ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದೆ ಇರಲು ಕಾರಣ ತಿಳಿಸಿದ ಮಾಂಟಿ ಪನೇಸರ್‌!

2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅಯ್ಯರ್ ಅವರ ನಾಯಕತ್ವದ ಗುಣಗಳಿಂದಾಗಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ ಎಂದು ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್ ನಂಬಿದ್ದಾರೆ.

ಶ್ರೇಯಸ್‌ ಅಯ್ಯರ್‌ ಸ್ಥಾನ ನೀಡದ ಬಗ್ಗೆ ಮಾಂಟಿ ಪನೇಸರ್‌ ಪ್ರತಿಕ್ರಿಯೆ!

ಶ್ರೇಯಸ್‌ ಅಯ್ಯರ್‌ಗೆ ಏಷ್ಯಾ ಕಪ್‌ನಲ್ಲಿ ಸ್ಥಾನ ನೀಡದ ಬಗ್ಗೆ ಮಾಂಟಿ ಪನೇಸರ್‌ ಪ್ರತಿಕ್ರಿಯೆ. -

Profile Ramesh Kote Aug 31, 2025 12:16 PM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ ( Asia Cup 2025) ಟೂರ್ನಿಯ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ (Shreyas Iyer) ಸ್ಥಾನ ನೀಡದೇ ಕಾರಣವೇನೆಂದು ಇಂಗ್ಲೆಂಡ್‌ ತಂಡದ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್‌ (Monty Panesar)ಬಹಿರಂಗಪಡಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ಅವರಲ್ಲಿನ ನಾಯಕತ್ವದ ಗುಣಗಳಿಂದ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ ಹಾಗೂ ಅವರ ಬದಲು ಯಾರಾದರೂ ಯುವ ಆಟಗಾರನಿಗೆ ಅವಕಾಶ ನೀಡಲು ಬಿಸಿಸಿಐ ಬಯಸಿದೆ ಎಂದು ಸ್ಪಿನ್‌ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಶ್ರೇಯಸ್‌ ಅಯ್ಯರ್‌ 2024ರಿಂದ ಭಾರತ ಟಿ20 ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.

ಮುಂಬೈನಲ್ಲಿ 2025ರ ಏಷ್ಯಾ ಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಆಯ್ಕೆ ಮಾಡಿದಾಗ ಒಬ್ಬ ಆಟಗಾರನ ಹೆಸರು ಇಲ್ಲದೇ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅವರ ಹೆಸರು ಶ್ರೇಯಸ್‌ ಅಯ್ಯರ್‌ ಎಂದರೆ ತಪ್ಪಾಗಲಾರದು. ಅವರು ದೇಶಿ ಕ್ರಿಕೆಟ್ ಮತ್ತು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಇವರ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ 2024ರಲ್ಲಿ ಐಪಿಎಲ್‌ ಗೆದ್ದಿತ್ತು. ನಂತರ 2025ರಲ್ಲಿ ಇವರ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ರನ್ನರ್‌ ಅಪ್‌ ಆಗಿತ್ತು.

Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್‌ ಪಂದ್ಯಗಳ ಸಮಯದಲ್ಲಿ ಬದಲಾವಣೆ

ಏಕದಿನ ವಿಶ್ವಕಪ್ ಆಗಿರಲಿ ಅಥವಾ ಚಾಂಪಿಯನ್ಸ್ ಟ್ರೋಫಿಯಾಗಿರಲಿ ಶ್ರೇಯಸ್ ಅಯ್ಯರ್ ಎರಡೂ ದೊಡ್ಡ ಟೂರ್ನಿಗಳಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಇದರ ಹೊರತಾಗಿಯೂ, ಅವರನ್ನು ಏಷ್ಯಾ ಕಪ್‌ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಇದೀಗ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್ ಪ್ರತಿಕ್ರಿಯಿಸಿದ್ದಾರೆ.

ಮಾಂಟಿ ಪನೇಸರ್ ಹೇಳಿದ್ದೇನು?

ಇಂಡಿಯಾ ಟುಡೇ ಜೊತೆ ಮಾತನಾಡಿದ ಲೆಜೆಂಡರಿ ಸ್ಪಿನ್ನರ್ ಮಾಂಟಿ ಪನೇಸರ್, "ಶ್ರೇಯಸ್ ಅಯ್ಯರ್ ನಾಯಕತ್ವದ ಗುಣಗಳನ್ನು ಹೊಂದಿರುವುದರಿಂದ ಮತ್ತು ತಂಡದಲ್ಲಿ ನಾಯಕ ಈಗಾಗಲೇ ಇರುವುದರಿಂದ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟಕರವಾಗಿದೆ. ಈ ಕಾರಣದಿಂದಾಗಿ, ತಂಡವು ಕಿರಿಯ ಮತ್ತು ಹೆಚ್ಚು ರೋಮಾಂಚಕಾರಿ ಆಟಗಾರನನ್ನು ಕರೆತರುವ ಅವಕಾಶವನ್ನು ಪಡೆಯುತ್ತದೆ. ಏಕೆಂದರೆ ಶ್ರೇಯಸ್‌ ಅಯ್ಯರ್‌ ಬದಲಿಗೆ ಯುವ ಆಟಗಾರರನ್ನು ಕೋಚ್ ಆಗಿ ಗೌತಮ್ ಗಂಭೀರ್‌ ಸುಲಭವಾಗಿ ನಿರ್ವಹಿಸಬಹುದು," ಎಂದು ತಿಳಿಸಿದ್ದಾರೆ.

Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಲಿರುವ ಭಾರತೀಯ ಆಟಗಾರರು

ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ ಟೂರ್ನಿಯಲ್ಲಿ ಬಹಳ ಸಮಯದಿಂದ ಸಂಕಷ್ಟದಲ್ಲಿತ್ತು. 2014ರ ಐಪಿಎಲ್‌ನಿಂದ ಈ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಶ್ರೇಯಸ್ ಅಯ್ಯರ್ ನಾಯಕನಾದ ತಕ್ಷಣ ಪಂಜಾಬ್‌ ಫ್ರಾಂಚೈಸಿಯ ಭವಿಷ್ಯವನ್ನು ಬದಲಾಯಿಸಿದ್ದಾರೆ. ಶ್ರೇಯಸ್ ಅಯ್ಯರ್‌ ತಮ್ಮ ಮೊದಲ ಸೀಸನ್‌ನಲ್ಲಿಯೇ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಇದು ಮಾತ್ರವಲ್ಲದೆ, ಅವರು 2025ರ ಟೂರ್ನಿಯಲ್ಲಿ 500 ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದಾರೆ.

30ನೇ ವಯಸ್ಸಿನ ಶ್ರೇಯಸ್ ಅಯ್ಯರ್ ಇದುವರೆಗೆ ಭಾರತ ಪರ 14 ಟೆಸ್ಟ್, 70 ಏಕದಿನ ಮತ್ತು 51 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 811 ರನ್, ಏಕದಿನದಲ್ಲಿ 2845 ರನ್ ಮತ್ತು ಟಿ20ಯಲ್ಲಿ 1104 ರನ್ ಗಳಿಸಿದ್ದಾರೆ.