Vinay Kumar Sorake: ಚುನಾವಣೆಗೆ ಸೀಮಿತವಾಗದೆ ವರ್ಷವಿಡೀ ಪ್ರಚಾರ ಸಮಿತಿ ಸಕ್ರಿಯವಾಗಿ ಕೆಲಸ ಮಾಡಲಿದೆ : ವಿನಯ್‌ಕುಮಾರ್ ಸೊರಕೆ
ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷ ಪೂರ್ತಿ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸುವ ಮೂಲಕ ಪಕ್ಷ ಸಂಘಟನೆಗೆ ಬಳಸಿ ಕೊಳ್ಳಲಾಗುತ್ತಿದೆ’. ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಚಿಕ್ಕಬಳ್ಳಾಪುರವು ೩೧ ನೇ ಜಿಲ್ಲೆಯಾಗಿದೆ ಎಂದರು.
ನಗರದ ಬಿ.ಬಿ.ರಸ್ತೆಯ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ವಿನಯ್‌ಕುಮಾರ್ ಸೊರಕೆ ಮಾತನಾಡಿದರು -
Ashok Nayak
Oct 27, 2025 11:32 PM
ಚಿಕ್ಕಬಳ್ಳಾಪುರ: ಚುನಾವಣಾ ಸಂದರ್ಭಕ್ಕೆ ಕಾಣಿಸಿಕೊಂಡು ಕಣ್ಮರೆ ಆಗುವ ಬದಲು ವರ್ಷದ ೩೬೫ ದಿನವೂ ಕಾಂಗ್ರೆಸ್ ಪ್ರಚಾರ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ( Vinay Kumar Sorake) ತಿಳಿಸಿದರು.
ನಗರದ ಬಿ.ಬಿ.ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷಪೂರ್ತಿ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸುವ ಮೂಲಕ ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ’. ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಚಿಕ್ಕಬಳ್ಳಾಪುರವು ೩೧ ನೇ ಜಿಲ್ಲೆಯಾಗಿದೆ ಎಂದರು.
‘ಜಿಲ್ಲಾ, ಬ್ಲಾಕ್, ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಹಾಗೂ ಡಿಜಿಟಲ್ ಯೂತ್ ಹೆಸರಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಸದಸ್ಯರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ೫೯ ಸಾವಿರ ಬೂತ್‌ಗಳಿದ್ದು, ಕನಿಷ್ಠ ಪ್ರತಿ ಬೂತ್‌ನಿಂದ ಇಬ್ಬರು ಸದಸ್ಯರು ಸೇರಿದರೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರ್ಪಡೆಯಾಗಲಿದ್ದಾರೆ’ ಎಂದರು.
ಇದನ್ನೂ ಓದಿ: Chikkaballapur News: ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ
ಈ ಹಿಂದೆ ಮಾಜಿ ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ( Former Union Minister Dr. M. Veerappa Moily) ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗಾಂಧಿ ನಡಿಗೆ ಜನತೆಯ ಕಡೆಗೆ ಎಂಬ ಹೆಸರಲ್ಲಿ ಪ್ರಚಾರ ಸಮಿತಿ ಕೆಲಸ ಆರಂಭಿಸಿದ್ದರು. ಅದೇ ರೀತಿ ‘ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ದಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಡಿ ಇದನ್ನು ಆರಂಭಿಸಲಾಗಿದೆ’ ಎಂದರು.
‘ಇತ್ತೀಚೆಗೆ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ, ಕಂಡು ಬಂದಿರುವಂತೆ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಒಂದನೇ ಸ್ಥಾನದಲ್ಲಿದೆ. ರೂ ೨.೯ ಲಕ್ಷ ತಲಾ ಆದಾಯವನ್ನು ರಾಜ್ಯ ಹೊಂದಿದೆ’ ಎಂದು ವಿವರಿಸಿದರು.
ಬೇಸತ್ತು ಮತ
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ೧೩೬ ಸ್ಥಾನ ಪಡೆದ ಕಾಂಗ್ರೆಸ್, ಮತಗಳ್ಳತನದಲ್ಲಿ ಪಾಲು ಇಲ್ಲವೇ ಎಂಬ ಬಿಜೆಪಿಯವರು ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸೊರಕೆ, ‘ಕಳೆದ ಬಾರಿಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ ದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಭಾವ ಬೀರಿಲ್ಲ’ ಎಂದು ಸ್ಪಷ್ಟಪಡಿಸಿ ದರು.
‘ಜಾತ್ಯತೀತ ಎಂದು ಹೇಳಿಕೊಂಡು ಅಧಿಕಾರದ ಸವಿಯುಂಡಿದ್ದ ಜೆಡಿಎಸ್ ಪಕ್ಷವು ಬಿಜೆಪಿ ಯೊಂದಿಗೆ ಕೈಜೋಡಿಸಿದೆ.ಇದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸೂಕ್ತ ಕಾಲವಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೃಷ್ಣ ಬೈರೇಗೌಡ ಕ್ರಿಯಾಶೀಲ ರಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ’ ಎಂದು ಹೇಳಿದರು.
ಜಿಲ್ಲಾ ಬ್ಲಾಕ್ ಮಟ್ಟದ ಸಮಿತಿ ಜೊತೆಗೆ ಮುಂದಿನ ಚುನಾವಣೆ ಸ್ಪರ್ಧೆಯ ಹಿನ್ನೆಲೆ ಅಲ್ಲಲ್ಲಿ ಕಾರ್ಯಾಗಾರ ಏರ್ಪಡಿಸುವ ಮೂಲಕ ಪ್ರಚಾರ ಸಮಿತಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಮತಗಳ್ಳತನ :ಜಾಗೃತಿ
ಈಗಾಗಲೇ ಜನರ ಜಾಗೃತಿಗಾಗಿ ರಾಹುಲ್ ಗಾಂಧಿಯವರು ೨೦೦೦ ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಮತಗಳ್ಳತನ ವಿಚಾರವಾಗಿ ಪಕ್ಷದಿಂದ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸೊರಕೆ ಹೇಳಿದರು. ರಾಜ್ಯದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ಸೇರ್ಪಡೆಗೊಂಡಿದ್ದು ಪತ್ತೆಯಾಗಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಲಾಯರ್ ನಾರಾಯಣ ಸ್ವಾಮಿ, ರಾಜ್ಯ ಸಂಚಾಲಕರಾದ ಆದರ್ಶ್ ಯಲ್ಲಪ್ಪ, ಜಾನ್ , ಮುನೀರ್, ಯೋಗೀಶ್ವರಿ, ಬ್ಲಾಕ್ ಅಧ್ಯಕ್ಷ ರಾದ ನಾಗಭೂಷಣ್,ಡಿಕ್ಷತಿ ರೆಡ್ಡಿ, ಮುಖಂಡರಾದ ಅಡ್ಡಗಲ್ ಶ್ರೀಧರ್, ಕೋನಪಲ್ಲಿ ಕೋದಂಡ,ಪಟ್ರೇನಹಳ್ಳಿ ಕೃಷ್ಣ,ಬಾಬಾಜಾನ್, ರಾಜಾಬಾಬು, ಮತ್ತಿತರರು ಇದ್ದರು.