Murder Case: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ ಯುವಕನ ಕೊಲೆ
Koppala: ಕುರುಬರ ಓಣಿಯ ನಿವಾಸಿ 30 ವರ್ಷದ ಗವಿಸಿದ್ದಪ್ಪ ನಾಯಕ ಅನ್ಯಕೋಮಿನ ಯುವತಿಯೊಬ್ಭಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಹುಡುಗಿಯ ಕಡೆಯವರಿಗೂ ಈತನಿಗೂ ಬಿಸಿಬಿಸಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಮೂರು ಜನರು ಮಾರಕಾಸ್ತ್ರಗಳನ್ನು ಬಳಸಿ ಗವಿಸಿದ್ದಪ್ಪನ ಮೇಲೆ ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
 
                                ಹತ್ಯೆಯಾದ ಗವಿಸಿದ್ದಪ್ಪ ನಾಯಕ್ -
 ಹರೀಶ್ ಕೇರ
                            
                                Aug 4, 2025 10:03 AM
                                
                                ಹರೀಶ್ ಕೇರ
                            
                                Aug 4, 2025 10:03 AM
                            ಕೊಪ್ಪಳ: ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ (love) ಯುವಕನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ಕೊಪ್ಪಳ (Koppla) ಜಿಲ್ಲೆಯ ಬರದ್ದೂರು ಬಂಡಿ ರಸ್ತೆ ಬಳಿಕ ನಿರ್ಮಿತಿ ಕೇಂದ್ರದ ಬಳಿ ಯುವಕನನ್ನು ಕೊಲೆ ಮಾಡಲಾಗಿದೆ. 30 ವರ್ಷದ ಗವಿಸಿದ್ದಪ್ಪ ನಾಯಕ್ ಎಂಬಾತನೇ ಹತ್ಯೆಯಾದ ಯುವಕ. ಅನ್ಯಕೋಮಿನ ಹುಡುಗಿಯನ್ನು ಗವಿಸಿದ್ದಪ್ಪ ನಾಯಕ್ ಪ್ರೀತಿಸುತ್ತಿದ್ದು, ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಬಳಿಕ ಸಾದಿಕ್ ಎಂಬ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಕೊಪ್ಪಳದ ಬಹದ್ದೂರು ಬಂಡಿ ರಸ್ತೆಯ ನಿರ್ಮಿತಿ ಕೇಂದ್ರದ ಬಳಿ ರಸ್ತೆಯ ಮಧ್ಯೆಯೇ ಗವಿಸಿದ್ದಪ್ಪ ನಾಯಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುರುಬರ ಓಣಿಯ ನಿವಾಸಿ 30 ವರ್ಷದ ಗವಿಸಿದ್ದಪ್ಪ ನಾಯಕ ಅನ್ಯಕೋಮಿನ ಯುವತಿಯೊಬ್ಭಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಹುಡುಗಿಯ ಕಡೆಯವರಿಗೂ ಈತನಿಗೂ ಬಿಸಿಬಿಸಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಮೂರು ಜನರು ಮಾರಕಾಸ್ತ್ರಗಳನ್ನು ಬಳಸಿ ಗವಿಸಿದ್ದಪ್ಪನ ಮೇಲೆ ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಮಾರಕ ಹಲ್ಲೆಗೊಳಗಾದ ಗವಿಸಿದ್ದಪ್ಪನನ್ನು ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಯಲಿಲ್ಲ. ಗವಿಸಿದ್ದಪ್ಪನನ್ನು ಕೊಲೆ ಮಾಡಿದ ಮೂವರ ತಂಡದಲ್ಲಿದ್ದ ಕೊಪ್ಪಳದ ಸಾದಿಕ್ ಎಂಬ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಪತಿಯನ್ನು ಪತ್ನಿ ನದಿಗೆ ತಳ್ಳಿದ ಕೇಸ್; ಬಾಲ್ಯವಿವಾಹವಾಗಿದ್ದ ತಾತಪ್ಪ ಅರೆಸ್ಟ್
ರಾಯಚೂರು: ಪತಿಯನ್ನು ಪತ್ನಿಯೇ ನದಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿ ಬಾಲ್ಯವಿವಾಹ ಆರೋಪದಲ್ಲಿ ತಾತಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಯಚೂರಿನ ಗುರ್ಜಾಪುರ ಬ್ಯಾರೇಜ್ ಬಳಿ ಪತ್ನಿಯೇ ಪತಿಯನ್ನು ಕೃಷ್ಣಾ ನದಿಗೆ ತಳ್ಳಿದ ಆರೋಪ ಕೇಳಿಬಂದಿತ್ತು. ಬಳಿಕ ಪತಿ ತಾತಪ್ಪ ಮೇಲೆ ಪೋಕ್ಸೊ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ತಾತಪ್ಪನನ್ನು ಇದೀಗ ರಾಯಚೂರಿನಲ್ಲಿ (Raichur News) ಪೊಲೀಸರು ಬಂಧಿಸಿದ್ದಾರೆ.
ಜು.21 ರಂದು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ತಾತಪ್ಪನನ್ನು ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿರುವ ಪೊಲೀಸರು, ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.
ಇನ್ನು ಅಪ್ರಾಪ್ತೆಯ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಯೋಜನೆಗಳ ಅಡಿ ಕೂಡಲೇ ಕ್ರಮ ಕೈಗೊಳ್ಳಬೇಕು, ಆ ಬಗ್ಗೆ ಆಯೋಗಕ್ಕೆ ವರದಿ ಕೊಡಬೇಕು ಅಂತ ರಾಯಚೂರು ಹಾಗೂ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಸೂಚಿಸಿದ್ದಾರೆ.
ಇದನ್ನೂ ಓದಿ: Physical Assault: ವಿದ್ಯಾರ್ಥಿನಿಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ ಪಿಜಿ ಮಾಲೀಕ
 
            