ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Yagati Raghu Nadig Column: ಹೀಗೊಂದು SOAP ಸ್ಟೋರಿ !

ಹೀಗಾಗಿ, ಕಿರುತೆರೆ ಧಾರಾವಾಹಿಗಳ ಒಳಗಿನ ಕಥೆಯೇನೇ ಇರಲಿ, ಅವನ್ನು ‘ಸೋಪ್ ಸ್ಟೋರಿ’ ಎಂದು ಕರೆಯುವುದು ವಾಡಿಕೆಯಾಗಿ ಬಿಟ್ಟಿತು. ಆದರೆ, ಇಂಥ ಸೋಪುಗಳ ಹೆಸರನ್ನೇ ಇಟ್ಟು ಕೊಂಡು ಒಂದು ಕಥೆ ಹೆಣೆದರೆ ಹೇಗಿರುತ್ತೆ? ಇಲ್ಲಿದೆ ನೋಡಿ ಅಂಥ ದೊಂದು ಕಿತಾಪತಿ: ಒಂದೂರಿನಲ್ಲಿ CHANDRIKA ಎಂಬ ಹುಡುಗಿಯಿದ್ದಳು.

ಹೀಗೊಂದು SOAP ಸ್ಟೋರಿ !

Profile Ashok Nayak Feb 18, 2025 1:35 PM

ವಿವಿಧ ವಿನೋದಾವಳಿ...

ಯಗಟಿ ರಘು ನಾಡಿಗ್

ದೂರದರ್ಶನ ವಾಹಿನಿಗಳಲ್ಲಿ ಪ್ರತಿದಿನವೂ ಪ್ರಸಾರವಾಗುವ ಧಾರಾವಾಹಿಯನ್ನು ’ Daily Soap ’ ಎಂದು ಕರೆಯುವುದುಂಟು. ಮತ್ತೆ ಕೆಲವರು ಇದನ್ನು Soap Opera ಎಂದೂ ಕರೆ ದಿದ್ದುಂಟು. ಇಂಥ ಧಾರಾವಾಹಿಗಳಿಗೆ ಮೈಸೋಪು ಅಥವಾ ಬಟ್ಟೆ ಸೋಪಿನ ತಯಾ ರಕರು ಸಾಮಾನ್ಯವಾಗಿ ಪ್ರಾಯೋಜಕರಾಗಿ ಇರುತ್ತಿದ್ದುದೂ ಇದಕ್ಕೊಂದು ಕಾರಣವೆನ್ನ ಬಹುದು. ಹೀಗಾಗಿ, ಕಿರುತೆರೆ ಧಾರಾವಾಹಿಗಳ ಒಳಗಿನ ಕಥೆಯೇನೇ ಇರಲಿ, ಅವನ್ನು ‘ಸೋಪ್ ಸ್ಟೋರಿ’ ಎಂದು ಕರೆಯುವುದು ವಾಡಿಕೆಯಾಗಿಬಿಟ್ಟಿತು. ಆದರೆ, ಇಂಥ ಸೋಪು ಗಳ ಹೆಸ ರನ್ನೇ ಇಟ್ಟುಕೊಂಡು ಒಂದು ಕಥೆ ಹೆಣೆದರೆ ಹೇಗಿರುತ್ತೆ? ಇಲ್ಲಿದೆ ನೋಡಿ ಅಂಥ ದೊಂದು ಕಿತಾಪತಿ: ಒಂದೂರಿನಲ್ಲಿ CHANDRIKA ಎಂಬ ಹುಡುಗಿಯಿದ್ದಳು.

ಅವಳು ಅದೆಷ್ಟು ಮುದ್ದಾಗಿದ್ದಳೆಂದರೆ, ಆ ಊರಿನ ಜನರೆಲ್ಲಾ ಅವಳನ್ನು ಪ್ರೀತಿಯಿಂದ SUNDARI ಎಂಬ ಅಡ್ಡಹೆಸರಿನಿಂದಲೇ ಕರೆಯುತ್ತಿದ್ದರು. ಅದೇ ಊರಿನಲ್ಲಿ SANTOOR ಎಂಬ ಹುಡುಗನಿದ್ದ. CHANDRIKAಳನ್ನು SANTOOR ತುಂಬಾ ಪ್ರೀತಿಸುತ್ತಿದ್ದ ಹಾಗೂ ಅವಳಿಗೋಸ್ಕರ ಯಾವುದೇ ತ್ಯಾಗವನ್ನು ಮಾಡಲೂ ಸಿದ್ಧನಿದ್ದ.

ತನ್ನ ನದಾಳದ ಬಯಕೆಯನ್ನು CHANDRIKA ಳ ಮುಂದೆ SANTOOR ನಿವೇದಿಸಿ ಕೊಂಡಾಗ, ಬಡಕುಟುಂಬದ ಹುಡುಗನೆಂಬ ಕಾರಣಕ್ಕೆ ಅವನ ಬಯಕೆಯನ್ನು ತಿರಸ್ಕರಿಸಿ ದಳು CHANDRIKA. ಒಂದು ದಿನ, ವಾತಾವರಣದಲ್ಲಿ ಹಿತವಾದ BREEZE ಸುಳಿದಾಡು ತ್ತಿದ್ದುದರಿಂದ ಸಮುದ್ರದಲ್ಲಿನ TIDE ಗಳ ಮೇಲೆ ಜೀಕುತ್ತಾ SURF ಮಾಡಲೆಂದು CHANDRIKA ತೆರಳಿದಳು.

SURF ಮಾಡಿದ ನಂತರ ತನ್ನ ವಾಹನವನ್ನು ನಿಲ್ಲಿಸಿದ್ದ NEEM ಮರದ ಬಳಿಗೆ ಬಂದು, ವಾಹನದ KEY ಯನ್ನು ತಿರುಗಿಸಿ ಸ್ಟಾರ್ಟ್ ಮಾಡಬೇಕೆನ್ನುವಷ್ಟರಲ್ಲಿ, ಎಲ್ಲಿಂದಲೋ ಎರಗಿಬಂದ ಆಗಂತುಕನೊಬ್ಬನು ಅವಳೆಡೆಗೆ ಧಾವಿಸಿ, ಹೈದರಾಬಾದ್ MOTI ಯಿಂದ ಮಾಡಿದ್ದ ಅವಳ ಮುತ್ತಿನ ಸರವನ್ನು ಎಗರಿಸಿಕೊಂಡು ಹೋದ. ಹೀಗೆ ಹೋಗುವಾಗ ಆತ ವಾಹನವನ್ನು ತಳ್ಳಿದ್ದರಿಂದ ಅದರ ಫ್ರಂಟ್ WHEEL ಅವಳ ಕಾಲಿನ ಮೇಲೆ ಬಿದ್ದು, ಗಾಯ ಗೊಂಡು ಅಳಲು ಶುರುಮಾಡಿದಳು.

ಈ ಮಧ್ಯೆ ಅದೇ ಮಾರ್ಗದಲ್ಲಿ ಎಲ್ಲಿಗೋ ಹೊರಟಿದ್ದ SANTOORಗೆ CHANDRIKA ಳ ಅಳು ಕೇಳಿಸಿತಲ್ಲದೆ, ನಡೆದಿರ ಬಹುದಾದ ಘಟನೆಯೂ ಅರ್ಥವಾಯಿತು. ಹೆದರಬೇಡ ವೆಂದು ಅವಳನ್ನು ಸಂತೈಸಿದ SANTOOR ಅದ್ಭುತವಾದ SPEED ನೊಂದಿಗೆ ಆಗಂತುಕ ನನ್ನು CHASE ಮಾಡಿ, ಅವನನ್ನು ಹಿಡಿಯುವಲ್ಲಿ ಯಶಸ್ವಿಯಾದ.

ಅವನಿಂದ ಹೈದರಾಬಾದ್ MOTI ಯ ಮುತ್ತಿನ ಸರವನ್ನು ಹಿಂಪಡೆದು ವಾಪಸ್ ಬಂದ CHANDRIKA ಳ ಬಳಿಗೆ. ಆಳವಾಗಿದ್ದ ಗಾಯದ ನೋವಿನಿಂದಾಗಿ ಅವಳು ಅಳುತ್ತಿದ್ದು ದರಿಂದ, ಸನಿಹದ PATANJALI ರಸ್ತೆಯಲ್ಲಿದ್ದ ತನ್ನ ಮನೆಗೆ ಅವಳನ್ನು ಶುಶ್ರೂಷೆಗೆಂದು ಕರೆ ತಂದ SANTOOR. ಏಕೆಂದರೆ ಅವನ ತಾಯಿ VANAMAALA ಒಬ್ಬ ಆಯುರ್ವೇದ DOCTOR ಆಗಿದ್ದರು.

CHANDRIKAಳನ್ನು ತನ್ನ ತಾಯಿ VANAMAALA ಗೆ ಪರಿಚಯಿಸಿ, ಗಾಯಕ್ಕೆ ಏನಾ ದರೂ ಔಷಧಿಯನ್ನು ಹಚ್ಚುವಂತೆ SANTOOR ಕೋರಿಕೊಂಡ. ಅವಳನ್ನು ಒಳಗೆ ಕರೆದು ಕೊಂಡು ಹೋದ ತಾಯಿ ಅವಳ ಕಾಲನ್ನು ಮೊದಲು ನೀರಿನಿಂದ, ನಂತರ DETTOL ನಿಂದ ತೊಳೆದರು. ತರುವಾಯ MYSORE SANDAL ಮರದ ತುಂಡನ್ನು ಕಲ್ಲಿನ ಮೇಲೆ ಉಜ್ಜಿ, ಅದಕ್ಕೆ KRISHNA TULASIಯ ಎಲೆಗಳನ್ನು ಸೇರಿಸಿ, MEDIMIX ಎಂದು ಕರೆಯ ಲ್ಪಡುವ ವಿಶೇಷ ಔಷಧಿಯುಕ್ತ ಮಿಶ್ರಣವನ್ನು ತಯಾರಿಸಿ ಗಾಯಕ್ಕೆ ನವಿರಾಗಿ ಲೇಪಿಸಿದರು VANAMAALA.

ಅಷ್ಟು ಹೊತ್ತಿಗಾಗಲೇ ನಿಜವಾದ ಪ್ರೀತಿ ಏನೆಂಬುದು CHANDRIKA ಳಿಗೆ ಅರ್ಥವಾಗ ತೊಡಗಿತ್ತು. ಹಣವೊಂದೇ ಸರ್ವಸ್ವವಲ್ಲ, ಅದರಿಂದ ಪ್ರೀತಿಯನ್ನು ಕೊಳ್ಳಲು ಸಾಧ್ಯ ವಿಲ್ಲ ಎಂಬ ಸತ್ಯ ಅವಳಿಗೆ ಅರಿವಾಗಿ, SANTOORನೇ ತನ್ನ LIFEBUOY ಆಗಲು ಯೋಗ್ಯ ಎಂಬ ನಿರ್ಧಾರಕ್ಕೆ ಬಂದಳು.

ಮನೆಗೆ ತೆರಳಿ ತಂದೆ-ತಾಯಿಗೆ ಆಕೆ ತನ್ನ ನಿರ್ಧಾರವನ್ನು ತಿಳಿಸಿದಾಗ, ‘ We are even ready for an ‘EXO’gamy ‘CHANDRIKA’, but not with a poor boy like ‘SANTOOR " ಎಂದು ಅವರಿಬ್ಬರೂ ಕೂಗಾಡಿದರು. ಆದರೆ CHANDRIKA ಕೂಡ ಸೋಲನ್ನೊಪ್ಪದೆ, ತನ್ನ ಪ್ರೀತಿಯ LIFEBUOY ಆಗಿರುವ SANTOOR ನೊಂದಿಗೆ ಮದುವೆ ಮಾಡದಿದ್ದರೆ ತಾನು ಕಾಶಿಗೆ ಹೋಗಿ GANGA ನದಿಯಲ್ಲಿ ಬಿದ್ದು ಸಾಯುವುದಾಗಿ ಹೆದರಿಸಿದ್ದಕ್ಕೆ ಸೋತ ಅವಳ ತಂದೆ-ತಾಯಿ ಈ ಮದುವೆಗೆ OK ಎಂದು ಹೇಳಿದರು.

ಉಲ್ಲಸಿತಳಾದ CHANDRIKA ತಂದೆ-ತಾಯಿಯ ಕಾಲಿಗೆರಗಿ, SANTOOR ನನ್ನು ಹುಡುಕಿ ಕೊಂಡು ಅವನ ಮನೆಗೆ ಹೋದರೆ, ಅವನು ಅಲ್ಲಿರದೆ ’MARGO ’ ರಸ್ತೆಯಲ್ಲಿರುವ SUN LITE ಹೋಟೆಲಿಗೆ ಕಾಫಿ ಕುಡಿಯಲು ಹೋಗಿರುವುದು ತಿಳಿದು ಅಲ್ಲಿಗೇ ಹೋದಳು. CHANDRIKA ಅಲ್ಲಿಗೆ ಬರುತ್ತಿದ್ದಂತೆ MYSORE JASMINE ಪುಷ್ಪದ PARIMALA ವು ಸುತ್ತಮುತ್ತಲೆಲ್ಲಾ ಪಸರಿಸಿದಂತಾಯಿತು.

SANTOOR ನ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡ CHANDRIKA , “ಶ್ರೀಮಂತಿಕೆಯ ಅಹಂಕಾರದ ಪೊರೆಯಿಂದ ಆವರಿಸಲ್ಪಟ್ಟ ನನ್ನಕಣ್ಣುಗಳು ನಿನ್ನ ನಿಷ್ಕಲ್ಮಶ ಪ್ರೀತಿ ಯನ್ನು ಗುರುತಿಸದಾದವು SANTOOR ...ಮರುಭೂಮಿಯಂತೆ ಬರಡಾಗಿದ್ದ ನನ್ನ ಬಾಳಿ ನಲ್ಲಿ ನೀನು OASIS ನಂತೆ ಬಂದೆ, ನನ್ನ ಮನದಂಗಳಲ್ಲಿ BREEZE ನಂತೆ ಸುಳಿದಾಡಿ ಬಿಟ್ಟೆ... ಐ ಲವ್ ಯೂ..." ಎಂದು ಉಸುರಿದಳು. ಇದನ್ನು ಕೇಳಿ ಅತೀವ ಸಂತೋಷಗೊಂಡ SANTOOR, “ಓ ಮುದ್ದು CHANDRIKA, ನೀನು ಯಾವತ್ತಿಗೂ ನನ್ನ JEEVAA" ಎಂದು ಉದ್ಗರಿಸಿ ಅವಳನ್ನು ಬಿಗಿದಪ್ಪಿದ.

ಪೋಷಕರು ಒಳ್ಳೆಯ ಮುಹೂರ್ತ ನೋಡಿ ಇವರಿಬ್ಬರ ಮದುವೆಯನ್ನು ಮಾಡಿದರು. ‘ AYUSH ಮಾನ್ ಭವ’ ಎಂದು ಹೇಳುವ ಮೂಲಕ ಹಿರಿಯರೆಲ್ಲರೂ ನವಜೋಡಿ ಯನ್ನು ಆಶೀರ್ವದಿಸಿದರು. SANTOOR ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ಅವನ ಕಂಪನಿಯ BOSS ರವರು ಫ್ಲ್ಯಾಟ್ ಸಂಖ್ಯೆ 501ರ KEY ಯನ್ನು ಮದುವೆಯ ಉಡುಗೊರೆಯಾಗಿ ನೀಡಿದರು. ಒಂದು ವರ್ಷದ ನಂತರ, NIRMA ಮತ್ತು NEEMA ಎಂಬ ಅವಳಿ ಹೆಣ್ಣು ಮಕ್ಕಳಿಗೆ CHANDRIKA ಜನ್ಮನೀಡಿದಳು. ನಂತರ ಅವರೆಲ್ಲರೂ ಬಹಳ ಕಾಲದವರೆಗೆ ಸುಖವಾಗಿದ್ದರು..!