ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

ಕೆ.ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ಟ್ರಾವೆಲ್‌ ಮಾಲೀಕರ ಸಂಘ

2026-27ರ ಕೇಂದ್ರ ಆಯವ್ಯಯ ನೈಸರ್ಗಿಕತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರವಾಸೋದ್ಯಮವೇ ವಿಕಸಿತ ಭಾರತಕ್ಕೆ ಹೊಸ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರವಾಸೋದ್ಯಮವನ್ನು ಸರಕಾರ ಕೇವಲ ಮನರಂಜನೆ ವಲಯವಾಗಿ ಅಲ್ಲದೆ ಉದ್ಯೋಗ ಸೃಷ್ಟಿ, ಗ್ರಾಮೀಣ ಸಬಲೀಕರಣ, ನೈಸರ್ಗಿಕ ಸಂಪತ್ತು, ಪ್ರಕೃತಿ ಸಂರಕ್ಷಣೆ ಮತ್ತು ಭಾರತದ ಜಾಗತಿಕ ಪ್ರತಿಷ್ಠೆ ನಿರ್ಮಾಣದ ಪ್ರಮುಖ ಆರ್ಥಿಕ ಸಾಧನವಾಗಿ ಮರು ಸ್ಥಾಪಿಸಿದೆ.

ತೆರಿಗೆ ಸುಧಾರಣೆಗಳ ಮೂಲಕ ಪ್ರವಾಸೋದ್ಯಮಕ್ಕೆ ವಿಶೇಷವಾಗಿ ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲೆ ಟಿಸಿಎಸ್ ಅನ್ನುಶೇ.2ಕ್ಕೆ ಇಳಿಸಿದ್ದು, ನಗದು ಹರಿವಿನ ಒತ್ತಡ ಕಡಿಮೆಯಾಗುವುದರ ಜತೆಗೆ ಟ್ರಾವೆಲ್ ಏಜೆನ್ಸಿಗಳು ಮತ್ತು ಟೂರ್ ಆಪರೇಟರ್‌ಗಳಿಗೆ ವ್ಯವಹಾರ ಸುಲಭಗೊಳಿಸಿದೆ. ಈ ಮೂಲಕ ಭಾರತವನ್ನು ಜಾಗತಿಕ ಪ್ರವಾಸ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುವತ್ತ ಗಮನಹರಿಸಿದೆ.

ಮೊದಲ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಸಮ್ಮಿಟ್ ಮೂಲಕ ಹುಲಿ, ಸಿಂಹ, ಚಿರತೆ ಮೊದಲಾದ ದೊಡ್ಡ ಪ್ರಾಣಿಗಳೊಂದಿಗೆ ವಾಸ, ಅಧ್ಯಯನ, ಸಂರಕ್ಷಣೆಯಲ್ಲಿ ಭಾರತದ ನಾಯಕತ್ವವವನ್ನು ವಿಶ್ವದ ಮುಂದೆ ತರುತ್ತದೆ. ಅದೇ ರೀತಿ ಟರ್ಟಲ್ ಟ್ರಯಲ್ಸ್ ಯೋಜನೆ ಮೂಲಕ ಕರ್ನಾಟಕದ ಕರಾವಳಿ ಮತ್ತು ಸಮುದ್ರ ಜೀವಿಗಳ ಸಂರಕ್ಷಣೆಯನ್ನು ಪ್ರವಾಸೋದ್ಯಮದ ಭಾಗವಾಗಿಸಲಾಗಿದೆ.

ಇದನ್ನೂ ಓದಿ: Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾ ಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿ ದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

ಪ್ರವಾಸೋದ್ಯಮದ ಗುಣಮಟ್ಟವನ್ನು ನಿರ್ಧರಿಸುವ ಮಾನವ ಸಂಪನ್ಮೂಲವನ್ನು ಮನಗಂಡು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರಾ ಪ್ರವಾಸೋದ್ಯಮಕ್ಕೆ ವಿಶೇಷವಾದ 12 ವಾರಗಳ ಮಾನದಂಡಿತ ಮಾರ್ಗದರ್ಶಕ ತರಬೇತಿ ಘೋಷಿಸಿದ್ದು, ಪ್ರವಾಸಿ ಮಾರ್ಗದರ್ಶಕರಿಗೆ ಅಂತಾ ರಾಷ್ಟ್ರೀಯ ಮಟ್ಟದ ತರಬೇತಿ, ರಾಷ್ಟ್ರೀಯ ಆತಿಥ್ಯ ಸಂಸ್ಥೆ ಮತ್ತು ಡೆಸ್ಟಿನೇಷನ್‌ಗಳ ಡಿಜಿಟಲ್ ಜ್ಞಾನ ಜಾಲ ಪ್ರವಾಸೋದ್ಯಮವನ್ನು ವೃತ್ತಿಪರ ಮತ್ತು ವಿಶ್ವಾಸಾರ್ಹ ಕ್ಷೇತ್ರವಾಗಿ ರೂಪಿಸುವ ಮಹತ್ವದ ಹೆಜ್ಜೆಗಳಾಗಿವೆ.

ಸೀಪ್ಲೇನ್ ವಿಯಾಬಿಲಿಟಿ ಗ್ಯಾಪ್ ಫಂಡಿಂಗ್, ಹೊಸ ಜಲಮಾರ್ಗಗಳ ಕಾರ್ಯಗತಗೊಳಿಕೆಮತ್ತು ಪ್ರಾದೇಶಿಕ ವಿಮಾನ ಸಂಪರ್ಕ ವಿಸ್ತರಣೆ-ಇವು ಕರಾವಳಿ ಮತ್ತು ಒಳನಾಡಿನ ದೂರದ ತಾಣಗಳಿಗೂ ಪ್ರವಾಸದ ಬಾಗಿಲು ತೆರೆಯುತ್ತವೆ. ಸ್ವಚ್ಛ ಮತ್ತು ಕಡಿಮೆ ವೆಚ್ಚದ ಸಾರಿಗೆಯ ಮೂಲಕ ಪ್ರವಾಸೋ ದ್ಯಮದ ಭೌಗೋಳಿಕ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ.

ಒಟ್ಟಿನಲ್ಲಿ 2026-27ರ ಕೇಂದ್ರ ಆಯವ್ಯಯ, ಪ್ರವಾಸೋದ್ಯಮ ದೃಷ್ಟಿಕೋನವು ತೆರಿಗೆ ಸುಲಭತೆ, ಯಾತ್ರಾ, ಪರಂಪರೆ ಅಭಿವೃದ್ಧಿ, ಪ್ರಕೃತಿ ಸಂರಕ್ಷಣೆ, ಕೌಶಲ್ಯ ನಿರ್ಮಾಣ ಮತ್ತು ಸಂಪರ್ಕ ಬಲವರ್ಧನೆ ಸೇರಿ ಈ ಎಲ್ಲವನ್ನು ಒಂದೇ ಚೌಕಟ್ಟಿನಲ್ಲಿ ಒಗ್ಗೂಡಿಸಿದೆ. ವಿಕಸಿತ ಭಾರತದ ದಾರಿ ಯಲ್ಲಿ ಪ್ರವಾಸೋದ್ಯಮವನ್ನು ಕೇಂದ ಬಿಂದುಗೊಳಿಸಿದ ಈ ಆಯವ್ಯಯ, ದೀರ್ಘಕಾಲೀನ ಬೆಳವಣಿಗೆಗೆ ದಿಟ್ಟ ದಿಕ್ಕು ತೋರಿಸಿದೆ.