ಕರ್ನಾಟಕ ಮಂಡ್ಯ ಚಿಕ್ಕಬಳ್ಳಾಪುರ SPORTS ಗದಗ

Vishweshwar Bhat Column: ಸುಶಿ ಕುರಿತು ಒಂದಿಷ್ಟು...

Sometimes all you need is more Sushi ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಸುಶಿ ಬಿಟ್ಟು ಜಪಾನ್ ಇಲ್ಲ. ಸುಶಿ ಅಂದ್ರೆ ಸಾಕು, ಆ ಎರಡಕ್ಷರಗಳಲ್ಲಿಯೇ ಜಪಾನಿನ ಅಂತಃ ಸತ್ವವಿದೆ. ಸುಶಿಯ ಇತಿ ಹಾಸ ಸುಮಾರು 2000 ವರ್ಷಗಳ ಹಿಂದಕ್ಕೆ ಹೋಗುತ್ತದೆ. ತಮಾಷೆಯೆಂದರೆ, ಇದು ಆರಂಭದಲ್ಲಿ ಆಹಾರವನ್ನು ಸಂರಕ್ಷಿಸಲು ಬಳಸುವ ವಿಧಾನವಾಗಿತ್ತು

Vishweshwar Bhat Column: ಸುಶಿ ಕುರಿತು ಒಂದಿಷ್ಟು...

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನ್ ಬಗ್ಗೆ ಎಷ್ಟೆಲ್ಲ ಬರೆದು, ಸುಶಿ ಬಗ್ಗೆ ಬರೆಯದಿದ್ದರೆ, ಅದು ಅಪೂರ್ಣವಷ್ಟೇ ಅಲ್ಲ, ಅಪ ಚಾರವೂ ಹೌದು. ಜಪಾನ್ ತನ್ನ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಅಡುಗೆ ಶೈಲಿಗಳಿಗಾಗಿ ವಿಶ್ವ ದಾದ್ಯಂತ ಪ್ರಖ್ಯಾತವಾಗಿದೆ. ಈ ಅಡುಗೆ ಶೈಲಿಗಳಲ್ಲಿ ಸುಶಿ ಕೂಡ ಒಂದು. ಅದು ಪ್ರಪಂಚದಾದ್ಯಂತ ಜನಪ್ರಿಯತೆ ಪಡೆದಿರುವ ಖಾದ್ಯ. ಸುಶಿ ಅಂದರೆ ಕೇವಲ ಒಂದು ಆಹಾರವಷ್ಟೇ ಅಲ್ಲ, ಇದು ಜಪಾನಿಯರ ಬದುಕಿನ ಭಾಗ. ಅಷ್ಟೇ ಅಲ್ಲ, ಶಿಸ್ತಿನ ಸಂಸ್ಕೃತಿ ಮತ್ತು ನಿಖರತೆಯ ನಿದರ್ಶನ ಕೂಡ. Sushi is not just food; it's an art form, an experience ಎಂಬ ಮಾತು ಜನಜನಿತ.

Sometimes all you need is more Sushi ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಸುಶಿ ಬಿಟ್ಟು ಜಪಾನ್ ಇಲ್ಲ. ಸುಶಿ ಅಂದ್ರೆ ಸಾಕು, ಆ ಎರಡಕ್ಷರಗಳಲ್ಲಿಯೇ ಜಪಾನಿನ ಅಂತಃ ಸತ್ವವಿದೆ. ಸುಶಿಯ ಇತಿಹಾಸ ಸುಮಾರು 2000 ವರ್ಷಗಳ ಹಿಂದಕ್ಕೆ ಹೋಗುತ್ತದೆ. ತಮಾಷೆಯೆಂದರೆ, ಇದು ಆರಂಭ ದಲ್ಲಿ ಆಹಾರವನ್ನು ಸಂರಕ್ಷಿಸಲು ಬಳಸುವ ವಿಧಾನವಾಗಿತ್ತು.

ಇದನ್ನೂ ಓದಿ: Vishweshwar Bhat Column: ಪದಕ ವಿಜೇತರ ಮನಸ್ಥಿತಿ

ಪ್ರಾಚೀನ ಚೀನಾದಲ್ಲಿ, ಮೀನನ್ನು ಆಹಾರ ಪದಾರ್ಥವಾಗಿ ಹೆಚ್ಚು ಕಾಲ ಉಳಿಸಲು ಅಕ್ಕಿಯನ್ನು ಮೀನಿನ ಸುತ್ತಲೂ ಹಾಕಿ ಪ್ಲಾಸ್ಟರ್ ಪದ್ಧತಿಯಲ್ಲಿ ಸಂರಕ್ಷಿಸಲಾಗುತ್ತಿತ್ತು. ಆದರೆ, 8ನೇ ಶತಮಾನ ದಲ್ಲಿ ಜಪಾನಿನಲ್ಲಿ ಸುಶಿ ವಿಭಿನ್ನ ರೂಪವನ್ನು ಪಡೆಯಿತು. ಇಲ್ಲಿಗೆ ಬಂದಾಗ, ಅಕ್ಕಿ ಮತ್ತು ಮೀನು ಗಳ ಶುದ್ಧ ರುಚಿಗೆ ಪ್ರಾಮುಖ್ಯ ನೀಡಲಾಯಿತು. 19ನೇ ಶತಮಾನದಲ್ಲಿ, ಹನಾಯಾ ಯೋಹೆ ಎಂಬಾತ ‘ನಿಗಿರಿ-ಸುಶಿ’ ಎಂಬ ಹೊಸ ರೀತಿಯ ಸುಶಿಯನ್ನು ಪರಿಚಯಿಸಿದ.

ಇದು ಟೋಕಿಯೋದಲ್ಲಿ ಜನಪ್ರಿಯತೆಯನ್ನು ಗಳಿಸಿತು ಮತ್ತು ಅದೇ ಇಂದು ಜಗತ್ತಿನಾದ್ಯಂತ ಬೆಳೆದಿರುವ ಸುಶಿಯ ಮೂಲವಾಗಿದೆ. ಸುಶಿ ಹಲವಾರು ವಿಧಗಳಲ್ಲಿ ಲಭ್ಯವಿದ್ದು, ಪ್ರತಿ ರೀತಿ ಯಲ್ಲೂ ವಿಭಿನ್ನ ತಯಾರಿಕಾ ಶೈಲಿ ಮತ್ತು ರುಚಿಯನ್ನು ಕಾಣಬಹುದು. ನಿಗಿರಿ-ಸುಶಿ, ಮಕಿ-ಸುಶಿ, ಸಶಿಮಿ, ಟೆಮಾಕಿ ಸುಶಿ ಹೀಗೆ ಸುಶಿಯಲ್ಲಿ ಹಲವು ವಿಧ. ಉದಾಹರಣೆಗೆ, ಸಶಿಮಿ, ಸುಶಿಯ ಒಂದು ಭಾಗವಾಗಿದ್ದು, ಇದರಲ್ಲಿ ತಾಜಾ ಮೀನು ಅಥವಾ ಸಮುದ್ರ ಆಹಾರ (ಸೀಫುಡ್)ವನ್ನು ಸಿಹಿ ರುಚಿ ನೀಡುವ ರೀತಿಯಲ್ಲಿ ತಯಾರಿಸಲಾಗುತ್ತದೆ.

ಇದರ ಜತೆಯಲ್ಲಿ ಸಾಮಾನ್ಯವಾಗಿ ಡಿಪಿಂಗ್ ಸಾಸ್ ಅನ್ನು ನೀಡಲಾಗುತ್ತದೆ. ಸುಶಿಯ ತಯಾರಿಕೆ ಅಷ್ಟು ಸುಲಭವಾದ ಕಲೆಯಲ್ಲ. ಸುಶಿ ತಯಾರಿಕೆಯಲ್ಲಿ ಅತಿ ಶ್ರದ್ಧೆ ಮತ್ತು ನಿಖರತೆ ಬೇಕು. ಮೇಲ್ನೋಟಕ್ಕೆ ಅದನ್ನು ತಯಾರಿಸುವುದು ಸುಲಭ ಎನಿಸಿದರೂ, ಅಷ್ಟು ಸುಲಭವಲ್ಲ. ಸುಶಿ ತಯಾರಿಕೆಯಲ್ಲಿ ಅಕ್ಕಿ ಮತ್ತು ಮೀನು ಪ್ರಮುಖ ಪಾತ್ರ ವಹಿಸುತ್ತವೆ.

ಅಕ್ಕಿಯನ್ನು ಹೆಚ್ಚು ಬಿಸಿ ನೀರಿನಲ್ಲಿ ಕುದಿಸಲಾಗುತ್ತದೆ. ನಂತರ ವಿನಿಗರ್, ಸಕ್ಕರೆ ಮತ್ತು ಉಪ್ಪಿನ ಮಿಶ್ರಣವನ್ನು ಸೇರಿಸಲಾಗುತ್ತದೆ. ಅಕ್ಕಿಯ ಸ್ವಾದ ಮತ್ತು ತಾಜಾ ಮೀನುಗಳ ರುಚಿಯ ನಡುವಿನ ಸಮತೋಲನವೇ ಸುಶಿಯ ಆಕರ್ಷಣೆ. ತಾಜಾ ಮೀನುಗಳೊಂದಿಗೆ ಸಿದ್ಧವಾಗುವುದು ಸುಶಿಯ ವಿಶಿಷ್ಟ ಗುಣ. ಟುನಾ, ಸಾಲ್ಮನ್ ಮೀನುಗಳ ಜತೆಗೆ ಮೊಟ್ಟೆ, ಆವಕಾಡೋ ಹಾಗೂ ಅಣಬೆಗಳನ್ನು ಸಹ ಬಳಸಲಾಗುತ್ತವೆ.

ಸುಶಿಯ ಪಾಕಪ್ರಕ್ರಿಯೆ ಸರಳವಾಗಿದ್ದರೂ ಅದರಲ್ಲಿ ಶಿಸ್ತಿನ ಸಂಸ್ಕೃತಿ ಅಡಗಿದೆ. ನೈಪುಣ್ಯದಿಂದ ಕೈಯಲ್ಲಿ ಮಾಡಿದ ರೋಲ್‌ಗಳು, ಕತ್ತರಿಸಲು ಬಳಸುವ ಚಾಕು ಮತ್ತು ಕತ್ತರಿಸುವ ಕಲೆ ಹಾಗೂ ತಾಜಾ ಪದಾರ್ಥಗಳ ಸಮತೋಲನವು ಸುಶಿಯ ಯಶಸ್ಸಿನ ಕೀಲಿ. ಜಪಾನಿನ ಸಂಸ್ಕೃತಿಯಲ್ಲಿ ಸುಶಿ ಯನ್ನು ಸವಿಯುವ ಶೈಲಿಯೂ ವಿಶೇಷವಾಗಿದೆ. ಡಿಪಿಂಗ್ ಸಾಸ್ ಬಳಸುವ ವಿಧಾನ, ಅದನ್ನು ಸೇವಿ ಸುವ ಶಿಸ್ತಿನ ನಿಯಮಗಳು ಮತ್ತು ರೋಲ್‌ಗಳನ್ನು ಬಾಯಿಗೆ ಹಾಕುವ ರೀತಿಯೂ ವಿಭಿನ್ನವೇ. ಇಂದು ಸುಶಿ ಜಪಾನಿನ ಗಡಿಗಳನ್ನು ದಾಟಿ ಜಗತ್ತಿನಾದ್ಯಂತ ತನ್ನ ಸ್ಥಾನವನ್ನು ಕಂಡುಕೊಂಡಿದೆ.

ಯೂರೋಪ್, ಅಮೆರಿಕ ಮತ್ತು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಸುಶಿ ರೆಸ್ಟೊರೆಂಟ್ ಗಳು ತಲೆಯೆತ್ತಿವೆ. ಇದಕ್ಕೆ ಸುಶಿಯಲ್ಲಿನ ವೈಶಿಷ್ಟ್ಯ ಮತ್ತು ಆರೋಗ್ಯಕರ ಅಂಶಗಳೂ ಕಾರಣ. ಸುಶಿಯ ಮಹತ್ವ ಇನ್ನಷ್ಟು ಹೆಚ್ಚಲು ಅದರ ಪೌಷ್ಠಿಕಾಂಶ ಸಹ ಕಾರಣ. ಪ್ರತಿ ಸಲ ಸುಶಿಯನ್ನು ಸವಿಯು ವಾಗ, ಜಪಾನಿನ ಅನನ್ಯ ಸಂಸ್ಕೃತಿಯ ಸವಿಯನ್ನು ಅನುಭವಿಸುವ ಭಾವನೆ ಮೂಡುತ್ತದೆ.