DCM DKS: ರಾಜ್ಯಕ್ಕೆ ಡಿಕೆಶಿ ಸೇವೆ ಸಿಗಲಿ; ಪರೋಕ್ಷವಾಗಿ ಸಿಎಂ ಆಗಲಿ ಎಂದು ಹರಸಿದ ಪುತ್ತಿಗೆ ಶ್ರೀ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DKS) ಅವರು ಉಡುಪಿಗೆ ಭೇಟಿ ನೀಡಿದ್ದು ಉಡುಪಿಯ ಪುತ್ತಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸ್ವಾಮೀಜಿ ಅವರು ಡಿಸಿಎಂಗೆ ಆಶೀರ್ವದಿಸಿದ್ದಾರೆ.

-

ಉಡುಪಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DKS) ಅವರು ಉಡುಪಿಗೆ ಭೇಟಿ ನೀಡಿದ್ದು ಉಡುಪಿಯ ಪುತ್ತಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸ್ವಾಮೀಜಿ ಅವರು ಡಿಸಿಎಂಗೆ ಆಶೀರ್ವದಿಸಿದ್ದಾರೆ. ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ. ಭಗವದ್ಗೀತೆ ಪುಸ್ತಕ ಪಡೆದಿದ್ದಾರೆ, ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಉಡುಪಿಯ (Udupi) ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಓಪನ್ ಆಗಿ ಭಗವದ್ಗೀತೆ ಪಠಿಸುವ ಏಕೈಕ ರಾಜಕಾರಣಿ ಎಂದು ಅವರು ಹೇಳಿದ್ದಾರೆ.
ಡಿಕೆಶಿ ಜೊತೆ ಪುತ್ತಿಗೆ ಮಠಕ್ಕೆ 35 ವರ್ಷದ ಸಂಬಂಧವಿದೆ. ಡಿಕೆ ಜೈಲ್ ಮಂತ್ರಿ ಆಗಿದ್ದರು, ಕೃಷ್ಣ ಹುಟ್ಟಿದ್ದು ಜೈಲಿನಲ್ಲೇ. ಅವರು ಶ್ರೀಕೃಷ್ಣನ ದೊಡ್ಡ ಭಕ್ತ, ಭಗವದ್ಗೀತೆಯನ್ನು ಬಹಳ ಅನುಸರಿಸುತ್ತಾರೆ ಎಂದು ಮಠದ ರಾಜಾಂಗಣದಲ್ಲಿ ನಡೆದ ತಮ್ಮ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮುಂದೆಯೇ ಮಾತನಾಡಿದರು. ಶ್ರೀ ಮಧ್ವಾಚಾರ್ಯರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಶ್ರೀ ಮಧ್ವಾಚಾರ್ಯರಿಗೆ ಬಂಡೆಕಲ್ಲು ಇಷ್ಟ. ಅವರು ಹನುಮನ ಅಪರಾವತಾರ. ಡಿಕೆಶಿ ಕನಕಪುರದ ಬಂಡೆ. ಅವರು ರಾಕ್ ಸ್ಟಾರ್ ರಾಜಕಾರಣಿ. ಮಠದಲ್ಲಿ ಕೋಟಿ ಗೀತಾ ಲೇಖನ ಪುಸ್ತಕ ಪಡೆದಿದ್ದಾರೆ. ಅವರು ಪುಸ್ತಕ ಬರೆದು ಮುಗಿಸುವುದರೊಳಗೆ ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು ಪುತ್ತಿಗೆ ಸ್ವಾಮೀಜಿ ಆಶೀರ್ವದಿಸಿದರು. ರಾಜಕಾರಣಿಗಳು ಆಸ್ತಿಕರಾಗುವುದು ಬಹಳ ಮುಖ್ಯ. ರಾಜಕಾರಣಿಗಳು ಆಸ್ತಿಕರಾದರೆ ಮಾತ್ರ ಜಗತ್ತು ಕ್ಷೇಮವಾಗಿರಲು ಸಾಧ್ಯ ಎಂದರು.
ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂಜ್ರ ತೀರ್ಥ ಸ್ವಾಮೀಜಿ 64ನೇ ಜನ್ಮನಕ್ಷತ್ರಾಚರಣೆ ಸಂದರ್ಭದಲ್ಲಿ ಮಣಿಪಾಲ ಮಾಹೆಯು ಅಂಚೆ ಇಲಾಖೆ ಮೂಲಕ ಹೊರತಂದಿರುವ ಆಚಾರ್ಯ ಮಧ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಡಿಸಿಎಂ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಹುಡುಕುತ್ತಾರೆ. ಅದು ಸುಲಭದ ಕೆಲಸ, ಆದ್ದರಿಂದ ಕೃಷ್ಣ ನನ್ನ ಬಾಯಿಂದ ಯಾವುದೇ ತಪ್ಪು ಮಾಡಿಸಬೇಡ ಎನ್ನುತ್ತಲೇ ಮಾತು ಆರಂಭಿಸಿದ ಡಿ.ಕೆ.ಶಿವಕುಮಾರ್, ಮಾತಿನುದ್ದಕ್ಕೂ ತತ್ವಜ್ಞಾನವನ್ನಾಡಿದರು.
ಈ ಸುದ್ದಿಯನ್ನೂ ಓದಿ: ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಡಿಸಿಎಂ ಡಿಕೆಶಿ; ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವದಲ್ಲಿ ಭಾಗಿ
ಧರ್ಮ, ಪೂಜೆ ಆಚರಣೆ ಪ್ರದರ್ಶನದ ವಸ್ತುಗಳಲ್ಲ, ಅವು ಅಂತರಂಗದಲ್ಲಿರಬೇಕು. ದೇವನೊಬ್ಬನೇ ನಾಮ ಹಲವು, ಜೀವನದಲ್ಲಿ ಧರ್ಮರಾಯನ ಧರ್ಮನಿಷ್ಠೆ, ಅರ್ಜುನನ ಗುರಿ, ಭೀಮನ ಬಲ, ವಿುಧುರನ ನೀತಿ ಜೊತೆಗೆ ಕೃಷ್ಣನ ತಂತ್ರಗಾರಿಕೆಯೂ ಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕರೆದು ಹೇಳಿದರು.ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳಿದ್ದಾರೆ.