ಜಿ.ನಾಗೇಂದ್ರ ಕಾವೂರು
ಉತ್ತರ ಭಾರತದಲ್ಲಿ ತಂದೆ ಮತ್ತು ಮಗ ಬೈಕ್ ಪ್ರವಾಸ ಮಾಡುತ್ತಿರುವಾಗ, ಬಿಹಾರದ ರಾಜಧಾನಿಯಲ್ಲಿ ಗಣ್ಯವ್ಯಕ್ತಿಗಳಿಗೆ ದೊರಕುವ ಸನ್ಮಾನ ದೊರೆತದ್ದು ನಿಜಕ್ಕೂ ವಿಶೇಷ.
ಕೆನಡಾ ದೇಶದಲ್ಲಿ ಉದ್ಯೋಗದಲ್ಲಿರುವ ನಮ್ಮ ಕಿರಿಯ ಮಗ ತೇಜೇಂದ್ರ, ಇತ್ತೀಚೆಗೆ ಸ್ವಗ್ರಾಮ ಸಂಡೂರಿಗೆ ಆಗಮಿಸಿದ್ದ. ಅವನು, ಕಳೆದ ಕೆಲವು ವರ್ಷಗಳಿಂದ ಬೈಕ್‌ನಲ್ಲಿ ಸುತ್ತುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾನೆ. ದೂರದ ಪ್ರಯಾಣ, ವಿವಿಧ ಭೌಗೋಳಿಕ ಪರಿಸ್ಥಿತಿಗಳು ಹಾಗೂ ವಿಶೇಷವಾಗಿ ಹಿಮಾಲಯದಂತಹ ದುರ್ಗಮ ಪ್ರದೇಶಗಳಲ್ಲಿ ಸಂಚರಿಸಲು ಅನುಕೂಲವಾಗುವಂತಹ ಬೈಕನ್ನು ಖರೀದಿಸಿದ್ದಾನೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಆಸೆ ಅವನ ಮನಸ್ಸಿನಲ್ಲಿ ಬೇರೂರಿತ್ತು. ದೇಶದ ವೈವಿಧ್ಯತೆಯನ್ನು ನೇರವಾಗಿ ಅನುಭವಿಸುವ ಉದ್ದೇಶದಿಂದ ರೂಪಿಸಿಕೊಂಡ ಈ ಪ್ರಯಾಣ ಕೇವಲ ಪ್ರವಾಸವಲ್ಲ, ಜೀವನಾನುಭವದ ಒಂದು ಭಾಗವೆಂದು ಅವನು ಭಾವಿಸಿದ್ದ.
ನಿವೃತ್ತಿಯ ನಂತರ ಚಾರಣ ಹಾಗೂ ಪ್ರವಾಸವನ್ನು ಹವ್ಯಾಸವನ್ನಾಗಿಸಿಕೊಂಡಿರುವ ನನಗೂ, ಈ ದೀರ್ಘ ಪ್ರಯಾಣದಲ್ಲಿ ಜೊತೆಯಾಗಲು ತೇಜೇಂದ್ರ ಆತ್ಮೀಯವಾಗಿ ಆಹ್ವಾನ ನೀಡಿದ. ತಂದೆ-ಮಗ ಇಬ್ಬರೂ ಒಂದೇ ಪ್ರಯಾಣದಲ್ಲಿ, ಒಂದೇ ಗುರಿಯೊಂದಿಗೆ ಹೊರ ಡುವ ಅವಕಾಶ ಅಪರೂಪ. ಹೀಗಾಗಿ ಈ ಪ್ರವಾಸವು ಕೇವಲ ಸ್ಥಳ ವೀಕ್ಷಣೆಯಲ್ಲ, ಅನುಭವಗಳ ವಿನಿಮಯ, ಚಿಂತನೆಗಳ ಸಂವಾದ ಮತ್ತು ತಲೆಮಾರಿನ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸ್ಮರಣೀಯ ಯಾತ್ರೆಯಾಗಿ ರೂಪುಗೊಳ್ಳುವ ನಿರೀಕ್ಷೆ ಮೂಡಿಸಿತು.
ಇದನ್ನೂ ಓದಿ: Santhoshkumar Mehendale Column: ಜೀವ ಹೆಚ್ಚೋ ? ಸರಂಜಾಮು ಹೆಚ್ಚೋ ?
ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಹೊರಟ ನಮ್ಮ ಬೈಕ್ ಪ್ರಯಾಣ ಮೂರು ದಿನಗಳ ನಂತರ ಪವಿತ್ರ ನಗರ ವಾರಣಾಸಿಯನ್ನು ತಲುಪಿತು. ನಾಲ್ಕು ದಿನಗಳ ಕಾಲ ಸುತ್ತಮುತ್ತಲ ಪ್ರದೇಶಗಳನ್ನು ವೀಕ್ಷಿಸಿ, ನಂತರ ಗಯಾ, ಬೋಧ್‌ಗಯಾ, ನಲಂದಾ ಮತ್ತು ರಾಜಗೀರ್ ನೋಡಿಕೊಂಡು, ಬಿಹಾರದ ರಾಜಧಾನಿ ಪಾಟ್ನಾ ನಗರವನ್ನು ತಲುಪಿದೆವು. ಮರುದಿನ ಪಾಟ್ನಾ ಮ್ಯೂಸಿಯಂ ವೀಕ್ಷಣೆಗೆ ಹೊರಟೆವು. ಟಿಕೆಟ್ ಕೌಂಟರ್ ಬಳಿ ಟಿಕೆಟ್ ಖರೀದಿಸುವ ಸಂದರ್ಭದಲ್ಲೇ, ಒಮ್ಮೆಲೇ ಅಲ್ಲಿನ ಗಡಿಬಿಡಿ ಕಂಡು ಬೆರಗಾದೆವು!
ಮ್ಯೂಸಿಯಂ ಸಿಬ್ಬಂದಿ ಹಾಗೂ ಹಲವಾರು ಫೋಟೋಗ್ರಾಫರ್ʼಗಳು ನಮ್ಮ ಫೋಟೋ ಗಳನ್ನು ತೆಗೆದುಕೊಳ್ಳಲು ಮುಂದಾದಾಗ ನಮಗೆ ಸ್ವಲ್ಪ ಗಾಬರಿಯೂ ಆಯಿತು. ಟಿಕೆಟ್ ಪಡೆದು ಒಳಗೆ ತಿರುಗುವಷ್ಟರಲ್ಲಿ ಕೆಲವರು ಮೊದಲ ಸಂದರ್ಶಕರಾಗಿದ್ದೆವು ಎಂಬುದು. ಕರ್ನಾಟಕದಿಂದ ಬೈಕ್ ಮೂಲಕ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ 65 ವರ್ಷದ ತಂದೆ ಮತ್ತು 32 ವರ್ಷದ ಮಗ ಈ ಮ್ಯೂಸಿಯಂನ ಮೊದಲ ಪ್ರೇಕ್ಷಕರಾಗಿರುವ ಅಪರೂಪ ದ ಗೌರವಕ್ಕೆ ಪಾತ್ರರಾಗಿದ್ದೆವು.
ಈ ಸಂದರ್ಭದಲ್ಲಿ ವಸ್ತುಸಂಗ್ರಹಾಲಯದ ಉಪನಿರ್ದೇಶಕ ಡಾ.ಸುನೀಲ್ ಕುಮಾರ್ ಝಾ ನಮ್ಮನ್ನು ಅಭಿನಂದಿಸಿದರು. ಈ ನವೀಕೃತ ವಸ್ತುಸಂಗ್ರಹಾಲಯವನ್ನು ಬಿಹಾರ ರಾಜ್ಯದ ಮುಖ್ಯಮಂತ್ರಿ ಉದ್ಘಾಟಿಸಿದ್ದು, ನಾವು ಹೋಗಿದ್ದ ದಿನವೇ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿತ್ತು.
ಇದಾದ ನಂತರ ನಡೆದ ಘಟನೆಗಳು ಕನಸಿನಂತೆಯೇ ಅನಿಸುತ್ತಿದ್ದವು. ಉಪನಿರ್ದೇಶಕರು ನಮ್ಮನ್ನು ಮ್ಯೂಸಿಯಂನ ಹಿರಿಯ ಅಧಿಕಾರಿಗಳ ಬಳಿಗೆ ಕರೆದೊಯ್ದು ಪರಿಚಯಿಸಿದರು. ಕರ್ನಾಟಕದಿಂದ ಬೈಕ್ ಮೂಲಕ ಉತ್ತರ ಭಾರತದ ಪ್ರವಾಸ ಕೈಗೊಂಡಿರುವ ತಂದೆಮಗನ ಕಥೆಯನ್ನು ಕೇಳಿ ಹಿರಿಯ ಅಧಿಕಾರಿಗಳು ಆಶ್ಚರ್ಯಚಕಿತರಾದರು. ಅವರೊಂದಿಗೆ ಚಹಾ ಸೇವಿಸಿ ಮಾತನಾಡುವ ಅವಕಾಶವೂ ದೊರಕಿತು.
ನಂತರ ಉಪನಿರ್ದೇಶಕರು ನಮ್ಮನ್ನು ಬಿಹಾರ್ ಮ್ಯೂಸಿಯಂಗೆ ಕರೆದೊಯ್ದು ಅಲ್ಲಿರುವ ಅಪರೂಪದ ಕಲಾಕೃತಿಗಳು ನಮ್ಮ ಬಳಿ ಬಂದು ಬಿಹಾರದ ಸಾಂಪ್ರದಾಯಿಕ ಬೊಕೆ ಹಾಗೂ ಉಡುಗೊರೆ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಏಕೆ ಏನು ಎಂದು ವಿಚಾರಿಸಿದಾಗ, ನಮಗೆ ತಿಳಿದುಬಂದದ್ದು, ನವೀಕೃತ ಪಾಟ್ನಾ ಮ್ಯೂಸಿ ಯಂ ಅದೇ ದಿನ ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದ್ದು, ನಾನು ಮತ್ತು ನನ್ನ ಮಗ ಈ ವಸ್ತುಸಂಗ್ರಹಾಲಯದ ಹಾಗೂ ಐತಿಹಾಸಿಕ ಸಂಗ್ರಹಗಳನ್ನು ವಿವರಿಸಿದರು. ಸಮಯ ಹೇಗೆ ಕಳೆಯಿತೋ ತಿಳಿಯದೆ, ಮ್ಯೂಸಿಯಂನಿಂದ ಹೊರ ಬರುವಷ್ಟರಲ್ಲಿ ಸಂಜೆ ನಾಲ್ಕು ಗಂಟೆಯಾಗಿತ್ತು.
ಮರುದಿನ ಬೆಳಿಗ್ಗೆ ಸ್ಥಳೀಯ ಪತ್ರಿಕೆಗಳ ಪುಟಗಳಲ್ಲಿ ನಮ್ಮ ಪ್ರಯಾಣದ ಕಥೆ, ಚಿತ್ರಸಹಿತ ಪ್ರಕಟಗೊಂಡದ್ದನ್ನು ಕಂಡು ಮನಸ್ಸು ಆನಂದದಿಂದ ತುಂಬಿಬಿಟ್ಟಿತು. ಬಯಸದೇ ಬಂದ ಈ ಭಾಗ್ಯವು ನಮ್ಮ ಸರಳ ಬೈಕ್ ಯಾತ್ರೆಗೆ ಅರ್ಥ, ಗೌರವ ಮತ್ತು ಶಾಶ್ವತ ಸ್ಮೃತಿಯನ್ನು ನೀಡಿತು. ಆ ಕ್ಷಣದ ಸಂತೋಷ ಹೃದಯದೊಳಗೆ ಮೌನವಾಗಿ ಅರಳಿದ ಹೂವಿನಂತಿತ್ತು. ಈ ಬೈಕ್ ಪ್ರಯಾಣವು ಕೇವಲ ಪ್ರವಾಸ ವಾಗದೆ, ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಉಳಿಯಿತು.