ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Birth centenary of Ramakrishna Hegde: ನಮ್ಮ ಸಾಮೀಪ್ಯಕ್ಕೆ ಎಂದೂ ಚ್ಯುತಿ ಬರಲಿಲ್ಲ

ಮನಸು ತೀರಾ ಘಾಸಿಗೊಂಡಾಗ ಒಮ್ಮೊಮ್ಮೆ ನನ್ನ ಬಳಿ ಹೇಳಿಕೊಂಡಿದ್ದಿದೆ. ಆಗ ನಾನು ನನ್ನ ಅನುಭವದ ನೆಲೆಯಲ್ಲಿ ಸಾಂತ್ವನ ಹೇಳಿ ಮಾರ್ಗದರ್ಶನ ಮಾಡಿದ್ದೇನೆ. ರಾಜ್ಯಸಭಾ ಸದಸ್ಯನಾಗಿ, ಕೇಂದ್ರ ಸಚಿವನಾಗಿ ಅವನು ದೆಹಲಿಯಲ್ಲಿ, ನಾನು ಅದೇ ದೊಡ್ಮನೆಯಲ್ಲಿ. ಆಗ ನಮ್ಮ ನಡುವೆ ಭೌತಿಕವಾಗಿ ದೂರವೇರ್ಪಟ್ಟಿದ್ದು ನಿಜ. ಆದರೆ ಮಾನಸಿಕ ಸಾಮೀಪ್ಯಕ್ಕೆ ಚ್ಯುತಿ ಬಂದಿಲ್ಲ

ನಮ್ಮ ಸಾಮೀಪ್ಯಕ್ಕೆ ಎಂದೂ ಚ್ಯುತಿ ಬರಲಿಲ್ಲ

-

Profile
Ashok Nayak Aug 29, 2026 11:02 AM

ದೊಡ್ಮನೆ ಗಣೇಶ ಹೆಗಡೆ

ಒಬ್ಬರು ದೊಡ್ಮನೆ ಗಣೇಶ ಹೆಗಡೆ- ರಾಮ ಕೃಷ್ಣ ಹೆಗಡೆ ಅವರ ಅಣ್ಣ. ಮತ್ತೊಬ್ಬರು ಶಕುಂತಲಾ ಹೆಗಡೆ- ಹೆಗಡೆಯವರ ಧರ್ಮಪತ್ನಿ. ಈ ಇಬ್ಬರಿಗಿಂತ ರಾಮಕೃಷ್ಣ ಹೆಗಡೆ ಯವರನ್ನು ಹತ್ತಿರದಿಂದ, ಚೆನ್ನಾಗಿ ಬಲ್ಲವರು ಇರಲು ಸಾಧ್ಯವೇ ಇಲ್ಲ. ಇವರಿಬ್ಬರೂ ಈ ಹಿಂದ ವಿಶ್ವವಾಣಿ ಜತೆ ರಾಮಕೃಷ್ಣ ಹೆಗಡೆಯವರ ಕುರಿತು ಹಂಚಿಕೊಂಡ ಆಪ್ತ ಬರಹಗಳು ಇಲ್ಲಿವೆ. ಇವು ಹೆಗಡೆಯವರ ವ್ಯಕ್ತಿತ್ವವನ್ನೂ ಕಟ್ಟಿಕೊಡುತ್ತವೆ.

ರಾಮಕೃಷ್ಣನ ಜೀವನದ ಪ್ರಮುಖ ಘಟನೆಗಳನ್ನು ಮತ್ತು ಘಟ್ಟಗಳನ್ನು ಒಬ್ಬ ಬಂಧುವಾಗಿ ಹತ್ತಿರದಿಂದ ನೋಡುತ್ತಾ ಬಂದ ನನ್ನ ಎದುರು ಎಲ್ಲ ಚಿತ್ರಗಳೂ ಸಾಲಾಗಿ ನಿಲ್ಲುತ್ತವೆ. ಒಮ್ಮೆ ವಿಸ್ಮಯ, ಇನ್ನೊಮ್ಮೆ ಹರ್ಷ. ರಾಮಕೃಷ್ಣ ಬಗ್ಗೆ ನಾನಿರಿಸಿಕೊಂಡಿದ್ದ ನಿರೀಕ್ಷೆ- ಭರವಸೆಗಳನ್ನು ಮೀರಿ ಅವನು ವಿಶಾಲ ಜನವರ್ಗದ ಪ್ರೀತಿ-ವಿಶ್ವಾಸ ಗಳಿಸಿಕೊಂಡಿದ್ದಾನೆ ; ಸದ್ಭಾವನೆಗಳನ್ನು ಉಳಿಸಿಕೊಂಡಿದ್ದಾನೆ.

ಇದನ್ನೂ ಓದಿ: Birth centenary of Ramakrishna Hegde: ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ಹೆಗಡೆ

ಉತ್ತಮ ನಾಯಕತ್ವದ ಗುಣಗಳೆಲ್ಲವೂ ಆತನಲ್ಲಿದೆ. ರಾಷ್ಟ್ರದ ಯಾವುದೇ ಅತ್ಯುನ್ನತ ಹುದ್ದೆಯನ್ನು ಏರುವ ಎಲ್ಲ ಅರ್ಹತೆಗಳ ಜತೆಗೆ ಆ ಸ್ಥಾನಮಾನದ ಘನತೆಯನ್ನು ಎತ್ತರಕ್ಕೆ ಏರಿಸುವ ಎಲ್ಲ ಗುಣ-ಸಾಮರ್ಥ್ಯಗಳು ಆತನಲ್ಲಿವೆ. ಆದರೆ ಅವನೆಂದೂ ಅಧಿಕಾರ- ಹುದ್ದೆಗಳ ಬೆನ್ನು ಬಿದ್ದವನ್ನಲ್ಲ. ಲಾಬಿ ಮಾಡುವುದು, ಪ್ರಚಾರ ಗಿಟ್ಟಿಸಿಕೊಳ್ಳುವುದು ಅವನ ಮನೋಧರ್ಮಕ್ಕೆ ಒಗ್ಗದು. ಇಂಥ ತಮ್ಮನ ಬಗ್ಗೆ ಯಾವ ಅಣ್ಣನಿಗೆ ಹೆಮ್ಮೆಯಾಗಲಿಕ್ಕಿಲ್ಲ!

ರಾಜಕೀಯ ರಂಗದಲ್ಲಿ ಏಳು-ಬೀಳುಗಳಿರುವುದು ಸಹಜ. ನಂಬಿಕೆ-ವಿಶ್ವಾಸಗಳಿಗೆ ಹೆಚ್ಚು ಬೆಲೆ ಕೊಡುವ ರಾಮಕೃಷ್ಣ ಅದಕ್ಕೆ ಆಘಾತವುಂಟಾದಲ್ಲಾಗಲೆಲ್ಲ ನೊಂದುಕೊಂಡಿದ್ದಾನೆ. ಮನಸು ತೀರಾ ಘಾಸಿಗೊಂಡಾಗ ಒಮ್ಮೊಮ್ಮೆ ನನ್ನ ಬಳಿ ಹೇಳಿಕೊಂಡಿದ್ದಿದೆ. ಆಗ ನಾನು ನನ್ನ ಅನುಭವದ ನೆಲೆಯಲ್ಲಿ ಸಾಂತ್ವನ ಹೇಳಿ ಮಾರ್ಗದರ್ಶನ ಮಾಡಿದ್ದೇನೆ. ರಾಜ್ಯಸಭಾ ಸದಸ್ಯನಾಗಿ, ಕೇಂದ್ರ ಸಚಿವನಾಗಿ ಅವನು ದೆಹಲಿಯಲ್ಲಿ, ನಾನು ಅದೇ ದೊಡ್ಮನೆಯಲ್ಲಿ. ಆಗ ನಮ್ಮ ನಡುವೆ ಭೌತಿಕ ವಾಗಿ ದೂರವೇರ್ಪಟ್ಟಿದ್ದು ನಿಜ. ಆದರೆ ಮಾನಸಿಕ ಸಾಮೀಪ್ಯಕ್ಕೆ ಚ್ಯುತಿ ಬಂದಿಲ್ಲ. ಹಾಗಾಗಿಯೇ ಆತ ಕೊನೆಯವರೆಗೂ ನನಗೆ ಆತ್ಮೀಯ ರಾಮಕೃಷ್ಣ ನಾಗಿದ್ದ, ಅವನಿಗೆ ನಾನು ಪ್ರೀತಿಯ ಗಣೇಶಣ್ಣನಾಗಿದ್ದೆ