ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಮಳೆಹಾತೆಗಳ ಮಾಯಾಲೋಕ !

ಕೈಗೆಟಕುವಷ್ಟು ಎತ್ತರದ ಗಿಡಗಳ ರೆಂಬೆಗಳ ಮೇಲೆ, ಹುಲ್ಲುಗಿಡಗಳ ಕಡ್ಡಿಯಂತಹ ತುದಿಯಲ್ಲಿ ಕುಳಿತಿರುವುದು ಅವುಗಳ ವಿಶ್ರಾಮದ ಭಂಗಿ. ನೆಲದ ಮೇಲೆ ಬೆಳೆದ ಹುಲ್ಲುಕಡ್ಡಿಯೊಂದರ ತುದಿಯಲ್ಲಿ ಮೌನವಾಗಿ ಕುಳಿತಿರುವ ಮಳೆಹಾತೆಯ ‘ಧ್ಯಾನಸ್ಥ ಸ್ಥಿತಿ’ಯನ್ನು ಕಂಡರೆ, ಕುತೂಹಲಗೊಳ್ಳದ ಮಕ್ಕಳೇ ಇಲ್ಲವೆನ್ನಬಹುದು!

ಶಶಿಧರ ಹಾಲಾಡಿ

ಸಂಜೆಯ ಸಮಯದಲ್ಲಿ ಅಗೇಡಿಯ ನೀರಿನ ಮೇಲ್ಮೈ ಬಳಿ ಹಾರಾಡುತ್ತಾ, ಒಂದೊಂದೇ ಗುಟುಕು ನೀರು ಕುಡಿಯುವ ರೀತಿಯಲ್ಲಿ, ಹತ್ತೆಂಟು ಬಾರಿ ನೀರನ್ನು ಮುತ್ತಿಕ್ಕುವ ಮಳೆ ಹಾತೆಯು (ಏರೋ ಪ್ಲೇನ್ ಚಿಟ್ಟೆ), ವಾಸ್ತವವಾಗಿ ಆಗ ನೀರು ಕುಡಿಯುವುದಿಲ್ಲ! ಬದಲಿಗೆ, ಆ ಕೀಟಗಳು ಮೊಟ್ಟೆಯಿಡು ವಾಗ, ಆ ರೀತಿ ನೀರನ್ನು ಮುಟ್ಟುತ್ತವೆ! ಅದು ಅವುಗಳ ಸಂತಾನೋತ್ಪತ್ತಿಯ ಚಟುವಟಿಕೆಯ ಒಂದು ಭಾಗ. ನಮ್ಮ ಹಳ್ಳಿಗಳಲ್ಲಿ ಹೇರಳವಾಗಿ ಕಾಣ ಸಿಗುವ ಮಳೆ ಹಾತೆ ಗಳ ಜೀವನಕ್ರಮವೇ ವಿಶಿಷ್ಟ, ಅನನ್ಯ.

ಮಳೆಗಾಲದ ಜಡಿಮಳೆ ಆರಂಭವಾಗುವುದಕ್ಕೆ ಕೆಲವು ದಿನಗಳ ಮುನ್ನ ಆಗಾಗ ಸುರಿದ ಮಳೆಯಿಂದಾಗಿ ಮನೆ ಮುಂದಿನ ಅಗೇಡಿಯಲ್ಲಿ ನೀರು ತುಂಬಿರುವ ಸಮಯ; ಸಂಜೆ ಹೊತ್ತಿನಲ್ಲಿ, ಆಗಸದ ಬೆಳಕನ್ನೇ ಪ್ರತಿಫಲಿಸಿ, ಇಡೀ ಅಗೇಡಿಯ ಮೇಲ್ಮೈಯು ಸಪಾಟು ವಿಶಾಲ ಕನ್ನಡಿಯಂತೆ ಬೆಳಗುವ ಕಾಲ; ಆ ನೀರಗನ್ನಡಿಯ ಮೇಲ್ಮೈಗೆ ಮುತ್ತಿಕ್ಕಿ, ಆಗಾಗ ಅಲ್ಲಿ ಪುಟಾಣಿ ತರಂಗಗಳನ್ನು ಎಬ್ಬಿಸುತ್ತಿರುವ ಆ ಪುಟ್ಟ ಕೀಟವೇ ಮಳೆ ಹಾತೆ; ಅಥವಾ ನಮ್ಮೂರಿನವರು ಕರೆಯುವಂತೆ ‘ಮಳೆ ಹಾಂತೆ’.

ಈ ಮಳೆ ಹಾತೆಗಳು ಒಂದೊಂದಾಗಿ ಇರುವುದೇ ಕಡಿಮೆ; ಅಲ್ಲಲ್ಲಿ ಹಾರಾಡುವ ಹತ್ತಾರು ಕೀಟಗಳ ಸಮೂಹವೇ ಆ ಅಗೇಡಿಯ ನೀರನ್ನು ಒಂದೊಂದೇ ಹನಿಯ ರೀತಿಯಲ್ಲಿ ಕುಡಿಯುವಂತೆ, ನೀರನ್ನು ಮುಟ್ಟಿ, ಒಂದೆರಡು ಅಡಿ ಮೇಲೇರಿ ಪುನಃ ನೀರನ್ನು ಮುಟ್ಟುತ್ತಿರುತ್ತವೆ. ಅವುಗಳ ಹಾರಾಡವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

‘ಮಳೆ ಹಾಂತೆ’ಗಳು ಈ ರೀತಿ ಹತ್ತಾರು ಸಲ ನೀರಿಗೆ ಮುತ್ತಿಕ್ಕಿ, ನೀರನ್ನು ಕುಡಿಯುತ್ತಾ ಹಾರಾಡು ತ್ತಿದ್ದುದನ್ನು ಕಂಡ ನಮ್ಮ ಹಳ್ಳಿಯ ಜನರು, ‘ಹೋ, ಇವತ್ತು ರಾತ್ರಿ ಮಳೆ ಬತತ್’ ಎನ್ನುತ್ತಿದ್ದರು. ಈ ಕೀಟಗಳನ್ನು ಶಿಷ್ಟ ಭಾಷೆಯಲ್ಲಿ ‘ಏರೋ ಪ್ಲೇನ್ ಚಿಟ್ಟೆ’ (ಡ್ರೇಗನ್ ಫ್ಲೈ) ಎಂದು ಕರೆಯುತ್ತಾರೆ; ಆದರೆ ಈ ಹೆಸರಿನಿಂದ ಕರೆಯಲು ನನಗೆ ಅಷ್ಟು ಇಷ್ಟವಿಲ್ಲ - ಏಕೆಂದರೆ, ‘ಏರೋಪ್ಲೇನ್ ಚಿಟ್ಟೆ’ ಎಂಬ ಹೆಸರು ತೀರಾ ಇತ್ತೀಚಿಗನದು, ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ಜಾಸ್ತಿ ಯಾದ ನಂತರ ಸೃಷ್ಟಿಗೊಂಡ ಹೆಸರಿದು.

ಏರೋಪ್ಲೇನ್‌ಗಳು ಬಾನಿನಲ್ಲಿ ಹಾರಾಡುವಕ್ಕಿಂತ ಲಕ್ಷ ಲಕ್ಷ ವರ್ಷಗಳ ಮುಂಚೆಯೇ, ಈ ಹಾರಾಡುವ ಪುಟ್ಟ ಕೀಟಗಳು ನಮ್ಮಲ್ಲಿ ಮನೆ ಮಾಡಿದ್ದವು; ಆದ್ದರಿಂದ, ಕನ್ನಡದ ಹೆಸರೇ ಇದಕ್ಕೆ ಚಂದ ಎಂಬುದು ನನ್ನೆಣಿಕೆ. ನಮ್ಮ ಹಳ್ಳಿಯವರು ಇದಕ್ಕೆ ಇರಿಸಿರುವ ‘ಮಳೆ ಹಾಂತೆ’ ಎಂಬ ಹೆಸರು ಧ್ವನಿಪೂರ್ಣ; ಮಳೆಗಾಲ ಬರುವ ಸೂಚನೆಯನ್ನು ಈ ಕೀಟಗಳ ಹಾರಾಟದಲ್ಲಿ ಕಂಡ ನಮ್ಮೂರಿ ನವರು, ತಮ್ಮ ಮುಂದಿನ ಬೆಳೆಗೆ ಅಗತ್ಯವಿರುವ ನೀರನ್ನು ತರುವ ಮಳೆಗಾಲದ ಆಗಮನವನ್ನು ಇವು ಸೂಚಿಸುತ್ತವೆ ಎಂಬ ಆಶಾಭಾವವನ್ನೂ ವ್ಯಕ್ತಪಡಿಸಿದ್ದಾರೆ!

ಇದನ್ನೂ ಓದಿ: Shashidhara Halady Column: ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಆದರೆ, ಇಂತಹ ಸ್ಥಳೀಯ ಹೆಸರನ್ನು ವ್ಯಾಪಕವಾಗಿ ಬಳಸಲು ಒಂದು ಸಣ್ಣ ಸಮಸ್ಯೆ ಇದೆ: ನಮ್ಮ ವಿಶಾಲ ಕರ್ನಾಟಕದಲಿ ಒಂದೊಂದು ಭಾಗದ ಜನರು, ಒಂದೊಂದು ಹೆಸರಿನಿಂದ ಇದನ್ನು ಕರೆಯುವರು! ಕರಾವಳಿಯ ಭಾಗದ ನಮ್ಮೂರಿನಲ್ಲಿ ಮಳೆ ಹಾತೆ ಎಂದು ಕರೆದಂತೆ, ಬಯಲು ಸೀಮೆಯವರು, ಉತ್ತರ ತುದಿಯವರು ಬೇರಾವುದೋ ಹೆಸರಿಟ್ಟಿರುತ್ತಾರೆ ಈ ಕೀಟಕ್ಕೆ. ಮಕ್ಕಳಿಗೆ ಆಟ ಕೀಟಕೆ ಕಾಟ ಮಳೆಹಾತೆಗೂ ಮಕ್ಕಳಿಗೆ ಭಾರೀ ನಂಟು ಉಂಟು!

ಮಳೆ ಹಾತೆಗಳು ಅಗೇಡಿಯ ನೀರನ್ನು ಒಂದೊಂದೇ ಗುಟುಕು ಕುಡಿಯುವಂತೆ ಹಾರಾಡುವುದು ಅವುಗಳ ಎದ್ದು ಕಾಣಿಸುವ ಚಟುವಟಿಕೆಯಾದರೆ, ಬೇರೆ ಸಮಯದಲ್ಲಿ ಅವು ‘ಧ್ಯಾನ’ ಮಾಡುತ್ತಿರು ತ್ತವೆ!

ಕೈಗೆಟಕುವಷ್ಟು ಎತ್ತರದ ಗಿಡಗಳ ರೆಂಬೆಗಳ ಮೇಲೆ, ಹುಲ್ಲುಗಿಡಗಳ ಕಡ್ಡಿಯಂತಹ ತುದಿಯಲ್ಲಿ ಕುಳಿತಿರುವುದು ಅವುಗಳ ವಿಶ್ರಾಮದ ಭಂಗಿ. ನೆಲದ ಮೇಲೆ ಬೆಳೆದ ಹುಲ್ಲುಕಡ್ಡಿಯೊಂದರ ತುದಿ ಯಲ್ಲಿ ಮೌನವಾಗಿ ಕುಳಿತಿರುವ ಮಳೆಹಾತೆಯ ‘ಧ್ಯಾನಸ್ಥ ಸ್ಥಿತಿ’ಯನ್ನು ಕಂಡರೆ, ಕುತೂಹಲ ಗೊಳ್ಳದ ಮಕ್ಕಳೇ ಇಲ್ಲವೆನ್ನಬಹುದು!

ಮೌನ ಮುನಿಯ ರೀತಿ ಕುಳಿತು, ತಮ್ಮ ಉದ್ದ ಬಾಲವನ್ನು ಹಿಂಭಾಗದಲ್ಲಿ ನೀಡಿಕೊಂಡು, ಪಾರದರ್ಶಕ ರೆಕ್ಕೆಗಳನ್ನು ಕತ್ತರಿ ಆಕಾರದಲ್ಲಿಟ್ಟುಕೊಂಡು, ತಲೆಯಷ್ಟೇ ದೊಡ್ಡಕಣ್ಣುಗಳನ್ನು ಅಲುಗಾಡಿಸದೇ ಮಳೆಹಾತೆ ಕುಳಿತಿರುವಾಗ, ಮಕ್ಕಳು ಮೆಲ್ಲನೆ ಅದರ ಹಿಂಭಾಗಕ್ಕೆ ಬಂದು, ಒಂದಿಂಚು ಉದ್ದದ ಅದರ ಬಾಲವನ್ನು ಗಬಕ್ಕನೆ ಹಿಡಿಯುತ್ತಾರೆ!

ಮಕ್ಕಳಿಗೆ ಅದೊಂದು ಕೀಟಲೆಯ ಆಟ; ಆದರೆ ಮಳೆ ಹಾಂತೆಗೆ ಅದು ಪ್ರಾಣ ಸಂಕಟ! ತನ್ನ ಉದ್ದನೆಯ ಬಾಲವು ಕೀಟಲೆ ಹುಡಗನೊಬ್ಬನ ಎರಡು ಬೆರಳುಗಳ ಸಂದಿಯಲ್ಲಿ ಸಿಕ್ಕಿ ಬಿದ್ದದ್ದೇ ಬಿದ್ದದ್ದು, ಆ ಮಳೆ ಹಾತೆಗೆ ವಿಪರೀತ ಗಾಬರಿ, ಭಯ! ‘ನನ್ನ ಪಾಡಿಗೆ ನಾನು ಮೌನವಾಗಿ, ಈ ಗಿಡದ ಕಡ್ಡಿಯ ತುದಿ ಯಲ್ಲಿ ಕುಳಿತು ಧ್ಯಾನ ಮಾಡುತ್ತಿರುವಾಗ, ಇದೇಕೆ ಒಮ್ಮೆಗೇ ಈ ಹುಡುಗ ನನ್ನನ್ನು ಹಿಡಿದು ಆಘಾತಕ್ಕೆ ನೂಕಿಬಿಟ್ಟ?’ ಎಂಬ ಪ್ರಶ್ನೆ ಆ ಕೀಟದ ಮನದಲ್ಲಿ ಮೂಡೀತು!

ಮಕ್ಕಳ ಕೈಗೆ ಸಿಕ್ಕಿಬಿದ್ದ ಆ ಮಳೆಹಾತೆ ಒಂದೇ ಸವನೆ ತನ್ನ ಪಾರದರ್ಶಕ ರೆಕ್ಕೆಗಳನ್ನು ಪಟಪಟನೆ ಬಡಿಯತೊಡಗುತ್ತದೆ! ಅವುಗಳ ರೆಕ್ಕೆಯ ಪ್ಲಾಸ್ಟಿಕ್ ಜರಿಯ ರೀತಿ ಇದೆ ಎನ್ನಬಹುದು; ಒಂದೇ ಸವನೆ ರೆಕ್ಕೆ ಬಡಿಯತೊಗಿದಾಗ ಪರಪರ ಎಂಬಂತೆ ಸದ್ದಾಗುತ್ತದೆ : ಆ ಸದ್ದನ್ನು ಕೇಳುವುದೇ ಕೀಟಲೆ ಹುಡುಗರ ಉದ್ದೇಶ; ಮಳೆ ಹಾತೆಯ ಬಾಲ ಹಿಡಿದಾಗ, ಗಾಬರಿಯಿಂದ ಅವು ರೆಪ್ಪೆ ಬಡಿಯ ತೊಡಗಿ, ಆಗ ಕಾಣಿಸುವ ಅವುಗಳ ಒದ್ದಾಟವನ್ನು ನೋಡುವುದೇ ಮಕ್ಕಳಿಗೆ ಒಂದು ಕೀಟಲೆ. ಕೆಲವು ಸೆಕೆಂಡುಗಳ ಕಾಲ ಆ ರೀತಿಯ ರಪ ರಪ ರೆಕ್ಕೆ ಬಡಿತವನ್ನು ನೋಡಿದ ಮಕ್ಕಳು, ಕೊನೆಗೆ ಕರುಣೆ ತೋರಿ, ತಮ್ಮ ಬೆರಳುಗಳ ಹಿಡಿತವನ್ನು ಸಡಲಿಸುತ್ತಾರೆ; ಪಾಪ, ಮಳೆ ಹಾತೆ, ಬಾಲದ ಹಿಡಿತ ತಪ್ಪಿದ್ದೇ, ಹಾರಿ, ದೂರ ಸಾಗಿ ಬದುಕಿದೆಯಾ ಬಡಜೀವವೇ ಎಂದು, ಬೇರೊಂದು ಹುಲ್ಲಿನ ತುದಿಯ ಮೇಲೆ ಕುಳಿತು, ಪುನಃ ಧ್ಯಾನಕ್ಕೆ ತೊಡಗುತ್ತದೆ.

ಇನ್ನೂ ಹೆಚ್ಚು ಕೀಟಲೆ ಮಾಡುವ ಹುಡುಗರರು, ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಮಳೆಹಾತೆಯನ್ನು ಹಿಡಿದು, ಅದರ ಬಾಲಕ್ಕೆ ಒಂದು ಉದ್ದನೆಯ ದಾರವನ್ನು ಕಟ್ಟಿ, ಹಾರಲು ಬಿಡುತ್ತಾರೆ; ದಾರದ ಇನ್ನೊಂದು ತುದಿ ಮಕ್ಕಳ ಕೈಯಲ್ಲಿ. ಪಾಪ, ತುಸು ದೂರ ಹಾರಿದ ಮಳೆಹಾತೆಯು, ಬಾಲಕ್ಕೆ ಕಟ್ಟಿದ ದಾರದಿಂದಾಗಿ, ಮೇಲೇರಿ ಕೆಳಗಿಳಿಯುವ ಗಿರಿಗಿಟ್ಲೆಯಾಗಿಬಿಡುತ್ತದೆ!

ಅದನ್ನು ಹಿಡಿದು, ದಾರ ಕಟ್ಟಿದ ಬಾಲಕನಿಗೆ ಕರುಣೆಬಂದಾಗ ಮಾತ್ರ, ಅದರ ಈ ನೀರನ್ನು ಮುಟ್ಟುತ್ತವೆ! ಅದು ಅವುಗಳ ಸಂತಾನೋತ್ಪತ್ತಿಯ ಚಟುವಟಿಕೆಯ ಒಂದು ಭಾಗ. ನಮ್ಮ ಹಳ್ಳಿಯಲ್ಲಿ ಮಳೆಹಾತೆಗಳು ಹೇರಳವಾಗಿವೆ; ವರ್ಷದ ಕೆಲವು ತಿಂಗಳುಗಳಲ್ಲಿ, ಹತ್ತಾರು, ನೂರಾರು ಸಂಖ್ಯೆಯಲ್ಲಿ ಅವು ಹಾರಾಡುವುದನ್ನು ಕಾಣಬಹುದು.

ಮುಸ್ಸಂಜೆಯ ಹೊತ್ತಿನಲ್ಲಿ ಮನೆ ಮುಂದಿನ ಅಗೇಡಿಯ ನೀರಿನ ಮೇಲೆ, ಹತ್ತಾರು ಮಳೆಹಾತೆಗಳು ಹಾರಾಡುತ್ತಾ, ಕೆಲವು ಮಳೆಹಾತೆಗಳು (ಹೆಣ್ಣು ಕೀಟ) ನೀರನ್ನು ಪದೇ ಪದೇ ಮುಟ್ಟುತ್ತಾ ಇರುವ ಸಮಯದಲ್ಲಿ, ಅವುಗಳ ಇರವು ಎದ್ದು ಕಾಣುತ್ತದೆ. ಮಳೆಹಾತೆಯ ನೀರಿನಲ್ಲಿ ವಾಸಿಸುವ ಮರಿ!

ಮಳೆ ಹಾತೆಯ ಮರಿಯು (ಲಾರ್ವಾ) ನೀರಿನಲ್ಲಿ ವಾಸಿಸುತ್ತಾ, ಅಲ್ಲೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆಯುತ್ತದೆ. ನೀರಿನ ಅಂಚಿನಲ್ಲಿ ಅಥವಾ ನೀರಿನಲ್ಲಿ ಇರುವ ಮೊಟ್ಟೆಗಳು ಒಡೆದು ಬರುವ ಲಾರ್ವಾ, ಹಲವು ತಿಂಗಳುಗಳ ಕಾಲ ಅದೇ ಸ್ವರೂಪದಲ್ಲಿರುತ್ತದೆ. ನೀರಿನಲ್ಲಿರುವ ಗೊದ ಮೊಟ್ಟೆ, ಇತರ ಜಲಚರಗಳು, ಮೀನುಗಳನ್ನು ಹಿಡಿದು ತಿನ್ನುವ ಈ ಲಾರ್ವಾಗಳು, ಹೊಟ್ಟೆಬಾಕರು.

ಕೊನೆಗೊಮ್ಮೆ ತನ್ನ ಲಾರ್ವಾ ಸ್ವರೂಪವನ್ನು ತೊರೆದು, ನಾಲ್ಕು ರೆಕ್ಕೆಗಳನ್ನು ಪಡೆದು, ಹಾರಾ ಡುವ ಶಕ್ತಿ ಪಡೆಯುವ ಮಳೆ ಹಾತೆಯು, ಪುನಃ ತನ್ನ ಜೀವನಚಕ್ರವನ್ನು ಮುಂದುವರಿಸು ತ್ತದೆ. ಅಸಹಾಯಕ ಸ್ಥಿತಿಗೆ ಮುಕ್ತಿ. ದಾರ ಕಟ್ಟಿದವರಿಗೆ ಬೇಗನೆ ಕರುಣೆ ಬರದಿದ್ದರೆ, ಅಂತಹ ಮಳೆಹಾತೆಯ ಜೀವನವೇ ಮುಕ್ತಿ!

ಅಂದ ಹಾಗೆ, ಸಂಜೆಯ ಸಮಯದಲ್ಲಿ ಅಗೇಡಿಯ ನೀರನ ಮೇಲ್ಮೈ ಬಳಿ ಹಾರಾಡುತ್ತಾ, ಒಂದೊಂದೇ ಗುಟುಕು ನೀರು ಕುಡಿಯುವ ರೀತಿಯಲ್ಲಿ, ಹತ್ತೆಂಟು ಬಾರಿ ನೀರಿಗೆ ಮುತ್ತಿಕ್ಕುವ ಮಳೆಹಾತೆಯು (ಏರೋಪ್ಲೇನ್ ಚಿಟ್ಟೆ), ವಾಸ್ತವ ವಾಗಿ ಆಗ ನೀರು ಕುಡಿಯುವುದಿಲ್ಲ!

ಬದಲಿಗೆ, ಆ ಕೀಟಗಳು, ನೀರಿನಲ್ಲಿ ಮೊಟ್ಟೆಯಿಡುವಾಗ, ಆ ರೀತಿ ಹೆಣ್ಣು ಕೀಟವು ನೂರಾರು ಮೊಟ್ಟೆಗಳನ್ನು ನೀರಿನಲ್ಲಿ ಇಡುವ ಆ ಚಟುವಟಿಕೆಯು, ಅವುಗಳ ‘ಮಳೆ ನೃತ್ಯ’ ವೆಂದೇ ಹೇಳ ಬಹುದು. ಅಗೇಡಿಯಲ್ಲಿ ನೀರು ಇರುವ ಸಮಯದಲ್ಲಿ ಅಧಿಕವಾಗಿ ಕಾಣುವ ಇವು, ವರ್ಷದ ಇತರ ಕೆಲವು ಋತುಗಳಲ್ಲಿ ನಾಪತ್ತೆ!

ಇದೇಕೆ ಹೀಗೆ ಎಂದು ಗಮನಿಸಿದರೆ, ಅವುಗಳ ಜೀವನಕ್ರಮವೇ ಹಾಗೆ ಎನ್ನುತ್ತಾರೆ ವಿಜ್ಞಾನಿಗಳು. ಕೆಲವು ಪ್ರಭೇದದ ಮಳೆಹಾತೆಗಳು, (ಉದಾ: ಪ್ಯಾಂಟಾಲಾ ಫ್ಲೇವ್‌ಸೆನ್ಸ್, ನಮ್ಮಲ್ಲಿ ಹೆಚ್ಚಾಗಿ ಕಾಣ ಸಿಗುವ ಏರೋಪ್ಲೇನ್ ಚಿಟ್ಟೆಯ ಪ್ರಭೇದ) ಸಾವಿರಾರು ಕಿ.ಮೀ.ಗಳಷ್ಟು ದೂರ ವಲಸೆ ಹೋಗು ವುದೂ ಇದೆ!

ನೀರಿನಲ್ಲಿ ಮೊಟ್ಟೆ

ಮೊಟ್ಟೆ ಇಡಲು, ಸಂತಾನೋತ್ಪತ್ತಿ ಮಾಡಲು ಅವುಗಳಿಗೆ ನೀರು ಬೇಕು. ಈ ಜಗತ್ತಿನಲ್ಲಿ 3000ಕ್ಕೂ ಅಧಿಕ ಪ್ರಭೇದದ ಮಳೆಹಾತೆಗಳು ಇವೆಯಂತೆ. ಹೆಚ್ಚಿನ ಪ್ರಭೇದದ ಮಳೆಹಾತೆಗಳಿಗೆ ಸಂತಾನೋ ತ್ಪತ್ತಿ ಮಾಡಲು, ಮೊಟ್ಟೆ ಇಡಲು, ನೀರಿನಾಶ್ರಯ ಬೇಕೇಬೇಕು. ನಿಂತ ನೀರನಲ್ಲಿ ಮೊಟ್ಟೆಯಿಡುವ ಪ್ರಭೇದಗಳಿವೆ, ಹರಿವ ನೀರಿನಲ್ಲೂ ಮೊಟ್ಟೆ ಇಡುವ ಪ್ರಭೇದಗಳಿವೆ; ಇನ್ನ ಕೆಲವು ಪ್ರಭೇದಗಳು ಕೊಳದ ಅಂಚಿ ನಲ್ಲೋ, ನೀರಿಗೆ ಸನಿಹದ ಜಾಗದಲ್ಲೋ ಬೆಳೆಯುವ ಜೊಂಡು ಹುಲ್ಲುಗಳ ಕಾಂಡವನ್ನು ಸೀಳಿ, ಅದರೊಳಗೆ ಮೊಟ್ಟೆಯಿಡುತ್ತವೆ! ಕೊಳದ ನೀರಿನ ಮಟ್ಟವು ನಿಧಾನವಾಗಿ ಮೇಲೇರಿದ ನಂತರವಷ್ಟೇ, ಆ ಜೊಂಡುಹುಲ್ಲಿನ ಕಾಂಡದೊಳಗಿನ ಮೊಟ್ಟೆಯು ಮರಿಯಾಗುತ್ತದೆ.

ಕೆಲವು ಪ್ರಭೇದದ ಈ ಕೀಟಗಳ ಮೊಟ್ಟೆಗಳು, ಬಿರುಬಿಸಿಲಿನಲ್ಲೂ ಬದುಕಿ ಇರಬಲ್ಲವು; ಮಳೆ ಬಂದಾಗ ಜೀವ ತಳೆಯಬಲ್ಲವು.

ವರ್ಷಗಟ್ಟಲೆ ಲಾರ್ವಾ ಸ್ಥಿತಿ

ಮಳೆಹಾತೆಯ ಮರಿಗಳೋ, ತಕ್ಷಣ ರೆಕ್ಕೆ ಪಡೆದು ಹಾರುವುದಿಲ್ಲ; ಬದಲಿಗೆ ಒಂದೆರಡು ವರ್ಷ ನೀರಿನಲ್ಲೇ ಇರುವ ಬೇರೆಯದೇ ಸ್ವರೂಪದ ಕೀಟಗಳಾಗಿ ಜೀವನ ನಡೆಸುತ್ತವೆ; ಹಲವು ತಿಂಗಳುಗಳ ನಂತರ, (ಕೆಲವು ಪ್ರಭೇದದ ಮಳೆ ಹಾತೆಗಳಲ್ಲಿ, 5 ವರ್ಷದ ನಂತರ!) ಈ ಕೀಟಗಳು, ರೆಕ್ಕೆಗಳನ್ನು ಪಡೆದು, ರೂಪಾಂತರ ಹೊಂದಿ, ಮಳೆಹಾತೆಯ ಸ್ವರೂಪ ಧರಿಸಿ, ರೆಕ್ಕೆಯನ್ನು ಸೃಷ್ಟಿಸಿಕೊಂಡು ಹಾರಾಡುವ ಶಕ್ತಿ ಗಳಿಸುತ್ತವೆ.

ಆದರೆ, ನಮಗೆಲ್ಲಾ ಎದ್ದು ಕಾಣುವ ಈ ಸ್ವರೂಪದಲ್ಲಿ, ಮಳೆಹಾತೆಯ ಆಯಸ್ಸು ಕೆಲವೇ ವಾರ ಮಾತ್ರ! ಅನನ್ಯ ಜೀವನ ಚಕ್ರ, ಬಹು ಶಕ್ತಿಶಾಲಿಯಾಗಿರುವ ದೊಡ್ಡದಾದ ಕಣ್ಣುಗಳು, ಸಂತಾನೋ ತ್ಪತ್ತಿ ಪ್ರಕ್ರಿಯೆ, ಅದರಲ್ಲಿ ಗಂಡಿನ ವಿಶಿಷ್ಟ ಶಕ್ತಿ, ಹೆಣ್ಣು ಮೊಟ್ಟೆಯಿಡುವ ಕ್ರಮ, ನೀರಿನ ಮೇಲ್ಭಾಗ ದಲ್ಲಿ ಗಂಡು ಹೆಣ್ಣು ಕೀಟಗಳು ಪರಸ್ಪರ ಕೈಕೈ ಹಿಡಿದಂತೆ (ಬಾಲಗಳನ್ನು ಅಂಟಿಸಿ ಕೊಂಡು) ಹಾರಾಡುವ ರೀತಿ, ಒಂದೇ ಬಾರಿ 1500ಕ್ಕೂ ಅಧಿಕ ಮೊಟ್ಟೆಯಿಡುವುದು ಇಂತಹ ಹಲವು ವಿಸ್ಮಯ ಕಾರಿ ವಿದ್ಯಮಾನಗಳನ್ನು ತಮ್ಮ ಬದುಕಿನಲ್ಲಿ ಹುದುಗಿಸಿಕೊಂಡಿವೆ ಈ ಕೀಟಗಳು!

ನಮ್ಮ ಹಳ್ಳಿಯಲ್ಲೂ ಹಲವು ಪ್ರಭೇದದ ಮಳೆಹಾತೆಗಳನ್ನು ಕಾಣಬಹುದು. ಹೇರಳವಾಗಿ ಕಾಣಿಸುವ ಪ್ಯಾಂಟಾಲಾ ಫ್ಲೇವ್‌ಸೆನ್ಸ್ ಪ್ರಭೇದವೇ, ನಮ್ಮ ಮನೆಯ ಎದುರಿನ ಅಗೇಡಿಯ ನೀರಿನ ಮೇಲ್ಮೈಯ ಮೇಲೆ ಸಂಜೆಯ ಹೊತ್ತಿನಲ್ಲಿ ನೂರರ ಸಂಖ್ಯೆಯಲ್ಲಿ ಹಾರಾಡುತ್ತಿರುತ್ತವೆ. ಇವುಗಳ ಮಾಸಲು ಬಣ್ಣದ ರೆಕ್ಕೆಗಳು ಎದ್ದು ಕಾಣುವಂತಹದ್ದು.

ವರ್ಣ ವಿನ್ಯಾಸದ ರೆಕ್ಕ

ಇವುಗಳಿಗಿಂತ ತುಸು ಚಿಕ್ಕ ಗಾತ್ರದ ಹಲವು ಪ್ರಭೇದದ ಮಳೆಹಾತೆಗಳೂ ನಮ್ಮೂರಿನಲ್ಲಿವೆ. ಕೆಲವು ಮಳೆಹಾತೆಗಳ ರೆಕ್ಕೆಯ ವರ್ಣ ವಿನ್ಯಾಸವು ಬಹು ಚಂದ, ಆಕರ್ಷಕ. ಪುಟ್ಟ ಗಾತ್ರದ ಮಳೆಹಾತೆ ಯೊಂದು ತನ್ನ ರೆಕ್ಕೆಯನ್ನು ಅಗಲಿಸಿ ಕುಳಿತಾಗ, ಒಂದು ಚಿತ್ರವನ್ನು ಬರೆದಿಟ್ಟಂತೆ ಕಾಣುತ್ತದೆ. ನೀಳ ದೇಹದ, ಉದ್ದನೆಯ ಬಾಲ ಹೊಂದಿದ ಮಳೆಹಾತೆಗಳೂ ಇವೆ. ಆದರೆ ಇವುಗಳು ನಿಂತ ನೀರಿನ ಬಳಿ ಇರುವುದಕ್ಕಿಂತ ಹೆಚ್ಚಾಗಿ, ಹಕ್ಕಲುಗಳಲ್ಲಿ, ಹಾಡಿ ಹಕ್ಕಲಿನ ನಡುವಿನ ಹುಲ್ಲು ಬೆಳೆಯುವ ಜಾಗದಲ್ಲಿ ಹೆಚ್ಚಾಗಿ ಕಾಣಿಸುತ್ತವೆ.

ಇವುಗಳ ಸಂತಾನೋತ್ಪತ್ತಿಗೆ, ಅಗೇಡಿಯಲ್ಲಿನಂತೆ ಧಾರಾಳವಾಗಿ ನಿಂತ ನೀರು ಬೇಕಾಗಿಲ್ಲ, ಬಹುಷಃ, ಹಕ್ಕಲಿನ ಗಿಡಗಳ ನಡುವಿನ ಪರಿಸರದಲ್ಲಿ, ಅಲ್ಲಿನ ಜಲಾಶ್ರಯಗಳ ಸುತ್ತಮುತ್ತ ಅವುಗಳ ದಿನಚರಿ, ಸಂತಾನೋತ್ಪತ್ತಿ ನಡೆಯುತ್ತದೆ.

ನಮ್ಮ ದೇಶದ ಅವೆಷ್ಟೋ ಕೀಟಗಳನ್ನು ಇನ್ನಷ್ಟೇ ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸ ಬೇಕಾಗಿದೆ ಎಂದಿದ್ದಾರೆ ತಜ್ಞರು; ನಮ್ಮ ಹಳ್ಳಿಯ ಮಳೆಹಾತೆಗಳ ವೈವಿಧ್ಯವನ್ನು ಗಮನಿಸಿದರೆ, ಇನ್ನೂ ವೈಜ್ಞಾನಿಕವಾಗಿ ಗುರುತಿಸಬೇಕಾದ ಹೊಸ ಪ್ರಭೇದಗಳೂ ಇವೆ ಎನಿಸುತ್ತದೆ. 2003ರಲ್ಲಿ ಕೇರಳದ ವೈನಾಡಿನಲ್ಲಿ ಹೊಸ ಪ್ರಭೇದದ ಮಳೆಹಾತೆಯನ್ನು ಗುರುತಿಸಲಾಗಿತ್ತು; ನಮ್ಮ ರಾಜ್ಯದ ಸಹ್ಯಾದ್ರಿಯಲ್ಲೂ ಹೊಸ ಹೊಸ ಪ್ರಭೇದದ ಇಂತಹ ಕೀಟಗಳು ಇರಲಿಕ್ಕೇಬೇಕು.

ಅಂತಹವುಗಳನ್ನು ನಾವು ಪತ್ತೆ ಹಚ್ಚಿದಾಗ ಹೊಸ ಪ್ರಭೇದ ಎಂದು ಕರೆಯುತ್ತೇವೆ, ಆದರೆ ವಿಶಿಷ್ಟ ಜೀವನಕ್ರಮ ಹೊಂದಿರುವ ಈ ಮಳೆಹಾತೆಗಳು, ನಮಗಿಂತಲೂ ಅವೆಷ್ಟೋ ಲಕ್ಷ ವರ್ಷಗಳ ಹಿಂದಿ ನಿಂದಲೂ ಈ ಭೂಮಿಯ ಮೇಲೆ ವಾಸಿಸುತ್ತಿವೆ! ಈ ಹೋಲಿಕೆಯಲ್ಲಿ, ಈ ಜಗತ್ತಿಗೆ ನಾವೇ ಹೊಸಬರು!

ನೀರಿನಲ್ಲಿ ವಾಸಿಸುವ ಮರಿ!

ಮಳೆ ಹಾತೆಯ ಮರಿಯು (ಲಾರ್ವಾ) ನೀರಿನಲ್ಲಿ ವಾಸಿಸುತ್ತಾ, ಅಲ್ಲೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆಯುತ್ತದೆ. ನೀರಿನ ಅಂಚಿನಲ್ಲಿ ಅಥವಾ ನೀರಿನಲ್ಲಿ ಇರುವ ಮೊಟ್ಟೆಗಳು ಒಡೆದು ಬರುವ ಲಾರ್ವಾ, ಹಲವು ತಿಂಗಳುಗಳ ಕಾಲ ಅದೇ ಸ್ವರೂಪದಲ್ಲಿರುತ್ತದೆ. ನೀರಿನಲ್ಲಿರುವ ಗೊದಮೊಟ್ಟೆ, ಇತರ ಜಲಚರಗಳು, ಮೀನುಗಳನ್ನು ಹಿಡಿದು ತಿನ್ನುವ ಈ ಲಾರ್ವಾಗಳು, ಹೊಟ್ಟೆ ಬಾಕರು. ಕೊನೆಗೊಮ್ಮೆ ತನ್ನ ಲಾರ್ವಾ ಸ್ವರೂಪವನ್ನು ತೊರೆದು, ನಾಲ್ಕು ರೆಕ್ಕೆಗಳನ್ನು ಪಡೆದು, ಹಾರಾಡುವ ಶಕ್ತಿ ಪಡೆಯುವ ಮಳೆ ಹಾತೆಯು, ಪುನಃ ತನ್ನ ಜೀವನಚಕ್ರವನ್ನು ಮುಂದು ವರಿಸುತ್ತದೆ.

ಸಾವಿರಾರು ಕಿ.ಮೀ. ದೂರ ಪಯಣ!

ನಮ್ಮ ರಾಜ್ಯದಲ್ಲಿ ಮತ್ತು ಜಗತ್ತಿನಲ್ಲಿ ಅತಿ ಹೆಚ್ಚಾಗಿ ಕಾಣಸಿಗುವ ಮಳೆಹಾತೆಯ (ಡ್ರೇಗನ್ ಫ್ಲೈ) ಪ್ರಭೇದವೆಂದರೆ ಪ್ಯಾಂಟಾಲಾ ಫ್ಲೇವ್‌ಸೆನ್ಸ್. ಇವುಗಳ ವೈಶಿಷ್ಟ್ಯ ವೆಂದರೆ, ಸಾವಿರಾರು ಕಿ.ಮೀ. ದೂರದ ವಲಸೆ. ಕೀಟ ಜಗತ್ತಿನಲ್ಲಿ ಇಷ್ಟು ದೂರ ವಲಸೆ ಹೋಗುವ ಇನ್ನೊಂದು ಕೀಟವಿಲ್ಲ. ತನ್ನ ವಲಸೆಯ ಹಾದಿಯಲ್ಲಿ ಈ ಕೀಟವೊಂದು 6000 ಕಿ.ಮೀ. ಸಂಚರಿಸಬಲ್ಲದು. ಇವುಗಳ ಒಟ್ಟೂ ಸಾಮೂಹಿಕ ವಲಸೆಯು ೧೮,೦೦೦ ಕಿ.ಮೀ. ತನಕ ಸಾಗಬಲ್ಲದು ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ತೆಳುದೇಹ ಹೊಂದಿದ ಮಳೆಹಾತೆಯ ಒಂದು ಪ್ರಭೇದದ ಕೀಟಗಳು, ಹಿಂದೂಮಹಾಸಾಗರ ದಲ್ಲಿರುವ ಮಾಲ್ದೀವ್ಸ್ ದ್ವೀಪಗಳಿಂದ ಆಫ್ರಿಕಾದ ಸೋಮಾಲಿಯಾದ ತನಕ ಹಾರಾಟ ಮಾಡುತ್ತಾ ಸಾಗಿವೆ. ಸುಮಾರು 2500 ಕಿ.ಮೀ. ದೂರದ ಈ ದಾರಿಯಲ್ಲಿ ಎಲ್ಲೂ ಕೆಳಗೆ ಇಳಿಯದೇ, ಸಮುದ್ರದ ಮೇಲೆಯೇ ಹಾರುತ್ತಾ ಸಾಗುವ ಶಕ್ತಿ ಈ ಕೀಟಕ್ಕಿದೆ !

ಒಮ್ಮೆಗೆ 1500 ಮೊಟ್ಟೆ

ಹಲವು ಪ್ರಭೇದದ ಮಳೆಹಾತೆಗಳು ಮೊಟ್ಟೆಯಿಡಲು, ನಿಂತ ನೀರು ಅವಶ್ಯಕ; ಇನ್ನು ಕೆಲವು ಪ್ರಭೇದಗಳು ಹರಿವ ನೀರಿನಲ್ಲಿ, ಹುಲ್ಲುಗಿಡಗಳ ಕಾಂಡದೊಳಗೆ ಮೊಟ್ಟೆ ಇಡುತ್ತವೆ; ಒಣ ಪ್ರದೇಶ ದಲ್ಲೂ ಮೊಟ್ಟೆ ಇಡುವ ಮಳೆಹಾತೆಗಳಿವೆ. ಒಮ್ಮೆಗೆ ಸುಮಾರು 1500 ಮೊಟ್ಟೆಯಿಡುವ ಮಳೆ ಹಾತೆಗಳು, ತಮ್ಮ ವಿಶಿಷ್ಟ ಜೀವನಕ್ರಮದಿಂದಾಗಿ ವಿಜ್ಞಾನ ಜಗತ್ತಿನ ಗಮನ ಸೆಳೆದಿವೆ. ಅತಿವೇಗ ವಾಗಿ ಹಾರಾಡುವುದು, 360 ಡಿಗ್ರಿ ತಿರುಗಬಲ್ಲ ದೊಡ್ಡದಾದ ಕಣ್ಣುಗಳು, ಚುರುಕಾಗಿ ಹಾರಾಡುತ್ತ ಸೊಳ್ಳೆ, ನೊಣ ಮೊದಲಾದವುಗಳನ್ನು ಹಿಡಿದು ತಿನ್ನುವ ಗುಣ ಮೊದಲಾದವು ಮಳೆ ಹಾತೆಗಳ ವಿಶಿಷ್ಟ ಜೀವನಕ್ರಮದಲ್ಲಿ ಸೇರಿವೆ.