ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಭಾರತ-ಆಸೀಸ್‌ ಕ್ರಿಕೆಟ್ ಸರಣಿ; 1,72,000ಕ್ಕೂ ಅಧಿಕ ಟಿಕೆಟ್‌ ಮಾರಾಟ

Australia-India series: ಶುಕ್ರವಾರ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಫೋಟೊ ಸೆಶನ್‌ನಲ್ಲಿ ಭಾರತೀಯ ಆಟಗಾರರಾದ ನಿತೀಶ್ ರೆಡ್ಡಿ ಹಾಗೂ ಧ್ರುವ ಜುರೆಲ್‌ರೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯ -ಭಾರತ ನಡುವಿನ ಬಿಳಿ ಚೆಂಡಿನ ಪಂದ್ಯಗಳ ಸ್ಮರಣೀಯ ಕ್ಷಣಗಳ ಪೋಸ್ಟರ್ ಎದುರು ಆಟಗಾರರು ಫೋಟೊಕ್ಕೆ ಪೋಸ್ ನೀಡಿದರು.

ಭಾರತ-ಆಸೀಸ್‌ ಕ್ರಿಕೆಟ್ ಸರಣಿ; 1,72,000ಕ್ಕೂ ಅಧಿಕ ಟಿಕೆಟ್‌ ಮಾರಾಟ

-

Abhilash BC Abhilash BC Oct 18, 2025 9:07 AM

ಸಿಡ್ನಿ: ಈ ಬಾರಿಯ ಭಾರತ ಮತ್ತು ಆಸ್ಟ್ರೇಲಿಯಾ(IND vs AUS) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಹಿಂದೆಂದಿಗಿಂತಲೂ ಭಾರೀ ಕುತೂಹಲ ಕೆರಳಿಸಿದ್ದು, ಈಗಾಗಲೇ 1,75,000 ಟಿಕೆಟ್‌ಗಳು ಮಾರಾಟವಾಗಿವೆ. ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿಗೆ ಇದು ಕೊನೆಯ ಆಸೀಸ್‌ ಪ್ರವಾಸ ಎಂಬ ಕಾರಣ. ಸರಣಿಗೂ ಮುನ್ನವೇ ಕೊಹ್ಲಿ ಮತ್ತು ರೋಹಿತ್‌ ಪಾಲಿಗೆ ಆಸೀಸ್‌ ಸರಣಿಯೇ(Australia-India series) ಅಂತಿಮವಾಗಿದ್ದು, ಈ ಸರಣಿ ಬಳಿಕ ಅವರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

ಅಲ್ಲದೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಕೂಡ ಕೊಹ್ಲಿ ಮತ್ತು ರೋಹಿತ್‌ಗೆ ಸ್ಮರಣೀಯ ವಿದಾಯ ನೀಡಲು ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿತ್ತು. ಹೀಗಾಗಿ ಅಭಿಮಾನಿಗಳು ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಪಂದ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಮೊದಲ ಪಂದ್ಯ ಭಾನುವಾರ ಪರ್ತ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

ಶುಕ್ರವಾರ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಫೋಟೊ ಸೆಶನ್‌ನಲ್ಲಿ ಭಾರತೀಯ ಆಟಗಾರರಾದ ನಿತೀಶ್ ರೆಡ್ಡಿ ಹಾಗೂ ಧ್ರುವ ಜುರೆಲ್‌ರೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯ -ಭಾರತ ನಡುವಿನ ಬಿಳಿ ಚೆಂಡಿನ ಪಂದ್ಯಗಳ ಸ್ಮರಣೀಯ ಕ್ಷಣಗಳ ಪೋಸ್ಟರ್ ಎದುರು ಆಟಗಾರರು ಫೋಟೊಕ್ಕೆ ಪೋಸ್ ನೀಡಿದರು.

ಇದನ್ನೂ ಓದಿ Kiran Navgire: ಟಿ20ಯಲ್ಲಿ ವಿಶ್ವ ದಾಖಲೆಯ ಶತಕ ಬಾರಿಸಿದ ಕಿರಣ್ ನವಗಿರೆ

ಮುಖಾಮುಖಿ

ಏಕದಿನ ಮಾದರಿಯಲ್ಲಿ ಇತ್ತಂಡಗಳು ಈವರೆಗೂ ಒಟ್ಟು 152 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಪೈಕಿ ಭಾರತ 58 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದುಕೊಂಡಿದೆ. ಹತ್ತು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.