ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seikal Ramachandra Gowda: ಜೋಳ ಬೆಳೆದ ರೈತರಿಗೆ ವಂಚನೆಯಾದರೆ ಹೋರಾಟ ಖಚಿತ: ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ ದೌರ್ಜನ್ಯ ಮೇರೆ ಮೀರುತ್ತದೆ. ಜೋಳ ಬೆಳೆದ ರೈತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅನ್ಯಾಯವೇ ಇದಕ್ಕೆ ಸಾಕ್ಷಿ. ಶಿಡ್ಲಘಟ್ಟದಲ್ಲಿ ಶೇಕಡ 90 ಭಾಗ ರೈತರು ತಾವು ಬೆಳೆದ ರೇಷ್ಮೆಯನ್ನು ಇಲ್ಲಿನ ಮುಸ್ಲಿಮರಿಗೆ ಮಾಡುತ್ತಾರೆ ಎಂದು ಕೂಡ ಇಲ್ಲಿ ರೈತರ ಮೇಲೆ ಮುಸ್ಲಿಂ ಜನಾಂಗದಿಂದ ದೌರ್ಜನ್ಯವಾಗಲಿ ಅನ್ಯಾಯವಾಗಲಿ ನಡೆದಿಲ್ಲ ಎಂದರು

ಜೋಳ ಬೆಳೆದ ರೈತರಿಗೆ ವಂಚನೆಯಾದರೆ  ಹೋರಾಟ ಖಚಿತ

-

Ashok Nayak Ashok Nayak Oct 31, 2025 1:28 AM

ಚಿಕ್ಕಬಳ್ಳಾಪುರ: ಸಚಿವ ಜಮೀರ್ ಅಹಮದ್ ಕಡೆಯವರು ಪೆರೇಸಂದ್ರ ಭಾಗದ ರೈತರಿಗೆ ಪಾವತಿಸ ಬೇಕಾದ 1.70 ಲಕ್ಷ ಶೀಘ್ರದಲ್ಲಿ ರಾಮಕೃಷ್ಣಪ್ಪ ಅವರಿಗೆ ಕೊಡಬೇಕು. ಇಲ್ಲವಾದಲ್ಲಿ ಬಿಜೆಪಿ ಪಕ್ಷ ದಿಂದ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮ ಚಂದ್ರಗೌಡ( BJP District President Seikal Ramachandra Gowda)ತಿಳಿಸಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜನವಿರೋಧಿ ಅಷ್ಟೇ ಅಲ್ಲದೆ ರೈತ ವಿರೋಧಿ ಯು ಆಗಿದೆ ಎಂಬುದಕ್ಕೆ ಪೆರೇಸಂದ್ರ ರೈತರಿಗೆ ಆಗಿರುವ ಅನ್ಯಾಯವೇ ಸಾಕ್ಷಿ. ಸಚಿವ ಸ್ಥಾನದಲ್ಲಿ ರುವ ಜಮೀರ್ ಅಹಮದ್ ಸಮುದಾಯ ಪ್ರೀತಿಯಿಂದ ರೈತರಿಗೆ ವಂಚನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ರೈತರ ಹಣವನ್ನು ವ್ಯಾಪಾರಿ ಗಳಿಂದ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: ಶ್ರೀರಾಮ್ ಫೈನಾನ್ಸ್ ವತಿಯಿಂದ ೩೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿತರಣೆ ಶ್ರೀ ಮಂಗಳನಾಥ ಸ್ವಾಮೀಜಿ ಭಾಗಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಅವರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತರನ್ನು ಸಂಕಷ್ಟ ದೂಡಿದೆ. ಗ್ಯಾರಂಟಿ ಯೋಜನೆಗಳ ಮೇಲೆ ದೃಷ್ಟಿಯನ್ನು ಇಟ್ಟಿರುವ ಸರ್ಕಾರ ನೌಕರರ ಸಂಬಳವನ್ನು ಸಕಾಲದಲ್ಲಿ ನೀಡಿದಷ್ಟು ಹದಗೆಟ್ಟಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಸ್ತೆಗಳು ಗುಂಡಿ ಬಿದ್ದು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತ ಗಮನಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಕೈಕಟ್ಟಿ ಕುಳಿತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ ದೌರ್ಜನ್ಯ ಮೇರೆ ಮೀರುತ್ತದೆ. ಜೋಳ ಬೆಳೆದ ರೈತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅನ್ಯಾಯವೇ ಇದಕ್ಕೆ ಸಾಕ್ಷಿ. ಶಿಡ್ಲಘಟ್ಟದಲ್ಲಿ ಶೇಕಡ 90 ಭಾಗ ರೈತರು ತಾವು ಬೆಳೆದ ರೇಷ್ಮೆಯನ್ನು ಇಲ್ಲಿನ ಮುಸ್ಲಿಮರಿಗೆ ಮಾಡುತ್ತಾರೆ ಎಂದು ಕೂಡ ಇಲ್ಲಿ ರೈತರ ಮೇಲೆ ಮುಸ್ಲಿಂ ಜನಾಂಗದಿಂದ ದೌರ್ಜನ್ಯವಾಗಲಿ ಅನ್ಯಾಯವಾಗಲಿ ನಡೆದಿಲ್ಲ ಎಂದರು.

ಜೋಳದ ರಾಮಕೃಷ್ಣಪ್ಪ ಅವರ ವಿಚಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮವಹಿಸಿ ವಂಚಕರಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಹಗರಣಗಳಲ್ಲಿ ತೊಡಗಿಕೊಂಡು ರಾಜ್ಯದ ಜನರ ಬದುಕುನ್ನು ದುಸ್ಥಿತಿಗೆ ತಲುಪಿಸಿರುವ ರಾಜ್ಯ ಸರ್ಕಾರದ ಜನವಿರೋದಿ ನೀತಿಯ ವಿರುದ್ಧವಾಗಿ ರಾಜ್ಯದ ಜನತೆ ಬೀದಿಗಿಳಿಯುವ ದಿನಗಳು ದೂರವಿಲ್ಲ, ಇದನ್ನು ಮನಗಂಡು ಇನ್ನಾದರೂ ಜನಪರವಾಗಿ ಕೆಲಸ ಮಾಡಲಿ ಎಂದು ಟೀಕಿಸಿ ದರು.

ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ಮಾತನಾಡಿ, ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಹಗರಣ, ಅಭಿವೃದ್ಧಿ ನಿಗಮಗಳ ದುರ್ಬಳಕೆ, ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿರುವ ಜನಾಕ್ರೋಶ ಇತ್ಯಾದಿ ಲೋಪಗಳನ್ನು ಮುಚ್ಚಿಕೊಳ್ಳಲು ಮುಖ್ಯ ಮಂತ್ರಿಗಳ ಬದಲಾವಣೆ ಚರ್ಚೆ ಮುಂದಿಟ್ಟಿದ್ದಾರೆ.

ಎರಡುವರೆ ವರ್ಷದಲ್ಲಿ ರಾಜ್ಯದಲ್ಲಿ 980 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು ಇದಕ್ಕೆ ಪರಿಹಾರ ರೂಪದಲ್ಲಿ  ಸಂತ್ರಸ್ತರಿಗೆ ನೀಡಬೇಕಾದ 37ಕೋಟಿ ಹಣವೂ ಬಿಡುಗಡೆ ಮಾಡಲಾಗ ದಷ್ಟು ರಾಜ್ಯದ ಆರ್ಥಿಕತೆ ನಾಶವಾಗಿದೆ. ಜನತೆ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸ ಬಾರದು ಎಂದು ಮುಖ್ಯಮಂತ್ರಿ ಬದಲಾವಣೆ, ದಲಿತ ಸಿಎಂ ಘೋಷಣೆ ಇತ್ಯಾದಿ ಕೆಲಸಕ್ಕೆ ಬಾರದ ವಿಚಾರಗಳನ್ನು ಹರಿಯ ಬಿಟ್ಟಿದ್ದಾರೆ ಎಂದು ಬೇಸರಿಸಿದರು.

ರಾಜ್ಯದಲ್ಲಿ ನಾಲಾಯಕ್ ಗ್ರಹಮಂತ್ರಿ ಇದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ. ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಿಂತಿಲ್ಲ, ಆಸಿಡ್ ದಾಳಿಗೆ ತುತ್ತಾಗಿ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಹೊಂಡಗಳ ಸಿಟಿ ಆಗುತ್ತಿದೆ. ಹೊಂಡಗಳಿಂದಾಗಿ ತಮ್ಮದಲ್ಲದ ತಪ್ಪಿಗೆ ಬೆಂಗಳೂರು ನಗರ ಒಂದರಲ್ಲಿಯೇ 17ಮಂದಿ ಸತ್ತಿದ್ದಾರೆ ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಕ್ಕಿ ರೈತರು ಜನಸಾಮಾನ್ಯರು ಪರದಾಡುತ್ತಿದ್ದಾರೆ, ಈವರೆಗೆ ಅವರಿಗೆ ಪರಿಹಾರ ನೀಡಿಲ್ಲ, ರಾಜ್ಯದ ಎಲ್ಲಾ ಜಲಾಶಯಗಳ ಕ್ರೈಸ್ಟ್ ಗೇಟ್ ತುಕ್ಕು ಹಿಡಿದಿವೆ. ಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತ ಗಮನಹರಿಸದೆ ಮುಖ್ಯಮಂತ್ರಿ ಆಗಲು  ಹಗಲುಗನಸು ಕಾಣುತ್ತಿದ್ದಾರೆ ಎಂದು ಕಾಲೆಳೆದರು.

ಗ್ಯಾರೆಂಟಿಗಳ ಕಾರಣಕ್ಕಾಗಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮಹಾ ನಗರ ಪಾಲಿಕೆ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಹಣವನ್ನು 4 ತಿಂಗಳಿಂದ ನೀಡಿಲ್ಲ. ಪೊಲೀಸ್ ಇಲಾಖೆಯಲ್ಲಿ ಡೀಸೆಲ್ ಹಾಕಿಸಲು ಹಣ ಇಲ್ಲದೆ ಬರಬಾದ್ ಆಗಿದೆ.  ಒಂದು ಕ್ವಿಂಟಾಲ್  ಈರುಳ್ಳಿ ಬೆಳೆಯಲು 1500  ರಿಂದ 1600 ಖರ್ಚು ಆಗುತ್ತಿದೆ, ಕಷ್ಟಪಟ್ಟು ಬೆಳೆದ ರೈತ ಮಾರುಕಟ್ಟೆಗೆ ಬಂದಾಗ ಕ್ವಿಂಟಾಲ್ ಈರುಳ್ಳಿ ಬೆಲೆ 700 ಇದೆ. ಹೇಗೆ ರೈತರು ಬದು ಕೋದು, ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಕಿದರು.

1999ರಲ್ಲಿ  ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು .ಆದರೆ ದಲಿತ ಎಂಬ ಕಾರಣಕ್ಕೆ ನಿರಾಕರಿಸಿ ಎಸ್ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡಿದರು. ಇದರಂತೆ 2004, 2014, 2018, 2023ರಲ್ಲಿ ಅವಕಾಶ ಇತ್ತು. ದಲಿತರನ್ನು ಕನಿಷ್ಠ ಉಪಮುಖ್ಯಮಂತ್ರಿ ಮಾಡದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡುತ್ತಾ ಮಾಡುವುದಿಲ್ಲ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ. ಮಾತ್ರ ದಲಿತ ಮುಖ್ಯಮಂತ್ರಿ ಪ್ರಸ್ತಾಪ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು .

ರಾಜ್ಯದ 10ವರ್ಷಗಳ  ಬಿಜೆಪಿ ಆಡಳಿತದಲ್ಲಿ ಗೋವಿಂದಕಾರಜೋಳ ಅವರನ್ನು ಉಪಮುಖ್ಯ ಮಂತ್ರಿ ಮಾಡಿದೆ.ಆದರೆ ಕಾಂಗ್ರೆಸ್ ಇಂದು ದಲಿತ ದಲಿತರ ನಡುವೆ ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದರು.

ಕಾರ್ಮಿಕ ಇಲಾಖೆಯಲ್ಲಿ 118ಕೋಟಿ ಹಣ ದುರುಪಯೋಗದ ಬಗ್ಗೆ ಸಿಎಜಿ ವರದಿಯಲ್ಲಿ ಇದೆ.ಇದರ ಮಂತ್ರಿಗಳ ಮೇಲೆ ಈವರೆಗೆ ಕ್ರಮವಾಗಿಲ್ಲ. ಶಾಲಾ ಸಮವಸ್ತ್ರ ನೀಡಲು ಸರಕಾರದ ಬಳಿ ಹಣ ಇಲ್ಲ. ಕಾಂಗ್ರೆಸ್ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಎರಡುವರೆ ವರ್ಷದಲ್ಲಿ ಈ ಸರ್ಕಾರದಿಂದ ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ.. ಬಿಹಾರ ಚುನಾವಣೆ ಖರ್ಚಿಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.

ಚಿಕ್ಕಬಳ್ಳಾಪುರ ಅಂತ ಹೇಳಲು ನಾಚಿಕೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು  ಇಲ್ಲಿನ ವಿದ್ಯಾರ್ಥಿಗಳು ನನಗೆ ಹೇಳುತ್ತಾರೆ. ಗೌರವಯುತವಾಗಿ ಇದ್ದ ಕ್ಷೇತ್ರವನ್ನು ನಗೆಪಾಟಲಿಗೆ ಈಡಾಗುವಂತೆ ಮಾಡಿದ ಪುಣ್ಯಾತ್ಮ ಯಾರು? ಎಂದ ಅವರು ಎಂತಹ ನಾಲಾಯಕ್ ಶಾಸಕರನ್ನು ಇವರು ಆಯ್ಕೆ ಮಾಡಿ ದ್ದಾರೆ ಎಂದು ದೂರುವಂತಾಗಿದೆ. ಇವರು ಅಭಿವೃದ್ಧಿ ಮಾಡುವ ಬದಲು ಬಫೂನ್ ಆಟ ಆಡುತ್ತಿದ್ದಾರೆ. 

ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯದ ಒಗ್ಗಟ್ಟು ಮುರಿಯಲು ಪ್ರಯತ್ನಿಸಿದಾಗ ಬಿಜೆಪಿ ಪಕ್ಷವು ಕನ್ಹೇರಿ ಸ್ವಾಮೀಜಿ ಪರ ನಿಲ್ಲಲಾಗಿದೆ ಎಂದರು.

ಈ ವೇಳೆ ರಾಜ್ಯ ವಕ್ತಾರಾದ ಹೆಚ್.ಎನ್.ಚಂದ್ರಶೇಖರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮರಳಕುಂಟೆ ಕೃಷ್ಣಮೂರ್ತಿ, ಮುಖಂಡ ರಾದ ಗರಿಗರೆಡ್ಡಿ, ಬೈರೆಗೌಡ, ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಪಧಾದಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.