ಜೀವನಶೈಲಿ ಉಳ್ಳವರು ಎಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಇದುವೇ ಕಾರಣ. ಇಲ್ಲಿ ಸಂತೋಷ ಮತ್ತು ಮನರಂಜನೆಗೆ ಆದ್ಯತೆ ನೀಡುತ್ತಾರೆ. ಇಲ್ಲಿನ ಜನರನ್ನು ನೋಡಿ ಕಲಿಯಬೇಕʼʼ ಎಂದು ಬರೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಸರಕಾರಿ ರಜೆ ಇದ್ದರೂ ಕೆಲಸ ಇರುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.