L P Kulkarni Column: ವಿಶ್ವದ ಉಗಮ ಹೇಗಾಯಿತು ?

ನಮ್ಮ ನಾಡಿನ ಪ್ರಸಿದ್ಧ ವಿಜ್ಞಾನ ಸಂವಹನಕಾರ ಹಾಗೂ ಲೇಖಕರಾಗಿದ್ದ ಅಡ್ಯನಡ್ಕ ಕೃಷ್ಣ ಭಟ್ (ಎಕೆಬಿ) ಕನ್ನಡ ಸಾರಸ್ವತ ಲೋಕಕ್ಕೆ ಸಾಕಷ್ಟು ವಿeನ ಕೃತಿಗಳನ್ನು ನೀಡಿದ್ದಲ್ಲದೆ ‘ಜ್ಞಾನ ಗಂಗೋತ್ರಿ’ ಯ ವಿಜ್ಞಾನ ಸಂಪುಟ ಗಳ ಸಂಪಾದಕರಾಗಿಯೂ ಸಾಧನೆ ಮಾಡಿದವರು. ಅಂತಹ ಹಿರಿಯ ಲೇಖಕರು ಬರೆದ ಹತ್ತು ಹಲವು ಜನಪ್ರಿಯ ವಿಜ್ಞಾನ ಲೇಖನಗಳ ಒಂದು ಸಂಪಾದಿತ ಕೃತಿಯೇ ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು.

LPK
Profile Ashok Nayak January 18, 2025

Source : Vishwavani Daily News Paper

ತಿಳಿಯೋಣ

ಎಲ್.ಪಿ.ಕುಲಕರ್ಣಿ

ಇಂದೊಂದು ಪ್ರಶ್ನೆಗೆ ಉತ್ತರ ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಒಂದು ವೇಳೆ ಈ ಪ್ರಶ್ನೆಗೆ ನಿಖರವಾಗಿ ಉತ್ತರ ಸಿಕ್ಕರೆ ಉಳಿದೆಲ್ಲ ಪ್ರಕೃತಿಯ ವಿಸ್ಮಯಗಳನ್ನು ಅರ್ಥಮಾಡಿಕೊಳ್ಳ ಬಹುದು. ಈ ವಿಷಯದ ಕುರಿತು ಸಾಕಷ್ಟು ಪುಸ್ತಕಗಳು ಹಾಗೂ ಅಂತರ್ಜಾಲ ಪುಟಗಳನ್ನು ಹುಡುಕಿದಾಗ ನನಗೆ 2022ರಲ್ಲಿ ಪ್ರಕಟಗೊಂಡ ಪುಸ್ತಕ ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು ಸಿಕ್ಕಿತು.

ಇದನ್ನು ವಿಜ್ಞಾನ ಪ್ರಸಾರ ಪ್ರಕಾಶನದ ಅಡಿಯಲ್ಲಿ; ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಅವರ ಮಾರ್ಗದರ್ಶನದಲ್ಲಿ, ಖ್ಯಾತ ವಿಜ್ಞಾನ- ತಂತ್ರಜ್ಞಾನ ಲೇಖಕ ಟಿ.ಜಿ.ಶ್ರೀನಿಧಿ ಅವರು ಸಂಪಾ ದಿಸಿದ್ದಾರೆ. ನಮ್ಮ ನಾಡಿನ ಪ್ರಸಿದ್ಧ ವಿಜ್ಞಾನ ಸಂವಹನಕಾರ ಹಾಗೂ ಲೇಖಕರಾಗಿದ್ದ ಅಡ್ಯ ನಡ್ಕ ಕೃಷ್ಣ ಭಟ್ (ಎಕೆಬಿ) ಕನ್ನಡ ಸಾರಸ್ವತ ಲೋಕಕ್ಕೆ ಸಾಕಷ್ಟು ವಿಜ್ಞಾನ ಕೃತಿ ಗಳನ್ನು ನೀಡಿದ್ದಲ್ಲದೆ ‘ಜ್ಞಾನಗಂಗೋತ್ರಿ’ಯ ವಿಜ್ಞಾನ ಸಂಪುಟಗಳ ಸಂಪಾದಕರಾಗಿಯೂ ಸಾಧನೆ ಮಾಡಿದವರು.

ಅಂತಹ ಹಿರಿಯ ಲೇಖಕರು ಬರೆದ ಹತ್ತು ಹಲವು ಜನಪ್ರಿಯ ವಿಜ್ಞಾನ ಲೇಖನಗಳ ಒಂದು ಸಂಪಾದಿತ ಕೃತಿಯೇ ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು. ಪುಸ್ತಕದಲ್ಲಿ ‘ವಿಜ್ಞಾನ ಲೋಕ’ ದಶಮಾನೋತ್ಸವ ಸಂಚಿಕೆಗೆ (ಮೇ-ಜೂನ್ 2016) ಎಕೆಬಿ ಯವರು ಬರೆದಿದ್ದ ‘ವಿಶ್ವ, ಜೀವಿ, ಮಾನವ ಮನಸ್ಸುಗಳ ಆದಿ’ ಎಂಬ ಲೇಖನದಲ್ಲಿ ವಿಶ್ವವು ಹೇಗೆ ಹುಟ್ಟಿ ಕೊಂಡಿತು? ಎಂಬ ಪ್ರಶ್ನೆಗೆ ಅವರು ಈ ರೀತಿ ವಿವರಿಸುತ್ತಾರೆ- ಇದೇ ಪ್ರಶ್ನೆಯನ್ನು ಇನ್ನೂರು ವರ್ಷಗಳ ಹಿಂದೆ ಕೇಳಿದ್ದರೆ ನಾವು ಅವಲಂಬಿಸಬಹುದಾಗಿದ್ದ ವಿವರಗಳು ಇಂದಿಗಿಂತ ಬೇರೆಯಾಗಿರುತ್ತಿದ್ದವು.

ನಾವು ಕಾಣುವ ಆಕಾಶಗಂಗೆ ಗ್ಯಾಲಕ್ಸಿ, ಶಾಶ್ವತವೇನೋ ಎಂಬ ಸಂಶಯವನ್ನು ಬಿತ್ತಬಲ್ಲ ಗ್ರಹ, ನಕ್ಷತ್ರಗಳು, ವ್ರೋಮಕಾಯಗಳು ಹೇಗಿವೆಯೋ ಹಾಗೆಯೇ ಮುಂದುವರಿಯುತ್ತವೆ ಎಂಬ ಭಾವನೆಗೆ ಪರವಾದ ನೋಟ- ಇವೆಲ್ಲ ಅಂದಿಗೆ ಸಾಮಾನ್ಯವಾಗಿದ್ದಿರಬಹುದು. ಆದರೆ 20ನೇ ಶತಮಾನ ದಲ್ಲಿ ವಿಶ್ವದ ಬಗೆಗೆ ನಮಗೆ ತಿಳಿದು ಬಂದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿವರಗಳು ಸ್ವಲ್ಪವೇನಲ್ಲ.

ಮಾನವ ಇತಿಹಾಸದ ಹೆಚ್ಚಿನ ಅವಧಿಯಲ್ಲಿ ವ್ರೋಮ ಮತ್ತು ಕಾಲ ಎರಡೂ ಮನುಷ್ಯರ ಹಿಡಿತಕ್ಕೆ ಸಿಗದ ಬೃಹತ್ ವಿಚಾರಗಳಾಗಿದ್ದವು. ಅವೆರಡೂ ಬೇರೆಬೇರೆಯಾಗಿ ತಮ್ಮ ಪಾಡಿಗೆ ಮುಂದುವರಿಯುವಂತಿದ್ದವು. ಥನ್‌ಸ್ಟೈನ್ ಮಂಡಿಸಿದ ಸಾರ್ವತ್ರಿಕ ಸಾಪೇಕ್ಷತೆಯ ಬೆಳಕಿ ನಲ್ಲಿ ಅವೆರಡೂ ಒಂದೇ ಅಸ್ತಿತ್ವದ ಎರಡು ಮುಖಗಳಾದವು. ಎಡ್ವಿನ್ ಹಬಲ್ (ಅಮೆರಿಕ, 1899-1953) ಮೌಂಟ್ ವಿಲ್ಸನ್‌ನ 100 ಇಂಚು ಅಗಲದ ದೂರದರ್ಶಕವನ್ನು ಉಪಯೋ ಗಿಸಿ, ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಿಂದಾಚೆಗೆ ಇರುವ ಗ್ಯಾಲಕ್ಸಿಗಳನ್ನು ತೋರಿಸಿದ. ಮಸುಕಾದ ಮೋಡದ ತುಂಡುಗಳಂತೆ ಕಾಣಿಸುವ ಒಂದೊಂದು ನೀಹಾರಿಕೆಯೂ ಒಂದೊಂದು ಗ್ಯಾಲಕ್ಸಿ ಎಂಬುದು ತಿಳಿಯಿತು.

ನಮಗೆ ಕಾಣಲಾಗುವ ಅಥವಾ ನಮ್ಮ ವೀಕ್ಷಣೆಗೆ ಸಿಗುವ ವಿಶ್ವದ ಭಾಗದಲ್ಲಿ ಒಂದು ಅಂದಾ ಜಿನಂತೆ ನೂರು ಬಿಲಿಯನ್ (ಹತ್ತು ಸಾವಿರ ಕೋಟಿ) ಗ್ಯಾಲಕ್ಸಿಗಳಿರಬಹುದು. ಪ್ರತಿ ಯೊಂದು ಗ್ಯಾಲಕ್ಸಿಯಲ್ಲೂ ನೂರಾರು ಬಿಲಿಯನ್ ನಕ್ಷತ್ರಗಳು ಹಾಗೂ ಸುಮಾರು ಅಷ್ಟೇ ಸಂಖ್ಯೆಯ ಗ್ರಹಗಳು ಸೇರಿರಬಹುದು. ಹಬಲ್ ವ್ರೋಮ ದೂರದರ್ಶಕ, ಜೇಮ್ಸ ವೆಬ್ ವ್ರೋಮ ದೂರದರ್ಶಕ, ಆರೂವರೆ ಮೀಟರ್ ಅಗಲದ ಅವೆಕೆಂಪು(ಇನ್ ಪ್ರಾರೆಡ್) ದೂರ ದರ್ಶಕ, ಅಟಕಾಮ ಬೃಹತ್ ಮಿಲಿಮೀಟರ್ ಒಡ್ಡವಣೆ(ಅಟಕಾಮ ಲಾರ್ಜ್ ಮಿಲಿ ಮೀಟರ್ ಅರೇ) ಯಂಥ ಸಾಧನಗಳು ಮೊತ್ತಮೊದಲ ನಕ್ಷತ್ರ, ಗ್ಯಾಲಕ್ಸಿಗಳ ಹುಟ್ಟು ಪ್ರದೇಶಕ್ಕೆ ನಮ್ಮ ವೀಕ್ಷಣೆಗಳನ್ನು ವಿಸ್ತರಿಸಬಲ್ಲುವಾಗಿದೆ.

ಗ್ಯಾಲಕ್ಸಿಗಳು ಪರಸ್ಪರ ದೂರ ಸರಿಯುತ್ತಿರುವುದನ್ನೂ, ಪರಸ್ಪರ ದೂರವು ಹೆಚ್ಚಿದಂತೆ ಗ್ಯಾಲಕ್ಸಿಗಳೂ ಹೆಚ್ಚು ಹೆಚ್ಚಿನ ವೇಗದಿಂದ ಸರಿಯುವುದನ್ನೂ ಖಗೋಳ ವಿಜ್ಞಾನಿ ಹಬಲ್ ತೋರಿಸಿಕೊಟ್ಟ. ಈ ಪ್ರಕ್ರಿಯೆಯನ್ನು ಹಿಮ್ಮುಖವಾಗಿಸಿದರೆ ವ್ರೋಮವೇ ವ್ಯಾಕೋಚಿಸುವ

ಕ್ರಿಯೆಯ ಮೊದಲಿಗೆ ಅಥವಾ ಆದಿಗೆ ಬರುತ್ತೇವೆ. ಅಲ್ಲಿ ಆದಿಯಲ್ಲಿ ನಡೆದ ಸ್ಪೋಟ ಪ್ರಕ್ರಿಯೆಯನ್ನೆ ಬಿಗ್ ಬ್ಯಾಂಗ್ ಅಥವಾ ಮಹಾಸೋಟ ಎನ್ನುವುದು. ಇದು ಸುಮಾರು 137 ಬಿಲಿಯನ್ ವರ್ಷಗಳ ಹಿಂದೆ ನಡೆದಿರಬೇಕು. ಇಂದಿನ ವಿಶ್ವವನ್ನು ತಿಳಿದುಕೊಳ್ಳಲು ಈ ಘಟನೆಯ ಪರಿಕಲ್ಪನೆ ಬಹಳ ಸಹಾಯಕವಾಗಿದೆ. ಇಂತಹ ವಿಚಾರಗಳ ಬಗ್ಗೆ ಕುತೂಹಲ ವಿರುವವರು ಹೆಚ್ಚಿನ ಮಾಹಿತಿಗಾಗಿ ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು ಕೃತಿ ಓದಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: L P Kulkarni Column: ಕಲಾಕೃತಿಯ ಭಾವನೆಗಳನ್ನು ವ್ಯಕ್ತಪಡಿಸುವ ಎಐ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ