ಬೆಂಗಳೂರು,ಅ.4: ಸಿಲಿಕಾನ್ ಸಿಟಿಯೂ ಆಧುನಿಕ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದರೂ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಬೇಸೆತ್ತವರು ಅನೇಕರು ಇದ್ದಾರೆ. ಎಷ್ಟೇ ಬೇಗ ಮನೆಗೆ ತಲುಪಲು ಪ್ರಯತ್ನಿಸಿದರೂ ಟ್ರಾಫಿಕ್ ನಿಂದಾಗಿ ಗಂಟೆಘಟ್ಟಲ್ಲೇ ರಸ್ತೆ ಬದಿಯಲ್ಲೇ ಕಾಯಬೇಕಾದ ಪರಿಸ್ಥಿತಿ ಎಂದು ಯುವತಿಯೊಬ್ಬರು ಬೇಸರ ಹೊರಹಾಕಿದ್ದಾರೆ. ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಹಲವು ಸಮಯಗಳಲ್ಲಿ ಪ್ರಯಾಣಿಸಿ ಅವರು ಪ್ರಯೋಗ ಮಾಡಿದ್ದರು. ಆದರೆ ಪ್ರಯಾಣ ಮಾಡಿದ ಎಲ್ಲ ಸಮಯದಲ್ಲೂ ಕಾದು ಸುಸ್ತಾಗಿದ್ದರು.ಇದಕ್ಕಾಗಿ ಯುವತಿ ನೀಡಿದ ವಿಚಿತ್ರ ಮತ್ತು ತಮಾಷೆಯ ಪರಿಹಾರದ ವೀಡಿಯೋ ಭಾರೀ ವೈರಲ್ (Viral News) ಆಗಿದೆ.
ಟ್ರಾಫಿಕ್ ದಟ್ಟಣೆ ತಪ್ಪಿಸಿಕೊಳ್ಳಲು ಕೆಲಸದ ಸ್ಥಳದಿಂದ ಹೊರಡಲು ಸೂಕ್ತ ಸಮಯವನ್ನು ಕಂಡುಕೊಳ್ಳಲು ಯುವತಿಯೊಬ್ಬರು ಪ್ರಯತ್ನಿಸಿದ್ದರು. ಆದರೆ ಕೊನೆಗೆ, ಟ್ರಾಫಿಕ್ ತಪ್ಪಿಸಲು ಸೂಕ್ತ ಸಮಯವನ್ನು ಕಂಡುಕೊಳ್ಳುವುದು ಅಸಾಧ್ಯವಾದ ಕೆಲಸ ಎಂದು ಅರಿತುಕೊಂಡರು.
ವಿಡಿಯೋ ನೋಡಿ:
ಯುವತಿ ವಿವಿಧ ಸಮಯಗಳಲ್ಲಿ ಪ್ರಯಾಣಿಸಿ ನೋಡಿದರೂ, ಮಧ್ಯಾಹ್ನ 3:20ಕ್ಕೆ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಂಡರು. ಸಾಕಷ್ಟು ಚೆಕ್ ಮಾಡಿದ ನಂತರ ಅವರು ಕಂಡುಕೊಂಡ ಪರಿಹಾರವೆಂದರೆ ಆಫೀಸ್‌ಗೇ ಹೋಗದಿರುವುದು. ಎಲ್ಲರೂ ವರ್ಕ್ ಫ್ರಮ್ ಹೋಮ್ ಆಯ್ಕೆಮಾಡಿಕೊಳ್ಳುವುದೇ ಸೂಕ್ತ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
'ಕಾವ್ಯ' ಎಂಬ ಯುವತಿ ಬೆಂಗಳೂರಿನ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಹಲವು ಸಮಯಗಳಲ್ಲಿ ಪ್ರಯಾಣಿಸಿ ಪ್ರಯೋಗ ಮಾಡಿದ್ದರು. ಸಂಜೆ ಟ್ರಾಫಿಕ್ ಇರುತ್ತದೆ ಬೇಗ ಮನೆಗೆ ತಲುಪ ಬೇಕೆಂದು ಪ್ರಯತ್ನಿಸಿ ಮಧ್ಯಾಹ್ನ 3:20 ಕ್ಕೇ ಆಫೀಸ್‌ನಿಂದ ಹೊರಟರೂ, ಭಾರೀ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು. 3 ಗಂಟೆಗಳ ಸಮಯ, ಶಕ್ತಿ ಮತ್ತು ಇಂಧನ ನಷ್ಟವಾಯಿತು ಎಂದು ಹೇಳಿದ್ದಾರೆ.
ಅನೇಕ ನೆಟ್ಟಿಗರು ಕಾವ್ಯ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ. ಯಾವ ಸಮಯ ಹೊರಟರೂ ರಸ್ತೆಯಲ್ಲಿ ಕಾಯಲೇಬೇಕು ಎಂದು ಬೆಂಗಳೂರಿನ ರಸ್ತೆಗಳ ಪರಿಸ್ಥಿತಿಗೆ ಟೀಕೆ ಮಾಡಿದ್ದಾರೆ.