Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್
ಆಲ್ವಾರ್‌ನ ಸಿಲಿಸೆರ್ ಸರೋವರದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಯುವಕರ ಗುಂಪೊಂದು ಈ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ರೀಲ್ಸ್ ಹುಚ್ಚಿಗಾಗಿ ಮೊಸಳೆ ಜೊತೆ ಹುಚ್ಚಾಟ ಮೆರಿದಿದ್ದಾರೆ. ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಗಳ ಸಮೀಪಕ್ಕೆ ಹೋಗಿ ಯುವಕರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಎಂದರೆ ಈ ಗುಂಪಿನಲ್ಲಿದ್ದ ಒಬ್ಬ ಯುವಕ ಮೊಸಳೆಯ ಬಾಲ ಹಿಡಿಯಲು ಪ್ರಯತ್ನ ಮಾಡಿದ್ದಾನೆ.
(ಸಂಗ್ರಹ ಚಿತ್ರ) -
ರಾಜಸ್ಥಾನ, ಡಿ.12: ಇಂದು ರೀಲ್ಸ್ ಗಾಗಿ ಯುವಕರು ಏನೆಲ್ಲಾ ಸಾಹಸಕ್ಕೆ ಮುಂದಾಗುತ್ತಾರೆ. ಹುಚ್ಚಾಟ ಮೆರೆಯುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ರೈಲು ಹಳಿಗಳ ಮೇಲೆ ಹೋಗುವುದು, ವಾಹನದಲ್ಲಿ ಸ್ಟಂಟ್ ಮಾಡುವುದು, ಬೆಟ್ಟದ ತುದಿಗೆ ಹೋಗುವುದು ಹೀಗೆ ಅಪಾಯಕಾರಿ ಜಾಗಗಳಿಗೆ ತೆರಳಿ ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡವರು ಇದ್ದಾರೆ. ಅಂತೆಯೇ ರಾಜಸ್ತಾನದ ಆಳ್ವಾರ್ ಬಳಿಯ ಸಿಲಿಸೇರ್ ಸರೋವರದ ಸಮೀಪದಲ್ಲಿ ಯುವಕರ ಆಘಾತಕಾರಿ ಘಟನೆಯ ವಿಡಿಯೊವೊಂದು ವೈರಲ್ (Viral Video) ಆಗಿದೆ. ಯುವಕನೊಬ್ಬ ಅಪಾಯಕಾರಿ ಮೊಸಳೆಯ ಬಾಲ ಹಿಡಿಯಲು ಪ್ರಯತ್ನಿಸುತ್ತಿದ್ದು ಈ ಭಯಾನಕ ವಿಡಿಯೊಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಆಲ್ವಾರ್‌ನ ಸಿಲಿಸೆರ್ ಸರೋವರದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಯುವಕರ ಗುಂಪೊಂದು ಈ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ರೀಲ್ಸ್ ಹುಚ್ಚಿಗಾಗಿ ಮೊಸಳೆ ಜೊತೆ ಹುಚ್ಚಾಟ ಮೆರಿದಿದ್ದಾರೆ. ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಗಳ ಸಮೀಪಕ್ಕೆ ಹೋಗಿ ಯುವಕರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಎಂದರೆ ಈ ಗುಂಪಿನಲ್ಲಿದ್ದ ಒಬ್ಬ ಯುವಕ ಮೊಸಳೆಯ ಬಾಲ ಹಿಡಿಯಲು ಪ್ರಯತ್ನ ಮಾಡಿದ್ದಾನೆ. ಈ ದೃಶ್ಯವನ್ನು ಸರೋವರದ ಬಳಿ ವ್ಲಾಗ್ ಮಾಡುತ್ತಿದ್ದ ಯುವಕರಲ್ಲಿ ಒಬ್ಬರು ಸೆರೆಹಿಡಿದಿದ್ದಾರೆ.
ವಿಡಿಯೋ ವೀಕ್ಷಿಸಿ:
मगरमच्छों से मजाक, जान जोखिम में डालकर मगरमच्छ की पूंछ टच करते हुए बनाया वीडियो | Alwar | Rajasthan News#FINVideo #Alwar #RajasthanWithFirstIndia #RajasthanNews @ForestRajasthan @AlwarPolice pic.twitter.com/lfKEon8dFH
— First India News (@1stIndiaNews) December 11, 2025
ಇದರಿಂದ ಗಾಬರಿಗೊಂಡ ಮೊಸಳೆಯು ತಕ್ಷಣವೇ ನೀರಿನೊಳಗೆ ಜಿಗಿಯುತ್ತಿರುವ ದೃಶ್ಯ ಕಂಡು ಬಂದಿದೆ. ಇದರಿಂದ ಯುವಕನು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಸದ್ಯ ವನ್ಯ ಜೀವಿಗಳ ಸುತ್ತ ಹೆಚ್ಚುತ್ತಿರುವ ಈ ನಡವಳಿಕೆಯ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ನೆಟಿಜನ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ.. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂತಹ ಅಪಾಯಕಾರಿ ವರ್ತನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ
ಈ ಸರೋವರವು ಮೊಸಳೆಗಳ ವೀಕ್ಷಣೆಗೆಂದೆ ಪ್ರಸಿದ್ಧಿ ಪಡೆದಿದೆ. ಈ ಸರೋವರದಲ್ಲಿ ಸುಮಾರು 300ಕ್ಕೂ ಹೆಚ್ಚು ಮೊಸಳೆಗಳಿವೆ ಎಂದು ಹೇಳಲಾಗುತ್ತದೆ.. ಸದ್ಯ ಈ ವಿಡಿಯೊ ವೈರಲ್ ಆಗು ತ್ತಿದ್ದಂತೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ರೀಲ್ಸ್ ಗಾಗಿ ಪ್ರಾಣ ಕಳೆದುಕೊಳ್ಳಲು ಕೂಡ ಇಂದು ಜನ ಸಿದ್ದರಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ರೀಲ್ಸ್ ಚಟ ಇಂದು ಮಾರಕವಾಗಿ ಹಬ್ಬಿದೆ ಎಂದು ಕಾಮೆಂಟ್ ಮಾಡಿದ್ದಾರೆ.