ಮಧ್ಯಪ್ರದೇಶದಲ್ಲಿ ಸಿಎಂ ಪುತ್ರ ಸೇರಿ ಹಸಮಣೆ ಏರಿದ 22 ಜೋಡಿಗಳು
ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಅವರು ಭಾನುವಾರ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉಜ್ಜಯಿನಿಯ ಸನ್ವರ್ಖೇಡಿಯಲ್ಲಿ ನಡೆದ ಅದ್ಧೂರಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅಭಿಮನ್ಯು ಯಾದವ್ ಅವರು ಇಶಿತಾ ಅವರನ್ನು ವಿವಾಹವಾದರು.