Mallappa C Khodnapur Column: ಮೋಬೈಲ್‌ ಗೀಳು- ಆಗದಿರಲಿ ಗೋಳು

ಇಂದಿನ ಆಧುನಿಕ, ಒತ್ತಡಮಯ ಮತ್ತು ವಿಭಕ್ತ ಕುಟುಂಬಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಮೋಬೈಲ್ ನಲ್ಲಿ ವಿಡಿಯೋ, ಸಂತಸ ಪಡುವ ಯಾವುದೇ ಮಕ್ಕಳ ಹಾಸ್ಯಭರಿತ ಹಾಡು ಅಥವಾ ಗೇಮ್‌ಗಳನ್ನು ತೋರಿಸುತ್ತಾ, ಊಟ ಮಾಡುತ್ತಿರುವ ಪರಿ ನೋಡಿದರೆ, ನಾವೇ ನಮ್ಮ ಮಕ್ಕಳನ್ನು ಮೋಬೈಲ್ ದಾಸ್ಯಕ್ಕೆ ಒಳಪಡಿಸುತ್ತಿದ್ದೇವೆನೋ ಎಂಬ ಭಾಸವಾಗುತ್ತದೆ

Social media
Profile Ashok Nayak January 18, 2025

Source : Vishwavani Daily News Paper

ಮಲ್ಲಪ್ಪ. ಸಿ. ಖೊದ್ನಾಪೂರ

ಹಿಂದಿನ ಕಾಲದಲ್ಲಿ ಬಾಲ್ಯ ಜೀವನದಲ್ಲಿ ಚಿಕ್ಕಮಕ್ಕಳಿಗೆ ಚಂದಮಾಮ ತೋರಿಸಿ, ನೀತಿ ಕಥೆ ಹೇಳುತ್ತಾ, ಲಾಲಿ ಹಾಡು, ಜೋಗುಳ ಪದಗಳನ್ನು ಹಾಡುತ್ತಾ, ಊಟ ಮಾಡಿಸುವ ಮತ್ತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಸಂಸ್ಕೃತಿ-ಸಂಸ್ಕಾರ ಮತ್ತು ಸಂಪ್ರ ದಾಯ ನಮ್ಮದಾಗಿತ್ತು.

ಆದರೆ ಇಂದಿನ ಆಧುನಿಕ, ಒತ್ತಡಮಯ ಮತ್ತು ವಿಭಕ್ತ ಕುಟುಂಬಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಮೋಬೈಲ್ ನಲ್ಲಿ ವಿಡಿಯೋ, ಸಂತಸ ಪಡುವ ಯಾವುದೇ ಮಕ್ಕಳ ಹಾಸ್ಯ ಭರಿತ ಹಾಡು ಅಥವಾ ಗೇಮ್‌ಗಳನ್ನು ತೋರಿಸುತ್ತಾ, ಊಟ ಮಾಡುತ್ತಿರುವ ಪರಿ ನೋಡಿ ದರೆ, ನಾವೇ ನಮ್ಮ ಮಕ್ಕಳನ್ನು ಮೋಬೈಲ್ ದಾಸ್ಯಕ್ಕೆ ಒಳಪಡಿಸುತ್ತಿದ್ದೇವೆನೋ ಎಂಬ ಭಾಸವಾಗುತ್ತದೆ.

ಮೋಬೈಲ್ ಇಂದಿನ ಮಕ್ಕಳಲ್ಲಿ ಮಾಹಿತಿ ಸಂಗ್ರಹ, ವಿಷಯ ಜ್ಞಾನ ಮತ್ತು ಸಾಮಾನ್ಯ ವ್ಯವಹಾರಿಕ ಜ್ಞಾನವೇನೋ ಹೆಚ್ಚಿಸಿದೆ. ಆದರೆ ಹಿರಿಯರಿಗೆ ಗೌರವ ನೀಡುವುದು, ಮನೆಗೆ ಬಂದವರನ್ನು ಸ್ವಾಗತಿಸುವದು, ಮಾತನಾಡಿಸುವುದು ಮತ್ತು ಆತ್ಮೀಯತೆಯನ್ನು ಇಲ್ಲ ದಂತಾಗಿದೆ.

ಪುಸ್ತಕವು ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳಿ ದರೆ, ತಲೆ ತಗ್ಗಿಸಿ ನನ್ನ ನೋಡು ಮುಂದೆ ನಾನು ನಿನ್ನ ತಲೆ ಎತ್ತದಂತೆ ನಿನ್ನ ಮಾಡುತ್ತೇನೆ ಎಂದು ಮೋಬೈಲ್ ನುಡಿಯುತಂತೆ ಎಂಬ ಮಾತುಗಳು ನಮಗೆ ಮನದಲ್ಲಿ ಕಿರು ನಗುವಿ ನೊಂದಿಗೆ ಅಚ್ಚರಿ ಮೂಡಿಸುತ್ತವೆ.

ಮೋಬೈಲ್ ಬಳಕೆ ಅತಿಯಾದಂತೆ ಅನುಬಂಧ ಮತ್ತು ಸಂಬಂಧಗಳು ದೂರವಾಗುತ್ತಿವೆ. ಇದರಿಂದ ಹತ್ತಿರವಿದ್ದವರೂ ದೂರಾಗುತ್ತಾರೆ. ದೂರದಲ್ಲಿ ಇದ್ದವರು ಹತ್ತಿರವಾಗುತ್ತಾರೆ ಎಂದು ಹೇಳಬಹುದು. ಮೋಬೈಲ್, ವ್ಯಾಟ್ಸಾಪ್, ಫೇಸ್‌ ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳ ಸೆಳೆತ ಮಿತಿಮೀರುತ್ತಾ, ಇಂದು ನಮ್ಮ ಭಾವನೆ, ಕಲ್ಪನೆ, ಅನಿಸಿಕೆ, ಅಭಿ ಪ್ರಾಯ, ಸಲಹೆ-ಸೂಚನೆ ಮತ್ತು ಚಿಂತನೆಗಳಿಗೆ ಬೆಲೆಯಿಲ್ಲದೇ ಮೋಬೈಲ್‌ನಲ್ಲಿ ಕಾಣ ಸಿಗುವ ಯಾರದೋ ಸಂಗತಿ, ಮಾಹಿತಿ ಅಥವಾ ವಿಷಯಗಳಿಗೆ ಚಿಂತನೆಯ ಚಿತೆಯೊಳಗೆ ದಹಿಸುವ ಮನಸ್ಥಿತಿ ನಮ್ಮದಾಗುತ್ತಿದೆ.

ಮೋಬೈಲ್ ಮಾತ್ರ ಜೀವನವಲ್ಲ, ಅದರ ಆಚೆಗೂ ಮೀರಿ ನಮ್ಮ ಬದುಕಿದೆ ಎನ್ನುವದನ್ನು ನಾವೆಲ್ಲರೂ ಮನಗಾಣಬೇಕು. ಇತ್ತೀಚೆಗೆ ಜುಲೈ 2024 ರಲ್ಲಿ ಸ್ಪಾಟಿಸ್ಟಿಕ್ಸ್ ಎಂಬ ಆನಲೈನ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ದೇಶದ 21 ರಾಜ್ಯಗಳ ಒಟ್ಟು 6229 ಪೋಷಕರ ಅಭಿ ಪ್ರಾಯಗಳನ್ನು ಸಂಗ್ರಹಿಸಿದೆ. ಅದರಲ್ಲಿ ವಿಶೇಷವಾಗಿ 6 ರಿಂದ 16 ವರ್ಷದೊಳಗಿನ ಮಕ್ಕಳ ಮೋಬೈಲ್ ಚಟುವಟಿಕೆಯ ಮೇಲೆ ನಡೆಸಿದ ಸಮೀಕ್ಷೆಯ ವರದಿಯಲ್ಲಿ ಕಂಡು ಬಂದ ಮೋಬೈಲ್ ಬಳಸುವ ಕಾರಣಗಳನ್ನು ಅವಲೋಕನ ಮಾಡಿದಾಗ ನಮಗೆಲ್ಲ ಅತಂಕಕಾರಿ ಸಂಗತಿ ತಿಳಿದುಬರುತ್ತದೆ.

ಚಲನಚಿತ್ರ ಅಥವಾ ಸಿನೇಮಾ ವೀಕ್ಷಿಸಲು ಶೇ56.6 ರಷ್ಟು ಮಕ್ಕಳು ಮೋಬೈಲ್ ಬಳಸು ತ್ತಾರೆ. ಅದೇ ಸಂಗೀತ ಆಲಿಸಲು ಮತ್ತು ವಿಡಿಯೋ ನೋಡಲು ಶೇ.47.3 ರಷ್ಟು ಬಳಸಿದರೆ, ಶೈಕ್ಷಣಿಕ ವಿಷಯ ಜ್ಞಾನ, ಮಾಹಿತಿ ಸಂಗ್ರಹಣೆ ಮತ್ತು ಇ-ಸಂಪನ್ಮೂಲಗಳಿಗಾಗಿ ಶೇ.34.9 ರಷ್ಟು ಮಕ್ಕಳು ಮೋಬೈಲ್ ಬಳಸಿದರೆ, ವಾಟ್ಸಾಪ್, ಫೇಸ್‌ ಬುಕ್, ಇನಸ್ಟಾಗ್ರಾಮ್, ಟ್ವೀಟರ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡಲು ಶೇ.10.9 ರಷ್ಟು ಮಕ್ಕಳು ಮಾತ್ರ ಬಳಸುತ್ತಾರೆ.

ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಗೇಮ್, ಪಬ್ಜಿ ಮತ್ತು ಡ್ರೀಮ್-11ನಂತಹ ಆಟ ಆಡಲು ಶೇ.76.7 ರಷ್ಟು ಮೋಬೈಲ್ ಬಳಸುತ್ತಿರುವದು ತೀವ್ರ ಆಘಾತಕಾರಿ ವಿಷಯ ನಮಗೆ

ಕಂಡುಬರುತ್ತಿದೆ. ಒಟ್ಟಾರೆ ಮೋಬೈಲ್ ಸ್ಮಾರ್ಟ ಫೋನ್ ಎಂಬುದು ಮಕ್ಕಳ ಮೇಲೆ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆರೋಗ್ಯದ ಮೇಲೆ ತೀವ್ರತರವಾದ ದುಷ್ಪರಿಣಾಮಗಳನ್ನು ಬೀರುತ್ತಿದೆ. ಇದರಿಂದ ಮಕ್ಕಳು ಲವಲವಿಕೆ, ಉತ್ಸಾಹ, ಆಸಕ್ತಿಯನ್ನು ಕಳೆದುಕೊಳ್ಳು ತ್ತಿದ್ದಾರೆ.

ಮಕ್ಕಳು ಬಾಲ್ಯಾವಸ್ಥೆಯಲ್ಲಿ ಷುಣಿದು-ನಲಿದು, ಕಲಿತು-ಬೆರೆತು, ಆಟ-ಪಾಠಗಳಿಂದ ಪಡೆಯಬೇಕಾದ ಸಂತಸ ಕ್ಷಣಗಳನ್ನು ದೂರಾಗುತ್ತಿದ್ದಾರೆ. ಬಾಲ್ಯದಲ್ಲಿ ಏನೆಲ್ಲ ಚಟು ವಟಿಕೆಗಳನ್ನು ಮಾಡಬೇಕಿತ್ತೋ ಅವೆಲ್ಲವೂಗಳಿಂದ ವಂಚಿತರಾಗುತ್ತಿರುವದಕ್ಕೆ ಕಾರಣ ಮೋಬೈಲ್ ಕಾರಣವೆನ್ನುವದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಮಕ್ಕಳಲ್ಲಿ ಮಿಸ್ಸಿಂಗ್ ಚೈಲ್ ಹುಡ್ ಸಿಂಡ್ರೋಮ್ ಎನ್ನುವ ಮಾನಸಿಕ ಕಾಯಿಲೆ ಕಾಣಿಸಿ ಕೊಳ್ಳುವುದು ಸಹಜ.

ಅಷ್ಟೇ ಅಲ್ಲದೇ ಮಕ್ಕಳು ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು, ಬೆರೆಯಬೇಕು ಮತ್ತು ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆನ್ನುವ ಜೀವನ ಕಲೆ-ಕೌಶಲ್ಯ ಮತ್ತು ತಾಳ್ಮೆಯ ಕೊರತೆಯಿಂದ ಇಡೀ ಜೀವನವನ್ನೇ ವ್ಯರ್ಥವನ್ನಾಗಿಸುತ್ತಿದ್ದಾರೆ. ಮೋಬೈಲ್ ಬರೀ ಶಾಪ ವಲ್ಲ.

ಅದು ನಮಗೆ ವರವಾಗಿ ಅನೇಕ ವಿಷಯ ಜ್ಞಾನ, ಮಾಹಿತಿ, ಇ-ಸಂಪನ್ಮೂಲ, ಇ- ಪುಸ್ತಕ ಗಳನ್ನು ಒದಗಿಸಿ ನಮ್ಮ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗಿದೆ. ಅತಿಯಾದರೆ ಅಮೃತವು ವಿಷಎನ್ನುವಂತೆ ಮೋಬೈಲ್ ಬಳಕೆ ಹಿತ-ಮಿತವಾಗಿರಬೇಕು ಮತ್ತು ಸಂದ ರ್ಭೋಚಿತವಾಗಿದ್ದು, ಒಳ್ಳೆಯ ಸಂಗತಿಗಳನ್ನು ಅರಿತುಕೊಳ್ಳಲು ಪೂರಕವಾಗಿ ಬಳಕೆ ಯಾಗುವಂತಿರಬೇಕು. ಅದಕ್ಕಾಗಿ ಪಾಲಕರು-ಪೋಷಕರು ನಾವೆಲ್ಲರೂ ಮಕ್ಕಳ ಕೈಗೆ ಮೋಬೈಲ್ ಕೊಟ್ಟಾಗ ಅವರು ಯಾವ ಸಂದರ್ಭದಲ್ಲಿ ಅದರಿಂದ ಏನು ಮಾಡುತ್ತಾರೆ,

ಹೇಗೆ ಬಳಸುತ್ತಾರೆ ಎಂಬುದನ್ನು ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗಿದೆ. ಮೋಬೈಲ್ ಬಳಕೆಯು ಒಂದು ಫೋಬಿಯಾ ಆಗದೇ ಅದು ಒಳ್ಳೆಯ ಕಾರ್ಯಗಳಿಗೆ ಮಾತ್ರ ಬಳಕೆಯಾಗು ವಂತಿರಬೇಕೆನ್ನುವುದೇ ನನ್ನ ಅಂಬೋಣ.

ಇದನ್ನೂ ಓದಿ: Jagadeesh Maane Column: ಅದು ಭವ್ಯ ಕಾಲವಾಗಿತ್ತು...

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ