ಬಿಎಂಸಿಆರ್‌ಐ: ಆಡಳಿತ ಯಂತ್ರ ಕುಸಿತ !
ಬಿಎಂಸಿಆರ್‌ಐನಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲೇ ನಿರ್ವಹಿಸಲಾಗುತ್ತಿದೆ. ನಿಯಮದ ಪ್ರಕಾರ ಪ್ರಭಾರಿ ಹುದ್ದೆಗಳನ್ನು ಕೇವಲ 6 ತಿಂಗಳ ಅವಧಿಗೆ ನೀಡಲಾಗುತ್ತದೆ. ಆದರೆ ಬಿಎಂಸಿಆರ್‌ಐ ಸೇರಿ ಕೆಲ ಸಂಸ್ಥೆಗಳಲ್ಲಿ 2-3 ವರ್ಷಗಳಿಗೂ ಹೆಚ್ಚು ಅವಧಿಗೆ ಪ್ರಭಾರಿಗಳನ್ನೆ ಮುಂದುವರಿಸಿಕೊಂಡು ಬರುತ್ತಿರುವ ಸರಕಾರ ನಿರ್ದಿಷ್ಟ ಅವಧಿಗೆ ಸೂಕ್ತ ಹಾಗೂ ಅರ್ಹ ನಿರ್ದೇಶಕರನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.


ವೈದ್ಯಕೀಯ ಶಿಕ್ಷಣ ಇಲಾಖೆ ನೆರಳಡಿಯೇ ನಡೆಯುತ್ತಿವೆ ಹಲವು ಅಕ್ರಮ
ಅರ್ಹರ ನೇಮಕಕ್ಕೆ ಸರಕಾರ ವಿಫಲ
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಯಾವುದೂ ಸರಿಯಿಲ್ಲ ಪದೇ ಪದೇ ಸಾಬೀತಾ ಗುತ್ತಿದೆ. ಇಲಾಖೆ ವ್ಯಾಪ್ತಿಯಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ(ಬಿಎಂಸಿಆರ್‌ಐ) ಅಡಿ ಬರುವ ಆಸ್ಪತ್ರೆಗಳ ಗೋಳು ಕೇಳುವವರಿಲ್ಲವಾಗಿ ದ್ದಾರೆ. ಅಧಿಕಾರ ದುರ್ಬಳಕೆ, ಅಕ್ರಮ ಸೇವಾ ಬಡ್ತಿ, ವೈದ್ಯಕೀಯ ನಿರ್ಲಕ್ಷ್ಯ ಸೇರಿ ಹಲವಾರು ಅಕ್ರಮಗಳು ವೈದ್ಯಕೀಯ ಶಿಕ್ಷಣ ಇಲಾಖೆ ನೆರಳಡಿ ನಡೆಯುತ್ತಿವೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
ಇದಲ್ಲದೆ, ಬಿಎಂಸಿಆರ್‌ಐನಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲೇ ನಿರ್ವಹಿಸಲಾಗುತ್ತಿದೆ. ನಿಯಮದ ಪ್ರಕಾರ ಪ್ರಭಾರಿ ಹುದ್ದೆಗಳನ್ನು ಕೇವಲ 6 ತಿಂಗಳ ಅವಧಿಗೆ ನೀಡಲಾಗುತ್ತದೆ. ಆದರೆ ಬಿಎಂಸಿಆರ್‌ಐ ಸೇರಿ ಕೆಲ ಸಂಸ್ಥೆಗಳಲ್ಲಿ 2-3 ವರ್ಷಗಳಿಗೂ ಹೆಚ್ಚು ಅವಧಿಗೆ ಪ್ರಭಾರಿಗಳನ್ನೆ ಮುಂದುವರಿಸಿಕೊಂಡು ಬರುತ್ತಿರುವ ಸರಕಾರ ನಿರ್ದಿಷ್ಟ ಅವಧಿಗೆ ಸೂಕ್ತ ಹಾಗೂ ಅರ್ಹ ನಿರ್ದೇಶಕರನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.
ಸರಕಾರದ ಈ ನಡೆಯಿಂದ ವೈದ್ಯಕೀಯ ಕಾಲೇಜು ಸಂಸ್ಥೆಗಳಲ್ಲಿ ಅರಾಜಕತೆ ತಾಂಡವ ವಾಡುತ್ತಿದೆ. ಇದರಿಂದ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಬಡರೋಗಿ ಗಳು ಚಿಕಿತ್ಸೆಗೆ ಪರದಾಡುವಂತಾಗಿದೆ. ಸಂಸ್ಥೆಯ ಅಡಿಯಲ್ಲಿ ವಿಕ್ಟೋರಿಯಾ, ಮಿಂಟೋ ಕಣ್ಣಿನ ಆಸ್ಪತ್ರೆ, ಎಮರ್ಜೆನ್ಸಿ ಟ್ರಾಮಾ ಸೆಂಟರ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ), ವಾಣಿವಿಲಾಸ ಸೇರಿ ಹಲವು ಆಸ್ಪತ್ರೆಗಳು ಬರಲಿವೆ.
ಇದನ್ನೂ ಓದಿ: Vishweshwar Bhat Column: ಮಾಯವಾದ ಮ್ಯಾಜಿಷಿಯನ್ ಸಂಪಾದಕ
ಸಂಸ್ಥೆಯ ಆಡಳಿತ ಮತ್ತು ಸೇವಾ ನಿಯಮಗಳಲ್ಲಿನ ಉಲ್ಲಂಘನೆಯಿಂದಾಗಿ ಈ ಆಸ್ಪತ್ರೆ ಗಳಲ್ಲಿ ರೋಗಿಗಳಿಗೆ ಸೇವೆ ಒದಗಿಸಬೇಕಾದ ತಜ್ಞ ವೈದ್ಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೆಲ್ಲವನ್ನೂ ತಿಳಿದಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆ ಸೂಕ್ತ ಪರಿಹಾರ ಒದಗಿಸುವ ಬದಲು ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುತ್ತಿದೆ ಎನ್ನುವುದು ವೈದ್ಯರ ವಾದ.
ಕೋರ್ಟ್‌ಗೆ ವೈದ್ಯರು, ರೋಗಿಗಳ ಪರದಾಟ: ಹೊಸ ನಿರ್ದೇಶಕರ ನೇಮಕ ಮಾಡು ವಲ್ಲಿ ಇಲಾಖೆ ವಿಫಲವಾಗಿರುವುದರಿಂದ ಹಾಗೂ ಅಲ್ಲಿನ ಅವ್ಯವಸ್ಥೆ ಹಾಗೂ ಅರಾಜಕತೆ ಯ ವಿರುದ್ಧ ವೈದ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅದರಲ್ಲೂ ಬಿಎಂಸಿಆರ್‌ಐ ನಲ್ಲಿ ವೈದ್ಯರ ಬಡ್ತಿ ಮತ್ತು ಸೇವಾ ಹಿರಿತನಕ್ಕೆ ಸಂಬಂಧಿಸಿದ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಅರ್ಹರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಇದರ ಪರಿಣಾಮ ರೋಗಿಗಳ ಮೇಲಾಗುತ್ತಿದ್ದು, ಅವ್ಯವಸ್ಥೆಗಳ ನ ಡುವೆಯೇ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿ ರೋಗಿಗಳ ಮುಂದಿದೆ.
ಸರಕಾರಿ ಸಂಬಳ, ಖಾಸಗಿ ಸೇವೆ: ಇಲಾಖೆಯೇ ಸಾಥ್
ಸರಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿನ ಐವರು ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿಯಾಗಿ ಬೇರೆಡೆಗೆ ವೈದ್ಯಕೀಯ ವೃತ್ತಿ ನಡೆಸು ತ್ತಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ದೃಢಪಟ್ಟಿದ್ದು, ಕ್ರಮ ಕೈಗೊಳ್ಳು ವಂತೆ ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ನೆಫ್ರೋ ಯುರಾಲಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರದೀಪ್, ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಧರ್, ಡಾ.ಕಿಶನ್, ಸಹ ಪ್ರಾಧ್ಯಾಪಕ ಡಾ.ಶಿವಕುಮಾರ್ ಹಾಗೂ ಪ್ರಾಧ್ಯಾಪಕ ಶ್ರೀನಿವಾಸ್ ಅವರು ವಿಚಾರಣೆಗೆ ಒಳಪಟ್ಟಿದ್ದರು. ಇವರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದ ರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆಯೆಂದು ವರದಿಯಲ್ಲಿ ಹೇಳಲಾಗಿದ್ದು, 12(3) ಲೋಕಾ ಯುಕ್ತ ಕಾಯಿದೆ 1984ರ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ. ಆದರೂ ವೈದ್ಯಕೀಯ ಶಿಕ್ಷಣ ಇಲಾಖೆ ತನಿಖಾ ವರದಿಯನ್ನೆ ಮರೆ ಮಾಚಿದೆ.
ತನಿಖೆ ಹಲವು: ಕ್ರಮ ಶೂನ್ಯ
ನೆಪ್ರೋ ಯುರಾಲಜಿ 5 ವೈದ್ಯರು ಖಾಸಗಿಯಲ್ಲಿ ಸೇವೆ ಹಾಗೂ ಅವ್ಯವಹಾರ ಕುರಿತು ಲೋಕಾಯುಕ್ತ ಅಂತಿಮ ವರದಿ ಅನ್ವಯ ಕ್ರಮವಿಲ್ಲ.
ಪ್ರಾಧ್ಯಾಪಕ ಹುದ್ದೆ ನೇಮಕಾತಿ ಸಂಬಂಧ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಕ್ರಮ ಬಡ್ತಿ.
ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ತಿದ್ದುಪಡಿ ಪ್ರಕರಣ.
ನಿಯಮ ಉಲ್ಲಂಘಿಸಿ ನೇಮಕ
ವಿಕ್ಟೋರಿಯಾ ಸಂಸ್ಥೆಯ ಆವರಣದಲ್ಲಿರುವ ಇನ್ಸಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಆಸ್ಪತ್ರೆಯಲ್ಲಿ ನಿಯಮ ಉಲ್ಲಂಘಿಸಿ ಒಬ್ಬರನ್ನೆ ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಸು ತ್ತಿರುವುದು.
ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಬೈಲಾ ಉಲ್ಲಂಘಿಸಿ 10 ವರ್ಷ ಪ್ರಾಧ್ಯಾಪಕ ಸೇವೆ ಸಲ್ಲಿಸದ ಅನರ್ಹರನ್ನು ನಿರ್ದೇಶಕರನ್ನಾಗಿ ನೇಮಕ.