Chinthamani News: ಎಫ್ ಸಿ ಇಲ್ಲದ ಶಾಲಾ ವಾಹನಗಳಿಗೆ ಎಫ್ ಸಿ ಮಾಡಿಕೊಳ್ಳಲು ಖಡಕ್ ವಾರ್ನಿಂಗ್
ಇತ್ತೀಚಿಗೆ ಚಿಂತಾಮಣಿ ತಾಲೂಕಿನ ಬುಡುಗುಂಟೆ ಗ್ರಾಮದ ಬಳಿ ಶಾಲಾ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಾಲ್ಕು ಜನ ಮೃತಪಟ್ಟಿದ್ದರು. ಇದರ ಬೆನ್ನಲೇ ಎಚ್ಚೆತ್ತಿಕೊಂಡ ಚಿಂತಾಮಣಿ ಏ ಆರ್ ಟಿ ಓ ಅಧಿಕಾರಿ ಬೈರಾರೆಡ್ಡಿ ನಗರ ಭಾಗದ ಜೈನ್ ಪಬ್ಲಿಕ್ ಶಾಲೆ, ವೆಂಟಾದ್ರಿ ಶಾಲೆಗೆ, ಭೇಟಿ ನೀಡಿ ಎಫ್ ಸಿ ಮುಕ್ತಾಯಗೊಂಡಿರುವ ಶಾಲಾ ವಾಹನಗಳಿಗೆ ಕೂಡಲೆ ಎಫ್ ಸಿ, ಮಾಡಿಸಿಕೊಳ್ಳಬೇಕು
-
Ashok Nayak
Oct 27, 2025 10:33 PM
ಚಿಂತಾಮಣಿ: ಇತ್ತೀಚಿಗೆ ಚಿಂತಾಮಣಿ ತಾಲೂಕಿನ ಬುಡುಗುಂಟೆ ಗ್ರಾಮದ ಬಳಿ ಶಾಲಾ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಾಲ್ಕು ಜನ ಮೃತಪಟ್ಟಿದ್ದರು. ಇದರ ಬೆನ್ನಲೇ ಎಚ್ಚೆತ್ತಿಕೊಂಡ ಚಿಂತಾಮಣಿ ಏ ಆರ್ ಟಿ ಓ ಅಧಿಕಾರಿ ಬೈರಾರೆಡ್ಡಿ ನಗರ ಭಾಗದ ಜೈನ್ ಪಬ್ಲಿಕ್ ಶಾಲೆ, ವೆಂಟಾದ್ರಿ ಶಾಲೆಗೆ, ಭೇಟಿ ನೀಡಿ ಎಫ್ ಸಿ ಮುಕ್ತಾಯಗೊಂಡಿರುವ ಶಾಲಾ ವಾಹನಗಳಿಗೆ ಕೂಡಲೆ ಎಫ್ ಸಿ, ಮಾಡಿಸಿಕೊಳ್ಳಬೇಕು ಹಾಗೂ ವಾಹನದ ಎಲ್ಲಾ ದಾಖಲೆಗಳು ಸರಿಯಾದ ರೀತಿಯಲ್ಲಿ ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಇನ್ನು ಚಿಂತಾಮಣಿ ತಾಲೂಕಿನಲ್ಲಿ ಇರುವ ವಾಹನಗಳ ಎಲ್ಲಾ ದಾಖಲೆಗಳು ಸರಿಯಾದ ರೀತಿ ಯಲ್ಲಿ ಇಟ್ಟುಕೊಳ್ಳಬೇಕೆಂದು ಏ ಆರ್ ಟಿ ಓ ಅಧಿಕಾರಿ ಬೈರಾರೆಡ್ಡಿ ರವರು ಮನವಿ ಮಾಡಿ ಕೊಂಡಿದ್ದಾರೆ.
ವಾಹನಗಳಿಗೆ ಸೂಕ್ತ ದಾಖಲೆ ಹಾಗೂ ಎಫ್ ಸಿ,ಇನ್ಸೂರೆನ್ಸ್ ಇಲ್ಲದಿದ್ದರೆ ಅಂತಹ ವಾಹನಗಳನ್ನು ಹಿಡಿದು ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು