ಶಕುಂತಲಾ ಹೆಗಡೆ
ನಾನಾಗಲಿ ನನ್ನ ಮೂರು ಮಕ್ಕಳಾಗಲಿ ಹೆಗಡೆಯವರ ರಾಜಕೀಯ ಜೀವನದಲ್ಲಿ ಕೈ ಹಾಕಲಿಲ್ಲ. ದೂರ ಉಳಿದಿದ್ದೇವೆ. ಬೇರೆ ರಾಜಕಾರಣಿಗಳ ಹಾಗೆ ಹೆಂಡತಿ-ಮಕ್ಕಳಿಗೆ ಯಾವುದೇ ಪುಷ್ಟಿ ಕೊಟ್ಟಿಲ್ಲ. ರಾಜಕೀಯವಾಗಿ ಮುಂದೆ ತರಲಿಲ್ಲ. ಈ ವಿಚಾರದಲ್ಲಿ ನಾನು ಹಾಗೂ ನನ್ನ ಮಕ್ಕಳು ಜಾಗೃತೆ ಯಿಂದ ನಡೆದುಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಅಧಿಕಾರ ಬಂದಾಗ ಅವನ ಕುಟುಂಬದವರು, ಸಂಬಂಧಿಕರು, ಜಾತಿ ಯವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಾರೆ. ಆದರೆ ಹೆಗಡೆ ಇದಕ್ಕೆ ಅವಕಾಶ ಕೊಡಲಿಲ್ಲ. ಅವರು ಮೌಲ್ಯಾ ಧಾರಿತ ರಾಜಕಾರಣವನ್ನು ನಿಜ ಜೀವನದಲ್ಲಿ ಮಾಡಲು ಹೋಗಿ ಕಹಿ ಉಂಡವರು. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಸಮರ್ಥ ಪ್ರತಿಪಕ್ಷ ಇರಬೇಕೆಂಬ ಜಯಪ್ರಕಾಶ್ ನಾರಾಯಣರ ಕನಸನ್ನು ನನಸಾಗಿಸಿದರು.
ಇದನ್ನೂ ಓದಿ: Birth centenary of Ramakrishna Hegde: ನಮ್ಮ ಸಾಮೀಪ್ಯಕ್ಕೆ ಎಂದೂ ಚ್ಯುತಿ ಬರಲಿಲ್ಲ
ಅಧಿಕಾರಕ್ಕೆ ಅನೇಕ ರಾಜಕಾರಣಿಗಳು ಬಂದು ಹೋಗಿದ್ದಾರೆ. ಬಹಳ ಜನರ ಹೆಸರೇ ನೆನಪಿಲ್ಲ. ಆದರೆ ಹೆಗಡೆಯವರ ವ್ಯಕ್ತಿತ್ವ ಶಾಶ್ವತವಾದದ್ದು. ಅವರು ಬೇರೆಯವರ ಮನಸು ನೋಯಿಸುವ ವ್ಯಕ್ತಿಯಲ್ಲ. ಸ್ವಾರ್ಥವೂ ಇಲ್ಲ, ಬೇರೆಯವರ ಸೊತ್ತಿಗೆ ಆಸೆಯನ್ನೂ ಪಡುವುದಿಲ್ಲ. ಎಲ್ಲರನ್ನೂ ನಂಬಿ ಮೋಸ ಹೋಗುವುದೇ ಅವರ ದೌರ್ಬಲ್ಯ. ಒಮ್ಮೆ ನಾನು ನಿಮ್ಮ ಜೀವನದ ಆದರ್ಶ ವ್ಯಕ್ತಿ ಯಾರು? ಎಂದು ಕೇಳಿದೆ. ಅದಕ್ಕೆ ನೆಹರೂ ಎಂದರು. ಯಾಕೆ? ಎಂದೆ ಅದಕ್ಕವರು, ನೆಹರೂ ವಿಷನ್, ನೆಹರೂ ಸೆಕ್ಯುಲರಿಸಂ, ಪ್ರಜಾಪ್ರಭುತ್ವ ವಿಚಾರದಲ್ಲಿ ನೆಹರೂ ಬದ್ಧತೆ, ವಿವಿಧತೆಯೊಂದಿಗೆ ಏಕತೆ ಕಾಪಾಡಿ ಭಾರತವನ್ನು ಬಲಿಷ್ಠ ರಾಷ್ಟ್ರವಾಗಿಸುವ ಸಂಕಲ್ಪಕ್ಕೆ ಎಂದರು. ನನಗೆ ಆಶ್ಚರ್ಯ ವಾಯ್ತು.