ಭಾರತದ ಶೇ. 92ರಷ್ಟು ಸಂಸ್ಥೆಗಳಲ್ಲಿ ಎಐ ಏಜೆಂಟ್ ಭದ್ರತಾ ಲೋಪ: 24 ಗಂಟೆಯೊಳಗೆ ನಿಯಂತ್ರಿಸಿದ್ದು ಕೇವಲ 36% ಸಂಸ್ಥೆಗಳು ಮಾತ್ರ
ಎಐ ಏಜೆಂಟ್ಗಳು ಈಗ ಭಾರತೀಯ ಉದ್ಯಮಗಳ ಕಾರ್ಯಾಚರಣೆಯ ಅವಿಭಾಜ್ಯ ಅಂಗವಾಗಿವೆ. ಆದರೆ ಅದಕ್ಕೆ ತಕ್ಕಂತೆ ಭದ್ರತೆಯು ವೇಗ ಪಡೆದುಕೊಂಡಿಲ್ಲ. ನಮಗೆ ಗೋಚರಿಸದ ವಿಚಾರಗಳನ್ನು ಭದ್ರಪಡಿಸಲು ಅಥವಾ ನಿರ್ವಹಿಸಲು ಎಂದಿಗೂ ಸಾಧ್ಯವಿಲ್ಲ. ಭದ್ರತಾ ತಂಡಗಳು ಸಮಸ್ಯೆಗಳನ್ನು ಸಕಾಲದಲ್ಲಿ ಪತ್ತೆಹಚ್ಚಿ ನಿಯಂತ್ರಿಸಲು ಅನುಕೂಲವಾಗುವಂತೆ, ಪ್ರತಿಯೊಂದು ಏಜೆಂಟ್ ಅನ್ನು ಕಡ್ಡಾಯವಾಗಿ ನೋಂದಾಯಿಸಿರಬೇಕು
-
ಕಳೆದ ವರ್ಷ ಭಾರತದ ಶೇಕಡಾ 92ರಷ್ಟು ಸಂಸ್ಥೆಗಳು ಏಜೆಂಟಿಕ್ ಸೆಕ್ಯುರಿಟಿ ಘಟನೆಗಳನ್ನು ಅಂದರೆ ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್ ಭದ್ರತಾ ಲೋಪಗಳನ್ನು ಎದುರಿಸಿವೆ. ಆದರೆ ಅಚ್ಚರಿಯ ವಿಚಾರವೆಂದರೆ, ಈ ಪೈಕಿ ಕೇವಲ ಶೇ. 36ರಷ್ಟು ಸಂಸ್ಥೆಗಳು ಮಾತ್ರ ಘಟನೆ ನಡೆದ 24 ಗಂಟೆಗಳೊಳಗೆ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. 500 ಭದ್ರತಾ ನಾಯಕರನ್ನು ಒಳಗೊಂಡ ಸರ್ವಿಸ್ನೌ ಸಂಸ್ಥೆಯು ನಡೆಸಿದ ಡಿಪ್ಲಾಯ್ಡ್ ಬಟ್ ಅನ್ಗವರ್ನ್ಡ್: ದಿ ಸ್ಟೇಟ್ ಆಫ್ ಏಜೆಂಟಿಕ್ ಸೆಕ್ಯುರಿಟಿ ಇನ್ ಇಂಡಿಯಾ ಎಂಬ ಹೊಸ ಸಂಶೋಧನಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ಈ ಕುರಿತು ಸರ್ವಿಸ್ನೌ ಸಂಸ್ಥೆಯ ಇಂಡಿಯಾ ಮತ್ತು ಸಾರ್ಕ್ ವಿಭಾಗದ ಜಿವಿಪಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಲ್ಮೀತ್ ಬಾವಾ ಅವರು , "ಎಐ ಏಜೆಂಟ್ಗಳು ಈಗ ಭಾರತೀಯ ಉದ್ಯಮಗಳ ಕಾರ್ಯಾಚರಣೆಯ ಅವಿಭಾಜ್ಯ ಅಂಗವಾಗಿವೆ. ಆದರೆ ಅದಕ್ಕೆ ತಕ್ಕಂತೆ ಭದ್ರತೆಯು ವೇಗ ಪಡೆದುಕೊಂಡಿಲ್ಲ. ನಮಗೆ ಗೋಚರಿಸದ ವಿಚಾರಗಳನ್ನು ಭದ್ರಪಡಿಸಲು ಅಥವಾ ನಿರ್ವಹಿಸಲು ಎಂದಿಗೂ ಸಾಧ್ಯವಿಲ್ಲ. ಭದ್ರತಾ ತಂಡಗಳು ಸಮಸ್ಯೆಗಳನ್ನು ಸಕಾಲದಲ್ಲಿ ಪತ್ತೆಹಚ್ಚಿ ನಿಯಂತ್ರಿಸಲು ಅನುಕೂಲವಾಗುವಂತೆ, ಪ್ರತಿಯೊಂದು ಏಜೆಂಟ್ ಅನ್ನು ಕಡ್ಡಾಯವಾಗಿ ನೋಂದಾಯಿಸಿರಬೇಕು. ಜೊತೆಗೆ ಅವುಗಳ ಒಡೆತನ ಮತ್ತು ಗೋಚರತೆ ಒಂದೇ ಸ್ಥಳದಲ್ಲಿರಬೇಕು ಹಾಗೂ ಸ್ವಯಂಚಾಲಿತ ನಿಯಂತ್ರಣಗಳೊಂದಿಗೆ ಯಂತ್ರದ ವೇಗದಲ್ಲಿ ಪ್ರತಿಕ್ರಿಯಿಸುವ ವ್ಯವಸ್ಥೆ ಇರಬೇಕು" ಎಂದು ಎಚ್ಚರಿಸಿದ್ದಾರೆ.
ನಿಯಂತ್ರಣ ಮೀರುತ್ತಿರುವ ಭದ್ರತೆಯ ಮೇಲಿನ ಅತಿಯಾದ ವಿಶ್ವಾಸ ಭಾರತದ ಅರ್ಧದಷ್ಟು ಭದ್ರತಾ ನಾಯಕರು ತಮ್ಮ ಏಜೆಂಟಿಕ್ ಭದ್ರತೆಯನ್ನು ಅತ್ಯುತ್ತಮವಾಗಿದೆ ಎಂದು ಬಣ್ಣಿಸುತ್ತಾರೆ. ಆದರೆ ಸಂಶೋಧನೆಯ ಪ್ರಕಾರ, ಈ ಭದ್ರತೆಯ ಅಡಿಪಾಯವು ಅಸಮತೋಲನದಿಂದ ಕೂಡಿದೆ ಎಂಬುದನ್ನು ಈ ಕೆಳಗಿನ ಅಂಶಗಳು ಸಾಬೀತುಪಡಿಸುತ್ತವೆ:
* ಕೇವಲ 19% ಸಂಸ್ಥೆಗಳು ಮಾತ್ರ ಏಜೆಂಟಿಕ್ ಎಐ ಭದ್ರತಾ ನಿರ್ವಹಣೆಗೆ ಹೊಣೆಗಾರರಾದ ಓರ್ವ ನಿರ್ದಿಷ್ಟ ವ್ಯಕ್ತಿಯನ್ನು (ನಾಯಕನನ್ನು) ಹೊಂದಿವೆ.
* ಕೇವಲ 18% ಸಂಸ್ಥೆಗಳು ತಮ್ಮ ಏಜೆಂಟ್ಗಳ ಮೇಲೆ ಏಕೀಕೃತ, ಸಿಂಗಲ್-ಇಂಟರ್ಫೇಸ್ ಗೋಚರತೆಯನ್ನು ಹೊಂದಿವೆ.
* ಕೇವಲ 30% ಸಂಸ್ಥೆಗಳು ಮಾತ್ರ, ಏಜೆಂಟ್ಗಳು ಭದ್ರತಾ ತಪಾಸಣೆಗಳಲ್ಲಿ ತೇರ್ಗಡೆಯಾಗುವವರೆಗೆ ಅವುಗಳನ್ನು ನಿರ್ಬಂಧಿಸುವ ಸ್ವಯಂಚಾಲಿತ ಡಿಪ್ಲಾಯ್ ಮೆಂಟ್ ಗೇಟ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ.
* ಕೇವಲ 47% ಸಂಸ್ಥೆಗಳು ಮಾತ್ರ ಬೇಡಿಕೆಯ ಮೇರೆಗೆ ಸಂಪೂರ್ಣ ಸಾಕ್ಷ್ಯಗಳ ಪ್ಯಾಕೇಜ್ ಅನ್ನು ಒದಗಿಸುವ ಸಾಮರ್ಥ್ಯ ಹೊಂದಿವೆ. ಪತ್ತೆಹಚ್ಚುವಿಕೆ ಸ್ವಯಂಚಾಲಿತ, ಆದರೆ ಪ್ರತಿಕ್ರಿಯೆ ಇನ್ನೂ ಮನುಷ್ಯರ ಆಧಾರಿತ ಯಾವುದೇ ಬೆದರಿಕೆ ಎದುರಾದಾಗ ಮಾನವನ ಮೇಲ್ವಿಚಾರಣೆಯು ಪ್ರಮುಖ ಸುರಕ್ಷತಾ ಕ್ರಮವಾಗಿ ಉಳಿದಿದೆ. ಆದರೆ, ಎಐ ಏಜೆಂಟ್ಗಳು ನಿರಂತರವಾಗಿ ಮತ್ತು ಯಂತ್ರದ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮನುಷ್ಯನ ಮೇಲ್ವಿಚಾರಣೆ ಮಾತ್ರವೇ ಏಕೈಕ ರಕ್ಷಣಾ ಮಾರ್ಗವಾಗಲು ಸಾಧ್ಯವಿಲ್ಲ.
ಭಾರತದ ಅರ್ಧದಷ್ಟು (51%) ಸಂಸ್ಥೆಗಳು ಅಸಹಜ ಎಐ ಏಜೆಂಟ್ ನಡವಳಿಕೆಯನ್ನು ಪತ್ತೆ ಹಚ್ಚಲು ರಿಯಲ್-ಟೈಮ್ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿವೆ. ಆದರೆ, ಏಜೆಂಟ್ ಅಸಹಜ ವಾಗಿ ವರ್ತಿಸಿದಾಗ ಶೇ. 67ರಷ್ಟು ಸಂಸ್ಥೆಗಳಿಗೆ ಸ್ವಯಂಚಾಲಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗು ತ್ತಿಲ್ಲ. ಇದು ಬೆದರಿಕೆಯನ್ನು ಗುರುತಿಸುವುದು ಮತ್ತು ಅದಕ್ಕೆ ಪ್ರತಿಕ್ರಿಯಿಸುವುದರ ನಡುವಿನ ಅಂತರವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.
ಕೇವಲ 46% ಸಂಸ್ಥೆಗಳು ಏಜೆಂಟ್ ಅಭಿವೃದ್ಧಿ ಪ್ರಾರಂಭವಾಗುವ ಮೊದಲು ಭದ್ರತಾ ಕ್ರಮಗಳನ್ನು ಅಳವಡಿಸುತ್ತವೆ. ಇದರಿಂದಾಗಿ, ಭದ್ರತಾ ನಿಯಂತ್ರಣಗಳನ್ನು ರೂಪಿಸುವ ಮುನ್ನವೇ ಹಲವು ಏಜೆಂಟ್ಗಳನ್ನು ವಿನ್ಯಾಸಗೊಳಿಸಿ, ನಿರ್ಮಿಸಲಾಗುತ್ತಿದೆ. ಈ ಅಪಾಯವು ಕೇವಲ ಐಟಿಗೆ ಮಾತ್ರ ಸೀಮಿತವಾಗಿಲ್ಲ; 83% ಸಂಸ್ಥೆಗಳು ಕಾರ್ಯಾಚರಣಾ ತಂತ್ರಜ್ಞಾನ (ಓಟಿ) ಅಥವಾ ಭೌತಿಕ ಪರಿಸರ ದಲ್ಲಿ ಎಐ ಏಜೆಂಟ್ಗಳನ್ನು ಬಳಸುತ್ತಿವೆ ಅಥವಾ ಸಂವಹನ ನಡೆಸುತ್ತಿವೆ. ಆದರೆ, ಇವುಗಳಲ್ಲಿ ಕೇವಲ 29% ಸಂಸ್ಥೆಗಳು ಮಾತ್ರ ಅವರಿಗಾಗಿ ವಿನ್ಯಾಸಗೊಳಿಸಲಾದ ಪ್ರತ್ಯೇಕ ಆಡಳಿತಾತ್ಮಕ ಚೌಕಟ್ಟನ್ನು ಹೊಂದಿವೆ.
ಕಾಡುತ್ತಿದೆ ಶ್ಯಾಡೋ ಎಐ ಸಮಸ್ಯೆ ಕಳೆದ 12 ತಿಂಗಳುಗಳಲ್ಲಿ ಶೇ. 37ರಷ್ಟು ಸಂಸ್ಥೆಗಳು, ಭದ್ರತಾ ತಂಡಗಳಿಗೆ ತಿಳಿದಿಲ್ಲದ ಅಥವಾ ಎಂದಿಗೂ ನೋಂದಾಯಿಸದ ಎಐ ಏಜೆಂಟ್ಗಳು ಉತ್ಪಾದನೆ ಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿವೆ. ನೋಂದಣಿಯಾಗದ ಈ ಏಜೆಂಟ್ ಗಳು ನಿರ್ಣಾಯಕ ಬ್ಲೈಂಡ್ ಸ್ಪಾಟ್ ಗಳಾಗಿವೆ. ಸಂಸ್ಥೆಗಳಿಗೆ ಕಾಣದಿರುವುದನ್ನು ಅವು ನಿಯಂತ್ರಿಸಲು ಸಾಧ್ಯವಿಲ್ಲ. ಸೆರ್ಟ್-ಇನ್ (ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಅಕ್ಟೋಬರ್ 2026 ರಲ್ಲಿ ಎಐ ಏಜೆಂಟ್ ಗಳ ಕುರಿತು ನೀಡಿದ ಸಲಹೆಯು (ಸಿಐಎಡಿ-2026-0049), ಭಾರತೀಯ ಸಂಸ್ಥೆಗಳಿಗೆ ಏಜೆಂಟ್ ಗೋಚರತೆ ಮತ್ತು ನಿಯಂತ್ರಣದ ಬಗ್ಗೆ ಕಾರ್ಯಸೂಚಿಯನ್ನು ಮುಂದಿಟ್ಟಿದೆ.
ಗೌಪ್ಯ - ಸಾರ್ವಜನಿಕ ಬಳಕೆ ಅಥವಾ ವಿತರಣೆಗಾಗಿ ಅಲ್ಲ ಸರ್ವಿಸ್ನೌ ಅಧ್ಯಯನವು, ಸಂಸ್ಥೆಗಳು ತಮ್ಮ ಸ್ವಂತ ಏಜೆಂಟ್ಗಳನ್ನು ಎಷ್ಟು ಚೆನ್ನಾಗಿ ಗಮನಿಸುತ್ತವೆ ಮತ್ತು ನಿರ್ವಹಿಸುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಸೆರ್ಟ್-ಇನ್ನ 2022 ರ ನಿರ್ದೇಶನಗಳ ಪ್ರಕಾರ, ಭಾರತೀಯ ಸಂಸ್ಥೆಗಳು ಸೈಬರ್ ಘಟನೆಗಳ ಬಗ್ಗೆ ತಿಳಿದ ಆರು ಗಂಟೆಗಳ ಒಳಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ಏಕೀಕೃತ ಪ್ಲಾಟ್ಫಾರ್ಮ್ನಲ್ಲಿ ಏಜೆಂಟಿಕ್ ಭದ್ರತೆಯನ್ನು ನಿರ್ವಹಿಸುವ ಸಂಸ್ಥೆಗಳು (ಸಮೀಕ್ಷೆ ಗೊಳಗಾದವರಲ್ಲಿ 43%) ಇತರರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ: ಶೇ. 62ರಷ್ಟು ಸಂಸ್ಥೆಗಳು ಅಸಹಜ ಏಜೆಂಟ್ ನಡವಳಿಕೆಗಾಗಿ ಸ್ವಯಂಚಾಲಿತ ರಿಯಲ್-ಟೈಮ್ ಎಚ್ಚರಿಕೆ ವ್ಯವಸ್ಥೆ ಗಳನ್ನು ಹೊಂದಿವೆ (ಇತರರಲ್ಲಿ ಇದು 43% ಇದೆ). ಶೇ. 45ರಷ್ಟು ಸಂಸ್ಥೆಗಳು ಏಜೆಂಟ್ ನೀತಿ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸುತ್ತವೆ (ಇತರರಲ್ಲಿ 24%) ಮತ್ತು ಶೇ. 51ರಷ್ಟು ಸಂಸ್ಥೆಗಳು ನಿರಂತರವಾಗಿ ಸಾಕ್ಷ್ಯಗಳನ್ನು ಸೆರೆಹಿಡಿಯುತ್ತವೆ (ಇತರರಲ್ಲಿ 43%). ಈ ಅಂತರವನ್ನು ಸರಿಪಡಿಸುವ ಕಾರ್ಯವು, ಪ್ರಸ್ತುತ ಏನು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವು ದರೊಂದಿಗೆ ಪ್ರಾರಂಭವಾಗುತ್ತದೆ.
ಸಂಸ್ಥೆಗಳಿಗೆ ತಮ್ಮ ಎಐ ಏಜೆಂಟ್ಗಳ ಸಂಪೂರ್ಣ ದಾಖಲೆ, ಏಜೆಂಟ್ಗಳು ಮತ್ತು ಗುರುತು ಗಳಾದ್ಯಂತ ಒಂದೇ ನೋಟ, ಮತ್ತು ಅವುಗಳನ್ನು ನಿರ್ವಹಿಸಲು ಜವಾಬ್ದಾರರಾದ ಓರ್ವ ನಿರ್ದಿಷ್ಟ ನಾಯಕನ ಅಗತ್ಯವಿದೆ.