ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್ ಕ್ರೇಜ್‌ಗಾಗಿ ಪತ್ನಿ ಜೊತೆಗಿನ 'ಖಾಸಗಿ' ವೀಡಿಯೋ ಶೇರ್ ಮಾಡಿದ ಯುವಕ!

ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೊವನ್ನೇ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಜನರು ತನ್ನನ್ನು ಗುರುತಿಸಬೇಕು, ನಾನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇನೆ ಎಂದು ಯುವಕ ತನ್ನ ಹೆಂಡತಿ ಬಳಿಯೇ ಹೇಳಿ ಕೊಂಡಿದ್ದಾನಂತೆ.‌ ಸದ್ಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ಖಾಸಗಿ ವಿಡಿಯೊವನ್ನು ವೈರಲ್ ಮಾಡಿದ ಯುವಕ

ಮಧ್ಯಪ್ರದೇಶ, ಡಿ.12: ರೀಲ್ಸ್​ ಮಾಡಿ ಫೇಮ್ ಗಿಟ್ಟಿಸಿಕೊಳ್ಳುವುದು ಈಗಿನ ಟ್ರೆಂಡ್​ ಆಗಿ ಬಿಟ್ಟಿದೆ. ಏನೇನೂ ವಿಡಿಯೊ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವುದು ಈಗಿನ (Viral Video) ಯುವ ಜನಾಂಗದವರ ಕ್ರೇಜ್‌ ಆಗಿದೆ. ಎಲ್ಲಿಯವರೆಗೆ ಈ ಹುಚ್ಚು ಮಿತಿಮೀರಿದೆ ಎಂದರೆ ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೊವನ್ನೇ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಜನರು ತನ್ನನ್ನು ಗುರುತಿಸಬೇಕು, ನಾನು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇನೆ ಎಂದು ಯುವಕ ತನ್ನ ಹೆಂಡತಿ ಬಳಿಯೇ ಹೇಳಿಕೊಂಡಿದ್ದಾನಂತೆ.‌ ಸದ್ಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈತನು ಪೋರ್ನ್ ವ್ಯಸನಿಯಾಗಿದ್ದು ಪೋರ್ನ್ ಸೈಟ್ ಬಳಕೆದಾರ ಕೂಡ ಆಗಿದ್ದ..ಹೀಗಾಗಿ ತನ್ನ ಹೆಂಡತಿಯೊಂದಿಗೆ 13 ನಿಮಿಷ, 14 ಸೆಕೆಂಡುಗಳ ಖಾಸಗಿ ವೀಡಿಯೊವನ್ನು ರೆಕಾರ್ಡ್ ಮಾಡಿ ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಆತನ ಹೆಂಡತಿ ಇದನ್ನು ಪ್ರಶ್ನೆ ಮಾಡಿದಾಗ ಅವನ ಪತಿ ಸ್ಪಷ್ಟವಾಗಿ ಹೇಳಿದ್ದಾನೆ. “ನಾನು ಉದ್ದೇಶಪೂರ್ವಕ ವಾಗಿಯೇ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದೇನೆ, ಇದರಲ್ಲಿ ತನಗೆ ಯಾವುದೇ ಬೇಸರವಿಲ್ಲ…ನಾನು ಜನಪ್ರಿಯನಾಗುವುದೇ ನನ್ನ ಉದ್ದೇಶ ಎಂದು ಹೇಳಿಕೊಂಡಿದ್ದಾನೆ.

Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್

ವಿಡಿಯೋ ವೈರಲ್ ಆಗುತ್ತಿದ್ದಂತೆ ಪತ್ನಿ ಮಾನಸಿಕವಾಗಿ ನೊಂದಿದ್ದು ದೂರು ದಾಖಲಿಸಿದ್ದಾರೆ. ತನ್ನ ಪತಿಯೂ ತನಗೆ ಎಲ್ಲಿಯೂ ಮುಖ ತೋರಿಸದಂತೆ ಮಾಡಿದ್ದಾನೆ. ಅವನು ನನ್ನ ಜೀವನವನ್ನು ಹಾಳು ಮಾಡಿದ್ದಾನೆ‌..ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದೇ ರೀತಿ ಆರೋಪಿಯು ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದ ಎಂದು ಮಹಿಳೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಮದುವೆಯೂ ಮೇ 10 ರಂದು ನಡೆದಿದ್ದು ಆರೋಪಿಯು ವರದಕ್ಷಿಣೆಯಾಗಿ ಮೂರು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದನು..ತಾವು 2 ಲಕ್ಷ ರೂಪಾಯಿ ಗಳನ್ನು ಮಾತ್ರ ನೀಡಲಾಗಿದ್ದು ಉಳಿದ ಮೊತ್ತಕ್ಕಾಗಿ ಅವನು ತನ್ನ ಸಹೋದರಿಗೆ ಕಿರುಕುಳ ನೀಡುತ್ತಲೇ ಇದ್ದನು ದೂರಿನಲ್ಲಿ ತಿಳಿಸಿದ್ದಾರೆ

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿ ಕೊಂಡಿದ್ದು, ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ..ವರದಿ ಗಳ ಪ್ರಕಾರ, ಆರೋಪಿ ಮುಂಬೈಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.