ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಕೈ-ಕಾಲುಗಳ ಸ್ನಾಯುಗಳು ನ್ಯೂನಪೋಷಣೆಗೆ ಒಳಗಾಗಿ ಪರಿಪೂರ್ಣವಾಗಿ ನಿಶ್ಚೇತವಾಗುತ್ತವೆ. ಇಂದಿನ ದಿನಗಳಲ್ಲಾಗಿದ್ದರೆ, ಉಸಿರಾಡಲು ಕಷ್ಟಪಡುತ್ತಿರುವ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸುತ್ತಿದ್ದರು. ಆ ಮಗುವಿಗೆ ವೆಂಟಿಲೇಟರ್ ಎಂಬ ಸಾಧನವನ್ನು ಅಳವಡಿಸುತ್ತಿದ್ದರು. ಆ ಸಾಧನವು ಮಗುವಿಗೆ ಉಸಿರಾಡಲು, ದೇಹಕ್ಕೆ ಅಗತ್ಯವಾದ ಆಕ್ಸಿಜನ್‌ನನ್ನು ಪೂರೈಸಲು ನೆರವಾಗುತ್ತಿತ್ತು

ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

-

ಹಿಂದಿರುಗಿ ನೋಡಿದಾಗ

ಇಪ್ಪತ್ತನೆಯ ಶತಮಾನದ ಮೊದಲ ಭಾಗ. ಬೇಸಿಗೆಯ ತಿಂಗಳುಗಳು ಬಂದರೆ ಸಾಕು - ಮನೆಗಳಲ್ಲಿ, ಶಾಲೆಗಳಲ್ಲಿ, ಈಜುಕೊಳಗಳಲ್ಲಿ, ಆಟದ ಮೈದಾನಗಳಲ್ಲಿ ಒಂದು ವಿಚಿತ್ರ ಭಯ ಹರಡುತ್ತಿತ್ತು. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಆತಂಕಭರಿತ ಕಣ್ಣುಗಳಿಂದ ನೋಡುತ್ತಿದ್ದರು. ಅವರಿಗೆ ಜ್ವರ, ತಲೆನೋವು, ಕುತ್ತಿಗೆ ಬಿಗಿಯಾಗುವುದು, ಕಾಲುಗಳು ಸೋಲುವಿಕೆ, ಸ್ವಲ್ಪ ದೌರ್ಬಲ್ಯ ಇವುಗಳಲ್ಲಿ ಯಾವುದಾದರೊಂದು ಒಂದು ಅಥವಾ ಹೆಚ್ಚಿನ ಲಕ್ಷಣಗಳು ಕಂಡುಬರುತ್ತಿದ್ದರೆ, ಅವರು ಕಂಗಾಲಾಗುತ್ತಿದ್ದರು.

ಇವೆಲ್ಲ ಮಕ್ಕಳಿಗೆ ಬರುವ ಸಾಮಾನ್ಯ ಅನಾರೋಗ್ಯ ಲಕ್ಷಣಗಳಂತೆ ಕಾಣುತ್ತವೆ. ಇವುಗಳಿಗೇಕೆ ಭೀತ ರಾಗಬೇಕು ಎನ್ನುವ ಪ್ರಶ್ನೆಯು ಮನಸ್ಸಿನಲ್ಲಿ ಮೂಡಬಹುದು. ಏಕೆಂದರೆ ಈ ಲಕ್ಷಣಗಳು ಕಂಡು ಬಂದ, ಕೆಲವು ಹುಡುಗರು, ಜೀವನಪರ್ಯಂತ ಗುಣಪಡಿಸಲಾಗದಂತಹ ನ್ಯೂನತೆಗೆ ಗುರಿಯಾಗುತ್ತಿದ್ದರು.

ಸಾಯುವವರಿಗೂ ಪರಾವಲಂಬಿಗಳಾಗಿ ಬದುಕಬೇಕಾದ ಈ ಅನಾರೋಗ್ಯದ ಹೆಸರನ್ನು ಕೇಳಿದರೆ ಸಾಕು, ಬೆಚ್ಚಿ ಬೀಳುತ್ತಿದ್ದರು. ಅದುವೇ ವೈದ್ಯಕೀಯ ಪರಿಭಾಷೆಯಲ್ಲಿ ‘ಪೋಲಿಯೊಮೈಲೈಟಿಸ್’! ಜನಸಾಮಾನ್ಯರು ಇದನ್ನು ಪೋಲಿಯೊ ಎಂದು ಕರೆಯುತ್ತಿದ್ದರು. ಕೆಲವರು ಇದನ್ನು ‘ಮಕ್ಕಳ ಪಾರ್ಶ್ವವಾಯು’ (ಇನ್ʼಫಂಟೈಲ್ ಪೆರಾಲಿಸಿಸ್) ಎಂದೂ ಕರೆಯುತ್ತಿದ್ದರು. ಇದು ಮಕ್ಕಳನ್ನಷ್ಟೇ ಅಲ್ಲ; ವಯಸ್ಕರರನ್ನೂ ಕಾಡುತ್ತಿತ್ತು.

ಅಂಗವೈಕಲ್ಯ: ಪೋಲಿಯೊ ಒಂದು ವೈರಸ್ ಕಾಯಿಲೆ. ಈ ವೈರಸ್ ಕಲುಷಿತ ಆಹಾರ, ಪಾನೀಯ ಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಕರುಳಿನಲ್ಲಿ ವೃದ್ಧಿಯಾಗುತ್ತದೆ. ಬಹುತೇಕ ಜನರಲ್ಲಿ ಅದು ಸಣ್ಣ-ಪುಟ್ಟ ಜ್ವರ, ಮೈ-ಕೈನೋವು ಕಾಣಿಸಿಕೊಂಡು ಸದ್ದಿಲ್ಲದಂತೆ ಕಾಣೆ ಯಾಗು ತ್ತದೆ. ಆದರೆ, ಅದು ಕೆಲವರಲ್ಲಿ ಅವರ ನರಮಂಡಲದ ಮೇಲೆ ದಾಳಿಯನ್ನು ಮಾಡುತ್ತಿತ್ತು. ಬೆನ್ನುಹುರಿಯ ಮುಂಭಾಗದ ಕೊಂಬು ಕೋಶಗಳನ್ನು (ಆಂಟೀರಿಯರ್ ಹಾರ್ನ್ ಸೆಲ್ಸ್) ಹಾನಿ ಗೊಳಿಸಿದಾಗ, ಸ್ನಾಯುಗಳು ದುರ್ಬಲವಾಗುತ್ತಿದ್ದವು ಅಥವಾ ಪಾರ್ಶ್ವವಾಯುವಿಗೆ ಒಳಗಾಗು ತ್ತಿದ್ದವು. ಅದು ಇನ್ನೂ ಮೇಲೆ ಹತ್ತಿ ಮಿದುಳಿನ ಕಾಂಡವನ್ನು (ಬ್ರೈನ್ ಸ್ಟೆಮ್) ತಲುಪಿದರೆ, ಉಸಿರಾಟಕ್ಕೆ ನೆರವಾಗುವ ಸ್ನಾಯುಗಳನ್ನೂ ಪಾರ್ಶ್ವವಾಯುವಿಗೆ ಒಳಪಡಿಸುತ್ತಿದ್ದವು. ಕೆಲವು ದಿನಗಳ ಹಿಂದಷ್ಟೇ ಬೀದಿಯಲ್ಲಿ ಓಡಾಡಿಕೊಂಡು, ಕುಣಿದು ಕುಪ್ಪಳಿಸುತ್ತಿದ್ದ ಮಗುವು, ಆಕಸ್ಮಿಕ ವಾಗಿ ಹಾಸಿಗೆಯ ಮೇಲೆ ನಿಶ್ಚಲವಾಗಿ ನಿದ್ರಿಸಬಹುದು.

ಇದನ್ನೂ ಓದಿ: Dr N Someshwara Column: ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಎಚ್ಚರವಾದಾಗ ಕಾಲುಗಳನ್ನು ಚಲಿಸುವುದು ಬಿಡಿ, ಅಲುಗಿಸಲೂ ಸಾಧ್ಯವಾಗುವುದಿಲ್ಲ. ಕೈಗಳನ್ನು ಮೇಲೆತ್ತುವುದಕ್ಕೂ ಆಗುವುದಿಲ್ಲ. ಕೆಲವೊಮ್ಮೆ ನಿಟ್ಟುಸಿರನ್ನು ಬಿಡಲೂ ಆಗುವುದಿಲ್ಲ. ಉಛ್ವಾಸ ವನ್ನು (ಉಸಿರನ್ನು ಎಳೆದುಕೊಳ್ಳುವುದು) ಮಾಡುವುದು ಒಂದು ಮಹಾ ಪ್ರಯಾಸದ ಕೆಲಸವಾಗು ತ್ತದೆ.

ಎದೆಯನ್ನು ಸ್ವಲ್ಪ ಉಬ್ಬಿಸುವುದು ಕಷ್ಟದ ಕೆಲಸವಾಗುತ್ತದೆ. ಮಗುವಿನ ಮನಸ್ಸು ಮತ್ತು ಬುದ್ಧಿ ಸದಾ ಎಚ್ಚರದಲ್ಲೇ ಇರುತ್ತದೆ. ಆದರೆ, ಮಗುವಿನ ದೇಹವು ಮಾತ್ರ ಮಿದುಳಿನ ಯಾವ ಆಜ್ಞೆ ಯನ್ನೂ ಪಾಲಿಸುವುದಿಲ್ಲ.

ಕೈ-ಕಾಲುಗಳ ಸ್ನಾಯುಗಳು ನ್ಯೂನಪೋಷಣೆಗೆ ಒಳಗಾಗಿ ಪರಿಪೂರ್ಣವಾಗಿ ನಿಶ್ಚೇತವಾಗುತ್ತವೆ. ಇಂದಿನ ದಿನಗಳಲ್ಲಾಗಿದ್ದರೆ, ಉಸಿರಾಡಲು ಕಷ್ಟಪಡುತ್ತಿರುವ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸುತ್ತಿದ್ದರು. ಆ ಮಗುವಿಗೆ ವೆಂಟಿಲೇಟರ್ ಎಂಬ ಸಾಧನವನ್ನು ಅಳವಡಿಸುತ್ತಿದ್ದರು. ಆ ಸಾಧನವು ಮಗುವಿಗೆ ಉಸಿರಾಡಲು, ದೇಹಕ್ಕೆ ಅಗತ್ಯವಾದ ಆಕ್ಸಿಜನ್‌ನನ್ನು ಪೂರೈಸಲು ನೆರವಾ ಗುತ್ತಿತ್ತು. ಆದರೆ, ಅಂದಿನ ದಿನಗಳ ತೀವ್ರ ನಿಗಾ ಘಟಕಗಳಲ್ಲಿ ವೆಂಟಿಲೇಟರ್ ಇರಲಿಲ್ಲ. ಉಸಿರಾಡು ವುದು ಎಷ್ಟು ಸುಲಭದ ಕೆಲಸ! ನಾವು ನಮಗೆ ಅರಿವಿಲ್ಲದಂತೆಯೇ ನಿಮಿಷಕ್ಕೆ 14-16 ಉಸಿರಾಡು ತ್ತಿರುತ್ತೇವೆ. ಉಸಿರನ್ನು ಎಳೆದುಕೊಳ್ಳುತ್ತಿರುವಂತೆಯೇ ನಮ್ಮ ಎದೆಗೂಡು ಏರುತ್ತದೆ, ವಪೆಯು ಕೆಳಗಿಳಿಯುತ್ತದೆ, ಗಾಳಿ ಒಳಗೆ ಹೋಗುತ್ತದೆ.

ಜೀವದಾಯಕ ಆಕ್ಸಿಜನ್ ಗಾಳಿಗೂಡುಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಜತೆ ವಿನಿಮಯವಾಗುತ್ತದೆ. ವಪೆ ಮೇಲಕ್ಕೇರುತ್ತದೆ. ಎದೆಗೂಡು ಕೆಳಗಿಳಿಯುತ್ತದೆ. ಕಾರ್ಬನ್ ಡೈಆಕ್ಸೈಡ್ಹೊ ರಬರುತ್ತದೆ. ಜೀವಮುಂದುವರಿಯುತ್ತದೆ. ಆದರೆ, ಪೋಲಿಯೊ ಪೀಡಿತರ ಉಸಿರಾಟದ ಸ್ನಾಯುಗಳಿಗೆ ಪೋಲಿ ಯೋ ಬಡಿದಾಗ ಎದೆ ವಿಸ್ತರಿಸುವುದಿಲ್ಲ. ವಪೆ ಕೆಳಗಿಳಿಯುವುದಿಲ್ಲ. ಹಾಗಾಗಿ ಇಂತಹ ಮಕ್ಕಳಿಗೆ ಮರಣದಂಡನೆ ಘೋಷಣೆಯಾಗುತ್ತದೆ. ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗಿ, ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅದರ ಫಲವಾಗಿ ಮಗುವಿನ ದೇಹವು ನೀಲಿಗಟ್ಟು ತ್ತದೆ. ನೀಲಿಗಟ್ಟುವಿಕೆಯು ತೀವ್ರವಾಗುತ್ತಿರುವಂತೆಯೇ ಮಗುವಿನ ಅಸುವನ್ನು ಯಮಧರ್ಮನು ಯಾವುದೇ ಕರುಣೆಯನ್ನು ತೋರದೆ ಸೆಳೆದುಕೊಂಡು ಹೋಗುತ್ತಾನೆ!

123

ಐರನ್ ಲಂಗ್: ಯಮನು ಮಕ್ಕಳ ಕುತ್ತಿಗೆಗೆ ಹಾಕಿದ್ದ ಕುಣಿಕೆಯನ್ನು ನಿಧಾನವಾಗಿ ಕಳಚಿ ಉಸಿರು ದುಂಬುವುದರ ಜತೆಯಲ್ಲಿ ಜೀವವನ್ನು ತುಂಬುವ ಸಾಧನವನ್ನು ವಿಜ್ಞಾನಿಗಳು ರೂಪಿಸಿದರು. ಅದುವೇ ಐರನ್ ಲಂಗ್ ಅಥವಾ ಕಬ್ಬಿಣದ ಶ್ವಾಸಯಂತ್ರ! ಐರನ್ ಲಂಗ್ ಎಂದರೆ ಕಬ್ಬಿಣದ ಶ್ವಾಸಕೋಶವಲ್ಲ. ಅದು ಒಂದು ಋಣಾತ್ಮಕ ಒತ್ತಡವನ್ನು (ನೆಗಟಿವ್ ಪ್ರೆಶರ್) ಸೃಜಿಸಬಲ್ಲ ಒಂದು ಯಂತ್ರ. ರೋಗಿಯನ್ನು ದೊಡ್ಡ ಲೋಹದ ಸಿಲಿಂಡರ್‌ನೊಳಗೆ ಮಲಗಿಸುತ್ತಿದ್ದರು. ತಲೆ ಮಾತ್ರ ಹೊರಗೆ ಇರುತ್ತಿತ್ತು. ಕುತ್ತಿಗೆಯ ಸುತ್ತ ರಬ್ಬರ್ ವಲಯವಿಟ್ಟು ಗಾಳಿಯು ಒಳಹೊರಗೆ ಹೋಗದಂತೆ ಮುಚ್ಚಿ ಬಿಗಿಪಡಿಸುತ್ತಿದ್ದರು. ಯಂತ್ರವು ಸಿಲಿಂಡರ್ ಒಳಗೆ ಋಣಾತ್ಮಕ ಒತ್ತಡವನ್ನು ಸೃಷ್ಟಿಸಿದಾಗ, ರೋಗಿಯ ಎದೆ ವಿಸ್ತರಿಸಿ ಗಾಳಿ ಶ್ವಾಸಕೋಶಗಳೊಳಗೆ ಪ್ರವೇಶಿಸುತ್ತಿತ್ತು. ಒತ್ತಡ ಸಾಮಾನ್ಯ ಸ್ಥಿತಿಗೆ ಬಂದಾಗ, ಎದೆ ಸಡಿಲವಾಗಿ ಗಾಳಿ ಹೊರಬರುತ್ತಿತ್ತು. ಸರಳವಾಗಿ ಹೇಳುವುದಾದರೆ, ಸಾಮಾನ್ಯ ಉಸಿರಾಟದಲ್ಲಿ ಒಳಗಿನಿಂದ ಎದೆ ವಿಸ್ತರಿಸಿ ಗಾಳಿ ಒಳಗೆಳೆಯುವಂತೆ, ಈ ಯಂತ್ರ ಹೊರಗಿನಿಂದ ಎದೆಯನ್ನು ಜಗ್ಗಿ, ಶ್ವಾಸಕೋಶಗಳನ್ನು ಪರೋಕ್ಷ ವಾಗಿ ಹಿಗ್ಗಿಸಿ ಉಸಿರಾಡಲು ನೆರವಾಗುತ್ತಿತ್ತು.

ಜೀವದಾಯಕ ಆಕ್ಸಿಜನ್ ಗಾಳಿಗೂಡುಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಜತೆ ವಿನಿಮಯವಾಗುತ್ತದೆ. ವಪೆ ಮೇಲಕ್ಕೇರುತ್ತದೆ. ಎದೆಗೂಡು ಕೆಳಗಿಳಿಯುತ್ತದೆ. ಕಾರ್ಬನ್ ಡೈಆಕ್ಸೈಡ್ಹೊ ರಬರುತ್ತದೆ. ಜೀವಮುಂದುವರಿಯುತ್ತದೆ. ಆದರೆ, ಪೋಲಿಯೊ ಪೀಡಿತರ ಉಸಿರಾಟದ ಸ್ನಾಯುಗಳಿಗೆ ಪೋಲಿಯೋ ಬಡಿದಾಗ ಎದೆ ವಿಸ್ತರಿಸುವುದಿಲ್ಲ. ವಪೆ ಕೆಳಗಿಳಿಯುವುದಿಲ್ಲ. ಹಾಗಾಗಿ ಇಂತಹ ಮಕ್ಕಳಿಗೆ ಮರಣದಂಡನೆ ಘೋಷಣೆಯಾಗುತ್ತದೆ. ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗಿ, ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅದರ ಫಲವಾಗಿ ಮಗುವಿನ ದೇಹವು ನೀಲಿಗಟ್ಟು ತ್ತದೆ. ನೀಲಿಗಟ್ಟುವಿಕೆಯು ತೀವ್ರವಾಗುತ್ತಿರುವಂತೆಯೇ ಮಗುವಿನ ಅಸುವನ್ನು ಯಮಧರ್ಮನು ಯಾವುದೇ ಕರುಣೆಯನ್ನು ತೋರದೆ ಸೆಳೆದುಕೊಂಡು ಹೋಗುತ್ತಾನೆ! ಅಗಾಸಿಸ್ ಶಾ ಅಭಿವೃದ್ಧಿ ಪಡಿಸಿದರು.

ಬಾಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನಲ್ಲಿ ಮೊದಲ ಬಾರಿಗೆ ಈ ಕಬ್ಬಿಣ ಶ್ವಾಸಯಂತ್ರವನ್ನು ಯಶಸ್ವಿ ಯಾಗಿ ಬಳಸಿದರು. ಉಸಿರಾಟದ ವೈಫಲ್ಯದಿಂದ ಬಳಲುತ್ತಿದ್ದ ಒಂದು ಬಾಲಕಿಯನ್ನು ಯಂತ್ರ ದೊಳಗೆ ಇರಿಸಿದರು. ಕೆಲವೇ ನಿಮಿಷಗಳಲ್ಲಿ ಅವಳ ಮುಖದ ನೀಲಬಣ್ಣವು ಕಡಿಮೆಯಾಗಿ ಗುಲಾಬಿ ಬಣ್ಣವನ್ನು ತಳೆಯಲಾರಂಭಿಸಿತು. ನಂತರ ಸ್ವಲ್ಪಹೊತ್ತಿನಲ್ಲಿ ಪರಿಪೂರ್ಣವಾಗಿ ಚೇತರಿಸಿ ಕೊಂಡರು. ಅವಳ ಪಾರ್ಶ್ವವಾಯು ಪೀಡಿತ ಸ್ನಾಯುಗಳು ಮಾಡಲಾಗದ ಕೆಲಸವನ್ನು ಯಂತ್ರ ಮಾಡಿತ್ತು. ಯಮನಿಗೆ ನಾಳೆಬಾ ಎಂದು ಹೇಳಿತು!

ಮಹಾಪಿಡುಗು: 1930, 40 ಮತ್ತು 50 ದಶಕಗಳು ಪೋಲಿಯೋ ಮಹಾ ಪಿಡುಗನ್ನು ಕಂಡವು. ಎದೆಗೂಡಿನ ಸ್ನಾಯುಗಳುನಿಶ್ಚೇತವಾದ ಮಕ್ಕಳ ಸಂಖ್ಯೆಯು ದಿನೇದಿನೆ ಏರುತ್ತಿದ್ದವು. ಆ ಕಾಲದ ಪೋಲಿಯೊ ವಾರ್ಡನ್ನು ನೋಡಿದರೆ, ಆಶೆ ಮತ್ತು ಹೃದಯವಿದ್ರಾವಕ ದುಃಖ ಎರಡೂ ಒಮ್ಮೆಲೇ ಉಮ್ಮಳಿಸುತ್ತಿದ್ದವು. ಸಾಲುಸಾಲಾಗಿ ಮಕ್ಕಳು ಲೋಹದ ಕೊಳವೆಗಳೊಳಗೆ ಮಲಗಿರುತ್ತಿದ್ದರು. ಅವರ ತಲೆ ಮಾತ್ರ ಯಂತ್ರದ ಹೊರಗೆ, ದಿಂಬಿನ ಮೇಲೆ ಇರುತ್ತಿತ್ತು. ನರ್ಸ್‌ಗಳು ಅವರಿಗೆ ಆಹಾರ ವನ್ನು ಕೊಡುತ್ತಿದ್ದರು,

ಮಲಮೂತ್ರಾದಿಗಳನ್ನು ಬಾಚಿ, ದೇಹವನ್ನು ಸ್ವಚ್ಛಗೊಳಿಸುತ್ತಿದ್ದರು, ಸಮಾಧಾನಪಡಿಸುತ್ತಿದ್ದರು, ಅವರ ಮುಖಭಾವವನ್ನು ಓದಲು ಪ್ರಯತ್ನಿಸುತ್ತಿದ್ದರು. ಮಕ್ಕಳು ಮಲಗಿದ ಕಡೆಯಿಂದಲೇ ಕಣ್ಣು ಗಳ ಮೂಲಕ ವಿವಿಧ ಭಾವಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದರು. ಕೆಲವರು ಮುಗುಳ್ನಗೆ ಯನ್ನು ಬೀರಿ ಸಮಾಧಾನಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಪರೂಪಕ್ಕೆ ಕೆಲವು ಮಕ್ಕಳು ಕಪ್ಪೆಯಂತೆ ನಿರಂತರವಾಗಿ ವಟಗುಟ್ಟುತ್ತಿದ್ದರು. ತಮ್ಮಲ್ಲಿ ನಿರಂತರವಾಗಿ ಹೆಚ್ಚಾಗುವ ಮಾನಸಿಕ ಒತ್ತಡವನ್ನು ಮಾತಿನ ಮೂಲಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಭಾಸವಾಗು ತ್ತಿತ್ತು.

ಸಾಕಷ್ಟು ಮಕ್ಕಳು ಮೌನವಾಗಿ ಕಣ್ಣೀರುಗರೆಯುತ್ತಿದ್ದರು. ಯಂತ್ರದೊಳಗೆ ತಮ್ಮ ಜೀವವನ್ನು ಒತ್ತೆಯಿಟ್ಟಿದ್ದ ಆ ಮಕ್ಕಳು, ಮೂಗು ನವೆಯಾದರೆ ಅದನ್ನು ಕೆರೆದುಕೊಳ್ಳಲುಅಶಕ್ತರಾಗಿದ್ದರು. ಏಕೆಂದರೆ ಕೈಗಳೂ ಸಹ ಯಂತ್ರದ ಸಿಲಿಂಡರಿನ ಒಳಗೆ ಇದ್ದವು. ಅವರ ತಲೆಯ ಮೇಲ್ಭಾಗದಲ್ಲಿ ಕನ್ನಡಿಗಳನ್ನು ವಿವಿಧ ಕೋನಗಳಲ್ಲಿ ಜೋಡಿಸುತ್ತಿದ್ದರು.

ಸುತ್ತಮುತ್ತಲಿನ ಜಗತ್ತಿನ ಸೆಳೆಮಿಂಚನ್ನು ಆಗೊಮ್ಮೆ ಈಗೊಮ್ಮೆ ನೋಡಲು ಅವಕಾಶವು ದೊರೆ ಯುತ್ತಿತ್ತು. ಕೆಲವರು ಈ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ವಿಶೇಷ ಕೋನದಲ್ಲಿ ಪುಸ್ತಕಗಳನ್ನು ಜೋಡಿಸುತ್ತಿದ್ದರು. ಒಂದು ಪುಟವನ್ನು ಓದಿದ ಮೇಲೆ = ಯಾರಾದರೊಬ್ಬರು ಬಂದು ಮುಂದಿನ ಪುಟವನ್ನು ತೆರೆಯಬೇಕಾಗಿತ್ತು. ಆ ಮಕ್ಕಳ ಹೆತ್ತವರು ಮಗುವಿನ ಪಕ್ಕದಲ್ಲಿ ಕೂತು ಮಾತನಾಡುತ್ತಿದ್ದರು, ಹಾಡುತ್ತಿದ್ದರು, ಪ್ರಾರ್ಥಿಸುತ್ತಿದ್ದರು....

ಸಾವಿಗೂ ಸವಾಲು ಹಾಕಿ, ಅದನ್ನು ಹೊಸಲುದ್ಯಕೀಯವು ವೈರುದ್ಧ್ಯಗಳನೆಲೆಯಾಯಿತು. ಒಂದು ಕಡೆ ನೋಡು ಮನುಷ್ಯನು ಎಷ್ಟು ಅಸಹಾಯಕನಾಗಬಲ್ಲ.... ಎಂದು ಬೆಟ್ಟು ಮಾಡಿ ಪೋಲಿಯೋ ಮಕ್ಕಳತ್ತ ತೋರಿಸುತ್ತಿದ್ದರೆ, ಮತ್ತೊಂದು ಕಡೆ ನೋಡು ಸಾವಿಗೂ ಸವಾಲು ಹಾಕಿ, ಅದನ್ನು ಹೊಸಲು ದಾಟದಂತೆ ಹೊರಗೆ ನಿರ್ಬಂಧಿಸಿಟ್ಟಿದ್ದೇವೆ...

ಒಂದೊಂದು ಉಸಿರನ್ನು ಎಳೆದುಕೊಳ್ಳುತ್ತಾ ಜೀವವನ್ನು ಹಿಡಿದಿಡಲು ನಾವು ಯಶಸ್ವಿ ಯಾಗಿ ದ್ದೇವೆ ಎಂದು ಬೀಗುತ್ತಿತ್ತು. ಎದೆಗೂಡಿನ ಸ್ನಾಯುಗಳು ನಿಶ್ಚೇತವಾಗಿದ್ದ ಮಕ್ಕಳಿಗೆ ಜೀವವನ್ನು ಹಿಡಿದಿಡಲು ಅಗತ್ಯವಾದ ಅನುಕೂಲತೆಯನ್ನು ಕಬ್ಬಿಣದ ಶ್ವಾಸಯಂತ್ರಗಳು ನೀಡಿದವು ಎಂಬುದು ಸತ್ಯ. ಅದರೊಡನೆ ಹೊಸ ಹೊಸ ಸಮಸ್ಯೆಗಳು ಉದ್ಭವಿಸಿದವು. ಮೊದಲ ಸಮಸ್ಯೆ ಯೆಂದರೆ ಯಂತ್ರಗಳ ಸಂಖ್ಯೆಯು ಕಡಿಮೆಯಿದ್ದವು.

ಯಂತ್ರಗಳ ಸೇವೆಯ ಅಗತ್ಯವಿದ್ದ ಮಕ್ಕಳ ಸಂಖ್ಯೆಯು ಅಧಿಕವಾಗಿದ್ದವು. ಇಂತಹ ಮಕ್ಕಳ ಆರೈಕೆಯನ್ನು ತುಂಬಾ ತಾಳ್ಮೆಯಿಂದ ನಿರ್ವಹಿಸುವ ನರ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗು ತ್ತಿದ್ದರು. ಇವರೊಡನೆ ನುರಿತ ತಜ್ಞಕಾಯಚಿಕಿತ್ಸಕರು (ಫಿಸಿಯೋಥೆರಪಿಸ್ಟ್) ಬೇಕಾಗುತ್ತಿದ್ದರು.

ಎಂಜಿನಿಯರು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದು, ಯಂತ್ರಗ ಸಣ್ಣ-ಪುಟ್ಟ ದೋಷ ಗಳನ್ನು ಸರಿಪಡಿಸಬೇಕಾಗುತ್ತಿತ್ತು. ಚಲನೆಯೇ ಇಲ್ಲದೆ ಮಲಗಿದ ಕಡೆಯೇ ಎಲ್ಲವೂ ಆಗಬೇಕಾದ ಮಕ್ಕಳನ್ನು ಹಾಸಿಗೆ ಹುಣ್ಣುಗಳು (ಬೆಡ್ʼಸೋರ್ಸ್) ಕಾಡುತ್ತಿದ್ದವು. ಇಂತಹ ಮಕ್ಕಳಿಗೆ ಸೋಂಕು ರೋಗಗಳು ಬಹಳ ಬೇಗ ಅಂಟಿಕೊಳ್ಳುತ್ತಿದ್ದವು ಹಾಗೂ ಉಗ್ರವಾಗಿಕಾಡುತ್ತಿದ್ದವು. ಕುತ್ತಿಗೆಯ ಸುತ್ತಲಿನ ಸೀಲ್ ಸರಿಯಾಗಿ ಇರಬೇಕಾಗಿತ್ತು. ರೋಗಿಗೆ ಪೌಷ್ಟಿಕ ಆಹಾರ, ಚರ್ಮದ ಆರೈಕೆ, ಮಾನಸಿಕ ಬೆಂಬಲ, ಸೂಕ್ಷ್ಮ ನಿಗಾ -ಎಲ್ಲವೂ ಅಗತ್ಯವಾಗಿತ್ತು.

ಹಲವು ತಜ್ಞರು ಪರಸ್ಪರ ಸಹಕಾರದಿಂದ, ಸಕಾಲದಲ್ಲಿ ವಿದ್ಯುತ್ತು ಬರದಿದ್ದರೆ, ಆ ಮಕ್ಕಳು ಯಂತ್ರ ದೊಳಗೇ ಜೀವವನ್ನು ಬಿಡಬೇಕಾಗುತ್ತಿತ್ತು. ಹಾಗಾಗಿ ಹಲವು ತಜ್ಞರು ಪರಸ್ಪರ ಸಹಕಾರ ದಿಂದ ಒಟ್ಟಾಗಿ ಕೆಲಸ ಮಾಡಬೇಕಾಗುತ್ತಿತ್ತು. ಇಲ್ಲದಿದ್ದರೆ ಮಕ್ಕಳು ಕಣ್ಣಮುಂದೆಯೆ ಜೀವವನ್ನು ಬಿಡುತ್ತಿದ್ದರು. ಇನ್ನು ವೈದ್ಯಕೀಯ ವೆಚ್ಚಗಳು!?.... ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಕಬ್ಬಿಣದ ಶ್ವಾಸಯಂತ್ರವು ಒಂದು ಆಶಾಕಿರಣವನ್ನು ಹುಟ್ಟು ಹಾಕಿತ್ತು. ಮಗುವು ಮತ್ತು ಮಗುವಿನ ಹೆತ್ತವರು ಆತ್ಮವಿಶ್ವಾಸವನ್ನು ಇಟ್ಟುಕೊಂಡು, ಕಾಯಚಿಕಿತ್ಸಕರು ಮುತುವರ್ಜಿಯಿಂದ ಚಿಕಿತ್ಸೆಯನ್ನು ನೀಡಿ, ನರ್ಸ್ ಬಳಗದವರು ಸ್ವಚ್ಛತೆ, ಪೋಷಕಾಂಶಗಳು ಹಾಗೂ ಅಗತ್ಯ ಮನೋ ಧೈರ್ಯವನ್ನು ನೀಡಿದರೆ, ಕೆಲವರಲ್ಲಿ ಎದೆಗೂಡಿನ ಪಾರ್ಶ್ವಸ್ನಾಯುಗಳು ಚೇತರಿಸಿಕೊಂಡು, ಸ್ವತಂತ್ರವಾಗಿ ಉಸಿರಾಡಲು ಅಗತ್ಯವಾದ ಸಾಮರ್ಥ್ಯವನ್ನು ನಿಧಾನವಾಗಿ ಗಳಿಸುತ್ತಿದ್ದವು. ಆದರೆ, ಈ ಚೇತರಿಕೆಯು ಕಂಡುಬರಲು ತಿಂಗಳು, ವರ್ಷಗಳು ಬೇಕಾಗುತ್ತಿದ್ದವು. ಅಲ್ಲಿಯವರೆಗೆ ಈ ಕಬ್ಬಿಣದ ಶ್ವಾಸಯಂತ್ರಗಳು ಅವರ ಜೀವವನ್ನು ಹಿಡಿದಿಡುತ್ತಿದ್ದವು!

ಕೆಲವು ಮಕ್ಕಳು ಮಾತ್ರ, ತಮ್ಮ ಬಾಲ್ಯ, ಹದಿಹರಯ, ಯೌವನ ಪ್ರೌಢ ಹಾಗೂ ವೃದ್ಧಾಪ್ಯಗಳನ್ನು ಈ ಯಂತ್ರದಲ್ಲಿಯೇ ಕಳೆಯಬೇಕಾಗುತ್ತಿತ್ತು. ಹೀಗೆ ಐರನ್ ಲಂಗ್ ನೆರವಿನಿಂದ ದಶಕಗಳವರೆಗೆ ಬದುಕಿದವರ ಕಥೆಗಳ ಮರೆಯಲಾಗದಂತಹವು. ಅವರು ಓದನ್ನು ಕಲಿತರು, ಅನುಭವಗಳನ್ನು ಬರೆದರು, ತಮ್ಮ ಕನಸುಗಳ ಬಗ್ಗೆ ಮಾತನಾಡಿದರು, ಕೆಲಸವನ್ನು ಮಾಡಿದರು. ಇಂತಹ ದುರ್ಬರ ಸ್ಥಿತಿಯಲ್ಲೂ ಪ್ರೀತಿ ಪ್ರೇಮ ಮೊಳೆಯುತ್ತದೆ ಎಂದರೆ ಆಶ್ಚರ್ಯವಾಗುತ್ತದೆ.

ಯಂತ್ರಗಳ ಒಳಗೇ ಇದ್ದುಕೊಂಡು ಪ್ರೀತಿಸಿದರು! ಅಂಗವೈಕಲ್ಯ ಎಂದರೆ ಅದು ಮನುಷ್ಯನ ಸೋಲು ಅಲ್ಲ ದೇಹವನ್ನು ಕಟ್ಟಿಹಾಕಿದ್ದರೂ, ಮನಸ್ಸು ಮುಕ್ತವಾಗಿ ಕಲ್ಪನೆಯ ಗಗನದಲ್ಲಿ ಹಾರಾಡುತ್ತಿತ್ತು! ಲೋಹದ ಸಿಲಿಂಡರ್ ದೈಹಿಕ ಚಲನವಲನವನ್ನು ಕಡಿಮೆ ಮಾಡಬಹುದು;ಆದರೆ ಕಲ್ಪನೆಗೆ ಬಂಧನ ಹಾಕಲಾರದು.

ಶ್ವಾಸನಾಳ ಸೀಳುವಿಕೆ: ಅಂದಿನ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಎನ್ನುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಿದ್ದ ದಿನಗಳಲ್ಲಿ ನಿಜವಾದ ಅರ್ಥದಲ್ಲಿ ಐಸಿಯು ಆರಂಭವಾಗಲಿಕ್ಕೆ ಈ ಕಬ್ಬಿಣದ ಶ್ವಾಸಯಂತ್ರವು ಕಾರಣವಾಯಿತು ಎನ್ನುವುದು ಐತಿಹಾಸಿಕ ಸತ್ಯ. 1952 ರ ಕೋಪನ್‌ಹೇಗನ್ ನಗರದಲ್ಲಿ ಪೋಲಿಯೊ ಸಾಂಕ್ರಾಮಿಕವು ಮಹತ್ವದ ತಿರುವು ತಂದಿತು.

ಆಸ್ಪತ್ರೆಗಳಲ್ಲಿ ಉಸಿರಾಟ ವೈ-ಲ್ಯದಿಂದ ಬಳಲುತ್ತಿದ್ದ ರೋಗಿಗಳು ತುಂಬಿ ತುಳುಕಲಾರಂಭಿಸಿದರು. ಇದ್ದ ಕಬ್ಬಿಣದ ಶ್ವಾಸಯಂತ್ರಗಳ ಸಂಖ್ಯೆಯು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾದವು. ಆಗ ಡೆನ್ಮಾರ್ಕ್‌ನ ವೈದ್ಯ ಬ್ಯೂನ್ ಇಬ್ಸನ್ (1915-2007) ಬೇರೆ ವಿಧಾನವನ್ನು ಸೂಚಿಸಿದರು, ಶ್ವಾಸನಾಳವನ್ನು ಸೀಳಿ ಒಂದುಕಿಂಡಿಯನ್ನು ರಚಿಸಿದರು. ಇದರ ಮೂಲಕ ಒಂದು ಕೊಳವೆಯನ್ನು ತೂರಿಸಿದರು. ಈ ಕೊಳವೆಯ ಮೂಲಕ ಆಕ್ಸಿಜನ್‌ನನ್ನು ನೇರವಾಗಿ ಶ್ವಾಸಕೋಶಗಳಿಗೆ ಗಾಳಿಯನ್ನು ಒತ್ತಿ ಕಳುಹಿಸುವ ಧನ ಒತ್ತಡದ ಉಸಿರಾಟ ಮಂಡಲವನ್ನು ಸಿದ್ಧಪಡಿಸಿದರು. ರೋಗಿಯ ಬಂಧು ಗಳು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಪಾಳಿಗಳಲ್ಲಿ ತಮ್ಮ ಕೈಯಿಂದ ಮಕ್ಕಳ ಬ್ಯಾಗನ್ನು ಒತ್ತಿ ಒತ್ತಿ ಉಸಿರಾಟಕ್ಕೆ ಅಗತ್ಯವಾದ ಗಾಳಿಯನ್ನು ಪೂರೈಸುತ್ತಿದ್ದರು. ಈ ವಿಧಾನವು ಮರಣ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡಿತು. ಇದೇ ಮುಂದೆ ತೀವ್ರ ನಿಗಾ ಘಟಕಗಳು ಮತ್ತು ಆಧುನಿಕ ವೆಂಟಿಲೇಟರ್‌ಗಳ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತು.

ಅಂತಿಮ ಜಯ: 1950ರ ದಶಕದಲ್ಲಿ ಜೋನಸ್ ಸಾಲ್ಕ್ (1914-19995) ಅವರು ಪೋಲಿಯೊ ಲಸಿಕೆಯ ಇಂಜಕ್ಷನ್‌ನನ್ನು ಪರಿಚಯ ಮಾಡಿದರು. ಆನಂತರ ಅಲ್ಬರ್ಟ್ ಸಾಬಿನ್ (1906-1993) ಅವರ ಬಾಯಿ ಮೂಲಕ ಕೊಡಬಹುದಾದ ಪೋಲಿಯೊ ಲಸಿಕೆಯ ಹನಿಗಳನ್ನು ರೂಪಿಸಿದರು. ಮಾರ್ಚ್ 27, 2014ರಂದು ಭಾರತವು ಪೋಲಿಯೋ ಮುಕ್ತವಾಯಿತು. ಆಲ್ಬರ್ಟ್ ಸಬಿನ್ ಹಾಗೂ ಕೋಟ್ಯಂತರ ಕಾರ್ಯಕರ್ತರಿಗೆ ನಮೋ ನಮಃ! ನಮ್ಮ ಜಗತ್ತು ಇಷ್ಟರಲ್ಲಿಯೇ ಪೋಲಿಯ ಮುಕ್ತವಾಗಲಿದೆ!

ಜಗತ್ತಿನಲ್ಲಿ ಶ್ವಾಸಯಂತ್ರದ ಕೊನೆಯ ಬಳಕೆದಾರರು!

ಪಾಲ್ ಅಲೆಕ್ಸಾಂಡರ್, ಕಬ್ಬಿಣದ ಶ್ವಾಸಯಂತ್ರದಲ್ಲಿ ಜೀವವನ್ನು ಹಿಡಿದಿಟ್ಟುಕೊಂಡಿದ್ದ ಕೊನೆಯ ಪುರುಷ. ತನ್ನ 6ನೇಯ ವಯಸ್ಸಿನಲ್ಲಿ ಪೋಲಿಯೋ ಪೀಡಿತನಾದ ಪಾಲ್, 72 ವರ್ಷಗಳ ಕಾಲ ಶ್ವಾಸಯಂತ್ರದಲ್ಲಿ ತನ್ನ ಬದುಕನ್ನು ಕಳೆದು, ಮಾರ್ಚ್ 11, 2024ರಲ್ಲಿ ಕೊನೆ ಉಸಿರೆಳೆದ. ಶ್ವಾಸ ಯಂತ್ರದಲ್ಲಿ ಸುದೀರ್ಘಕಾಲ ಬದುಕಿದ ವ್ಯಕ್ತಿ ಎಂಬ ಗಿನೆಸ್ ದಾಖಲೆಯು ಈತನ ಹೆಸರಲ್ಲಿದೆ. ಅಮೆರಿಕದ ಮಾರ್ಥ ಲಿಲ್ಲರ್ಡ್, ಇಂದಿಗೂ ಶ್ವಾಸಯಂತ್ರದಲ್ಲಿ ಜೀವವನ್ನು ಹಿಡಿದಿಟ್ಟುಕೊಂಡಿರುವ ಅತ್ಯಂತ ಹಿರಿಯ ಮಹಿಳೆ. ತನ್ನ ಐದನೇಯ ವರ್ಷದಲ್ಲಿ ಯಂತ್ರದ ಬಳಕೆಯನ್ನಾರಂಭಿಸಿದ ಲಿಲ್ಲರ್ಡ್, ಇಂದಿಗೂ ಅದೇ ಯಂತ್ರದಿಂದ ಜೀವವನ್ನು ಹಿದಿದಿಟ್ಟುಕೊಂಡಿದ್ದಾರೆ.