Yagati Raghu Naadig Column: ಆಸೆಯೇ ದುಃಖಕ್ಕೆ ಮೂಲ..!!
‘ಹೇಗೂ ಅಲ್ಲೇ ಯಾರದ್ದಾದರೂ ಜೇಬನ್ನು ಕತ್ತರಿಸಿ ದರಾಯ್ತು’ ಎಂಬ ಆತ್ಮವಿಶ್ವಾಸಭರಿತ ಗ್ರಹಿಕೆಯಲ್ಲಿ ಹೆಚ್ಚಿನ ಹಣವನ್ನೂ ಆತ ತೆಗೆದು ಕೊಂಡು ಹೋಗಲಿಲ್ಲ. ಆದರೆ ಅಲ್ಲಿಗೆ ಹೋದ ಮೇಲೆ ಗೊತ್ತಾಯ್ತು ಅಲ್ಲಿನ ‘ಭಕ್ತಾದಿಗಳು’ ನಮ್ಮವರಿಗಿಂಯ ಭಾರಿ ಹುಷಾರು, ಅಷ್ಟು ಸುಲಭ ವಾಗಿ ಜೇಬುಕಟಾವಿಗೆ ಒಳಗಾಗುವವ ರಲ್ಲ ಅಂತ. ಹೀಗೆ ಜ್ಞಾನೋದಯವಾಗುವ ಹೊತ್ತಿಗೆ ಖರ್ಚಿಗೆಂದು ಇದ್ದ ವಿದೇಶಿ ವಿನಿಮ ಯದ ಹಣವೂ ಖರ್ಚಾಗುತ್ತಾ ಬಂದು, ಊಟ- ತಿಂಡಿಗೂ ತತ್ವಾರವಾಗುವ ಸ್ಥಿತಿ ಒದಗಿ ಬರುವ ಎಲ್ಲಾ ಲಕ್ಷಣಗಳೂ ಆಲೂಪ್ರಸಾದ್‌ಗೆ ಕಾಣಿಸಿಕೊಳ್ಳಲಾ ರಂಭಿಸಿದವು


ಯಗಟಿ ರಘು ನಾಡಿಗ್
ವಿದೇಶದಲ್ಲಿ ‘ಜೇಬುಕಟಾವು’ ಹೇಗೆ ಮಾಡುತ್ತಾರೆಂದು ತಿಳಿದುಕೊಳ್ಳುವ ಬಯಕೆಯಾಯ್ತು ನಮ್ಮ ಕಥಾನಾಯಕ ಆಲೂಪ್ರಸಾದ್ ಜಾಧವ್‌ಗೆ. ಸರಿ, ಹೇಗೋ ಮಾಡಿ ಲಂಡನ್‌ಗೆ ಹೋ ಗುವ ವ್ಯವಸ್ಥೆಯನ್ನು ಮಾಡಿಕೊಂಡ. ‘ಹೇಗೂ ಅಲ್ಲೇ ಯಾರದ್ದಾದರೂ ಜೇಬನ್ನು ಕತ್ತರಿಸಿ ದರಾಯ್ತು’ ಎಂಬ ಆತ್ಮವಿಶ್ವಾಸಭರಿತ ಗ್ರಹಿಕೆಯಲ್ಲಿ ಹೆಚ್ಚಿನ ಹಣವನ್ನೂ ಆತ ತೆಗೆದು ಕೊಂಡು ಹೋಗಲಿಲ್ಲ. ಆದರೆ ಅಲ್ಲಿಗೆ ಹೋದಮೇಲೆ ಗೊತ್ತಾಯ್ತು ಅಲ್ಲಿನ ‘ಭಕ್ತಾದಿಗಳು’ ನಮ್ಮವರಿಗಿಂಯ ಭಾರಿ ಹುಷಾರು, ಅಷ್ಟು ಸುಲಭವಾಗಿ ಜೇಬುಕಟಾವಿಗೆ ಒಳಗಾಗುವವ ರಲ್ಲ ಅಂತ. ಹೀಗೆ ಜ್ಞಾನೋದಯವಾಗುವ ಹೊತ್ತಿಗೆ ಖರ್ಚಿಗೆಂದು ಇದ್ದ ವಿದೇಶಿ ವಿನಿಮ ಯದ ಹಣವೂ ಖರ್ಚಾಗುತ್ತಾ ಬಂದು, ಊಟ- ತಿಂಡಿಗೂ ತತ್ವಾರವಾಗುವ ಸ್ಥಿತಿ ಒದಗಿ ಬರುವ ಎಲ್ಲಾ ಲಕ್ಷಣಗಳೂ ಆಲೂಪ್ರಸಾದ್‌ಗೆ ಕಾಣಿಸಿಕೊಳ್ಳಲಾರಂಭಿಸಿದವು.
ವಾಪಸ್ಸಾಗುವ ತನಕ ಜೀವವನ್ನು ಹಿಡಿದುಕೊಂಡಿದ್ದರೆ ಸಾಕು ಎಂಬ ತೀರ್ಮಾನಕ್ಕೆ ಬಂದ ನಮ್ಮ ಈ ಕಥಾನಾಯಕ, ಆದಷ್ಟು ಕಡಿಮೆ ರೇಟಿನ ಹೋಟೆಲುಗಳನ್ನು ಹುಡುಕಿಕೊಂಡು ಹೊರಟ. ಆಶ್ಚರ್ಯವೆಂಬಂತೆ ಅಂಥದ್ದೊಂದು ಹೋಟೆಲು ಅವನಿಗೆ ಕಾಣಿಸಿತು.
ಇದನ್ನೂ ಓದಿ:Narada Sanchara: ಬೆಲೆಯೇರಿಕೆಯ ಪರ್ವ!
ಹೋಟೆಲು ಪ್ರವೇಶಿಸುತ್ತಿದ್ದಂತೆಯೇ ಅವನಿಗೆ ‘ಯುರೋಪಿಯನ್’, ‘ಚೈನೀಸ್’ ಹಾಗೂ ‘ಇಂಡಿಯನ್’ ಎಂಬ 3 ವಿಭಾಗಗಳ ಫಲಕಗಳು ಕಾಣಿಸಿದವು. ಆಲೂಪ್ರಸಾದ್ ‘ಇಂಡಿ ಯನ್’ ವಿಭಾಗವನ್ನು ಪ್ರವೇಶಿಸಿದ. ಅಲ್ಲೂ ಅವನಿಗೆ ‘ಸಸ್ಯಾಹಾರಿ’ ಮತ್ತು ‘ಮಾಂಸಾಹಾರಿ’ ಎಂಬ ಮತ್ತೆರಡು ಫಲಕಗಳು ಕಾಣಿಸಿದವು.
ಅಲೂಪ್ರಸಾದ್ ‘ಸಸ್ಯಾಹಾರಿ’ ವಿಭಾಗವನ್ನು ಎಡಗಾಲು ಮುಂದಿಟ್ಟು ಪ್ರವೇಶಿಸಿದ. ಮುಂದುವರಿದಂತೆ ಅಲ್ಲಿ ಅವನಿಗೆ ‘ನಾರ್ತ್ ಇಂಡಿಯನ್’ ಮತ್ತು ‘ಸೌತ್ ಇಂಡಿಯನ್’ ಎಂಬ ಮತ್ತೆರಡು ಫಲಕಗಳು ಕಾಣಿಸಿದವು. ಆತ ‘ಸೌತ್ ಇಂಡಿಯನ್’ ವಿಭಾಗವನ್ನು ಪ್ರವೇಶಿಸಿದ. ಅಲ್ಲಿ ಮತ್ತೆ ‘ಆಂಧ್ರ ಸ್ಟೈಲ್’, ‘ತಮಿಳುನಾಡು ಸ್ಟೈಲ್’ ಮತ್ತು ‘ಉಡುಪಿ ಹೋಟೆಲ್’ ಎಂಬ ಮೂರು ವಿಭಿನ್ನ ಫಲಕಗಳು ಕಾಣಿಸಿಕೊಂಡವು.
ಖುಷಿಗೊಂಡ ನಮ್ಮ ಹೀರೋ ‘ಉಡುಪಿ ಹೋಟೆಲ್’ ವಿಭಾಗಕ್ಕೆ ಹೋದರೆ, ಅಲ್ಲಿ ‘ಅಪ್ಪಟ ತುಪ್ಪದ ವಿಭಾಗ’ ಮತ್ತು ‘ಸೂರ್ಯಕಾಂತಿ ಎಣ್ಣೆ ವಿಭಾಗ’ ಎಂಬ ಮತ್ತೆರಡು ಫಲಕಗಳು ಕಾಣಿಸಿಕೊಂಡವು. ‘ಸರಿ, ಎಲ್ಲಾ ನನ್ನ ಲೆವೆಲ್‌ಗೇ ಬರೋ ಹಂಗೈತೆ’ ಅಂದುಕೊಂಡೇ ಆಲೂಪ್ರಸಾದ್ ‘ಸೂರ್ಯ ಕಾಂತಿ ಎಣ್ಣೆ’ ವಿಭಾಗವನ್ನು ಪ್ರವೇಶಿಸಿದರೆ, ಅಲ್ಲಿ ‘ಕ್ಯಾಷ್’ ಮತ್ತು ‘ಕ್ರೆಡಿಟ್’ ಎಂಬ ಮತ್ತೆರಡು ಫಲಕಗಳು ಕಾಣಿಸಬೇಕೇ?!!
“ವಾವ್, ‘ಕ್ರೆಡಿಟ್ ವಿಭಾಗ’ಕ್ಕೆ ಹೋದರೆ ನಯಾಪೈಸೆಯನ್ನೂ ಕೊಡೋ ಹಾಗಿಲ್ಲ..... ಯಾರ ಪ್ಪಾ ಈ ಬೋರ್ಡು ಹಾಕಿಸಿರುವ ಪುಣ್ಯಾತ್ಮಾ..?" ಎಂದು ತನಗೆ ತಾನೇ ಹೇಳಿಕೊಂಡು ಶಿಳ್ಳೆ ಹಾಕುತ್ತಲೇ ‘ಕ್ರೆಡಿಟ್ ವಿಭಾಗ’ಕ್ಕೆ ಹೋದ. ಅಲ್ಲಿಗೆ ಹೋಗುತ್ತಲೇ, ದಪ್ಪ ದಪ್ಪನಾಗಿ ಕೆಂಪು ಕೆಂಪು ಅಕ್ಷರಗಳಲ್ಲಿ ಹೀಗೆ ಬರೆದಿದ್ದು ಕಾಣಿಸಿತು: ಆಹಾಹಾಹ! ಬಂದ್ಬಿಟ್ಟ ದೊರೆ ಮೊಮ್ಮಗ ಪುಗಸಟ್ಟೆ ತಿನ್ನೋಕೆ... ಮುಚ್ಕೊಂಡು ಮರ್ಯಾದೆಯಾಗಿ ಆಚೆಗೆ ಹೋಗೋ ಲೇ... ನಿನ್ನಜ್ಜೀ...!!