Vilas Huddar Column: ಮಂತ್ರಾಲಯ ಸುತ್ತಮುತ್ತ
ಮಂತ್ರಾಲಯ ಪ್ರವೇಶಿಸುತ್ತಿದಂತೆ, ಅಭಯಾಂಜನೇಯ ದೇಗುಲ ಕಾಣಿಸುತ್ತದೆ. ಇಲ್ಲಿ ಆಂಜನೇಯನು ತನ್ನ ಬಲಗೈಯನ್ನು ಎತ್ತಿಹಿಡಿದು ತನ್ನ ಎಲ್ಲರಿಗೂ ಆಭಯ ನೀಡುವಂತೆ ಹಸ್ತವನ್ನು ತೋರಿಸುತ್ತಿದ್ದರೆ, ಎಡಗೈಯಲ್ಲಿ ಅವನ ಆಯುಧ ಗದೆ ಹಿಡಿದಿದ್ದಾನೆ. ಈ ಶಿಲಾವಿಗ್ರಹದ ಎತ್ತರ 33 ಅಡಿ
ವಿಲಾಸ ನಾ. ಹುದ್ದಾರ
ರಾಘವೇಂದ್ರ ಸ್ವಾಮಿಯವರು ಮಂತ್ರಾಲಯಕ್ಕೆ ಬರುವ ಮೊದಲು ಸುತ್ತಮುತ್ತಲಿರುವ ಕೆಲವು ಸ್ಥಳಗಳಲ್ಲಿ ತಮ್ಮ ಸಾಧನೆಯನ್ನು ಕೈಗೊಂಡಿದ್ದರು. ಅಂತಹ ಕೆಲವು ಸ್ಥಳಗಳನ್ನು ನೋಡುವ ಅವಕಾಶ ಈಚೆಗೆ ದೊರಕಿತು. ಮಂತ್ರಾಲಯ ಪ್ರವೇಶಿಸುತ್ತಿದಂತೆ, ಅಭಯಾಂಜನೇಯ ದೇಗುಲ ಕಾಣಿಸುತ್ತದೆ. ಇಲ್ಲಿ ಆಂಜನೇಯನು ತನ್ನ ಬಲಗೈಯನ್ನು ಎತ್ತಿಹಿಡಿದು ತನ್ನ ಎಲ್ಲರಿಗೂ ಆಭಯ ನೀಡುವಂತೆ ಹಸ್ತವನ್ನು ತೋರಿಸುತ್ತಿದ್ದರೆ, ಎಡಗೈಯಲ್ಲಿ ಅವನ ಆಯುಧ ಗದೆ ಹಿಡಿದಿದ್ದಾನೆ. ಈ ಶಿಲಾವಿಗ್ರಹದ ಎತ್ತರ 33 ಅಡಿ.
ಬಿಚ್ಚಾಲೆ
ಬಿಚ್ಚಾಲೆ ಅನ್ನುತ್ತಿದ್ದಂತೆಯೇ ನಮ್ಮ ಕಣ್ಣುಗಳ ಮುಂದೆ ಅಪ್ಪಣ್ಣಾಚಾರ್ಯರು ಬರು ವರು. ಗುರು ರಾಘವೇಂದ್ರ ಸ್ತೋತ್ರ ರಚಿಸಿದ ಮಹಾತ್ಮರು ಇವರು. ಸಾಧಾರಣವಾಗಿ ಜನರು ಈ ಸ್ತೋತ್ರ ವನ್ನು ಆಷ್ಟೋತ್ತರದ ರೂಪದಲ್ಲಿ ಪಠಿಸುತ್ತ ಮೋಕ್ಷದ ಮಾರ್ಗದಲ್ಲಿ ಪಯಣಿಸುವ ಸತತ ಪ್ರಯತ್ನ ಮಾಡುತ್ತಿರುತ್ತಾರೆ.
ಇದನ್ನೂ ಓದಿ: Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್ ಸ್ಲ್ಯಾಬ್ ಇರುವುದೇತಕ್ಕೆ ?!
ಬಿಚ್ಚಾಲೆಯಲ್ಲಿರುವ ಬೃಂದಾವನದ ಆವರಣದಲ್ಲಿ ನಮಗೆ ಮೊದಲಿಗೆ ಕಂಡುಬರುವದು ರಾಯರಿ ಗಾಗಿ ಬಳಸುತ್ತಿದ್ದ ಒರಳು ಕಲ್ಲು. ಆಮೇಲೆ ಗಣಪತಿ ಮತ್ತು ಸುಬ್ರಹ್ಮಣ್ಯ ದೇವರ ಪುಟ್ಟ ದೇವಾ ಲಯ. ನಂತರ ನಾಗಗಳ ಕಟ್ಟೆ ಮತ್ತು ಈಶ್ವರಲಿಂಗ, ನಂದಿ. ಅದರ ಪಕ್ಕದಲ್ಲಿಯೇ ಅಪ್ಪಣ್ಣಾ ಚಾರ್ಯರು ಪ್ರತಿಷ್ಠಾ ಪನೆ ಮಾಡಿದ ರಾಘವೇಂದ್ರ ಸ್ವಾಮಿಗಳ ಅವರ ಏಕಶಿಲಾ ಬೃಂದಾವನವಿದೆ.
ಅದೇ ಆವರಣದಲ್ಲಿ ವ್ಯಾಸರಾಯರು ಪ್ರತಿಷ್ಠಾಪಿಸಿದ ಪ್ರಾಣದೇವರು ಕಂಡುಬರುತ್ತಾರೆ. ಬೃಂದಾ ವನದ ಹಿಂದೆ ಇರುವದೇ ಗುರುರಾಯರ ಜಪದ ಕಟ್ಟೆ. ಆಶ್ವತ್ಥ ಮರದ ಕೆಳಗಿರುವ ಈ ಕಟ್ಟೆಯ ಮೇಲೆಯೇ ರಾಯರು ಕುಳಿತು ಸುಮಾರು 13 ವರ್ಷ ಜಪ ಮಾಡುತ್ತಿದ್ದರು.
ಬಂಡೆಕಲ್ಲುಗಳ ವಿನ್ಯಾಸ
ಜಪದಕಟ್ಟೆಯ ಬಲಭಾಗದಲ್ಲಿರುವ ಮೆಟ್ಟಿಲು ಗಳನ್ನು ಏರಿ ಹೋದರೆ ಕಾಣುವದೇ ಬಿಚ್ಚಾಲೆ ಗ್ರಾಮದ ಗ್ರಾಮದೇವತೆ ಬಿಚ್ಚಾಲಮ್ಮನ ದೇವಸ್ಥಾನ. ಈ ದೇವಸ್ಥಾನದ ಕಟ್ಟಡ ನಿರ್ಮಿಸುವಾಗ, ಬಾಳೆಹಣ್ಣು ಮತ್ತು ಬೆಲ್ಲವನ್ನು ಉಪಯೋಗಿಸಲಾಗಿದೆ ಎಂದು ಅಲ್ಲಿರುವ ಫಲಕದಲ್ಲಿ ಬರೆಯ ಲಾಗಿತ್ತು. ರಾಯರ ಏಕಶಿಲಾ ಬೃಂದಾವನವು ತುಂಗಭದ್ರಾ ನದಿ ತೀರದಲ್ಲಿದೆ. ಪಕ್ಕದಲ್ಲೇ ಹರಿಯು ತ್ತಿದ್ದ ತುಂಗಭದ್ರಳು ನಯನ ಮನೋಹರವಾಗಿ ಕಂಗೊಳಿಸುತ್ತಿದ್ದಳು. ನದಿ ವಿಹಾರ ಮಾಡಲು ಅಲ್ಲಿ ತೆಪ್ಪವೂ ಇತ್ತು. ಸಂಜೆಯ ಹೊತ್ತಿನಲ್ಲಿ ಇಲ್ಲಿನ ನದಿಯಲ್ಲಿ ಹರಡಿರುವ ಬಂಡೆಕಲ್ಲುಗಳ ವಿನ್ಯಾಸವನ್ನು ನೋಡುತ್ತಾ ಕುಳಿತರೆ, ಕಾಲದ ಪರಿವೆಯೇ ಅರಿವಾಗದು!
ಅಪ್ಪಣ್ಣಾಚಾರ್ಯರ ಮನೆ
ರಾಯರು ಅಪ್ಪಣ್ಣಾಚಾರ್ಯರ ಮನೆಯಲ್ಲಿ ಸುಮಾರು 13 ವರ್ಷ ತಂಗಿದ್ದು, ಮೂಲರಾಮನ ಪೂಜೆಯನ್ನು ಮಾಡುತ್ತಿದ್ದರು. ನಾವು ಅವರು ಮಲಗುತ್ತಿದ್ದ ಸ್ಥಳಕ್ಕೆ ನಮಿಸಿದೆವು. ಒಳಗಡೆಯ ಕೋಣೆಯಲ್ಲಿದ್ದ ರಾಯರು ಪೂಜಿಸುತ್ತಿದ್ದ ವಿಠಲನ ಮೂರ್ತಿ ಇದೆ. ಅದೇ ಕೋಣೆಯಲ್ಲಿ ಅಪ್ಪಣ್ಣಾ ಚಾರ್ಯರು ಪೂಜಿಸುತ್ತಿದ್ದ ಬಿಚ್ಚಾಲೆ ನಾಗಪ್ಪ ( ಕೃಷ್ಣ ಸರ್ಪ), ಈಗಲೂ ಜಾಗೃತ ವಾಗಿರುವ ದರ್ಶನದ ಭಾಗ್ಯವೂ ನಮದಾಯಿತು.
ಪಂಚಮುಖಿ ಆಂಜನೇಯ
ಗಾಣದಾಳ ಗ್ರಾಮದಲ್ಲಿರುವ ಪಂಚಮುಖಿ ಆಂಜನೇಯನ ದೇವಸ್ಥಾನದಲ್ಲಿರುವ ಫಲಕದಲ್ಲಿದ್ದ ಮಾಹಿತಿ ಪ್ರಕಾರ ಗುರು ರಾಘವೇಂದ್ರರು ಅಲ್ಲಿರುವ ಗುಹೆಯಲ್ಲಿ 12 ವರ್ಷ ತಪಸ್ಸು ಮಾಡಿದ್ದರು. ಪಂಚಮುಖಿ ಪ್ರಾಣದೇವರು ಬಂಡೆಯಲ್ಲಿ (ಶಿಲೆ) ಒಡಮೂಡಿದ್ದಾರೆ (ನೈಸರ್ಗಿಕವಾಗಿ ಕಾಣಿಸಿ ಕೊಂಡಿದ್ದಾರೆ).
ನೈಸರ್ಗಿಕ ಅದ್ಭುತ
ಪಂಚಮುಖಿ ಪ್ರಾಣದೇವರ ದೇವಸ್ಥಾನದ ಹಿಂದುಗಡೆ ಲಕ್ಷ್ಮೀ ಮಂದಿರವಿದೆ. ಆ ಮಂದಿರಕ್ಕೆ ಹೋಗುವಾಗ ಎರಡು ನೈಸರ್ಗಿಕ ಅದ್ಭುತಗಳು ಕಾಣಸಿಗುತ್ತವೆ. ಒಂದರ ಮೇಲೊಂದು ಕೂಳಿತ ಮೂರು ಬೃಹದಾಕಾರದ ಬಂಡೆಗಳ ಮೇಲೆ ನಡುಮಧ್ಯೆ ಒಂದು ಚಿಕ್ಕ ಬಂಡೆ ಮತ್ತು ಅಂಚಿಗೆ ಸ್ವಲ್ಪ ದೊಡ್ಡದಾದ ಬಂಡೆ, ಈ ಎರಡೂ ಬಂಡೆಗಳ ಮೇಲೆ ಸಮತೋಲನದಿಂದ ಕುಳಿತ ಇನ್ನೊಂದು ದೊಡ್ಡ ಗಾತ್ರದ ಬಂಡೆ. ಇನ್ನೊಂದು ಕಡೆ ಹಾಸಿಗೆಯಂತೆ ಕಾಣುತ್ತ ಮಲಗಿರುವ ಒಂದು ದೊಡ್ಡ ಬಂಡೆ, ಅದರ ಒಂದು ಪಾರ್ಶ್ವದ ಮೇಲೆ ಚಿಕ್ಕ ಬಂಡೆ, ಈ ಎರಡೂ ಬಂಡೆಗಳ ಮೇಲೆ ಚಾಚಿದ ಇನ್ನೊಂದು ಬಂಡೆ.
ಹಾಸಿಗೆ ಮತ್ತು ದಿಂಬು ಎಂದು ಆ ಕೆಳಗಿನ ಬಂಡೆಯ ಮೇಲೆ ಬರೆದಿದ್ದಾರೆ. ಪಂಚಮುಖಿ ಆಂಜನೇ ಯನ ದೇಗುಲದ ಸುತ್ತಲೂ ಇರುವ ಹಲವು ವಿಚಿತ್ರಾಕಾರದ ಬೃಹತ್ ಬಂಡೆಗಳು ಅಲ್ಲಿ ಪ್ರಕೃತಿಯೇ ಕಡೆದಿಟ್ಟ ವಿಗ್ರಹಗಳಂತೆ ತಲೆ ಎತ್ತಿದ್ದವು. ಆ ಬಂಡೆಗಳೂ ಸಹ ಮಂತ್ರಾಲಯ ಯಾತ್ರೆಯ ಭಾಗವಾಗುವ ಅರ್ಹತೆ ಪಡೆದಿವೆ.