ಮುಂಬೈ, ಜು. 20: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು (Viral Video) ಜಾಸ್ತಿಯಾಗುತ್ತಿವೆ. ಭಾರತದಲ್ಲಿ ಮಹಿಳೆಯರ ಸುರಕ್ಷತೆ ಹೇಗೆ? ಎನ್ನುವ ಆತಂಕದ ಪ್ರಶ್ನೆ ಜನರನ್ನು ಕಾಡುತ್ತಿವೆ. ಈ ನಡುವೆ ಚಲಿಸುವ ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದು, ಭಯಪಡದ ಆಕೆ ತಕ್ಕ ಪಾಠ ಕಲಿಸಿದ್ದಾಳೆ. ಪ್ರಯಾಣದ ವೇಳೆ ಕಾಮುಕನೊಬ್ಬ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಯುವತಿ ತಕ್ಷಣವೇ ಆತನ ವಿರುದ್ಧ ಆಕ್ರೋಶಗೊಂಡಿದ್ದಾಳೆ.
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ಯುವತಿಯೊಬ್ಬಳು ಮೌನವಾಗಿರುವ ಬದಲು ತಾನೇ ಪ್ರತಿಭಟನೆ ನಡೆಸಿ ಮಾದರಿ ಎನಿಸಿಕೊಂಡಿದ್ದಾಳೆ. ಇನ್ನೆಂದೂ ಆತ ಮಹಿಳೆಯರನ್ನು ಕಣ್ಣೆತ್ತಿಯೀ ನೋಡಬಾರದು. ಅಂತಹ ಪಾಠ ಕಲಿಸಿದ್ದಾಳೆ. ಸದ್ಯ ಆಕೆಯ ನಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ವಿಡಿಯೊ ನೋಡಿ:
ಬದ್ನೇರಾ ಮತ್ತು ಅಕೋಲಾ ನಡುವಿನ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕಿರುಕುಳ ನೀಡಿದ ವ್ಯಕ್ತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಯುವತಿಯ ನೆರವಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕೆ ಮೌನವಾಗಿರದೆ ಶಿಕ್ಷೆಯ ರೂಪವಾಗಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಕೈ ಬಳೆ ತೊಡಿಸಿ ಆತನ ಮುಖ ಸ್ಪಷ್ಟವಾಗಿ ಕಾಣಿಸುವಂತೆ ವಿಡಿಯೊ ಮಾಡಿದ್ದಾಳೆ.
ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್ ದೋಚಿದ ಖದೀಮರು!
ಮಹಿಳೆಯರ ತಂಟೆಗೆ ಬಂದರೆ ಸಮಾಜದಲ್ಲಿ ತಲೆ ಎತ್ತಿ ಓಡಾಡದಂತೆ ಮಾಡಬಹುದು ಎಂಬುದನ್ನು ಯುವತಿ ತೋರಿಸಿದ್ದಾಳೆ. ತನಗಾದ ಅನ್ಯಾಯಕ್ಕೆ ಈ ರೀತಿ ಶಿಕ್ಷೆ ನೀಡುವ ಮೂಲಕ ಪ್ರತಿಭಟನೆ ನಡೆಸಿದ್ದಾಳೆ. ಅನೇಕರು ಯುವತಿಯ ಧೈರ್ಯ ಮತ್ತು ಸಹ ಪ್ರಯಾಣಿಕರು ತೋರಿಸಿದ ಒಗ್ಗಟ್ಟನ್ನು ಶ್ಲಾಘಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಆ ಮಹಿಳೆ ಅವನ ಮುಖಕ್ಕೆ ಲಿಪ್‌ಸ್ಟಿಕ್ ಹಚ್ಚುತ್ತಿರುವುದು ಮತ್ತು ಮಣಿಕಟ್ಟಿನ ಮೇಲೆ ಬಳೆಗಳನ್ನು ತೊಡಿಸುತ್ತಿರುವುದನ್ನು ಕಾಣಬಹುದು.
ಯುವತಿ ಲಿಪ್‌ಸ್ಟಿಕ್ ಹಚ್ಚುತ್ತಿರುವಾಗ ಕಿರುಕುಳ ನೀಡಿದಾತ ಮೌನವಾಗಿ ಸೀಟಿನ ಮೇಲೆ ಕುಳಿತಿದ್ದಾನೆ. ನೆಟ್ಟಿಗರೊಬ್ಬರು ಇಂತವರಿಗೆ ಇದೇ ರೀತಿಯ ಪಾಠ ಕಲಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತವರು ಮತ್ತೆ ತಲೆ ಎತ್ತಿ ನೋಡಬಾರದು. ಅಂತಹ ಶಿಕ್ಷೆ ನೀಡಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ.