ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗೇಶ್ವರಿ: ತನ್ನ ಜೀವನ ಮತ್ತು ಅಮೆಜಾನ್ ನಲ್ಲಿ ವೃತ್ತಿಯನ್ನು ಮರು ನಿರ್ಮಿಸಿಕೊಂಡ ತಾಯಿಯ ಯಶೋಗಾಥೆ

ಏಪ್ರಿಲ್ 2020ರಲ್ಲಿ ಅವರು ಚೆನ್ನೈನ ಅಮೆಜಾನ್ ನಲ್ಲಿ ಅಸೋಸಿಯೇಟ್ ಆಗಿ ಸೇರಿಕೊಂಡರು. ಆರ್ಥಿಕ ಭದ್ರತೆಯ ಹೆಜ್ಜೆಯಾಗಿ ಪ್ರಾರಂಭವಾದ ಈ ಕೆಲಸ ಉದ್ದೇಶ, ವೃತ್ತಿಯ ಪ್ರಗತಿ ಮತ್ತು ಸಬಲೀಕರಣದ ಮೂಲವಾಗಿ ಹೊರಹೊಮ್ಮಿತು. ಅವರು ವೈಯಕ್ತಿಕ ಮತ್ತು ವೃತ್ತಿಪರ ಪರಿವರ್ತ ನೆಯ ಪ್ರಯಾಣವನ್ನು ಕೈಗೊಂಡು ಅಸೋಸಿಯೇಟ್ ನಿಂದ ಸಮಸ್ಯೆ ನಿವಾರಿಸುವವರಾಗಿ ಮತ್ತು 2024ರಲ್ಲಿ ಪ್ರೊಸೆಸ್ ಅಸಿ ಸ್ಟೆಂಟ್ ಪೂರ್ಣಕಾಲಿಕ ಜವಾಬ್ದಾರಿ ತೆಗೆದುಕೊಂಡರು

ಈ ತಾಯಂದಿರ ದಿನದಂದು ಅಮೆಜಾನ್ ಇಂಡಿಯಾ ಸದೃಢತೆ, ಧೈರ್ಯ ಮತ್ತು ಹೊಸ ಪ್ರಾರಂಭ ಗಳನ್ನು ದಿಟ್ಟತನದಿಂದ ಕೈಗೊಂಡ ಎಂ ಮಗೇಶ್ವರಿ ಅವರಂತಹ ತಾಯಂದಿರ ಅಸಾಧಾರಣ ಜೀವನ ಪ್ರಯಾಣಗಳನ್ನು ಸಂಭ್ರಮಿಸುತ್ತದೆ. ಅಮೆಜಾನ್ ಬೆಂಗಳೂರಿನ ಫುಲ್ ಫಿಲ್ಮೆಂಟ್ ಸೆಂಟರ್ ನಲ್ಲಿ ಪ್ರೊಸೆಸ್ ಅಸಿಸ್ಟೆಂಟ್ ಆಗಿರುವ ಮಗೇಶ್ವರಿಯ ಕಥೆಯು ಸಂಕಷ್ಟಗಳಿಂದ ಮೀರಿ ಬದುಕು ವುದು ಮಾತ್ರವಲ್ಲ, ಬದಲಿಗೆ ಅದು ಉದ್ದೇಶವನ್ನು ಮರು ಆವಿಷ್ಕರಿಸುವುದು, ಧೈರ್ಯದಿಂದ ಮರು ನಿರ್ಮಿಸುವುದು ಮತ್ತು ಬೆಳೆಯಲು ಮರು ವ್ಯಾಖ್ಯಾನಿಸುವ ವಿಶಿಷ್ಟತೆಯನ್ನು ಹೊಂದಿದೆ.

ಕಿರಿಯ ವಯಸ್ಸಿನಲ್ಲೇ ವಿವಾಹವಾದ ಮಗೇಶ್ವರಿ ಆರು ತಿಂಗಳ ಗರ್ಭಿಣಿಯಾಗಿದ್ದಾಗ ತನ್ನ ಗಂಡ ನನ್ನು ಕಳೆದುಕೊಂಡ ನಂತರ ಜೀವನ ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿತು. “ನಾನು ಸಂಪೂರ್ಣ ಕುಸಿದು ಹೋದೆ ಮತ್ತು ನನ್ನ ಮಗಳನ್ನು ಹೇಗೆ ನಾನು ಬೆಳೆಸಬೇಕೆಂದೇ ಗೊತ್ತಾಗ ಲಿಲ್ಲ” ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಆಕೆಯ ತಾಯಿಯ ಸತತ ಬೆಂಬಲದಿಂದ ಆಕೆ ಚೇತರಿಸಿಕೊಳ್ಳಲು ಸಾಧ್ಯವಾಯಿತು, ಆಕೆ, “ನೀನು ಏನೇ ಮಾಡಬೇಕಾಗಿರಲಿ, ಮುನ್ನಡೆ. ನಾನು ನಿನ್ನ ಹಿಂದೆ ಇರುತ್ತೇನೆ” ಎಂದು ಭರವಸೆ ನೀಡಿದರು. ಆ ಉತ್ತೇಜನದಿಂದ ಮಗೇಶ್ವರಿ ತನ್ನ ಮಗ ಳನ್ನು ಬೆಳೆಸಿದ್ದೇ ಅಲ್ಲದೆ ಆಕೆಯ ಕಿರಿಯ ಸೋದರನ ಶಿಕ್ಷಣಕ್ಕೂ ಬೆಂಬಲಿಸಿ ಆಕೆಯ ಕುಟುಂಬಕ್ಕೆ ಸದೃಢ ಆಧಾರಸ್ತಂಭವಾಗಲು ಸಾಧ್ಯವಾಯಿತು.

ಇದನ್ನೂ ಓದಿ: India-Pak ceasefire:ಕದನ ವಿರಾಮದ ಬೆನ್ನಲ್ಲೇ ಪಾಕ್‌ ಪುಂಡಾಟ; ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಅಟ್ಯಾಕ್‌

ಏಪ್ರಿಲ್ 2020ರಲ್ಲಿ ಅವರು ಚೆನ್ನೈನ ಅಮೆಜಾನ್ ನಲ್ಲಿ ಅಸೋಸಿಯೇಟ್ ಆಗಿ ಸೇರಿಕೊಂಡರು. ಆರ್ಥಿಕ ಭದ್ರತೆಯ ಹೆಜ್ಜೆಯಾಗಿ ಪ್ರಾರಂಭವಾದ ಈ ಕೆಲಸ ಉದ್ದೇಶ, ವೃತ್ತಿಯ ಪ್ರಗತಿ ಮತ್ತು ಸಬಲೀಕರಣದ ಮೂಲವಾಗಿ ಹೊರಹೊಮ್ಮಿತು. ಅವರು ವೈಯಕ್ತಿಕ ಮತ್ತು ವೃತ್ತಿಪರ ಪರಿವರ್ತ ನೆಯ ಪ್ರಯಾಣವನ್ನು ಕೈಗೊಂಡು ಅಸೋಸಿಯೇಟ್ ನಿಂದ ಸಮಸ್ಯೆ ನಿವಾರಿಸುವವರಾಗಿ ಮತ್ತು 2024ರಲ್ಲಿ ಪ್ರೊಸೆಸ್ ಅಸಿಸ್ಟೆಂಟ್ ಪೂರ್ಣಕಾಲಿಕ ಜವಾಬ್ದಾರಿ ತೆಗೆದುಕೊಂಡರು.

ಒಂಟಿ ತಾಯಿಯಾಗಿ ಆಕೆ ಅಮೆಜಾನ್ ತನ್ನ ವೃತ್ತಿಪರ ಜವಾಬ್ದಾರಿಗಳು ಮತ್ತು ತಾಯ್ತನವನ್ನು ಪರಿಣಾಮಕಾರಿಯಾಗಿ ಸಮತೋಲನ ಮಾಡಲು ಶಕ್ತವಾಗಿಸಿತು. ಐದು ದಿನದ ವಾರದಿಂದ ಮಹಿಳೆ ಯರ ಸುರಕ್ಷತೆಗೆ ಆದ್ಯತೆ ನೀಡುವ ಉದ್ಯೋಗದ ಸಂಸ್ಕೃತಿಯವರೆಗೆ ಕಂಪನಿಯ ಬೆಂಬಲದ ಪರಿಸರಗಳು ಆಕೆಗೆ ತಾಯಿಯಾಗಿ ತನ್ನ ಪಾತ್ರದಲ್ಲಿ ರಾಜಿಯಿಲ್ಲದೆ ಬೆಳೆಯಲು ನೆರವಾಯಿತು. ತಮ್ಮ ಪ್ರಯಾಣ ಕುರಿತು ಅವರು, “ಅಮೆಜಾನ್ ನನಗೆ ಅರ್ಥಪೂರ್ಣ ಉದ್ಯೋಗದ ಅವಕಾಶ ನೀಡಿದ್ದಲ್ಲದೆ ಮತ್ತೆ ಕನಸು ಕಾಣಲು ವಿಶ್ವಾಸವನ್ನೂ ನೀಡಿತು. ಈ ಸಂಸ್ಕೃತಿಯು ಉತ್ತೇಜಕವಾಗಿದೆ ಮತ್ತು ನಾನು ನನ್ನ ಪದವಿ ಪೂರೈಸಲು ಉತ್ತೇಜನ ಪಡೆದೆ” ಎಂದರು. “ಒಂದು ದಿನ ನಾನು ಏರಿಯಾ ಮ್ಯಾನೇಜರ್ ಆಗಲು ಬಯಸುತ್ತೇನೆ. ಮತ್ತು ನನ್ನ ಮಗಳಿಗೆ ಸ್ವಾತಂತ್ರ್ಯ, ಆನಂದ ಮತ್ತು ಅವಕಾಶಗಳ ಭವಿಷ್ಯವನ್ನು ನೀಡಲು ಬಯಸುತ್ತೇನೆ” ಎಂದರು.

ಹೊಸ ಕೌಶಲ್ಯಗಳನ್ನುಕಲಿಯುವ ಮತ್ತು ವಿಭಿನ್ನ ಜವಾಬ್ದಾರಿಗಳನ್ನು ಆವಿಷ್ಕರಿಸುವುದಲ್ಲದೆ ಮಗೇಶ್ವರಿ ಅವರು ಅಮೆಜಾನ್ ಮಹಿಳೆಯರ ಸುರಕ್ಷತೆಗೆ ನೀಡಿರುವ ಸದೃಢ ಗಮನವು ಮನಃಶಾಂತಿ ನೀಡಿದೆ ಮತ್ತು ಕೆಲಸದಲ್ಲಿ ಸಾಧನೆ ಮಾಡಲು ಗಮನ ಕೇಂದ್ರೀಕರಿಸಲು ಸಾಧ್ಯವಾಗಿದೆ ಎನ್ನುತ್ತಾರೆ. “ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಪ್ರಾರಂಭದಲ್ಲಿ ನನಗೆ ಬಹಳ ಆತಂಕ ಉಂಟಾಗುತ್ತಿತ್ತು, ಆದರೆ ಅಮೆಜಾನ್ ತನ್ನ ಮಹಿಳಾ ಅಸೋಸಿಯೇಟ್ ಗಳ ಸುರಕ್ಷತೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಬಹಳ ಬೇಗನೆ ತಿಳಿದುಕೊಂಡೆ. ನಾನು ಸುರಕ್ಷಿತ ಮತ್ತು ಉತ್ತಮ ಬೆಂಬಲದ ಪರಿಸರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿದಿದ್ದು ನನಗೆ ದೀರ್ಘಾವಧಿ ಯೋಜನೆ ಮಾಡಲು ನೆರವಾಯಿತು. ಸ್ಥಿರತೆಯ ಭಾವನೆ ಮತ್ತು ಅವಕಾಶವು ನನಗೆ ನನ್ನ ಕುಟುಂಬಕ್ಕೆ ಒಂಟಿ ಪೋಷಕಿ ಯಾಗಿ ಬೆಳೆಯಲು ಮತ್ತು ಹೆಚ್ಚು ಪೂರೈಸಲು ಸನ್ನದ್ಧವಾಗಿಸಿದವು” ಎಂದರು.

ಈಗ ಮರು ವಿವಾಹವಾಗಿದ್ದಾರೆ ಮತ್ತು ತನ್ನ 8 ವರ್ಷದ ಮಗಳನ್ನು ಬೆಳೆಸುತ್ತಿರುವ ಮಗೇಶ್ವರಿ ತನ್ನ ಹಾಗೂ ತನ್ನ ಕುಟುಂಬದ ಪ್ರಗತಿಗೆ ಗಮನ ನೀಡಿದ್ದಾರೆ. ತನ್ನ ಮಗಳಿಗೆ ಸ್ವಾವಲಂಬನೆ ಮತ್ತು ತನ್ನದೇ ಆದ ದಾರಿ ರೂಪಿಸಿಕೊಳ್ಳುವ ಕುರಿತು ತನ್ನ ಮಗಳಿಗೆ ಸ್ವತಃ ಉದಾಹರಣೆಯಾಗಿದ್ದಾರೆ.

ಈ ತಾಯಂದಿರ ದಿನಕ್ಕೆ ಮಗೇಶ್ವರಿ ತನ್ನ ಮಗಳೊಂದಿಗೆ ಅರ್ಥಪೂರ್ಣ ಸಮಯ ಕಳೆಯುವ ಯೋಜನೆ ಹೊಂದಿದ್ದು ಪ್ರತಿಕೂಲತೆಯಿಂದ ಉಂಟಾಗಿದ್ದನ್ನು ಪ್ರೀತಿ ಮತ್ತು ಭರವಸೆಯಿಂದ ಈ ಬಾಂಧವ್ಯವನ್ನು ಸಂಭ್ರಮಿಸುತ್ತಿದ್ದಾರೆ.