Beluru Raamamurthy Column: ಜ್ಞಾನಾಧಾರಿತ ಜೀವನ ಕ್ರಮ
ಇನ್ನೊಂದು ವಚನದಲ್ಲಿ ನಮಗೆ ಯಾವ ಯಾವ ಸಮಯಕ್ಕೆ ಯಾವ ಯಾವ ರೀತಿಯ ಜ್ಞಾನ ಇರ ಬೇಕೋ ಅದು ಇರಬೇಕು. ಸಾಫ್ಟ್ʼವೇರ್ ಇಂಜಿನಿಯರ್ ಎಂದುಕೊಂಡವನು ಎಮ್ಮೆ ಮೇಯಿ ಸೋಕೆ ಹೋಗಬಾರದು. ಎಮ್ಮೆ ಮೇಯಿಸುವವನು ಅಡುಗೆ ಕೆಲಸಕ್ಕೆ ಹೋಗಬಾರದು. ಯಾವ ಕೆಲಸವೋ ಅದಕ್ಕೆ ತಕ್ಕ ಜ್ಞಾನ, ಯಾವ ಜ್ಞಾನವೋ ಅದಕ್ಕೆ ತಕ್ಕ ಕೆಲಸ ಎನ್ನುವುದನ್ನು ಈ ವಚನದಲ್ಲಿ ಬಹು ಸೊಗಸಾಗಿ ಹೇಳಿದ್ದಾನೆ.
-
ಬೇಲೂರು ರಾಮಮೂರ್ತಿ
ಜ್ಞಾನ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತದೆ. ಜ್ಞಾನವಿದ್ದರೆ ಸರಿಯಾದ ರೀತಿಯಲ್ಲಿ ಹಣ ಸಂಪಾದನೆ ಮಾಡಬಹುದು, ಸರಿಯಾದ ರೀತಿಯಲ್ಲಿ ಜೀವನ ಮಾಡಬಹುದು, ಉಳಿಸಬಹುದು, ಆಸ್ತಿ ಮಾಡಬಹುದು.
ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಮಾತಿದೆ. ಆದರೆ ಯಾವುದೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಮೊದಲಿಂದ ಕೊನೆಯವರೆಗೂ ಒಂದೇ ರೀತಿಯ ಉದ್ಯೋಗದಲ್ಲಿ ಇರುವವರು ಬಹಳ ಕಡಿಮೆ. ಹೀಗಾಗಿ ಆಗಾಗ ಬದಲಾಗುವ ಉದ್ಯೋಗದ ರೀತಿ ನೀತಿಗಳಿಗೆ ಹೊಂದಿಕೊಳ್ಳುವುದು ಅವಶ್ಯಕ. ತಿಂಗಳ ಸಂಬಳದ ಉದ್ಯೋಗ ಮಾಡುತ್ತಿರುವವರು ಕೆಲಸ ಬಿಟ್ಟು ಸ್ವಂತ ಉದ್ಯೋಗ ಮಾಡುತ್ತಾರೆ. ಆಗ ಅವರ ಕೆಲಸದ ಅವಧಿಯೂ, ಜವಾಬ್ದಾರಿಯೂ ಹೆಚ್ಚಿದ್ದರೂ ನಿರೀಕ್ಷಿಸಿದ ಆದಾಯ ಬರುವು ದಿಲ್ಲ, ಅದಕ್ಕೆ ಹೊಂದಿಕೊಳ್ಳಬೇಕು.
ವ್ಯಾಪಾರಸ್ಥರೂ ಸಹ ಒಂದೇ ರೀತಿಯ ವ್ಯಾಪಾರಕ್ಕೆ ಅಂಟಿಕೊಳ್ಳದೇ, ಆಗಾಗ ವ್ಯಾಪಾರದ ವಸ್ತು ಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಂತಹವರ ಬದುಕು ಏರಿಳಿತಕ್ಕೆ ಸಿಕ್ಕಿಕೊಳ್ಳುತ್ತದೆ. ಏನೇ ಆಗಲಿ ಮನುಷ್ಯ ಒಂದಲ್ಲ ಒಂದು ಕರ್ತವ್ಯದಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುವುದು ಅವಶ್ಯಕ, ಇಲ್ಲದಿದ್ದರೆ ಏನು ಎನ್ನುವುದನ್ನು ಸರ್ವಜ್ಞ ತನ್ನ ವಚನದಲ್ಲಿ ಬಹಳ ಸೊಗಸಾಗಿ ಹೇಳಿದ್ದಾನೆ.
ಇದನ್ನೂ ಓದಿ: Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ
ಕಾಯಕವು ಉಳ್ಳವಕ ನಾಯಕನು ಎನಿಸಪ್ಪ ಕಾಯಕವು ತೀರ್ಧ ಮರುದಿನವೇ ಸುಡುಗಾಡ ನಾಯಕನು ಎನಿಪ್ಪ ಸರ್ವಜ್ಞ ಅಂದರೆ ಪುರುಷ ಎಂದ ಮೇಲೆ ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಕೊಂಡಿರುವುದು ಒಳ್ಳೆಯದು. ಹಾಗೆಯೇ ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿ ಕೊಂಡಿರುವವನನ್ನು ನಾಯಕ ಎನ್ನುತ್ತಾರೆ, ಆದರೆ ಕಾಯಕವನ್ನು ಬಿಟ್ಟು ಅಥವಾ ಅವನಿಗೆ ಉದ್ಯೋಗದ ಋಣ ತೀರಿದ ಮರುಕ್ಷಣವೇ ಅವನನ್ನು ಸುಡುಗಾಡಿಗೆ ನಾಯಕ ಎನ್ನುತ್ತಾರೆ ಎಂದು ಸರ್ವಜ್ಞ ಹೇಳುತ್ತಾನೆ.
ಇನ್ನೊಂದು ವಚನದಲ್ಲಿ ನಮಗೆ ಯಾವ ಯಾವ ಸಮಯಕ್ಕೆ ಯಾವ ಯಾವ ರೀತಿಯ ಜ್ಞಾನ ಇರಬೇಕೋ ಅದು ಇರಬೇಕು. ಸಾಫ್ಟ್ʼವೇರ್ ಇಂಜಿನಿಯರ್ ಎಂದುಕೊಂಡವನು ಎಮ್ಮೆ ಮೇಯಿ ಸೋಕೆ ಹೋಗಬಾರದು. ಎಮ್ಮೆ ಮೇಯಿಸುವವನು ಅಡುಗೆ ಕೆಲಸಕ್ಕೆ ಹೋಗಬಾರದು. ಯಾವ ಕೆಲಸವೋ ಅದಕ್ಕೆ ತಕ್ಕ ಜ್ಞಾನ, ಯಾವ ಜ್ಞಾನವೋ ಅದಕ್ಕೆ ತಕ್ಕ ಕೆಲಸ ಎನ್ನುವುದನ್ನು ಈ ವಚನ ದಲ್ಲಿ ಬಹು ಸೊಗಸಾಗಿ ಹೇಳಿದ್ದಾನೆ.
ಜ್ಞಾನದಿಂದಲಿ ಇಹವು, ಜ್ಞಾನದಿಂದಲಿ ಪರವು ಜ್ಞಾನವಿಲ್ಲದೆಲೆ ಸಕಲವೂ ತನಗಿದ್ದು ಹಾನಿ ಕಾಣಯ್ಯ ಸರ್ವಜ್ಞ ಮನುಷ್ಯನ ಉನ್ನತಿಗೆ ಹಣ, ಆಸ್ತಿ, ಅಂತಸ್ತು ಇವುಗಳಿಗಿಂತ ಜ್ಞಾನವೇ ಬಹಳ ಮುಖ್ಯ ಅಲ್ಲವೇ? ಜ್ಞಾನವಿದ್ದರೆ ಸರಿಯಾದ ರೀತಿಯಲ್ಲಿ ಹಣ ಸಂಪಾದನೆ ಮಾಡಬಹುದು, ಸರಿ ಯಾದ ರೀತಿಯಲ್ಲಿ ಜೀವನ ಮಾಡಬಹುದು, ಉಳಿಸಬಹುದು, ಆಸ್ತಿ ಮಾಡಬಹುದು. ಎಲ್ಲವೂ ಜ್ಞಾನದಿಂದ. ಹೀಗೆ ಜ್ಞಾನ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತದೆ.
ಜ್ಞಾನ ತೋರಿಸುವ ಬೆಳಕಿನಿಂದ ನಾವು ಎಲ್ಲಿ ಉದ್ಯೋಗ ಮಾಡಬೇಕೋ, ಇಲ್ಲ ಸ್ವಂತ ಉದ್ಯೋಗ ಮಾಡಬೇಕೋ, ಇರುವ ಹಣವನ್ನು ಬಳಸಿ ಅದನ್ನು ಬೆಳೆಸುವುದು ಹೇಗೆ, ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಇವೆಲ್ಲದಕ್ಕೂ ಮೂಲ ಜ್ಞಾನ. ಇಂತಹ ಜ್ಞಾನ ನಮ್ಮಲ್ಲಿ ಬೆಳೆಯಲಿ ಎನ್ನುವುದೇ ಆಶಯ.