ಎಲ್ಲೆ ಮೀರಿದ ಪ್ರೀತಿ
ಎಲ್ಲೆ ಮೀರಿದ ಪ್ರೀತಿ



ಫಿರೋಜ ಡಿ. ಮೊಮೀನ್
ಸಾಮಾನ್ಯವಾಗಿ ಹುಡುಗ ಪ್ರಾಕ್ಟಿಕಲ್ ಆಗಿದ್ದು, ತನ್ನ ಮನಸ್ಸಿನಲ್ಲಿದ್ದದ್ದನ್ನು ಹೇಳಿಬಿಡುತ್ತಾನೆ. ಆದರೆ ಆ ಹುಡುಗಿ ಹೆಚ್ಚಾಗಿ ಎಮೋಶನಲ್ ಹಾಗೂ ಸೆನ್ಸಿಟಿವ್.
ಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ಸ್ನೇಹ ಜೊತೆಗೆ ಪ್ರೀತಿಯೂ ಬೆಳೆದರೆ ಮತ್ತಷ್ಟು ಅಮೂಲ್ಯ ಎನಿಸುತ್ತದೆ ಅನ್ನೋ ಪರಿಕಲ್ಪನೆ ಮೂಡಿದ್ದೆ, ಆ ಸ್ನೇಹದ ದೋಣಿಗೆ ಕಾಲಿಟ್ಟ ಮೇಲೆ. ಹಲವು ಹುಡುಗ-ಹುಡುಗಿಯರು ಒಳ್ಳೆಯ ಸ್ನೇಹಿತರಿರುತ್ತಾರೆ.
ಕೆಲವೊಮ್ಮೆ ಅಷ್ಟಕ್ಕೇ ಮುಗಿದು ಹೋಗುವುದಿಲ್ಲ. ಸ್ನೇಹ ಅನ್ನೋ ಅನ್ಯೋನ್ಯತೆಯಲ್ಲಿ ಅರಿವಿಗೆ ಬಾರದ ಹೊಸದೊಂದು ಸಂಬಂಧ ಮೊಳಕೆಯೊಡೆಯುತ್ತಿರಬಹುದು. ಅದರ ಸುಳಿವು ಸಿಗದೆ, ಅದಕ್ಕೊಂದು ಸ್ಪಷ್ಟ ಅರ್ಥ ಕೊಡಲಾಗದೆ ತೊಳಲಾಡಿ ಕೊನೆಗೆ ಅಂಥ ದ್ದೊಂದು ಸಂಬಂಧವನ್ನೇ ಯಡವಟ್ಟು ಮಾಡಿಕೊಂಡು ಒಂದಿಷ್ಟು ಕಾಲ ಸುಮ್ಮನೆ ಕೊರಗಿ ಬಿಡುತ್ತಾರೆ.
ಇಲ್ಲಿ ಆಗಿದ್ದು, ಹಾಗೇಯೇ.. ಒಂದೇ ಒಂದು ದಿನ ಮಾತನಾಡಿಲ್ಲ. ಅಷ್ಟಕ್ಕೆ ಅವಳು ಏನೋ ಕಳೆದು ಹೋದಂತಾಗಿ ತೊಳಲಾಡಿ ಬಿಡುತ್ತಾನೆ. ಅವಳು ಅಷ್ಟೆ ಎಲ್ಲವನ್ನೂ ಪಟಪಟ ಅಂತ ಅವನೆದುರು ಹೇಳಿ ಬಿಡಬೇಕು. ಮಧ್ಯರಾತ್ರಿಯಲ್ಲೂ ಮೆಸೆಜ್ ಮಾಡಿ,
ಪೋನ್ ಮಾಡಿ, ಅವನ ಧ್ವನಿ ಕೇಳಿಸಿಕೊಳ್ಳಬೇಕೆನ್ನುವ ಹುಡುಗಿ ಅವಳು. ಸ್ನೇಹ ಪ್ರೀತಿ ಯಾಗಿ ಬದಲಾದ ಮೇಲೆಯೂ, ಮತ್ತೆ ಸ್ನೇಹದ ದೋಣಿಯಲಿಯೇ ಪಯಣ ಸಾಗುತ್ತಿದೆ.
ನಿಲುಕದ ನಕ್ಷತ್ರ
ಯಾರಲ್ಲಿ, ಯಾವಾಗ, ಹೇಗೆ ಬೇಕಾದರೂ ಈ ಭಾವನೆ ಎನ್ನುವ ನಿಲುಕದ ನಕ್ಷತ್ರ ಹಾದು ಹೋಗಬಹುದು. ಅವನಲ್ಲಿ ಎಲ್ಲ ಕ್ಷಣದಲ್ಲಿಯೂ ತುಂಬಿದ ಪ್ರೀತಿ. ಆದರೆ ಸ್ನೇಹವೆಂಬ ಬಂಧನದೆದುರು, ಕವಿದ ಕಾರ್ಮೊಡಕ್ಕೆ ಪ್ರೀತಿ ಮರೆಯಾದಂತಾಗಿದೆ. ಆದ್ರೆ ಅವಳಿಗೆ ಪ್ರತಿ ಬಾರಿಯೂ ನಮ್ಮ ಮಧ್ಯೆ ಮಿಗಿಲಾದದ್ದೂ ಮತ್ತೆನೋ ಇದೆ ಎನ್ನುವ ಭಾವ. ಇದು ಅವನಲ್ಲಿ ಮಾತ್ರ ಕಾಡುವ ಭಾವವಲ್ಲ. ಹುಡುಗಿಗೂ ಇದರಲ್ಲಿ ಸಮಪಾಲು ಇದೆ.
ಹುಡುಗ ತನ್ನ ಭಾವನೆಗಳನ್ನು ಸುಮ್ಮನೆ ಮನಸ್ಸಿನಲ್ಲಿ ಅದುಮಿಟ್ಟುಕೊಂಡು ಗೊಂದಲ ಪಡುತ್ತಿದ್ದಾನೆ. ಹಾಗಂತ ಅವಳೆನೋ ನೇರದಿಕ್ಕಿನೆಡೆ ಸಾಗುತ್ತಿಲ್ಲ. ಅವಳಲ್ಲಿಯೂ ಹತ್ತಾರು ಆಲೋಚನೆಗಳು, ಭಾರವಾದ ಮನಸ್ಸು ತುಂಬಿಕೊಂಡಿದ್ದಾಳೆ. ಗೊಂದಲದ ಮಧ್ಯೆ ಸಾಗುವುದಕ್ಕಿಂತ ಒಮ್ಮೆ ಹಗುರವಾದ ಮನಸ್ಸಿನಿಂದ ಆಲೋಚಿಸಿ. ಹುಡುಗ ಹುಡುಗಿಯರು ತಮ್ಮ ನಡುವೆ ನಿಷ್ಕಲ್ಮಶ ಸ್ನೇಹದ ದೋಣಿಯಲ್ಲಿ ಕೊನೆಯ ವರೆಗೂ ಸಾಗುವ ಪ್ರೀತಿ ವಿಹರಿಸುತ್ತಿದೆ ಎಂದು ಗೊತ್ತಾಗದಂತಾಗಿದೆ.
ಹುಡುಗಿ ಎಮೋಶನಲ್
ಸಾಮಾನ್ಯವಾಗಿ ಹುಡುಗ ಪ್ರಾಕ್ಟಿಕಲ್ ಆಗಿದ್ದು, ತನ್ನ ಮನಸ್ಸಿನಲ್ಲಿದ್ದದ್ದನ್ನು ಹೇಳಿಬಿಡುತ್ತಾನೆ. ಆದರೆ ಆ ಹುಡುಗಿ ಹೆಚ್ಚಾಗಿ ಎಮೋಶನಲ್ ಹಾಗೂ ಸೆನ್ಸಿಟಿವ್. ಮನದ ಮಾತು ಹೊರಗೆ ಬರದೆ ಅಲ್ಲೇ ಒದ್ದಾಡುತ್ತಿದ್ದಾಳೆ. ಹುಡುಗನೂ ಸಹ ಬಲೆಗೆ ಸಿಲುಕಿ ದಂತಾಗಿದ್ದಾನೆ.
ಸುಮಧುರ ಭಾವನೆ ನಮ್ಮಲ್ಲೇ ಗೊಂದಲಪಡುವುದಕ್ಕಿಂತ, ಸ್ನೇಹದ ಸೆಳೆತದಲ್ಲಿ ಪ್ರೀತಿಯ ಭಾವವನ್ನು ತೋರ್ಪಡಿಸದೇ, ಹಾಗೇ ಯೇ ಉಳಿದಂತಾದರೆ, ಇಬ್ಬರ ಜೀವನವೂ ಪ್ರಶ್ನಾರ್ಥಕತೆಗೆ ಸಿಲುಕಿದಂತಾಗಲಿದೆ ಎಂಬ ದುಗುಡ ಹುಡುಗನಲ್ಲಿ ಕಾಡುತ್ತಿದೆ. ಮಾತು ಮೌನದ ಮೊರೆ ಹೊಕ್ಕಿ ಹೃದಯ ಬರಿದಾಗಿರುತ್ತದೆ. ಮೌನದ ಪ್ರೀತಿ ಮನದಲ್ಲೇ ಹುದುಗಿ ಹೋಗುತ್ತದೆ.